ಮಾವಳ್ಳಿ ಟಿಫನ್ ರೂಂ (MTR)

ಸುಮಾರು 99 ವರ್ಷಗಳ ಹಿಂದೆ ಬೆಂಗಳೂರಿನ ಲಾಲ್‌ಬಾಗ್ ರಸ್ತೆಯ ಮಾವಳ್ಳಿಯಲ್ಲಿ ಸಣ್ಣದಾಗಿ ಆರಂಭವಾದ ಮಾವಳ್ಳಿ ಟಿಫನ್ ರೂಂ ಇಂದು ಎಂಟಿಆರ್ ಹೆಸರಿನಲ್ಲಿ, ಬೆಂಗಳೂರು, ಉಡುಪಿ, ಮೈಸೂರು, ಸಿಂಗಾಪುರ್, ಕೌಲಾಲಂಪುರ್, ಲಂಡನ್ ಮತ್ತು ದುಬೈನಲ್ಲಿಯೂ ಸಹಾ ಶಾಖೆಗಳನ್ನು ಹೊಂದಿರುವುದಲ್ಲದೇ, ಸಿದ್ಧ ಪಡಿಸಿದ ಬಗೆ ಬಗೆಯ ಮಸಾಲೆ ಮತ್ತು ರೆಡಿ ಟು ಈಟ್ ಪದಾರ್ಥಗಳಲ್ಲಿ ವಿಶ್ವವಿಖ್ಯಾತಿ ಪಡೆದಿದೆ.

ಅಂತಹ ವಿಶ್ವವಿಖ್ಯಾತ ಎಂಟಿಆರ್ ಬೆಳೆದು ಬಂದ ದಾರಿ ಮತ್ತು ಮಾಡಿರುವ ಸಾಧನೆಗಳ ಪರಿಚಯವನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಮಾವಳ್ಳಿ ಟಿಫನ್ ರೂಂ (MTR)

ದೇವದುರ್ಲಭ ಕಾರ್ಯಕರ್ತರ ಮನದಾಳದ ಮಾತು

ಪ್ರಜಾಪ್ರಭುತ್ವದಲ್ಲಿ ಸೋಲು ಮತ್ತು ಗೆಲುವು ಸಹಜ. ಈ ಬಾರಿ ಬಿಪೆಪಿ ಪಕ್ಷ ಸೋತಿದೆಯೇ ಹೊರತು, ಖಂಡಿತವಾಗಿಯೂ ಸತ್ತಿಲ್ಲ. ಚುನಾವಣೆಯ ಸೋಲು ಮತ್ತು ಗೆಲುವು ಎನ್ನುವುದು ಗಡಿಯಾರದ ಎರಡು ಮುಳ್ಳಿನಂತೆ ಇದ್ದು ಅದು ಕಾಲ ಕಾಲಕ್ಕೆ ಅನುಗುಣವಾಗಿ ನಿಶ್ಚಿತವಾಗಿಯೂ ಮೇಲೆ ಕೆಳಗಾಗುವುದು ಈ ಜಗದ ನಿಯಮ.

ಈ ಬಾರಿಯ ಬಿಜೆಪಿಯ ಸೋಲನ್ನು ಹಲವರು ವಿವಿಧ ರೀತಿಯಲ್ಲಿ ವಿಶ್ಲೇಷಿಸಿದ್ದರೆ, ಒಬ್ಬ ಕಾರ್ಯಕರ್ತನಾಗಿ ನನ್ನ ವಿಮರ್ಶೆ ಇದೋ ನಿಮಗಾಗಿ… Read More ದೇವದುರ್ಲಭ ಕಾರ್ಯಕರ್ತರ ಮನದಾಳದ ಮಾತು

ಎಂ.ಜಿ. ರಸ್ತೆಯ ಇಂಡಿಯಾ ಕಾಫಿ ಹೌಸ್

ಕಾಫಿ ಎಂಬುದು ಹುರಿದ ಕಾಫಿ ಬೀಜಗಳಿಂದ ತಯಾರಿಸಿದ ಗಾಢ ಬಣ್ಣದ ಸ್ವಲ್ಪ ಕಹಿ ಮತ್ತು ಸ್ವಲ್ಪ ಆಮ್ಲೀಯ ಇರುವ ಪಾನೀಯವಾಗಿದ್ದು, ಅದರಲ್ಲಿರುವ ಕೆಫಿನ್ ಎಂಬ ಅಂಶ ಕುಡಿದವರ ಮೇಲೆ ಅಲ್ಪಪ್ರಮಾಣದ ಉತ್ತೇಜಕ ಪರಿಣಾಮವನ್ನು ಬೀರಿ ಅವರನ್ನು ಚೈತನ್ಯದಯಕವಾಗಿ ಇಡುತ್ತದೆ ಎಂಬ ನಂಬಿಕೆ ಇರುವ ಕಾರಣ, ಪ್ರಪಂಚಾದ್ಯಂತ ಕಾಫೀ ಒಂದು ಜನಪ್ರಿಯ ಪಾನೀಯವಾಗಿದೆ. ಹಾಗಾಗಿ ಅತ್ಯುತ್ತಮವಾದ ಕಾಫೀ ಬೀಜವನ್ನು ಹದವಾಗಿ ಹುರಿದು ಪುಡಿಮಾಡಿ ಹಬೆಯಾಡುವ ಬಿಸಿನೀರಿನಿಂದ ಅದರ ಕಷಾಯ (decoction)ವನ್ನು ತಯಾರಿಸಿ ಅದಕ್ಕೆ ಸ್ವಲ್ಪ ಹಾಲು ಮತ್ತು ಸಕ್ಕರೆಯನ್ನು… Read More ಎಂ.ಜಿ. ರಸ್ತೆಯ ಇಂಡಿಯಾ ಕಾಫಿ ಹೌಸ್

ರಾಜ ಗಾಂಭೀರ್ಯದ ಬಲರಾಮ ಇನ್ನಿಲ್ಲ.

ಚುನಾವಣೆಯ ಭರಾಟೆಯಲ್ಲಿ ಮೈಸೂರಿನ ದಸರಾದಲ್ಲಿ 14 ಬಾರಿ ತಾಯಿ ಶ್ರೀ ಚಾಮುಂಡೇಶ್ವರಿಯ ಅಂಬಾರಿಯನ್ನು ಹೊರುವ ಮೂಲಕ ಅಪಾರವಾದ ಜನ ಮನ್ನಣೆಯನ್ನು ಪಡೆದಿದ್ದ ಬಲರಾಮ ಮೃತಪಟ್ಟಿರುವ ವಿಷಯ ಹೆಚ್ಚಿನ ಜನರಿಗೆ ತಿಳಿಯದೇ ಹೋದದ್ದು ವಿಷಾಧನೀಯವಾಗಿದೆ.

ದಸರಾ ಅಂಬಾರಿ ಹೊರುವ ಆನೆಗಳ ವಿಶೇಷತೆಗಳೇನು? ಬಲರಾಮನ ಬಗ್ಗೆ ಹೆಚ್ಚಿನ ಜನರಿಗೆ ತಿಳಿಯದಿರುವ ಕೂತೂಹಲ ಮಾಹಿತಿಗಳು ಇದೋ ನಿಮಗಾಗಿ… Read More ರಾಜ ಗಾಂಭೀರ್ಯದ ಬಲರಾಮ ಇನ್ನಿಲ್ಲ.

NOTA ಮತ್ತು ಮತದಾನಕ್ಕೆ ಗೈರುಹಾಜರಿ

ಚುನಾವಣಾ ಪ್ರಕ್ರಿಯೆಯಲ್ಲಿ ತಾಂತ್ರಿಕವಾಗಿ ನೋಟಾ ಎಂಬುದು ಸರಿ ಎನಿಸಿದರೂ, ತಾರ್ಕಿಕವಾಗಿ ನೋಟಾ ಎಂಬುದು ನಿರರ್ಥಕ ಪ್ರಯತ್ನವಾಗಿದೆ. ಮತದಾನ ಮಾಡದವರಿಗೂ ಮತ್ತು ನೋಟಾ ಒತ್ತುವವರಿಗೂ ಪ್ರಜಾಪ್ರಭುತ್ವದ ಕುಂದು ಕೊರತೆಗಳನ್ನು ಪ್ರಶ್ನಿಸುವ ನೈತಿಕ ಹಕ್ಕು ಇರುವುದಿಲ್ಲವಾದ ಕಾರಣ, ನಾವೆಲ್ಲರೂ ನಾಳೆಯ ಚುನಾವಣೆಯಲ್ಲಿ ನಮ್ಮ ತಾಳ್ಮೆಯಿಂದ ಜಾಣ್ಮೆಯಿಂದ ಸಮರ್ಥ ಅಭ್ಯರ್ಥಿಗೆ ಮತದಾನ ಮಾಡೋಣ ಅಲ್ವೇ?… Read More NOTA ಮತ್ತು ಮತದಾನಕ್ಕೆ ಗೈರುಹಾಜರಿ

ದಿ ಕೇರಳ ಸ್ಟೋರಿ ಕುರಿತಂತೆ ಮನದಾಳದ ಮಾತು

https://enantheeri.com/2023/05/05/kerala_story/

ಕೇರಳ ಸ್ಟೋರಿ, ಚಿತ್ರದಲ್ಲಿ ತೋರಿಸಿರುವ ಶಾಲಿನಿ ಉನ್ನಿಕೃಷ್ಣನ್ ಮತ್ತು ದೀಪಾಂಜಲಿಯರ ಕಥೆಯಷ್ಟೇ ಆಗಿರದೇ, ಕೇರಳ, ಕರ್ನಾಟಕ ಮತ್ತು ತಮಿಳುನಾಡಿನ ಕರಾವಳಿ ಪ್ರಾಂತ್ಯದ ಸಾವಿರಾರು ಅಮಾಯಕ ಯುವಕ ಯುವತಿಯರ ಕರಾಳ ಕಥನವಾಗಿದ್ದು, ಪ್ರತಿಯೊಬ್ಬ ಭಾರತೀಯರೂ ನೋಡಿ ಎಚ್ಚೆತ್ತು ಕೊಳ್ಳಲೇ ಬೇಕಾದ ಚಿತ್ರವಾಗಿದೆ. ಈ ಚಿತ್ರದ ಕುರಿತಂತೆ ಒಬ್ಬ ಚಿತ್ರಪ್ರೇಕ್ಷಕನಾಗಿ ಮತ್ತು ಹೆಣ್ಣುಮಗಳೊಂದರ ತಂದೆಯಾಗಿ ಮನದಾಳದ ಮಾತು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.

ಧರ್ಮ ಉಳಿದರೆ ದೇಶ ಉಳಿದೀತು. ದೇಶ ಉಳಿದರೆ ನಾವು ಉಳಿದೇವು. ಧರ್ಮೋ ರಕ್ಷತಿ ರಕ್ಷಿತಃ… Read More ದಿ ಕೇರಳ ಸ್ಟೋರಿ ಕುರಿತಂತೆ ಮನದಾಳದ ಮಾತು

ಸರ್. ಕೆ.ಪಿ. ಪುಟ್ಟಣ್ಣ ಚಟ್ಟಿ ಪುರಭವನ

ಬೆಂಗಳೂರಿನ ಹೃದಯಭಾಗದಲ್ಲಿರುವ ಪುರಭವನಕ್ಕೆ ಸರ್ ಕೆ.ಪಿ.ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್ ಎಂಬ ಹೆಸರು ಇಡಲು ಕಾರಣವೇನು? ಆ ಕಟ್ಟಡದ ಇತಿಹಾಸ ಮತ್ತು ವೈಶಿಷ್ಟ್ಯತೆಗಳೇನು? ಆ ಕಟ್ಟಡದ ಮುಂದೆಯೇ ಪ್ರತಿಭಟನೆಗಳು ಏಕೆ ನಡೆಯುತ್ತವೆ? ಸರ್ ಪುಟ್ಟಣ್ಣ ಚೆಟ್ಟಿ ಎಂದರೆ ಯಾರು? ಅವರ ಯಶೋಗಾಧೆ ಏನು? ಎಂಬೆಲ್ಲಾ ಕುತೂಹಲಕಾರಿ ವಿಷಯಗಳನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಸರ್. ಕೆ.ಪಿ. ಪುಟ್ಟಣ್ಣ ಚಟ್ಟಿ ಪುರಭವನ

ಮಹಿಳಾ ಕುಸ್ತಿ ಪಟುಗಳ ಪ್ರತಿಭಟನೆಯ ವಾಸ್ತವ ಸಂಗತಿ

2023ರ ಜನವರಿಯಲ್ಲಿ, ಭಾರತದ ಪರ ಮಹಿಳಾ ಕುಸ್ತಿಪಟುಗಳಾದ ಮತ್ತು ಓಲಂಪಿಕ್ ಪದಕ ವಿಜೇತರಾದ, ವಿನೇಶ್ ಫೋಗಟ್, ಸಾಕ್ಷಿ ಮಲಿಕ್, ಅಂಶು ಮಲಿಕ್, ಬಜರಂಗ್ ಪುನಿಯಾ ಸೇರಿದಂತೆ ಸುಮಾರು ಮೂವತ್ತು ಭಾರತೀಯ ಕುಸ್ತಿಪಟುಗಳು, ಉತ್ತರ ಪ್ರದೇಶದ ಕೈಸರ್‌ಗಂಜ್‌ನ ಬಿಜೆಪಿ ಸಂಸದ ಬಿಜೆಪಿ ಸಾಂಸದರಾದ ಮತ್ತು ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತು ಅದರ ತರಬೇತುದಾರರ ವಿರುದ್ಧ ಮಹಿಳಾ ಲೈಂಗಿಕ ಕಿರುಕುಳವನ್ನು ಆರೋಪಿಸಿ ಧರಣಿ ನಡೆಸಿದ್ದಲ್ಲದೇ ಈ ಕೂಡಲೇ ಕುಸ್ತಿ ಫೆಡರೇಶನ್ ಅನ್ನು… Read More ಮಹಿಳಾ ಕುಸ್ತಿ ಪಟುಗಳ ಪ್ರತಿಭಟನೆಯ ವಾಸ್ತವ ಸಂಗತಿ

ಪಾನಿಪುರಿ ಹುಡುಗ, ಯಶಸ್ವಿ ಜೈಸ್ವಾಲ್ ಯಶೋಗಾಥೆ

ಪ್ರತಿಭೆಯ ಜೊತೆಗೆ ಕಠಿಣ ಪರಿಶ್ರಮ ಇದ್ದರೂ, ಆರ್ಥಿಕವಾಗಿ ಸದೃಢರಾಗಿರದಿದ್ದ ಕಾರಣ, ಉತ್ತರ ಪ್ರದೇಶದ ಯುವ ಕ್ರಿಕೆಟಿಗ, ಮುಂಬೈನ ಆಜಾದ್ ಮೈದಾನದಲ್ಲೇ ಆಶ್ರಯ ಪಡೆದು, ಜೀವನೋಪಾಯಕ್ಕಾಗಿ ಪಾನಿಪುರಿ ಮಾರುತ್ತಾ, ಅಂತಿಮವಾಗಿ ಭಾರತದ ಕಿರಿಯರ ತಂಡದ ಅತ್ಯಂತ ಯಶಸ್ವಿ ಆಟಗಾರನಾಗಿ ಈ ಬಾರಿಯ 9 ಐಪಿಎಲ್ ಪಂದ್ಯಗಳಲ್ಲಿ,47.56 ಸರಾಸರಿಯಲ್ಲಿ 428 ಓಟಗಳನ್ನು ಗಳಿಸುವ ಮೂಲಕ ಆರೆಂಜ್ ಕ್ಯಾಪ್ ಗಾಗಿ ಫಾಫ್ ಡ್ಲೂಪ್ಲೆಸೀಯ ಜೊತೆಯಲ್ಲಿ ಹಗ್ಗ ಜಗ್ಗಾಟದಲ್ಲಿ ಇರುವ 21ರ ಹರೆಯದ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಯಶೋಗಾಥೆ ನಿಜಕ್ಕೂ ನಮ್ಮ ಇಂದಿನ ಯುವ ಜನರಿಗೆ ಪ್ರೇರಣೆಯಾಗುವಂತಿದೆ.… Read More ಪಾನಿಪುರಿ ಹುಡುಗ, ಯಶಸ್ವಿ ಜೈಸ್ವಾಲ್ ಯಶೋಗಾಥೆ