
ಚಿಕ್ಕಮಗಳೂರಿನ ಶ್ರೀ ಕೋದಂಡರಾಮ ದೇವಾಲಯದಲ್ಲಿ ಕಳೆದ 44 ವರ್ಷಗಳಿಂದಲೂ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿಕೊಂಡು ಬರುತ್ತಿರುವ, ಅದರಲ್ಲೂ ವಿಶೇಷವಾಗಿ ಸಂಸ್ಕ್ಕತದ ಮಂತ್ರಗಳನ್ನೂ ಕನ್ನಡಕ್ಕೆ ಅನುವಾದಿಸಿ ಜನರಾಮಾನ್ಯರಿಗೂ ಅರ್ಥವಾಗುವಂತೆ ಕನ್ನಡಲ್ಲೇ ನಿತ್ಯ ಪೂಜೆಯನ್ನು ಸಲ್ಲಿಸುವ ಮೂಲಕ ಕನ್ನಡದ ಪೂಜಾರಿ ಎಂದೇ ನಾಡಿನಾದ್ಯಂತ ಪ್ರಖ್ಯಾತವಾಗಿರುವ ಶ್ರೀ ಹಿರೇಮಗಳೂರು ಕಣ್ಣನ್ ಎಲ್ಲರ ಪ್ರೀತಿಯ ಕಣ್ಣನ್ ಮಾವಾ ಅವರಿಗೆ ಈ ಘನವೆತ್ತ ಬಿಟ್ಟಿ ಭಾಗ್ಯದ ಸರ್ಕಾರ ನೋಟೀಸ್ ಒಂದನ್ನು ಜಾರಿ ಮಾಡಿದ ವಿಷಯ ಜನರಿಗೆ ತಿಳಿದು ಅವರುಗಳು ಆಕ್ರೋಶಗೊಂಡು ಜನರು ಆರ್ ಥೂ! ಛೀ! ಎಂದು ಛೀಮಾರಿ ಹಾಕುತ್ತಿದ್ದಂತೆಯೇ ಎಚ್ಚರಗೊಂಡು ನೋಟೀಸ್ ಹಿಂಪಡೆಯುವ ಮೂಲಕ ಮತ್ತೊಮ್ಮೆ ನಗೆಪಾಟಲಿಗೆ ಈಡಾದ ಈ ಸರ್ಕಾರದ ಕಥೆ-ವ್ಯಥೆಯನ್ನೊಮ್ಮೆ ನೋಡೋಣ ಬನ್ನಿ.
ಚುನಾವಣೆಯ ಸಂಧರ್ಭದಲ್ಲಿ ಅಧಿಕಾರಕ್ಕೆ ಬರಲು ವಿವಿಧ ಬಿಟ್ಟಿ ಭಾಗ್ಯಗಳನ್ನು ಘೋಷಿಸಿ ತನ್ಮೂಲಕ ಭಾರೀ ಬಹುಮತದಿಂದ ಆಯ್ಕೆಯಾದ ನಂತರ ಹರಸಾಹಸದಿಂದ ಹಂತ ಹಂತರದಲ್ಲಿ ಜನರ ಮೂಗಿಗೆ ತುಪ್ಪ ಸವರುವಂತೆ, ಭಾಗ್ಯಗಳನ್ನು ಜಾರಿಗೆ ಮಾಡಿ ರಾಜ್ಯದ ಯಾವುದೇ ಅಭಿವೃದ್ದಿಕಾರ್ಯಗಳಿಗೆ ಹಣವಿಲ್ಲಾ!! ನಮ್ಮ ಹತ್ರಾ ಏನು ನೋಟ್ ಪ್ರಿಂಟ್ ಮಾಡುವ ವಿಷಿನ್ ಇಟ್ಟುಕೊಂಡಿದ್ದೇವಾ? ಚುನಾವಣಾ ಸಮಯದಲ್ಲಿ ಹೇಳಿರುವುದೆಲ್ಲವನ್ನೂ ಜಾರಿಗೆ ತರಲು ಆಗುತ್ತಾ? ಎಂದು ವಿಧಾನಸಭಾ ಅಧಿವೇಷನದಲ್ಲೇ ಹೇಳುವಂತಹ ಉದ್ಧಟನ ತೋರುವ ಇದೇ ಮುಖ್ಯಮಂತ್ರಿಗಳು ಈ ನಾಡಿನ ಬಹುಸಂಖ್ಯಾತರಾದ ಹಿಂದೂಗಳಿಂದ ಸಂಗ್ರಹಿಸಲಾದ ತೆರಿಗೆ ಹಣದಲ್ಲಿ ಅಲ್ಪಸಂಖ್ಯಾತರ ಓಲೈಕಾಗಿ 10 ಸಾವಿರ ಕೋಟಿ ಹಣವನ್ನು ನೀಡುವುದಾಗಿ ಆಶ್ವಾಸನೆ ನೀಡಿದ್ದಲ್ಲದೇ ಮೂರ್ನಾಲ್ಕು ಸಾವಿರ ಕೋಟಿ ಹಣವನ್ನು ಈಗಾಗಲೇ ಬಿಡುಗಡೆ ಮಾಡುವ ಮೂಲಕ ಅಧಿಕಾರಕ್ಕಾಗಿ ಅಹಿಂದ ಎಂಬ ಹೆಸರಿನಲ್ಲಿ ಹಿಂದೂಗಳನ್ನು ಮತ್ತೊಮ್ಮೆ ಒಡೆಯಲು ಮುಂದಾಗಿರುವುದಲ್ಲದೇ, ದೇವಾಲಯಗಳ ಅರ್ಚಕರುಗಳ ವೇತನಕ್ಕೂ ಕೈ ಹಾಕಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧವಾಗಿದೆ.
ಸ

ರ್ಕಾರೀ ಅಧೀನದ ಮುಜರಾಯಿ ಇಲಾಖೆಗಳ ವ್ಯಾಪ್ತಿಗೆ ಬರುವ ಹಿಂದೂಗಳ ದೇವಾಯಗಳಲ್ಲಿ ಹುಂಡಿಗೆ ಹಾಕಿದ ಕಾಣಿಕೆ ದೇವರಿಗೆ, ಆರತಿ ತಟ್ಟೆಯಲ್ಲಿ ಹಾಕಿದ ಕಾಣಿಕೆ ಅರ್ಚಕರಿಗೆ, ಹಾಗಾಗಿ ಕಾಣಿಕೆ ಹಾಕುವ ಮುನ್ನ ಭಕ್ತಾಧಿಗಳ ಗಮನಕ್ಕೆ ಎಂಬ ಫಲಕವನ್ನು ಅಳವಡಿಸುವ ಮೂಲಕ ದೇವಾಲಯಗಳನ್ನೇ ಸರ್ಕಾರದ ಆದಾಯದ ಕೇಂದ್ರವನ್ನಾಗಿ ಮಾಡಿಕೊಳ್ಳುವಂತಹ ದೈನೇಸಿ ಸ್ಥಿತಿಗೆ ಬಂದಿರುವುದು ನಿಜಕ್ಕೂ ವಿಪರ್ಯಾಸವಾಗಿದೆ.

ಸರ್ಕಾರಿ ದೇವಾಲಯಗಳ ಹುಂಡಿಗಳಲ್ಲಿ ಭಕ್ತಾದಿಗಳು ಶ್ರದ್ದೆಯಿಂದ ನೀಡುವ ಆದಾಯದ ಮೂಲಕ ಕೋಟಿ ಕೋಟಿ ಹಣ ಸಂಗ್ರಹಿಸುವ ಸರ್ಕಾರ, ಮುಜರಾಯಿ ಇಲಾಖೆಗೆ ವ್ಯಾಪ್ತಿಗೆ ಬರುವ ರಾಜ್ಯಾದ್ಯಂತ ಇರುವ ಸಾವಿರಾರು ದೇವಾಲಯದ ಅರ್ಚಕರಿಗೆ ತಸ್ತಿಕ್ ಹಣದ ರೂಪದಲ್ಲಿ ಕೊಡುವ ಹಣ ಅರ್ಚಕರ ಜೀವನ ಬಿಡಿ, ದೇವಾಲಯದ ದೈನಂದಿನ ಪೂಜಾ ಕಾರ್ಯಗಳಿಗೆ ಅವಶ್ಯಕವಾದ ಹೂವು ಹಣ್ಣು ದೇವರ ದೀಪಕ್ಕೆ ಎಣ್ಣೆ ಮುಂತಾದವುಗಳಿಗೂ ಸಾಲದಾಗಿದೆ ಎಂದರು ಸುಳ್ಳಲ್ಲಾ. ಆದರೆ ಇದೇ ಸರ್ಕಾರ ಹಿಂದೂಗಳ ದೇವಾಲಯದಕ್ಕಿ ಸಂಗ್ರಹಿಸಿದ ಹಣವನ್ನು ಸರ್ಕಾರಕ್ಕೆ ಯಾವುದೇ ರೀತಿಯಲ್ಲೂ ಆದಾಯವನ್ನು ತಾರದಿರುವ ಅಲ್ಪಸಂಖ್ಯಾತರ ಮಸೀದಿ ಮತ್ತು ಚರ್ಚುಗಳ ದುರಸ್ತಿ ಮತ್ತು ನಿರ್ವಹಣೆಗೆ ಅಲ್ಲದೇ ಹಜ್ ಭವನ, ಹಜ್ ಯಾತ್ರೆಗಳಿಗೆ ಖರ್ಚು ಮಾಡಲು ಮಾತ್ರಾ ಎಗ್ಗಿಲ್ಲದೇ ಖರ್ಚುಮಾಡುವ ಪರಿ ನಿಜಕ್ಕೂ ವಿಪರ್ಯಾಸವಾಗಿದೆ.

ಈಗಾಗಲೇ ತಿಳಿಸಿದಂತೆ ಹಿರೇಮಗಳೂರು ಕಣ್ಣನ್ ಅಲ್ಲಿನ ಕಲ್ಯಾಣ ಕೋದಂಡ ರಾಮ ದೇವಾಲಯದ ಪ್ರಧಾನ ಅರ್ಚಕರಾಗಿ ಅವರು ಕಳೆದ 44 ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿದ್ದು ಅವರಿಗೆ ಮುಜರಾಯಿ ಇಲಾಖೆಯ ವತಿಯಿಂದ ಪ್ರತಿ ತಿಂಗಳು 7500 ರೂ. ವೇತನವನ್ನು ನೀಡಲಾಗುತ್ತಿದೆ. ೨೦೨೩ರ ಡಿಸೆಂಬರ್ 2ರಂದು ಇದ್ದಕ್ಕಿದ್ದಂತೆಯೇ ಜಾಗೃತವಾದ ಈ ಸರ್ಕಾರ ಕಳೆದ ಹತ್ತು ವರ್ಷಗಳಿಂದ ಕೋದಂಡ ರಾಮಸ್ವಾಮಿ ದೇವಾಲಯಕ್ಕೆ ಹೆಚ್ಚಿನ ಆದಾಯ ಬರುತ್ತಿಲ್ಲವಾದ್ದರಿಂದ, ಕಣ್ಣನ್ ಅವರ ಸಂಬಳವನ್ನು ಕೇವಲ ೩೦೦೦ ಕ್ಕೆ ನಿಗದಿ ಪಡಿಸಿ ಈ ಹಿಂದೆ ನೀಡಿದ್ದ 7500 ರೂ. ವೇತನದಲ್ಲಿ ಹೆಚ್ಚುವರಿಯಾಗಿ ಪಾವತಿಸಿರುವ 4500 ರೂ ಹಣದ 10 ವರ್ಷದ ಒಟ್ಟು ಮೊತ್ತ 4,74,000 ರೂ. ಹಣವನ್ನು ಈ ಕೂಡಲೇ ಸರ್ಕಾರಕ್ಕೆ ಹಿಂದಿರುಗಿಸುವಂತೆ ಸ್ಥಳೀಯ ತಹಶಿಲ್ದಾರ್ ಸುಮಂತ್ ಅವರ ಮೂಲಕ ನೋಟಿಸ್ ಜಾರಿಗೆ ಮಾಡಿರುವುದಲ್ಲದೇ, ಇದೇ ಸಂಬಂಧವಾಗಿ ಈ ಜನವರಿಯಂದು ನೀಡಬೇಕಿದ್ದ ಡಿಸೆಂಬರ್ 2023ರ ಮಾಸಿಕ ವೇತನವನ್ನೂ ಸಹಾ ತಡೆ ಹಿಡಿಯಲಾಗಿದೆ.

ಈ ನೋಟೀಸ್ ನಿಂದ ಬೇಸರಿಸಿಕೊಂಡ ಶ್ರೀ ಕಣ್ಣನ್ ಅವರು ಕಳೆದ 44 ವರ್ಷಗಳಿಂದಲೂ ಈ ದೇವಾಲಯದಲ್ಲಿ ಅರ್ಚಕನಾಗಿ ಕೆಲಸ ಮಾಡಿದ್ದೇನೆ. ಅವರು ಕೊಡುವ ಹಣ ತಮ್ಮ ಜೀವನ ಆದಾಯಕ್ಕೆ ಸಾಲದೇ ಹೋದರೂ, ದೇವರ ಮೇಲಿನ ಶ್ರದ್ಧಾ ಭಕ್ತಿಯಿಂದಾಗಿ ಯಾವುದೇ ರೀತಿಯ ಚಕಾರವೆತ್ತದೇ ಅದೊಂದು ಕಾಯಕ ಎನ್ನುವುದಕ್ಕಿಂತಲೂ ದೇವರ ಸೇವೆ ಎಂದು ಮಾಡಿಕೊಂಡು ಹೋಗುತ್ತಿರುವ ನನಗೆ ಈಗ ಏಕಾಏಕಿ ದೇವಾಲಯಕ್ಕೆ ಆದಾಯ ಇಲ್ಲ ಎಂದು ಹೇಳುತ್ತಾ, ಕೊಡಬೇಕಿದ್ದ ಸಂಬಳವನ್ನು ತಡೆಹಿಡಿದಿರುವುದಲ್ಲದೇ, ಕಳೆದ ಹತ್ತು ವರ್ಷಗಳಿಂದಲೂ ನೀಡಿದ ವೇತನವನ್ನು ವಾಪಸ್ ಕೇಳುವುದು ಸರಿಯಲ್ಲ. ಅನೇಕ ದೇವಾಲಯಗಳು ಅರ್ಚಕರಿಲ್ಲದೇ ಪೂಜಾ ವಿಧಿವಿಧಾನಗಳು ನಡೆಯದೇ ಪಾಳು ಬಿದ್ದು ಹೋಗುತ್ತಿರುವಂತಹ ಸಂಧರ್ಭದಲ್ಲಿ ಕರ್ತವ್ಯ ಎಂದು ಒಂದು ದಿನವೂ ತಪ್ಪದೇ ಪೂಜಾವಿಧಿಯನ್ನು ನಿರ್ವಿಘ್ನವಾಗಿ ನಡೆಸಿಕೊಂಡು ಹೋಗುತ್ತಿರುವ ನನ್ನಂತಹವರಿಗೆ ಇದು ಅವಮಾನಕರ ಎಂದು ಖಾಸಗೀ ವಾಹಿನಿಯಲ್ಲಿ ಸಂದರ್ಶನ ನೀಡುತ್ತಿದ್ದಂತೆಯೇ ಜನಕ್ರೋಶ ಶುರುವಾಗುತ್ತಿದ್ದಂತೆಯೇ ಎಚ್ಚೆತ್ತ ಸಚಿವ ರಾಮಲಿಂಗಾರೆಡ್ಡಿ, ಹಿರೇಮಗಳೂರು ಕಣ್ಣನ್ಗೆ ಅವರಿಗೆ ತಪ್ಪು ಕಲ್ಪನೆಯಿಂದ ನೋಟೀಸ್ ನೀಡಲಾಗಿದ್ದು ಅದನ್ನು ಈ ಕೂಡಲೇ ಹಿಂಪಡೆಯಲು ಸೂಚಿಸುವೆ ಎಂದು ಹೇಳುವ ಮೂಲಕ ತಿಪ್ಪೇ ಸಾರಿಸಿದ್ದರೂ, ಹಿಂದೂಗಳ ಶ್ರದ್ಧಾ ಕೇಂದ್ರವಾದ ದೇವಾಲಯಗಳನ್ನು ಆದಾಯ ಕೇಂದ್ರವಾಗಿಸಿಕೊಳ್ಳುವ ದೈನೇಸಿ ಸ್ಥಿತಿಯನ್ನು ತಲುಪಿ ದೇಗುಲದ ಅರ್ಚಕರ ವೇತನ ವಾಪಸ್ ಕೇಳುವ ಮೂಲಕ ಸಿದ್ದರಾಮಯ್ಯ ಸರ್ಕಾರಕ್ಕೆ ಅಡಿಕೆಗೆ ಹೋದ ಮಾನ ಆನೇ ಕೊಟ್ರೂ ಬರೋದಿಲ್ಲಾ ಎಂಬ ಗಾದೆಯಂತಾಗಿರುವುದಂತೂ ಸುಳ್ಳಲ್ಲಾ ಅಲ್ವೇ?
ತಿಂಗಳಿಗೆ ಅತ್ತು ಕೆಜಿ ಅಕ್ಕಿ, ಮನೆಯ ಒಡತಿಗೆ ಎರಡು ಸಾವಿರ ದುಡ್ಡು, ೨೦೦ ಯೂನಿಟ್ ಕರೆಂಟ್ ಫ್ರೀ!! ಎಂದು ಚುನಾವಣಾ ಪೂರ್ವದಲ್ಲಿ ಬೊಬ್ಬಿರಿದ, ನನ್ನ ಹೆಸರಿನಲ್ಲೇ ರಾಮನಿದೆ. ನಾನೇಕೇ ಅಯೋಧ್ಯೆ ರಾಮನನ್ನು ನೋಡಲು ಹೋಗಬೇಕು? ಎಂದು ಉಧ್ಧಟತನ ತೋರಿ ಹಿಂದೂಗಳ ಮನಸ್ಸಿಗೆ ನೋವುಂಟು ಮಾಡಿದ ಸಿದ್ದರಾಮಯ್ಯನವರೇ, ಈಗ ನಿಮ್ಮ ಅಧಿಕಾರದ ತೆವಲಿಗೆ ಅದೇ ಹಿಂದೂಗಳ ದೇವಾಲಯಗಳ ಅದಾಯವೇ ಬೇಕೇ? ಹಿಂದೂಗಳ ಶ್ರದ್ಧಾ ಕೇಂದ್ರಗಳಾದ ದೇಗುಲಗಳನ್ನೇ ತಮ್ಮ ಸರ್ಕಾರದ ಮುಖ್ಯ ಆದಾಯ ಕೇಂದ್ರಗಳನ್ನಾಗಿಸಿಕೊಂಡ ಈ ಸರ್ಕಾರಕ್ಕೆ ಜನ ಛೀಮಾರಿ ಹಾಕುತ್ತಿರುವುದು ತಪ್ಪಲ್ಲಾ ಅಲ್ವೇ? ಅಧಿಕಾರ ಶಾಶ್ವತ ಅಲ್ಲಾ! ಇಲ್ಲಿ ಪ್ರಜೆಗಳೇ ಪ್ರಭುಗಳು ಹಾಗಾಗಿ ಮುಂದಿನ ಬಾರಿ ದೇವಾಲಯದಲ್ಲಿ ಹುಂಡಿಗೆ ಕಾಸು ಹಾಕುವಾಗಲೂ ಮತ್ತು ಓಟು ಹಾಕುವಾಗಲೂ ಜಾಗೃತರಾಗುವುದು ಸುಳ್ಳಲ್ಲಾ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ