ಅದ್ಯಾಕೋ ಏನೋ? ಈ ಕಾಂಗ್ರೇಸ್ ಅದರಲ್ಲೂ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಲೆಲ್ಲಾ ಬಹುಸಂಖ್ಯಾತ ಹಿಂದೂಗಳಿಗೆ ಸುಣ್ಣ ಮತ್ತು ಅಹಿಂದಗಳಿಗೆ ಬೆಣ್ಣೆ ತೋರಿಸುವುದು ಎಲ್ಲರೂ ಗಮನಿಸಿರಬಹುದು. ಓಟ್ ಆಸೆಗಾಗಿ ಯಾವ ಮಟ್ಟದ ಓಲೈಕೆಗೆ ಇಳಿಯುತ್ತಾರೆ ಎನ್ನುವುದಕ್ಕೆ ೨೦೨೫ರ ರಾಜ್ಯ ಸರ್ಕಾರದ ಬಜೆಟ್ ಸಾಕ್ಷಿ. ಸಿದ್ದರಾಮಯ್ಯ ಅವರು ಮಂಡಿಸಿದ ತಮ್ಮ 16ನೇ ದಾಖಲೆಯ ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ ಬಂಪರ್ ಕೊಡುಗೆಗಳನ್ನು ಕೊಟ್ಟಿದ್ದಾರೆ. ಅವುಗಳಲ್ಲಿ ಪ್ರಮುಖವಾದುವೆಂದರೆ, 2 ಹಾಗೂ 2ಎ ಮೀಸಲಾತಿ ಇರುವವರಿಗೆ ರಾಜ್ಯದಲ್ಲಿ ಕೈಗೊಳ್ಳಲಾಗುವ 1,500 ಕೋಟಿ ರೂ.ವರೆಗಿನ ಕಾಮಗಾರಿಗಳಲ್ಲಿ ಮೀಸಲಾತಿ ಕಲ್ಪಿಸುವುದಾಗಿ ಘೋಷಿಸಲಾಗಿದೆ. ವಕ್ಫ್ ಆಸ್ತಿಗಳ ಸಂರಕ್ಷಣೆಗಾಗಿ 150 ಕೋಟಿ ರೂ. ಮೀಸಲಿಡಲು, ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿಗಾಗಿ 1,000 ಕೋಟಿ ರೂ. ಮೀಸಲು ದೇಶಾದ್ಯಂತ ವಕ್ಫ್ ಆಸ್ತಿಗಳ ಗಲಾಟೆ ಶುರುವಾಗಿರುವ ಈ ಹೊತ್ತಿನಲ್ಲಿ ವಕ್ಫ್ ಆಸ್ತಿಗಳ ರಕ್ಷಣೆಗಾಗಿ 150 ಕೋಟಿ ರೂ.ಗಳನ್ನು ಮೀಸಲಿರಿಸುವುದಾಗಿ ಬಜೆಟ್ ನಲ್ಲಿ ಘೋಷಿಸಲಾಗಿದೆ. ಅದಲ್ಲದೆ, ಹಜ್ ಭವನದಲ್ಲಿ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಕೇಂದ್ರ ಸ್ಥಾಪನೆ, ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತ ಯುವತಿಯರ ಮದುವೆಗೆ ತಲಾ 50,000 ಘೋಷಣೆ, ಅಲ್ಪಸಂಖ್ಯಾತ ಕಾಲೋನಿಗಳ ಅಭಿವೃದ್ಧಿಗೆ 1,000 ಕೋಟಿ ರೂ., ವಕ್ಫ್ ಮಾಲೀಕತ್ವದ ಖಾಲಿ ಸ್ಥಳಗಳಲ್ಲಿ ಒಟ್ಟು 16 ಮಹಿಳಾ ಕಾಲೇಜುಗಳ ನಿರ್ಮಾಣ, ಮದರಸಾಗಳಲ್ಲಿ ಕಂಪ್ಯೂಟರ್, ಸ್ಮಾರ್ಟ್ ಬೋರ್ಡ್ ಸೌಲಭ್ಯ ಅಷ್ಟೇ ಅಲ್ಲದೇ ಸರ್ಕಾರಿ ಟೆಂಡರ್ ನಲ್ಲಿ ಅಲ್ಪಸಂಖ್ಯಾತರು ಅದರಲ್ಲೂ ಮುಸಲ್ಮಾನರಿಗೆ ಮೀಸಲು ಸೇರಿದಂತೆ ಹಲವಾರು ಯೋಜನೆಗಳನ್ನು ನೀಡುವ ಮೂಲಕ ಇಡೀ ಮುಸಲ್ಮಾನ ಸಮುದಾಯವೇ ತಮ್ಮನ್ನು ಕೈ ಹಿಡಿದು ಎರಡನೇ ಬಾರಿಗೆ ಅಧಿಕಾರಕ್ಕೆ ತಂದಿದ್ದಕ್ಕಾಗಿ ಋಣ ಸಂದಾಯ ಮಾಡಿದ್ದಾರೆ.
ಇಷ್ಟೇ ಅಲ್ಲದೇ ಸಿದ್ದರಾಮಯ್ಯನವರ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದ ನಂತರ ಆಯಕಟ್ಟಿನ ಜಾಗಗದಲ್ಲೂ ಮುಸಲ್ಮಾನ ಅಧಿಕಾರಿಗಳನ್ನೇ ತಂದಿದ್ದಾರೆ ಎನ್ನುವುದಕ್ಕೇ ಈ ಭಡ್ತಿಗಳೇ ಸಾಕ್ಷಿ
- ಈ ವರ್ಷದ ಪೊಲೀಸ್ ಶೌರ್ಯ ಸೇವಾ ಪ್ರಶಸ್ತಿ – ಹಂಜಾ ಹುಸೇನ್
- ಪೊಲೀಸ್ ಮಹಾ ನಿರ್ದೇಶಕ ಎಂ ಎ ಸಲೀಂ.
- ಕರ್ನಾಟಕ ರಸ್ತೆ ಸಾರಿಗೆ ಎಂ ಡಿ. ಅಕ್ರಮ್ ಪಾಷಾ.
- ಮಹಿಳಾ ಮತ್ತು ಮಕ್ಕಳಾಭಿವೃದ್ಧಿ ಕಾರ್ಯದರ್ಶಿಯಾಗಿ ಶ್ರೀಮತಿ ಡಾ. ಶಮ್ಲಾ ಇಕ್ಬಾಲ್ ಐಎಎಸ್ ಅವರ ಆಯ್ಕೆ
- ಇನ್ನು ಭಾನು ಮುಷ್ತಾಕ್ ಅವರ ಕನ್ನಡದ ಕೃತಿಯನ್ನು ದೀಪಾ ಬಸ್ತಿಯವರು ಅನುವಾದ ಮಾಡಿ ಜಂಟಿಯಾಗಿ ಬೂಕರ್ ಪ್ರಶಸ್ತಿಯನ್ನು ಪಡೆದದ್ದೇ ನೆಪ ಮಾಡಿಕೊಂಡು ಕನ್ನಡ ತಾಯಿ ಭುವನೇಶ್ವರಿಯನ್ನು ಸಾರ್ವಜನಿಕವಾಗಿ ಒಬ್ಬ ಅಲ್ಪಸಂಖ್ಯಾತಳಾಗಿ ಒಪ್ಪುವುದಿಲ್ಲ ಎಂದು ಹೇಳಿದ್ದ ಭಾನು ಮುಷ್ತಾಕ್ ಅವರನ್ನು 2025ರ ದಸರಾ ಉದ್ಘಾಟನೆಗೆ ಆಯ್ಕೆ ಮಾಡುವ ಮೂಲಕ ಹಿಂದೂಗಳ ಧಾರ್ಮಿಕ ನಂಬಿಕೆಗಳೊಡನೆ ಚಲ್ಲಾಟವಾಡುತ್ತಿದ್ದಾರೆ.
ಹಿಂದೂಗಳ ಕೇಸರಿ ಶಾಲು ಅಥವಾ ಕೇಸರಿ ಪೇಟ ಇಲ್ಲವೇ ಹಣೆಗೆ ತಿಲಕ ಇಡಲು ಬಂದಾಗ ಕರೆಂಟ್ ಹೊಡೆದ ಕಾಗೆಯಂತೆ ಆಡುವ ಸನ್ಮಾನ್ಯ ಮುಖ್ಯಮಂತ್ರಿಗಳು 2025ರ ಸೆಪ್ಟೆಂಬರ್ 5ರಂದು ಮುಸಲ್ಮಾನರ ಈದ್ ಮಿಲಾದ್ ಹಬ್ಬದ ಸಂಧರ್ಭದಲ್ಲಿ ತಲೆಯ ಮೇಲ್ ಮುಸಲ್ಮಾನರ ತುಪ್ಪಳದ ಟೋಪಿ ಹಾಕಿಕೊಂಡು ಇಸ್ಲಾಂ ಎಂದರೆ ಶಾಂತಿ, ಮೊಹಮ್ಮದ್ ಪೈಗಂಬರ್ ಎಂದರೆ ಶಾಂತಿ ದೂತ ಎಂದು ಹೇಳಿ ಹೊಡಸಿಕೊಂಡ ಚಪ್ಪಾಳೇ ಇನ್ನೂ ಕಿವಿಗೆ ಅಪ್ಪಳಿಸಿ ಮನದಿಂದ ಮಾಸುವ ಮುನ್ನವೇ, ಮಂಡ್ಯಾದ ಮದ್ದೂರಿನ ರಾಮ್ ರಹೀಮ್ ನಗರದಲ್ಲಿ ಸೆಪ್ಟೆಂಬರ್ 08ರ ಸಂಜೆ ಶಾಂತಿಯುತವಾಗಿ ಹಿಂದೂಗಳು ನಡೆಸುತ್ತಿದ್ದ ಗಣೇಶನ ಮೆರವಣಿಗೆ ಅಲ್ಲಿನ ಮಸೀದಿಯ ಮುಂದೆ ಹಾದು ಹೋಗುವಾಗ ಮುಸಲ್ಮಾನರ ಅಪೇಕ್ಷೆಯಂತೆ ಡಿಜೆ ನಿಲ್ಲಿಸಲಾಗಿತ್ತು, ಕೇಸರಿ ಧ್ವಜವನ್ನು ಇಳಿಸಲಾಗಿತ್ತು ಮತ್ತು ಯಾವುದೇ ಘೋಷಣೆಗಳು ಇಲ್ಲದೇ ಶಾಂತಿಯುತವಾಗಿ ಹೋಗುತ್ತಿರುವಾಗಲೂ ಕಲ್ಲು ತೂರಾಟ ನಡೆಸುವ ಮೂಲಕ ಅಶಾಂತಿಯನ್ನುಂಟು ಮಾಡಲು ಸಿದ್ದರಾಮಯ್ಯನವರ ಸರ್ಕಾರದ ಅತಿಯಾದ ಓಲೈಕೆಯೇ ಕಾರಣ ಎಂದು ಅಲ್ಲಿನ ಸ್ಥಳೀಯರು ಆರೋಪ ಮಾಡುತ್ತಿರುವುದರಲ್ಲಿ ಸುಳ್ಳಿಲ್ಲ ಎನಿಸುತ್ತದೆ. ಇದರ ವಿರುದ್ಧ ಮಾರನೇದಿನ ನಡೆಸಿದ ಏಕೆಂದರೆ, ಸಿದ್ದರಾಮಯ್ಯನವರು ಎರಡೂ ಬಾರಿ ಮುಖ್ಯಮಂತ್ರಿ ಪದವಿಗೆ ಏರುತ್ತಿದ್ದಂತೆಯೇ ಮುಸಲ್ಮಾರ ಮೇಲಿದ್ದ ಅಷ್ಟೂ ಕೇಸ್ ಗಳನ್ನು ಹಿಂಪಡೆದರೆ ಇನ್ನು ಇನ್ನೂ ಚೂರು ಗುಲಗಂಜಿ ತೂಕದಷ್ಟು ಹೆಚ್ಚಿನ ಮುಸ್ಲಿಂ ಓಲೈಕೆ ಮಾಡುವ ಉಪಮುಖ್ಯ ಮಂತ್ರಿ ಕುಕ್ಕ್ರರ್ ಬಾಂಬ್ ಬಾಸ್ಟಿನಲ್ಲಿ ಸಿಕ್ಕಿಕೊಂಡ ಮುಸ್ಲಿಂ ಯುವಕನನ್ನು ತಮ್ಮ ಸಹೋದರು ಎಂದು ಹೇಳುವ ಮೂಲಕ ಅವರ ಎಲ್ಲಾ ಕುಕೃತ್ಯಗಳಿಗೂ ತಮ್ಮ ರಕ್ಷಣೆ ಇದೆ ಎಂದು ಪರೋಕ್ಷವಾಗಿ ರೂಪಿಸುತ್ತಿದ್ದಾರೆ.
ಇನ್ನು ಸಾಗರದಲ್ಲಿ ಶಾಂತಿಯುತವಾಗಿ ನಡೆಯುತ್ತಿದ್ದ ಗಣೇಶನ ಮೆರವಣಿಗೆಯ ಮೇಲೆ ಸಣ್ಣ ವಯಸ್ಸಿನ ಮುಸ್ಲಿಂ ಹುಡುಗರು ಉಗಿಯುವ ಮನಸ್ಥಿತಿ ಇದೆ. ಕಳೆದ ವಾರ ಈದ್ ಮಿಲಾದ್ ಸಂಧರ್ಭದಲ್ಲಿ ಜೆ.ಸಿ.ರಸ್ತೆಯಲ್ಲಿ ನ್ಯಾಯಾಲಯದ ಆಜ್ಞೆಯ ವಿರುದ್ಧವಾಗಿ ಹಾಕಿದ್ದ ಫ್ಲಕ್ಸ್ ಮತ್ತು ಬ್ಯಾನರ್ಗಳ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದ ಹಿಂದು ಪರ ಹೋರಾಟಗಾರ ಪುನೀತ್ ಕೆರೆಹಳ್ಳಿಯ ಅವಾಚ್ಯ ಶಬ್ಧಗಳಿಂದ ನಿಂದಿಸುವ ಹತ್ತಾರು ಮುಸಲ್ಮಾನ್ ಯುವಕರ ವೀಡೀಯೋ ಸಹಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತದೆ ಎಂದರೆ ಅವರಿಗೆ ಈ ದೇಶದ ಕಾನೂನು ಮತ್ತು ಸುವ್ಯವಸ್ಥೆಗಳ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದಿರುವುದು ಅರಿವಾಗುತ್ತದೆ.
ಅದೇ ರೀತಿಯಾಗಿ ಭದ್ರಾವತಿಯ ಗಾಂಧಿ ಸರ್ಕಲ್ಲಿನಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆಯಲ್ಲಿ ಬಹಿರಂಗವಾಗಿಯೇ ಸಾವಿರಾರು ಜನ ಶತ್ರು ರಾಷ್ಟ್ರ ಪಾಕೀಸ್ಥಾನ್ ಜಿಂದಾಬಾದ್ ಎಂಬ ಘೋಷಣೆ ಹಾಕಿದರೂ, ಹಾಗೆ ಅಲ್ಲಿ ಕೂಗಿಯೇ ಇಲ್ಲಾ ಎಂದು ಅಲ್ಲಿನ ಸ್ಥಳೀಯ ಶಾಸಕ ಸಂಗಮೇಶ್ವರ ಮತ್ತು ಕಾಂಗ್ರೇಸ್ ಸಮರ್ಥನೆ ಮಾಡಿಕೊಳ್ಳುತ್ತದೆ. ಇನ್ನು ಕರ್ನಾಟಕ ಕಾಂಗ್ರೇಸ್ ಸರ್ಕಾರದ ಸೂಪರ್ ಸಿಎಮ್ ಪ್ರಿಯಾಂಕ್ ಖರ್ಗೆ ಕ್ಷೇತ್ರದಲ್ಲಿ ಈ ಹಿಂದೆ ನಡೆದ ಸಂಘರ್ಷದಲ್ಲಿ, ಗಲಭೆಕೋರರಿ ಎಂದು ಅಲ್ಲಿನ ಸ್ಥಳೀಯ ಮುಸ್ಲಿಂ ಯುವಕರ ಮೇಲೆ ಹಾಕಿದ್ದ ಕೇಸ್ ಮತ್ತು ಡಿಕೆಶಿಯವರನ್ನು ತಿಹಾರ್ ಸೆರೆಮನೆಯಲ್ಲಿ ಬಂಧನ ಮಾಡಿದ್ದನ್ನು ಪ್ರತಿಭಟಿಸಿ ಕಾಂಗ್ರೇಸ್ ಮುಖಂಡರು ಸಾರ್ವಜನಿಕ ಆಸ್ತಿ ಪಾಸ್ತಿಯನ್ನು ನಷ್ಟ ಮಾಡಿದ್ದವರ ವಿರುದ್ಧ ಕೇಸ್ ಸಹಾ ಇದೇ ಕಾಂಗ್ರೇಸ್ ಸರ್ಕಾರ ಕಳೆದ ವಾರ ಹಿಂಪಡೆಯುವ ಮೂಲಕ ಗಲಭೆಕೋರರ ಪರವಾಗಿ ಇರುವುದು ಸ್ಪಷ್ಟವಾಗಿದೆ
ಒಂದು ಕಡೆ ಮುಸ್ಲಿಂ ಓಲೈಕೆಯಾದರೇ ಮತ್ತೊಂದು ಕಡೆ ಕ್ರಿಶ್ಚಿಯನ್ ಓಲೈಕೆಗಾಗಿ ಇದೇ ಸೆಪ್ಟೆಂಬರ್ 08ರಂದು ಬೆಂಗಳೂರಿನ ಶಿವಾಜಿನಗರದಲ್ಲಿರುವ ಸೆಂಟ್ ಮೇರೀಸ್ ಚರ್ಚ್ ನಲ್ಲಿನ ಸೆಂಟ್ ಮೇರೀಸ್ ಜನ್ಮದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಇಂದು ಬಹಳ ಸಂತೋಷದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದಲ್ಲದೇ, ನಾಡಿನ ಜನತೆಗೆ ಸೆಂಟ್ ಮೇರಿಸ್ ಜನ್ಮದಿನದ ಶುಭಾಶಯ ಕೋರುತ್ತೇನೆ. ನಾನು ಮುಖ್ಯಮಂತ್ರಿ ಆಗಿದ್ದಾಗಲೆಲ್ಲಾ ಪ್ರತೀ ವರ್ಷ ತಪ್ಪದೇ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. ಈ ಕಾರ್ಯಕ್ರಮದಲ್ಲಿ ಬಹಳ ಜನ ಹರಕೆ ಹೊತ್ತು ಕೊಂಡು ಹರಕೆ ತೀರಿಸುವಾಗ ಪ್ರತಿಯೊಬ್ಬರಿಗೂ ಆ ಸೆಂಟ್ ಮೇರಿಸ್ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯ ಕೊಡಲಿ ಪ್ರಾರ್ಧಿಸುವ ಕಾರಣಕ್ಕಾಗಿಯೇ ಆ ಸೆಂಟ್ ಮೇರಿಗೆ ಆರೋಗ್ಯ ಮಾತೆ ಎಂದೂ ಸಹಾ ಕರೆಯಲಾಗುತ್ತದೆ ಎಂದು ವಾಚಾಮಗೋಚರವಾಗಿ ಹೋಗಳಿದ ಇದೇ ಸಿದ್ದರಾಮಯ್ಯ ನಂತರ ಕ್ರಿಶ್ಚಿಯನ್ನರ ಓಲೈಕೆಗಾಗಿ ಸ್ಥಳದಲ್ಲೇ ಅವರಿಗೂ ಒಂದು ಭಾಗ್ಯವನ್ನು ಘೋಷಿಸುವ ಮೂಲಕ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎಂಬುದನ್ನು ಸ್ಪಷ್ಟವಾಗಿ ತೋರಿಸಿದ್ದಾರೆ.
ಕ್ರಿ
ಶ್ಚಿಯನ್ನರು ಬೆಂಗಳೂರು ನಗರದ ಮೆಟ್ರೋ ನಿಲ್ದಾಣವೊಂದಕ್ಕೆ ಸೈಂಟ್ ಮೇರಿ ಹೆಸರಿಡಬೇಕೆಂದು ಸಲ್ಲಿಸಿದ್ದ ಪ್ರಸ್ತಾವನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅ ಸ್ಥಳದಲ್ಲೇ ಅವರ ಪ್ರಸ್ತಾವನೆಯನ್ನು ಸ್ವೀಕರಿಸುವ ಮೂಲಕ ಒಪ್ಪಿಗೆ ನೀಡಿರುವುದಲ್ಲದೇ ಈ ಸಂಬಂಧವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು. ಕೇಂದ್ರ ಸರ್ಕಾರದ ಅನುಮೋದನೆ ದೊರೆತ ಕೂಡಲೇ ಸೈಂಟ್ ಮೇರಿ ನಿಲ್ದಾಣದ ನಾಮಕರಣ ದಿನಾಂಕ ಘೋಷಣೆ ಮಾಡಲಾಗುವುದು ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರಕ್ಕೆ ಹೊಣೆಗಾರಿಕೆಯನ್ನು ಹಾಕಿ, ಕೇಂದ್ರ ಸಕಾರ ಅಂಗೀಕರಿಸಿದರೆ, ತಮ್ಮ ಪ್ರಸ್ತಾವನೆಯಿಂದ ಇದು ಸಾಧ್ಯವಾಯಿತೆಂದೂ, ಅಕಸ್ಮಾತ್ ಕೇಂದ್ರ ಸರ್ಕಾರ ಪ್ರಸ್ತಾಪನೆಯನ್ನು ತಿರಸ್ಕರಿಸಿದರೆ, ಕೇಂದ್ರ ಬಿಜೆಪಿ ಸರ್ಕಾರಕ್ಕೆ ಅಲ್ಪಸಂಖ್ಯಾತರ ಮೇಲೆ ಕಾಳಜಿಯೇ ಇಲ್ಲಾ ಎಂದು ಜನರ ಮುಂದೆ ಆಕ್ರೋಶ ವ್ಯಕ್ತಪಡಿಸಲು ಸಿದ್ಧರಾಗಿಯೇ ಇದ್ದಾರೆ ಈ ಸಿದ್ದರಾಮಯ್ಯ.
ಅದಕ್ಕೂ ಭಯಾನಕ ವಿಚಾರವೆಂದರೆ, ಕ್ರಿಶ್ಚಿಯನ್ ಮಹಾಧರ್ಮಾಧ್ಯಕ್ಷರಾದ ಪೀಟರ್ ಮಚಾದೋ ಅವರು ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮತಾಂತರ ನಿಷೇಧ (ಬಲವಂತದ ನಿಷೇಧ) ಕಾಯ್ದೆಯನ್ನು ನೀವು ಅಧಿಕಾರಕ್ಕೆ ಬಂದ ತಕ್ಷಣ ತೆಗೆದು ಹಾಕುತ್ತೇವೆ ಎಂದು ನಿಮ್ಮ ಪ್ರಣಾಳಿಕೆಯಲ್ಲಿ ತಿಳಿಸಿದ್ದೀರಿ. ಹಾಗಾಗಿ ಆ ಕಾಯ್ದೆಯನ್ನು ಅತಿ ಶೀಘ್ರವಾಗಿ ಜಾರಿಗೆ ತನ್ನಿ ಎಂದು ಕೇಳಿಕೊಂಡಿದ್ದಕ್ಕೆ ವೇದಿಕೆಯ ಮೇಲೆಯೇ ಮುಖ್ಯಮಂತ್ರಿಗಲು ಅವರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡುವ ಮೂಲಕ ಪರೋಕ್ಷವಾಗಿ ಕಾಂಗ್ರೇಸ್ ಪಕ್ಷದ ಹಿಂದೂ ವಿರೋಧಿ ಮನಸ್ಥಿತಿಯನ್ನು ಜಗ್ಗಜ್ಜಾಹೀರಾತು ಮಾಡಿದರು.
ಇವೆಲ್ಲರದ ನಡುವೆ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ರವರೆಗೆ 15 ದಿನಗಳ ಕಾಲ ಸಮೀಕ್ಷೆ ನಡೆಸಲು ಜಾತಿ ಸಮೀಕ್ಷೆಯನ್ನು ಮಾಡಲು ಮುಂದಾಗಿರುವ ಇದೇ ಕಾಂಗ್ರೇಸ್ ಸರ್ಕಾರ ಅಲ್ಲೂ ಸಹಾ ಮತಾಂದರಿಗಳ ಪರವಾಗಿಯೇ ಇದೇ ಎನ್ನುವುದಕ್ಕೆ ಅದು ಹೊರತಂದಿರುವ ಕ್ರಿಶ್ಚಿಯನ್ನರ ಜಾತಿ ಪಟ್ಟಿ ನಿಜಕ್ಕೂಗಾಭರಿಯನ್ನುಂಟು ಮಾಡುವಂತಿದೆ. ಬಲವಂತವಾಗಿಯೋ, ಆಮಿಷಕ್ಕೆ ಒಳಗಾಗಿಯೋ, ಇಲ್ಲವೇ ಸ್ವಇಚ್ಚೆಯಿಂದಾಗಿಯೋ ಒಮ್ಮೆ ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾದರೆ ಅವರು ಕ್ರಿಶ್ಚಿಯನ್ ಧರ್ಮದವರೇ ಆಗಿರುತ್ತಾರೆ ಎನ್ನುವುದು ಲೋಕಾರೂಢಿಯಾದರೆ, ಈ ಕಾಂಗ್ರೇಸ್ ಸರ್ಕಾರದ ಪಟ್ಟಿಯಲ್ಲಿ ಮಾತ್ರಾ ಅವರ ಮೂಲ ಹಿಂದು ಜಾತಿಯ ಪಕ್ಕದಲ್ಲಿ ಕ್ರಿಶ್ಚಿಯನ್ ಸೇರಿಸುವ ಮೂಲಕ ಜಾತಿ ಪದ್ದತಿಯನ್ನು ಇನ್ನೂ ಜೀವಂತ ಇರಿದುವ ಮತ್ತು ಹಿಂದೂಗಳನ್ನು ಮತ್ತೆ ಜಾತಿಯ ವಿಷಯದಲ್ಲಿ ಒಡೆಯುವ ಹುನ್ನಾರ ನಡೆಸುತ್ತಿರುವುದು ಆಘಾತಕಾರಿಯಾಗಿದೆ.
ಅದೇ ದಸರಾ ಉದ್ಘಾಟನೆಯನ್ನು ಹಿಂದೂ ವಿರೋಧಿ ಭಾನು ಮುಷ್ತಾಕ್ ಮಾಡುತ್ತಿರುವುದನ್ನು ವಿರೋಧಿಸಿ ಹಿಂದೂ ಸಂಘಟನೆಗಳು ಹಮ್ಮಿಕೊಂಡಿದ್ದ ಶಾಂತಿಯುತ ಚಾಮುಂಡೇಶ್ವರಿ ಚಲೋ ಕಾರ್ಯಕರ್ತರ ವಿರುದ್ಧ ಪೋಲೀಸರ ಮೂಲಕ ಕ್ರಮ ತೆಗೆದುಕೊಳ್ಳುವುದನ್ನು ಮಾತ್ರಾ ಈ ಕಾಂಗ್ರೇಸ್ ಸರ್ಕಾರ ಮರೆಯಲಿಲ್ಲ. ಇನ್ನು ತಮ್ಮ ಮಗಳ ಸಂದರ್ಶಕ್ಕೆ ಒಳಿತು ಮಾಡು ತಾಯೇ ಎಂದು ಚಾಮುಂಡೇಶ್ವರಿ ದೇವಿಯನ್ನು ಬೇಡಿಕೊಳ್ಳಲು ಬಂದಿದ್ದ ಮೈಸೂರಿನ ಬಿ.ಎಸ್.ಎನ್.ಎಲ್. ಮಹಿಳಾ ಉದ್ಯೋಗಿ ಒಬ್ಬರನ್ನು ಪ್ರತಿಭಟನೆಕಾರೆ ಎಂದು ಭಾವಿಸಿದ ಮಹಿಳಾ ಪೋಲಿಸರು ವಿನಾಕಾರಣ ಆಕೆಯನ್ನು ತಳ್ಳಾಟ ನಡೆಸಿ ಆವರ ವ್ಯಾನ್ ಒಳಗೆ ದಬ್ಬಲು ಪ್ರಯತ್ನಿಸಿದ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಮಾಜಘಾತುಕರು, ಕೋಮುದಳ್ಳೂರಿಗಳು, ಸಮಾಜದ ಸ್ವಾಸ್ವ್ಯವನ್ನು ಹಾಳು ಮಾಡುವವರನ್ನು ಸಮರ್ಥಿಸಿಕೊಳ್ಳುವ ಮತ್ತು ಅವರ ವಿರುದ್ಧ ಇರುವ ಎಲ್ಲಾ ಕೇಸ್ ಗಳನ್ನು ಖುಲಾಸೆ ಗೊಳಿಸಿ ಅವರ ಬೇಡಿಕೆಗಳನ್ನು ಬಜೆಟ್ಟಿನಲ್ಲಿ ಇಡೇರಿಸುವ ಮತ್ತು ಅಮಾಯಕ ಹಿಂದೂಗಳ ಮೂಗಿಗೆ ತುಪ್ಪ ಸವರುವಂತೆ ಬಿಟ್ಟಿ ಭಾಗ್ಯಗಳ ಆಮಿಷ ಒಡ್ಡಿ ಕಂಡ ಕಂಡಲ್ಲಿ ಹತ್ತಿಕ್ಕುವ ಹಿಂದೂ ವಿರೋಧಿ ಮನಸ್ಥಿತಿಯ ಈ ಸರ್ಕಾರವನ್ನು ಇನ್ನೂ ಎರಡೂವರೆ ವರ್ಷಗಳ ಕಾಲ ಸಹಿಸಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಈ ರಾಜ್ಯಕ್ಕೆ ಬಂದಿರುವುದು ನಿಜಕ್ಕೂ ದುಃಖಕರವಾಗಿದೆ.
ಏನಂತೀರೀ?
ನಿಮ್ಮವನೇ ಉಮಾಸುತ
ಈ ಲೇಖನ ಸೆಪ್ಟಂಬರ್ 11 2025ರ ವರ್ತಮಾನ ಪತ್ರಿಕೆಯಲ್ಲಿ ಪ್ರಕಟವಾಗಿದೆ
