ಹಸಿವು

ಅದೊಂದು ಶನಿವಾರದ ದಿನ.  ಬೆಳಿಗ್ಗೆ ಶಂಕರ ಕಛೇರಿಗೆ ಹೊರಡಲು ಅನುವಾಗಿ ತಿಂಡಿ ತಿನ್ನುತ್ತಿದ್ದ. ಅಡುಗೆ ಮನೆಯೊಳಗೆ ಅವನ ಮಡದಿ ಮಯೂರಿ ಮಗ ಸಮೀರನೊಂದಿಗೆ ಏನೋ ಸಮಾಧಾನ ಮಾಡುತ್ತಿದ್ದಳು ಆದರೆ ಅದನ್ನು ಕೇಳಲು ತಯಾರಿಲ್ಲದ ಮಗ, ಸ್ವಲ್ಪ ಹೆಚ್ಚಾಗಿಯೇ ಕಿರಿಕಿರಿ ಮಾಡುತ್ತಿದ್ದ. ಮೊದ ಮೊದಲು  ಅಮ್ಮಾ ಮಗನ ನಡುವಿನ ವಿಷಯಕ್ಕೆ ತಾನೇಕೇ ಹೋಗುವುದು ಎಂದು ಸುಮ್ಮನಿದ್ದರೂ, ಮಡದಿಯು ಪರಿಪರಿಯಾಗಿ ಸಂತೈಸಲು ಪ್ರಯತ್ನಿಸಿದ್ದರೂ ಒಪ್ಪಿಕೊಳ್ಳದೆ ಪಿರಿಪಿರಿ ಮಾಡುತ್ತಿದ್ದ ಮಗನನ್ನು ಕಂಡ ಶಂಕರ, ಏನದು? ಏನಾಗ್ತಾ ಇದೇ? ಎಂದು ತುಸು ಎತ್ತರದ… Read More ಹಸಿವು

ಅಹಂ

ಅದೊಂದು ಮಧ್ಯಮ ವರ್ಗದ ಕುಟುಂಬ. ಯಜಮಾನರು ಖಾಸಗೀ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮನೆಯೊಡತಿ ಅಪ್ಪಟ ಗೃಹಿಣಿ. ಇರುವ ಒಬ್ಬನೇ ಒಬ್ಬ ಮಗನನ್ನು ಹೊಟ್ಟೆ, ಬಟ್ಟೆ ಕಟ್ಟಿ  ಸಾಕಿ ಸಲಹಿ ಒಳ್ಳೆಯ ವಿದ್ಯಾವಂತನನ್ನಾಗಿ ಮಾಡಿದರು. ಆ ಹುಡುಗನೂ ಅಷ್ಟೇ  ತಂಬಾ ಬುದ್ಧಿವಂತ. ಕಠಿಣ ಪರಿಶ್ರಮದಿಂದ ಓದಿ ಐದಂಕಿ ಸಂಬಳ ಪಡೆಯುವಷ್ಟು ಎತ್ತರಕ್ಕೆ ಬೆಳೆದ. ವಯಸ್ಸಿಗೆ ಬಂದ ಮಗನಿಗೆ ವಧು ಅನ್ವೇಷಣೆಗಾಗಿ ವಧುವರ ಕೇಂದ್ರಕ್ಕೆ  ಹೋಗಿದ್ದರು. ಅದೇ  ಸಮಯಕ್ಕೆ  ಊರಿನ ಮತ್ತೊಂದು ಭಾಗದಲ್ಲಿದ್ದ ಇನ್ನೊಂದು ಮಧ್ಯಮ ವರ್ಗದ ಕುಟುಂಬದ ಒಬ್ಬಳೇ … Read More ಅಹಂ

ಯಾವ ಹೂವು ಯಾರ ಮುಡಿಗೋ

ಶಂಕ್ರ, ಆನಂದ ಮತ್ತು ‌ನಂದ ಬಾಲ್ಯದ ‌ಗೆಳೆಯರು. ನಂದ ಮತ್ತು ಆನಂದ ಒಡಹುಟ್ಟಿದವರಾದರೆ, ಆನಂದ ಮತ್ತು ಶಂಕ್ರ ಸಹಪಾಠಿಗಳು. ಮೂವರೂ ಸದಾ ಆಟೋಟಗಳಲ್ಲಿ  ಜೊತೆಯಾಗಿದ್ದವರು. ಹಿರಿಯವನಾದ ನಂದ ಸ್ವಲ್ಪ ಅಂತರ್ಮುಖಿ. ತಾನಾಯಿತು ತನ್ನ ಪಾಡಾಯಿತು ಅನ್ನುವ ಹಾಗೆ. ಆದರೆ ಆನಂದ ಅಣ್ಣನಿಗೆ ತದ್ವಿರುದ್ಧ. ಸದಾ ಚಟುವಟಿಕೆಯಿಂದ ಇರುವವ. ಎಂತಹ ಕಲ್ಲಿನ ಹೃದಯದವರನ್ನು ಬೇಕಾದರೂ ‌ಮಾತಾನಾಡಿಸಿ ಒಲಿಸಿ‌ ಕೊಳ್ಳುವ ಛಾತಿ‌.  ಎಲ್ಲರೂ ಕಾಲೇಜು ಓದುತ್ತಿರುವ ಸಮಯದಲ್ಲಿ ‌ಆನಂದನ ತಂದೆಯವರು ನಿವೃತ್ತರಾಗಿ ಶಂಕ್ರನ ಮನೆಯ ಪ್ರದೇಶದಿಂದ ಬಹುದೂರಲ್ಲಿ ಸ್ವಂತ ಮನೆಯನ್ನು… Read More ಯಾವ ಹೂವು ಯಾರ ಮುಡಿಗೋ

ಕಿರಿ ಕಿರಿಯೋ ಇಲ್ಲವೇ ಕ್ರಿಕೆಟ್ಟೋ

ವ್ಯಾಪಾರಕ್ಕೆಂದು ಭಾರತಕ್ಕೆ ಬಂದ ಬ್ರಿಟಿಷರು ಭಾರತದ ಸಂಪತ್ತನ್ನು ಕೊಳ್ಳೆ  ಹೊಡೆದ್ದದ್ದಲ್ಲದೆ, ನಮ್ಮ ಸಂಸ್ಕೃತಿ, ಸಂಪ್ರದಾಯ, ಶಿಕ್ಷಣ ಪದ್ದತಿ, ಗುಡಿ ಕೈಗಾರಿಕೆ, ಕೃಷಿ ಮತ್ತು ಹೈನುಗಾರಿಕೆಯನ್ನು ಹಾಳು ಗೆಡವುದರ ಜೊತೆ ಜೊತೆಗೆ ನಮ್ಮ ಜನರಿಗೆ ಅತ್ಯಂತ ಸೋಮಾರೀ ಆಟವಾದ ಕ್ರಿಕೆಟ್ಟನ್ನು ಕಲಿಸಿಕೊಟ್ಟು ಹೋದದ್ದು ನಮ್ಮ ದೇಶದ ಪರಮ ದೌರ್ಭಾಗ್ಯವೇ ಸರಿ.   ಆರಂಭದಲ್ಲಿ  ಕ್ರಿಕೆಟ್ಟನ್ನು  ಬಹಳ ಸಂಭಾವಿತರ ಆಟ ಎಂದೇ ಬಣ್ಣಿಸಲಾಗುತ್ತಿದ್ದರೂ ಇಂದು ಬೆಟ್ಟಿಂಗ್ ದಂಧೆ ಮತ್ತು ಆಟಗಾರರ ಕಳ್ಳಾಟಗಳಿಂದ ಕಳಂಕ ಗೊಂಡಿದೆ.  ಭಾರತ 1983ರ ಪೃಡೆಂಷಿಯಲ್ ವರ್ಲ್ಡ್ ಕಪ್… Read More ಕಿರಿ ಕಿರಿಯೋ ಇಲ್ಲವೇ ಕ್ರಿಕೆಟ್ಟೋ