ನೀರ್ದೋಸೆ

ಒಂದು, ಎರಡು, ಮೂರು ನಾಲ್ಕು
ಸಾಲ್ತಿಲ್ಲ ನೀರ್ದೋಸೆ ಇನ್ನೂ ಹಾಕು
ಮನೇಲೀ ಇರೋರಿಗೆ ಎಲ್ರಿಗೂ ಬೇಕು
ಹೆಂಡ್ತಿ ಹೇಳಿದ್ಮೇಲೆ ಒಪ್ಗೋಳ್ಳಲೇ ಬೇಕು.

ಇಷ್ಟು ಹೇಳಿಯೂ ಐದ್ನೇ ನೀರ್ದೋಸೆ ತಟ್ಟೇಲಿ ಬಿತ್ತು
ಇದೇ ನೋಡಿ ಗಂಡ-ಹೆಂಡ್ರ ಪ್ರೀತಿಯ ಗಮ್ಮತ್ತು
ಇದನ್ನು ಒಪ್ಪೋರು, ಕೊಡ್ರೀ ನಿಮ್ಮಾಕಿಗೆ ಒಂದು ಸಿಹಿ ಮುತ್ತು
ಏಕೆಂದ್ರೇ ಖಂಡಿತವಾಗಿಯೂ ಆಕೆನೇ ನಮ್ಮನೇ ಸಂಪತ್ತು.

ಏನಂತೀರೀ?

ಇಂದು ನಮ್ಮಾಕಿ ಮಾಡಿಕೊಟ್ಟ ಬಿಸಿ ಬಿಸಿಯಾದ ಗರಿ ಗರಿಯಾದ ನೀರು ದೋಸೆ ಮತ್ತು ಕಾಯಿ ಚಟ್ನಿ ತಿಂದ ಮೇಲೆ ಬರೆದ ಪದ್ಯ

One thought on “ನೀರ್ದೋಸೆ

  1. “ ಏಕೆಂದ್ರೇ ಖಂಡಿತವಾಗಿಯೂ ಆಕೆನೇ ನಮ್ಮನೇ ಸಂಪತ್ತು.”
    This was favorite line , very well written “ ಚೆನ್ನಾಗಿ ಬರೆಯಲಾಗಿದೆ“

    Liked by 1 person

Leave a comment