ಗಾನ ವಿಶಾರದ ಬಿಡಾರಂ ಕೃಷ್ಣಪ್ಪನವರು

ಬೀದಿಯಲ್ಲಿ ಹಾಡಿಕೊಂಡು ಬಿಕ್ಷಾವೃತ್ತಿಯನ್ನು ಮಾಡುತ್ತಿದ್ದಂಥ ಸಣ್ಣ ಬಾಲಕ, ಮುಂದೆ ಸತತ ಪರಿಶ್ರಮದಿಂದ ನಾಡಿನ ಪ್ರಖ್ಯಾತ ಸಂಗೀತಗಾರರಾಗಿ ರೂಪುಗೊಂಡಿದ್ದಲ್ಲದೇ, ತಾನು ಕಲಿತ ವಿದ್ಯೆಯನ್ನು ನೂರಾರು ಶಿಷ್ಯಂದಿರಿಗೆ ಕಲಿಸಿಕೊಟ್ಟು ಅವರನ್ನೂ ಸಹಾ ವಿಶ್ವವಿಖ್ಯಾತರನ್ನಾಗಿಸಿದ ಗಾನವಿಶಾರದ ಬಿಡಾರಂ ಕೃಷ್ಣಪ್ಪನವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ೨೦೨೪ರ ಕನ್ನಡ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ… Read More ಗಾನ ವಿಶಾರದ ಬಿಡಾರಂ ಕೃಷ್ಣಪ್ಪನವರು

ಪಿಟೀಲು ಚೌಡಯ್ಯನವರು

ಕರ್ನಾಟಕ  ಎಂದ ತಕ್ಷಣವೇ ಎಲ್ಲರ ಮನಸ್ಸಿನಲ್ಲಿ ಥಟ್ ಅಂತಾ ಮೂಡಿ ಬರುವುದೇ ಸಂಗೀತ, ಸಾಹಿತ್ಯ ಮತ್ತು ಶಿಲ್ಪಕಲೆಗಳ ತವರೂರು ಎಂದು. ಹಾಗೆ ವಿದೇಶೀ ವಾದನವಾದ ಪಿಟೀಲನ್ನು  ಕರ್ನಾಟಕದ ಶಾಸ್ತ್ರೀಯ ಸಂಗೀತಕ್ಕೆ ಅಳವಡಿಸಿಕೊಂಡು ಅದರಲ್ಲಿ ಮಹಾನ್ ಸಾಧನೆಗಳನ್ನು ಮಾಡಿ ಕರ್ನಾಟಕದ ಕೀರ್ತಿಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದ ಮಹಾನ್ ಸಂಗೀತಗಾರರಾಗಿದ್ದ ಶ್ರೀ ಪಿಟೀಲು ಚೌಡಯ್ಯನವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. ಮೈಸೂರಿನ ಬಳಿಯ ತಿರುಮಕೂಡಲಿನಲ್ಲಿ ಕೃಷಿಕರಾಗಿದ್ದ ಶ್ರೀ ಆಗಸ್ತ್ಯ ಗೌಡ ಮತ್ತು ಶ್ರೀಮತಿ… Read More ಪಿಟೀಲು ಚೌಡಯ್ಯನವರು

ಮಗು ಕುಂ..ನೂ ಜಿಗುಡ್ತಾರೆ, ತೊಟ್ಟಿಲನ್ನೂ ತೂಗ್ತಾರೆ!

ಇಷ್ಟು ದಿನ ಇಲ್ಲದಿದ್ದ ವಕ್ಫ್ ನೋಟೀಸ್ ಝಮೀರ್ ಅಹ್ಮದ್ ಪ್ರವಾಸ ಮಾಡಿದ ತಕ್ಷಣವೇ ನೋಟೀಸ್ ಜಾರಿ ಆಗಿದ್ದು ಹೇಗೇ? Once waqf, always waqf ಎನ್ನುವಂತಹ ಆಘಾತಕಾರಿ ಕಾಯ್ದೆ ಇದ್ದರೂ ಅವರು ನೀಡಿದ ನೋಟೀಸನ್ನು ಸಿದ್ದು ಸರ್ಕಾರ ಹೇಗೆ ಹಿಂಪಡೆಯುತ್ತದೆ? ಈಗ ರೈತರಿಂದ ಒಂದಿಂಚೂ ಭೂಮಿಯನ್ನು ಕಸಿಯುವುದಿಲ್ಲಾ ಎನ್ನುವುದಾದರೇ, 1974ರ ಭೂಸುಧಾರಣೆ ಕಾಯ್ದೆಯಡಿಯಲ್ಲಿ ಭೂಮಿ ಕಳೆದು ಕೊಂಡವರಿಗೂ ಭೂಮಿ ಹಿಂದಿರುಗಿಸ ಬೇಕಲ್ಲವೇ? Rule is a Rule even for a fool!… Read More ಮಗು ಕುಂ..ನೂ ಜಿಗುಡ್ತಾರೆ, ತೊಟ್ಟಿಲನ್ನೂ ತೂಗ್ತಾರೆ!

ಧನ್ವಂತರಿ ಜಯಂತಿ

ಆಶ್ವಯುಜ  ಕೃಷ್ಣ ಪಕ್ಷದ ತ್ರಯೋದಶಿ ದಿನದಂದು ಆಚರಿಸುವ ಧನ್ವಂತರಿ ಜಯಂತಿಯ ಮಹತ್ವವೇನು? ಆ ಹಬ್ಬದ ಆಚರಣೆಗಳೇನು? ಆ ದಿನವನ್ನು ರಾಷ್ಟ್ರೀಯ ಆರ್ಯುವೇದ ದಿನವನ್ನಾಗಿ ಏಕೆ ಆಚರಿಸಲಾಗುತ್ತದೆ ಎಂಬೆಲ್ಲಾ ವಿವರಗಳು ಇದೋ ನಿಮಗಾಗಿ… Read More ಧನ್ವಂತರಿ ಜಯಂತಿ

ಕನ್ನಡದ ಖುಶ್ವಂತ್ ಸಿಂಗ್, ಎಂ.ಎಸ್.‌ ನರಸಿಂಹಮೂರ್ತಿ

ಕನ್ನಡ ಸಾಹಿತ್ಯ ಲೋಕ, ಆಕಾಶವಾಣಿ, ದೂರದರ್ಶನ, ಖಾಸಗೀ ವಾಹಿನಿ ಹೀಗೆ ಎಲ್ಲಾ ಕಡೆಯಲ್ಲೂ ಹಾಸ್ಯ ಸಾಹಿತ್ಯ ಎಂದೊಡನೆಯೇ ಥಟ್ ಎಂದು ನೆನಪಾಗೋದೇ ಶ್ರೀ ಎಂ. ಎಸ್. ನರಸಿಂಹ ಮೂರ್ತಿಗಳು. ಹೀಗೆ ನಾಡಿಗೆ ಚಿರಪರಿಚಿತ ಹಾಸ್ಯ ಸಾಹಿತಿ ಆಗುವ ಹಿಂದೆಯೂ ಒಂದು ರೋಚಕವಾದ ತಿರುವಿದ್ದು ಅದನ್ನು ನಮ್ಮ ಕನ್ನಡ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ… Read More ಕನ್ನಡದ ಖುಶ್ವಂತ್ ಸಿಂಗ್, ಎಂ.ಎಸ್.‌ ನರಸಿಂಹಮೂರ್ತಿ

ರೈತರ ಪಾಲಿನ ಮರಣ ಶಾಸನ ವಕ್ಫ್ ಕಾಯ್ದೆ?

ಕಾಂಗ್ರೇಸ್ ಪಕ್ಷದ ಓಲೈಕೆ ರಾಜಕಾರಣದ ಪಾಪದ ಕೂಸಾದ ವಕ್ಫ್ ಮಂಡಳಿಯಿಂದ (waqf board) ಈ ದೇಶದ ಹಿಂದೂಗಳಿಗೆ ಆಗುತ್ತಿರುವ ತೊಂದರೆಗಳೇನು? ಪ್ರಸ್ತುತ ಕೇಂದ್ರ ಸರ್ಕಾರ ಈ ಕಾಯ್ದೆಯಲ್ಲಿ ಬಲಾವಣೆ ತರಲು ಏಕೆ ಮುಂದಾಗಿದೆ? ಆ ಮಸೂದೆಯ ಸಾಧಕ ಬಾಧಕಗಳ ಕುರಿತಾದ ವಾಸ್ತವ ಚಿತ್ರಣ ಇದೋ ನಿಮಗಾಗಿ… Read More ರೈತರ ಪಾಲಿನ ಮರಣ ಶಾಸನ ವಕ್ಫ್ ಕಾಯ್ದೆ?

ಮಾತು ಬಿಗ್​ಬಾಸ್ ಮನೆ ಮುರೀತು

ಕಳೆದ ಎರಡು ದಶಕಗಳಿಂದಲೂ ಭಾರತೀಯ ದೃಶ್ಯಮಾಧ್ಯಮಗಳಲ್ಲಿ ಬಿಗ್​ಬಾಸ್ ಎನ್ನುವ ರಿಯಾಲಿಟಿ ಶೋ ಬಹಳ ಪ್ರಖ್ಯಾತಿಯನ್ನು ಪಡೆದಿದ್ದು ಇದು  ಮೂಲತಃ ನೆದರ್ಲ್ಯಾಂಡ್ಸ್ನಲ್ಲಿ ಜಾನ್ ಡಿ ಮೋಲ್ ಜೂನಿಯರ್ ಅವರಿಂದ ರಚಿಸಲ್ಪಟ್ಟ  ಡಚ್ ರಿಯಾಲಿಟಿ ಶೋ ಬಿಗ್ ಬ್ರದರ್ ಆಧಾರಿತವಾದ ಕಾರ್ಯಕ್ರಮವಾಗಿದೆ. ಇದನ್ನು ವಯಾಕಾಮ್ 18 ಮತ್ತು ಡಿಸ್ನಿ ಸ್ಟಾರ್ ನೆಟ್‌ವರ್ಕ್‌ಗಳ ಮೂಲಕ ಎಂಡೆಮೊಲ್ ಶೈನ್ ಇಂಡಿಯಾ (ಈಗ ಬನಿಜಯ್‌) ಕಂಪನಿ ನಡೆಸುವ ಕಾರ್ಯಕ್ರಮವಾಗಿದೆ. ಭಾರತದಲ್ಲಿ ಬಿಗ್ ಬಾಸ್ ಮೊದಲು 2006 ರಲ್ಲಿ ಸೋನಿ ಟಿವಿ ಮೂಲಕ ಹಿಂದಿ ಭಾಷೆಯಲ್ಲಿ… Read More ಮಾತು ಬಿಗ್​ಬಾಸ್ ಮನೆ ಮುರೀತು

ಜಾತಿ ಗಣತಿಯೋ ಇಲ್ಲವೇ ದೇಶ ವಿಭಜನೆಯೋ?

ಈ ದೇಶದ ಹಿಂದೂ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮಗಳೆಲ್ಲದ್ದರಲ್ಲೂ ವಿವಿಧ ಜಾತಿ ಮತ್ತು ಉಪಜಾತಿಗಳು ಇರುವಾಗ, ಕೇವಲ ಹಿಂದೂ ಧರ್ಮದ ಜಾತಿಗಣತಿಗೆ ಕಾಂಗ್ರೇಸ್ ಪಕ್ಷ ಆಗ್ರಹ ಪಡಿಸುತ್ತಿರುವ ಹುನ್ನಾರದ ಹಿಂದಿರುವ ರಹಸ್ಯ.

ನಾವೆಲ್ಲ ಹಿಂದು, ನಾವೆಲ್ಲಾ ಒಂದು ಎನ್ನುವುದು ಕೇವಲ ಘೋಷಣೆಯಾಗದೇ ಕಾರ್ಯ ರೂಪಕ್ಕೆ ತಂದಲ್ಲಿ ಮಾತ್ರವೇ ನಮ್ಮ ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಿದಂತಾಗುತ್ತದೆ ಅಲ್ವೇ? … Read More ಜಾತಿ ಗಣತಿಯೋ ಇಲ್ಲವೇ ದೇಶ ವಿಭಜನೆಯೋ?

ಅಕ್ರಮ ಸೈಟ್ ಗೆ ಹೋದ ಮಾನ, ಸೈಟ್ ಹಿಂದಕ್ಕೆ ಕೊಟ್ರೂ ಬಾರದು.

ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ಭೂಕಬಳಿಕೆ ಮಾಡಿ, ಜನತೆ ಮತ್ತು ನ್ಯಾಯಾಂಗದಿಂದ ತಪರಾಕಿ ಹಾಕಿಸಿಕೊಂಡ ನಂತರ ಭೂಮಿಯನ್ನು ಹಿಂದಿರುಗಿಸಿ ಸತ್ಯ ಹರಿಶ್ಚಂದ್ರರಂತೆ ಮೆರೆಯುತ್ತಿರುವ ಸಿದ್ದು ಮತ್ತು ಖರ್ಗೆ ಕುಟುಂಬದಿಂದ ಪ್ರೇರಣೆ ಪಡೆದ ದೆಹಲಿಯ ಕಾರು ಕಳ್ಳನ ಕುಕೃತ್ಯದ ಕಥೆ-ವ್ಯಥೆ ಇದೋ ನಿಮಗಾಗಿ… Read More ಅಕ್ರಮ ಸೈಟ್ ಗೆ ಹೋದ ಮಾನ, ಸೈಟ್ ಹಿಂದಕ್ಕೆ ಕೊಟ್ರೂ ಬಾರದು.