ಪ್ರಸ್ತುತವಿರುವ ವಕ್ಫ್ ಕಾಯ್ದೆಗಳು ಏಕಪಕ್ಷೀಯವಾಗಿರುವುದನ್ನು ಮನಗಂಡ ಕೇಂದ್ರ ಸರ್ಕಾರ 1995ರಲ್ಲಿ ಅಂದಿನ ಕಾಂಗ್ರೇಸ್ ಓಲೈಕೆ ಸರ್ಕಾರದ ಮಾಡಿದ ತಪ್ಪನ್ನು ಸರಿಪಡಿಸಲು ಮುಂದಾಗುತ್ತಿದ್ದಂತೆಯೇ ದೇಶಾದ್ಯಂತ ವಕ್ಫ್ ಭೂಕಬಳಿಕೆಯ ಕರಾಳ ಮುಖಗಳು ಪ್ರಚಾರಕ್ಕೆ ಬರುತ್ತಿದೆ. ದುರಾದೃಷ್ಟವಷಾತ್ ಕರ್ನಾಟಕದ ಸಿದ್ದರಾಮಯ್ಯ, ಕೃಷ್ಣಾ ಬೈರೇಗೌಡ, ಎಂ.ಬಿ.ಪಾಟೀಲ್ ಮತ್ತು ಜಮೀರ್ ಅಹ್ಮದ್ ಖಾನ್ ಇರುವಂತಹ ಕಾಂಗ್ರೇಸ್ ಸರ್ಕಾರ, ಕೇಂದ್ರದಲ್ಲಿ ಆ ಕಾಯ್ದೆ ಜಾರಿಗೆ ಆಗುವ ಮುನ್ನವೇ ಎಷ್ಟು ಸಾಧ್ಯವೊ ಅಷ್ಟು ರೈತರ ಭೂಮಿಯನ್ನು ವಕ್ಫ್ ಮಂಡಳಿಗೆ ಹಸ್ತಾಂತರ ಮಾಡಲು ಹೊರಟಿರುವುದು ನಿಜಕ್ಕೂ ಆಘಾತಕಾರಿಯಾದ ವಿಷಯವಾಗಿದೆ.
ವಕ್ಫ್ ಕುರಿತಾದ ನನ್ನ ಸುದೀರ್ಘವಾದ ಲೇಖನವನ್ನು ಈಗಾಗಲೇ ಓದಿರುವ ನಿಮಗೆ ಅದು ಕೇವಲ ವಿಜಯಪುರದ 15ಸಾವಿರ ಎಕರೆಗಷ್ಟೇ ಸೀಮಿತವಾಗಿರದೇ, ಈಗ ಯಾದಗಿರಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿಯೂ ವಕ್ಫ್ ಆಸ್ತಿ ಎಂದು ರೈತರಿಗೆ ನೋಟಿಸ್ ನೀಡಲಾಗಿದ್ದು ಕರ್ನಾಟಕದ ರೈತರುಗಳು ಈ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಇಷ್ಟೇಲ್ಲಾ ಅವಘಡಗಳಿಗೆ ನೇರವಾದ ಹೊಣೆಯನ್ನು ಕರ್ನಾಟಕದ ರಾಜ್ಯ ಸರ್ಕಾರ ವಕ್ಫ್ ಖಾತೆಯ ಸಚಿವ ಜಮೀರ್ ಅಹಮದ್ ಅವರೇ ಹೊರಬೇಕಾಗಿದ್ದು, ಕಳೆದ 2-3 ವಾರಗಳಲ್ಲಿ ರಾಜ್ಯಾದ್ಯಂತ ತುರಾತಿರಿಯಲ್ಲಿ ಪ್ರವಾಸ ಮಾಡಿ ಅಲ್ಲಿನ ಅಧಿಕಾರಿಗಳಿಗೆ ಒತ್ತಡ ಹೇರಿ ಹಾಕಿ ನೋಟಿಸ್ ಕೊಡಲು ಮೌಖಿಕ ಸೂಚನೆ ನೀಡಿರುವ ವಿಷಯ ಈಗ ಜಗಜ್ಜಾಹೀರಾತಾಗಿದೆ. ಇವಿಷ್ಟೇ ಅಲ್ಲದೇ ತಮ್ಮ ಮುಸ್ಲಿಂ ಜನಾಂಗವನ್ನು ಉದ್ದೇಶಿಸಿ ಮಾತಾಡುವಾಗ, ಎಂದಿನಂತೆ ಅವರ ಶೈಲಿಯಾದ ತಮ್ಮ ಹಲ್ಲುಗಳನ್ನು ಕಚ್ಚಿ ಇದು ಅಲ್ಲಾ ಕೊಟ್ಟಿರುವ ಭೂಮಿ ಅದಕ್ಕೆಲ್ಲಾ ಬೇಲಿ ಹಾಕಿ ಮೇಲೆ ದೊಡ್ಡ ದೊಡ್ಡದಾಗಿ ಹಸಿರು ಬಾವುಟಗಳನ್ನು ಹಾರಿಸಿ, ಅದನ್ನು ನೋಡಿ ಸೈತಾನರಿಗೆ ಹೊಟ್ಟೆ ಉರಿಯುವಂತಾಗಲಿ ಎಂಬ ಉದ್ರೇಕಕಾರಿ ಭಾಷಣ ಮಾಡುವ ಮೂಲಕ ತಾವೇ ಇಷ್ಟೇಲ್ಲಾ ಹಗರಣಗಳ ರೂವಾರಿ ಎಂಬುದನ್ನು ಒಪ್ಪಿ ಕೊಂಡಿದ್ದಾರೆ.
7-12ನೇ ಶತಮಾನದಲ್ಲಿ ಮುಸಲ್ಮಾನರು ಹಿಂದೂಸ್ಥಾನಕ್ಕೆ ಆಕ್ರಮಣ ಮಾಡುವ ಮುನ್ನಾ ಅಪ್ಘಾನಿಸ್ಥಾನದಿಂದ ಹಿಡಿದು ಥೈಲ್ಯಾಂಡ್ ವರೆಗೂ ವಿಶಾಲವಾದ ಹಿಂದೂಸ್ಥಾನವಿದ್ದು ಅಲ್ಲಿನ ಜನರೆಲ್ಲಾ ಸನಾತನ ಧರ್ಮವನ್ನು ಪಾಲಿಸುತ್ತಿದ್ದು, ನಂತರ ದಿನಗಳಲ್ಲಿ ಮುಸಲ್ಮಾನರ ದಬ್ಬಾಳಿಕೆಯಿಂದಾಗಿ ಒಂದೊಂದಾಗಿ ಹಿಂದೂಸ್ಥಾನದಿಂದ ಕಳಚಿಹೋಗಿ 1947ರಲ್ಲೂ, ಧರ್ಮಾಧಾರಿತವಾಗಿ ಭಾರತ ಪಾಕೀಸ್ಥಾನಗಳ ವಿಭಜನೆಯಾಗಿದ್ದರೂ, ಪ್ರಸ್ತುತ ಭಾರತದ ಭೂಮಿ ಮುಸಲ್ಮಾನರದ್ದು ಎಂದು ಹೇಳುವ ದಾಷ್ಟತನವನ್ನು ತೋರಿಸುತ್ತಾರೆ ಮತ್ತು ಅದಕ್ಕೆ ಎಂದಿನಂತೆ ಭಾರತ ವಿರೋಧಿ ಧೋರಣೆಯ ಕಾಂಗ್ರೇಸ್ಸಿನ ಇಂಡಿ ಒಕ್ಕೂಟದವರು ಅದನ್ನು ಸಮರ್ಥನೆ ಮಾಡುತ್ತಿರುವುದು ಈ ದೇಶದ ದುರ್ದೈವವೇ ಸರಿ.
ತಮಿಳು ನಾಡು, ಮಹಾರಾಷ್ಟ್ರ, ಆಂಧ್ರಗಳಲ್ಲಿ 1500 ವರ್ಷಕ್ಕೂ ಹಳೆಯದಾದ ಹಳ್ಳಿಗಳು ಮತ್ತು ದೇವಾಲಯಗಳನ್ನು ತಮ್ಮ ಆಸ್ತಿ ಎಂದು ವಾದಿಸುತ್ತಿರುವ ವಕ್ಫ್ ಮಂಡಳಿ, ಈಗ ಉತ್ತರಾಖಂಡಿನಲ್ಲಿರುವ ಸನಾತನ ಧರ್ಮೀಯರ ಶ್ರದ್ಧೇಯ ಚಾರ್ ಧಾಮ್ ಗಳಲ್ಲಿ ಒಂದಾಗಿರುವ ಬದರೀನಾಥ್ ಸಹಾ ಮುಸಲ್ಮಾನರದ್ದು. ಅಲ್ಲಿರುವುದು ಬದರೀನಾಥನಲ್ಲಾ, ಅದು ಬದ್ರುದ್ದೀನ್ ಶಾ ಎಂದು ವಾದ ಮಾಡುತ್ತಿರುವುದು ಒಂದೆಡೆಯಾದರೆ, 13ನೇ ಶತಮಾನದ ಇತಿಹಾಸವಿರುವ ಸಿಂದಗಿಯ ವಿರಕ್ತಮಠದ ಆಸ್ತಿಯೂ ಸಹಾ, ಈಗ ಸಿಂದಗಿ ಸುನ್ನಿ ವಕ್ಫ್ ಹೆಸರಿನಲ್ಲಿದೆ ಎಂಬ ಅಚ್ಚರಿಯ ವಿಷಯ ಹೊರಬಿದ್ದಿರುವುದನ್ನು ನೋಡಿದಲ್ಲಿ ಮುಸಲ್ಮಾನರ ಈ ಪರಿಮಾಣದ ಭೂಕಬಳಿಕೆ ನಿಜಕ್ಕೂ ದೇಶದ ಅಖಂಡತೆ ಮತ್ತು ಏಕತೆಗೆ ಧಕ್ಕೆ ತರುವಂತಿದೆ.

ರೈತ ಈ ದೇಶದ ಬೆನ್ನಲುಬು ಎನ್ನುವುದನ್ನು ಎಲ್ಲರೂ ಒಪ್ಪುವಂತಹ ವಿಷಯವಾಗಿದ್ದು, ಇಲ್ಲಿ ಜಾತಿಯ ಹಂಗಿಲ್ಲದೇ ಒಕ್ಕಲುತನ ಮಾಡುತ್ತಿರುವುದರಿಂದಲೇ, ನಾವೂ ನೀವೂ ಹೊಟ್ಟೆ ತುಂಬುವಷ್ಟು ಆಹಾರವನ್ನು ಸೇವಿಸುವಂತಾಗಿದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಷಯವೇನೆಂದರೆ, ದೇಶದ ಬಹುತೇಕ ರಾಜ್ಯಗಳಲ್ಲಿ ಅದರಲ್ಲೂ ವಿಶೇಷವಾಗಿ ಕರ್ನಾಟಕ ರಾಜ್ಯವನ್ನು ತೆಗೆದು ಕೊಂಡಲ್ಲಿ, ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಮುಸಲ್ಮಾನರ ಸಂಖ್ಯೆ ಬಹಳ ವಿರಳ ಎಂದರೂ ತಪ್ಪಾಗದು. ಬಹುತೇಕ ಮುಸಲ್ಮಾನರುಗಳು ಕೃಷಿಕರ ಬಳಿ ಕೊಂಡು ಅದನ್ನು ದೂರದ ನಗರ ಪ್ರದೇಶಗಳಲ್ಲಿ ವ್ಯಾಪಾರ ಮಾಡುವುದನ್ನು ಎಲ್ಲೆಡೆಯೂ ಕಾಣಬಹುದಾಗಿರುವ ಸಂಧರ್ಭದಲ್ಲಿ, ತಾತ ಮುತ್ತಾತಂದಿರ ಕಾಲದಿಂದಲೂ ಉಳುಮೆ ಮಾಡುತ್ತಿರುವ ಸಾವಿರಾರು ಎಕರೆಯಷ್ಟು ಕೃಷಿ ಜಮೀನು ಏಕಾ ಏಕಿ ಕೃಷಿಯನ್ನೇ ಮಾಡದ ಮುಸಲ್ಮಾನರ ಪಾಲದದ್ದು ಹೇಗೇ? ಎಂಬುದೇ ಅಚ್ಚರಿಯನ್ನು ಮೂಡಿಸುತ್ತದೆ.
ಏಕಾ ಏಕಿ ದೇಶಾದ್ಯಂತ ಇರುವ ಲಕ್ಷಾಂತರ ಕೃಷಿ ಜಮೀನು ತಮ್ಮದೆಂದು ವಾದಿಸುವ ವಕ್ಫ್ ಮಂಡಳಿ, ಆ ಜಮೀನುಗಳಲ್ಲಿ ಇಲ್ಲಿಯವರೆಗೂ ಯಾವ ಮುಸಲ್ಮಾನರೂ ಕೃಷಿಯನ್ನೇ ಮಾಡದಿರುವಾಗ, 70ರ ದಶಕದಲ್ಲಿ ವಿನೋಭಾ ಭಾವೆಯವರ ನೇತೃತ್ವದಲ್ಲಿ ನಡೆದ ಭೂಧಾನ ಚಳುವಳಿಯಿಂದ ಪ್ರೇರಿತವಾಗಿ ಮತ್ತು ಅಂದಿನ ಕಾಂಗ್ರೇಸ್ ಪ್ರಧಾನಿ ಇಂದಿರಾಗಾಂಧಿಯವರನ್ನು ಮೆಚ್ಚಿಸುವ ಸಲುವಾಗಿ ಕರ್ನಾಟಕದ ಅಂದಿನ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸರು ಇದ್ದಕ್ಕಿದ್ದಂತೆಯೇ, 1974 ರಲ್ಲಿ ಕರ್ನಾಟಕದಲ್ಲಿ ಭೂಸುಧಾರಣೆ ಕಾಯ್ದೆಯನ್ನು ಏಕಾ ಏಕಿ ಜಾರಿಗೆ ಗೊಳಿಸುವ ಮೂಲಕ ಉಳುವವನೇ ಭೂಮಿಯ ಒಡೆಯ ಎಂಬ ಕಾನೂನನ್ನು ಜಾರಿಗೆ ತರುವ ಮೂಲಕ ರಾಜ್ಯದ ಲಕ್ಷಾಂತರ ಜಮೀನ್ದಾರು, ಭೂ ಹಿಡುವಳಿದಾರರು ರಾತ್ರಿಯಿಂದ ಬೆಳಗಾಗುವಷ್ಟರರಲ್ಲಿ ಬೀದಿಗೆ ಬರುವಂತೆ ಮಾಡಿದ್ದಾಗ, ಈಗ ವಕ್ಫ್ ಆಸ್ತೆಯೆಂದು ಹೇಳುತ್ತಿರುವ ಭೂಮಿಗಳೆಲ್ಲವೂ ಆಗ ಉಳುಮೇ ಮಾಡುತ್ತಿದ್ದ ರೈತರದ್ದೇ ಆಗುತ್ತದಲ್ಲವೇ?
ರೈತರಿಗೆ ನೀಡಿರುವ ನೋಟೀಸ್ ಕುರಿತಾಗಿ ಎಂ.ಬಿ ಪಾಟೀಲ್, ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಮತ್ತು ಝಮೀರ್ ಜಂಟಿ ಪತ್ರಿಕಾಗೋಷ್ಟಿಯಲ್ಲಿ ವಿಜಯಪುರದಲ್ಲಿ ಯಾವುದೇ ರೈತರನ್ನು ಒಕ್ಕಲೆಬ್ಬಿಸುದಿಲ್ಲ. ಅಲ್ಲಿ ವಿವಾದ ವಿರುವುದು ಕೇವಲ 17 ಎಕರೆ ಭೂಮಿಗಷ್ಟೇ. ತಾಂತ್ರಿಕ ದೋಷದಿಂದಾಗಿ ತಪ್ಪುಗಳಾಗಿರ ಬಹುದು. ಒಂದೊಮ್ಮೆ ಎಲ್ಲರಿಗೂ ನೋಟಿಸ್ ಕೊಟ್ಟಿದ್ದರೆ ನೋಟಿಸ್ ವಾಪಸ್ ಪಡೆಯುತ್ತೇವೆ ಎಂದಿರುವುದಲ್ಲದೇ, ವಿಜಯಪುರ, ಯಾದಗಿರಿ ಮತ್ತು ಧಾರವಾಡ ಜಿಲ್ಲೆಯ ಹಲವು ರೈತರ ಪಹಣಿಯಲ್ಲಿ ಏಕಾಏಕಿ ವಕ್ಫ್ ಆಸ್ತಿ ಎಂದು ನಮೂದಾಗಿರವುದನ್ನು ಸರಿ ಪಡಿಸುತ್ತೇವೆ ಎಂಬ ಭರವಸೆ ನೀಡುವ ಮೂಲಕ ಪ್ರಕರಣನ್ನು ಇತ್ಯಥ್ಯ ಮಾಡುವುದಕ್ಕಿಂತಲೂ ತಿಪ್ಪೇ ಸಾರಿಸಿದ್ದಾರೆ ಎಂದರೂ ತಪ್ಪಾಗದು. ಇದೇ ಕುರಿತಾಗಿ ಸರಣಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಜಯಪುರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಾರ್ಯಪಡೆ ರಚನೆ ಮಾಡಲಾಗುವುದು. ಅದರಲ್ಲಿ, ಸಹಾಯಕ ಆಯುಕ್ತರು, ಎಲ್ಲ ತಹಶೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು, ವಕ್ಫ್ ಅಧಿಕಾರಿಗಳು ಇರುತ್ತಾರೆ ಎಂದು ತಿಳಿಸಿರುವುದಲ್ಲದೇ, 1973-74ರಲ್ಲಿ ಅಧಿಸೂಚನೆಯಾಗುವ ಪೂರ್ವದಲ್ಲಿನ ದಾಖಲೆಗಳನ್ನು ರೈತರು ಸಲ್ಲಿಸಿದರೆ, ಅಂತಹ ಅಧಿಸೂಚಿತ ಜಾಗಗಳನ್ನು ಕೈ ಬಿಡಲು ಸರಕಾರ ಸಿದ್ಧವಿದೆ ಎಂದು ಹೇಳಿದ್ದಾರೆ.
ವಕ್ಫ್ ಒಂದು ಸ್ವಂತ್ರತ್ರವಾದ ಧಾರ್ಮಿಕ ಸಂಸ್ಥೆ, ಅದರಲ್ಲಿ ಸರ್ಕಾರದ ಪಾತ್ರವಿಲ್ಲಾ. Once it is waqf it’s always a waqf ಎಂದು ಪದೇ ಪದೇ ಬಾಯಿ ಹರಿದುಹೀಗುವಂಟೆ ವಾದಿಸುವ ಮುಸಲ್ಮಾನ ಮುಖಂಡರು ಈಗ ಕೊಟ್ಟಿರುವ ನೋಟೀಸನ್ನು ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಹಿಂಪಡೆಯುತ್ತಾರೆಯೇ? ಪ್ರಸ್ತುತವಾದ ವಕ್ಫ್ ಕಾಯ್ದೆಯಂತೆ ಒಮ್ಮೆ ವಕ್ಫ್ ಒಂದು ಆಸ್ತಿ ತನ್ನದೆಂದು ನೋಟೀಸ್ ಕೊಟ್ಟ ನಂತರ ಆ ಕುರಿತಾಗಿ ಭೂಮಿ ಕಳೆದು ಕೊಂಡಂತಹ ವ್ಯಕ್ತಿ ಅದರ ಪರಿಹಾರವಾಗಿ ದೇಶದ ಯಾವುದೇ ನ್ಯಾಯಾಲಯದಕ್ಕೂ ಎಡತಾಕದೇ, ಕೇವಲ ವಕ್ಫ್ ಟ್ರಿಬಿನಲ್ ನಲ್ಲಿ ಮಾತ್ರವೇ ಪರಿಹರಿಸಿಕೊಳ್ಳಬೇಕು ಎನ್ನುವ ಕಾಯ್ದೆ ಇರುವಾಗ, ರಾಜ್ಯ ಸರ್ಕಾರ ಈ ನೋಟಿಸನ್ನು ಹೇಗೆ ಹಿಂದೆ ಪಡೆಯಲು ಸಾಧ್ಯ? ಎಂಬ ಪ್ರಶ್ನೆ ಮೂಡುವುದಲ್ಲದೇ, ಈ ಸಂಪೂರ್ಣ ಪ್ರಹಸನದ ಹಿಂದೆ ಕಾಂಗ್ರೇಸ್ ಸರ್ಕಾರ ಅದರಲ್ಲೂ ವಿಶೇಷವಾಗಿ ಝಮೀರ್ ಒಂದು ಕಡೆ ಮಗುವಿನ ಕುಂ..ನೂ ಜಿಗುಟುತ್ತಾ, ಮತ್ತೊಂದು ಕಡೇ ತೊಟ್ಟಿಲನ್ನೂ ತೂಗಲು ಹೆಣಗಾಡುತ್ತಿರುವುದು ಸ್ಪಷ್ಟವಾಗುತ್ತಿದೆ.
ಇನ್ನು 1973-74ರಲ್ಲಿ ಅಧಿಸೂಚನೆಯಾಗುವ ಪೂರ್ವದಲ್ಲಿನ ದಾಖಲೆಗಳನ್ನು ರೈತರು ಸಲ್ಲಿಸಿದರೆ, ಅಂತಹ ಅಧಿಸೂಚಿತ ಜಾಗಗಳನ್ನು ಕೈ ಬಿಡಲು ಸರಕಾರ ಸಿದ್ಧವಿದೆ ಎಂದು ಹೇಳುವುದಾದರೇ, ಕರ್ನಾಟಕದ ಭೂಸುಧಾರಣೆಯ ಸಮಯದಲ್ಲಿ ಲಕ್ಷಾಂತರ ಎಕರೆಯಷ್ಟು ಪಿತ್ರಾರ್ಜಿತ ಮತ್ತು ರಾಜ ಮಹಾರಾಜರಿಂದ ಕೊಡುಗೆ ರೂಪದಲ್ಲಿ ಪಡೆದಿದ್ದ ಜಮೀನನ್ನು ರಾತ್ರಿ ಬೆಳಗಾಗುವುದರೊಳಗೆ ಕಳೆದುಕೊಂಡು ಬೀದಿ ಪಾಲಾದ ಸಾವಿರಾರು ಬ್ರಾಹ್ಮಣ ಶ್ಯಾನುಭೋಗರುಗಳಿಗೂ ಈ ನಿಯಮ ಅನ್ವಯಿಸುತ್ತದೆಯೇ? ಎಂದು ಈ ಸರ್ಕಾರ ತಿಳಿಸಬೇಕಾಗಿದೆ. ಯಾವುದೇ ಮಾರ್ಗದಲ್ಲಿ ಜನರಿಂದ ಜನಪ್ರತಿನಿಧಿಯಾಗಿ ಆಯ್ಕೆಯಾಗಿ ಬಹುತಮತದ ಸಂಖ್ಯಾಧಾರಿತವಾಗಿ ಅಧಿಕಾರಕ್ಕೆ ಏರುವ ಸಂಧರ್ಭದಲ್ಲಿ ಯಾವುದೇ ವ್ಯಕ್ತಿ, ಜಾತಿ, ಧರ್ಮದ ಪರವಾಗಿರದೇ, ಎಲ್ಲರನ್ನೂ ಏಕರೂಪದಲ್ಲಿ ತೆಗೆದುಕೊಂಡು ಹೋಗುವಂತಹ ಆಡಳಿತ ನೀಡುತ್ತೇವೆ ಎಂದು ಪ್ರಮಾಣವಚನ ತೆಗೆದುಕೊಂಡವರು ಈಗ ಕೇವಲ ಓಟಿ ಬ್ಯಾಂಕ್ ರಾಜಕಾರಣಕ್ಕಾಗಿ ಏಕಾ ಏಕಿ ಒಂದೇ ಧರ್ಮದ ಪರವಾಗಿ ಧೋರಣೆಯನ್ನು ತಾಳುತ್ತಿರುವುದು ಸಂವಿಧಾನಕ್ಕೆ ಮಾಡುವ ಅಪರಾಧ ಎನಿಸುತ್ತದೆಯಲ್ಲವೇ?
ಮುಸಲ್ಮಾನರನ್ನು ಓಲೈಸುವ ಸಲುವಾಗಿ ಮಾಡಿದ ಈ ಕುಕೃತ್ಯದ ವಿರುದ್ಧ ಜನ ಈ ಪರಿಯಾಗಿ ತಿರುಗಿ ಬೀಳುತ್ತಾರೆ ಎಂದು ನಿರೀಕ್ಷಿಸಿರದಿದ್ದ ಸಿದ್ದು ನೇತೃತ್ವದ ಕಾಂಗ್ರೆಸ್ ಸರ್ಕಾರ ನಿಶ್ಚಿತವಾಗಿಯೂ ಸ್ವಲ್ಪ ಭಯದಲ್ಲಿಯೇ ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು ಎನ್ನುವಂತೆ ಒಂದೆರಡು ಹೆಜ್ಜೆ ಹಿಂದೆ ಸರಿದಿದ್ದರೂ, ಅದು ಕೇವಲ ತಾತ್ಕಾಲಿಕ ಎನ್ನುವುದನ್ನು ಸಕಲ ಹಿಂದುಗಳು ಅರ್ಥ ಮಾಡಿಕೊಳ್ಳಬೇಕಾಗಿದೆ. ರಾಜ್ಯದಲ್ಲಿ ಮೂರು ಕಡೆಯಲ್ಲಿ ಉಪಚುನಾವಣೆ ಮತ್ತು ಪಕ್ಕದ ಮಹಾರಾಷ್ಟ್ರ ಮತ್ತು ದೂರದ ಜಾರ್ಖಂಡಿನಲ್ಲಿ ಚುನಾವಣಾ ಪ್ರಕ್ತಿಯೆ ನಡೆಯುತ್ತಿದ್ದು ಅಲ್ಲಿ ನಿಶ್ಚಿತವಾಗಿ ಈ ವಿಷಯದ ಕುರಿತಾಗಿ ಬಿಜೆಪಿ ಅದರಲ್ಲೂ ಪ್ರಧಾನಿ ಮೋದಿ ಮಾತನಾಡುವುದರಿಂದ ಹರ್ಯಾಣದಲ್ಲಿ ಗೆಲ್ಲುವ ಎಲ್ಲಾ ಅವಕಾಶವಿದ್ದರೂ ಸೋತು ಹೋದಂತೆ ಇಲ್ಲಿಯೂ ಅಡ್ಡ ಪರಿಣಾಮ ಬೀರಬಾರದು ಎಂದು ಪರಿಸ್ಥಿತಿಯನ್ನು ತಣ್ಣಗಾಗಿಸುವ ಪ್ರಯತ್ನದಲ್ಲಿದೆ.
ಈ ಎಲ್ಲಾ ಸಮಸ್ಯೆಗಳಿಗೂ ಶಾಶ್ವತ ಪರಿಹಾರವನ್ನು ನೀಡಬೇಕು ಎಂದಾದಲ್ಲಿ ಕಾಶ್ಮೀರದದ ಮುಸಲ್ಮಾನರನ್ನು ಓಲೈಸಿಕೊಳ್ಳುವ ಸಲುವಾಗಿ ಅಂದು ನೆಹರು ತಂದಿದ್ದ ಅರ್ಟಿಕಲ್ 370, 35A ಪರಿಚ್ಚೇಧವನ್ನು ಧೈರ್ಯದಿಂದ ಕಿತ್ತು ಹಾಕಿ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಜಗತ್ತಿಗೇ ಸಾರಿ ಹೇಳಿದಂತೆ 1995ರಲ್ಲಿ ಬಾಬರೀ ಮಸೀದಿ ಧ್ವಂಸದಿಂದ ಕೋಪಗೊಂಡ ಮುಸಲ್ನಾನರು ಕಾಂಗ್ರೇಸ್ ವಿರುದ್ಧ ತಿರುಗಿ ಬೀಳಬಾರದು ಎಂದು ಅವರ ಓಲೈಕೆಗಾಗಿ ನರಸಿಂಹರಾವ್ ಅವರು ತಂದಿದ್ದ ವಕ್ಫ್ ಕಾಯ್ದೆಯನ್ನು ಮುಂಬರುವ ನವೆಂಬರ್ ತಿಂಗಳಿನ ಚಳಿಗಾಲದ ಅಧಿವೇಶನದಲ್ಲಿ ಬದಲಾವಣೆ ಮಾಡದೇ, ಅದನ್ನು ಸಂಪೂರ್ಣವಾಗಿ ರದ್ದು ಮಾಡಬೇಕು ಎನ್ನುವುದೇ ಎಲ್ಲಾ ಹಿಂದೂಗಳ ಮನದಾಳದ ಆಸೆಯಾಗಿದೆ. ಹಾಗೆ ಮಾಡಿದಾಗಲೇ, ಒಂದು ದೇಶ, ಒಂದು ಕಾನೂನು, ಸಬ್ ಕಾ ಸಾತ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ವಿಕಾಸ್ ಎನ್ನುವ ಪ್ರಧಾನಿಗಳ ಆಶಯ ಈಡೇರುತ್ತದೆ ಅಲ್ವೇ?
ಮನದಾಳದ ಮಾತು : ರೋಗಕ್ಕೆ ಚಿಕಿತ್ಸೆ ನೀಡುವುದಕ್ಕಿಂತಲೂ ರೋಗವನ್ನು ಹರಡುವ ಕೀಟಾಣುವನ್ನೇ ಶಾಶ್ವತವಾಗಿ ನಾಶ ಪಡಿಸುವುದು ಸೂಕ್ತವಾದ ಕ್ರಮ. ಇದನ್ನು ಅರ್ಥ ಮಾಡಿಕೊಂಡಲ್ಲಿ ಮಾತ್ರವೇ ಹಿಂದೂಸ್ಥಾನಲ್ಲಿ ಹಿಂದೂಗಳಿಗೆ ಉಳಿಗಾಲ.
ಏನಂತೀರೀ?
ಸೃಷ್ಟಿಕರ್ತ ಉಮಾಸುತ