ದಿಢೀರ್ ಚಕ್ಕುಲಿ

ಚಕ್ಕುಲಿ ನಮ್ಮ ದಕ್ಷಿಣಭಾರತೀಯರ ಅಚ್ಚುಮೆಚ್ಚಿನ ಕುರುಕಲು ತಿಂಡಿ. ಜೊತೆಗೆ ಸಾಂಪ್ರದಾಯಿಕ ತಿಂಡಿಯೂ ಹೌದು. ಎಲ್ಲಾ ಶುಭ ಸಮಾರಂಭಗಳಲ್ಲಿ ಮುತ್ತೈದೆಯರಿಗೆ ಚಕ್ಕುಲಿ ಉಂಡೆ ಬಾಗಣಕೊಟ್ಟಲ್ಲಿ ಮಾತ್ರವೇ ಆ ಕಾರ್ಯಕ್ರಮ ಯಶಸ್ವಿಯಾಗೋದು. ಹಿಂದಿನ ಕಾಲದಲ್ಲೆಲ್ಲಾ ಗೋಕುಲಾಷ್ಠಮಿ ಅಥವಾ ಮನೆಯ ಸಮಾರಂಭಕ್ಕಿಂತ ಒಂದು ತಿಂಗಳಿಗಿಂತಲೂ ಮುಂಚೆಯೇ ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ತೊಳೆದು ಒಣಗಿಸಿ, ಅದನ್ನು ಬೆಚ್ಚಗೆ ಹುರಿದು ಸಮ ಪ್ರಮಾಣದಲ್ಲಿ ಬೆರೆಸಿ, ಬೀಸೋ ಕಲ್ಲಿನಿಂದಲೋ ಇಲ್ಲವೇ ಫ್ಲೋರ್ ಮಿಲ್ಲಿನಲ್ಲಿ ಪುಡಿಮಾಡಿಸಿಟ್ಟು ಸಮಾರಂಭಕ್ಕಿಂತ ಒಂದು ವಾರಕ್ಕೆ ಮುಂಚೆಯೇ ನೆಂಟರಿಷ್ಢರು ಮತ್ತು ಅಕ್ಕ… Read More ದಿಢೀರ್ ಚಕ್ಕುಲಿ