ಪುನರ್ಜನ್ಮ
ಶಂಕರ ಮೊನ್ನೆ ದೇವಸ್ಥಾನಕ್ಕೆ ಹೋಗಿ, ದೇವರ ದರ್ಶನಕ್ಕೆ ಸರದಿಯ ಸಾಲಿನಲ್ಲಿ ನಿಂತಿದ್ದಾಗಲೇ, ಶಂಕರಾಚಾರ್ಯವಿರಚಿತ ಎಂ.ಎಸ್. ಸುಬ್ಬಲಕ್ಷ್ಮಿಯವರ ಸುಶ್ರಾವ್ಯ ಕಂಠದ ಭಜಗೋವಿಂದಂ ಭಜಗೋವಿಂದಂ ಶ್ಲೋಕ ಕೇಳುತ್ತಲೇ ಅವನಿಗೆ ತಾನು ಸಣ್ಣನಿದ್ದಾಗ ಅವನ ತಾತ ಆ ಶ್ಲೋಕಗಳನ್ನು ಹೇಳಿಕೊಡುತ್ತಿದ್ದದ್ದು ಮತ್ತು ಅದರ ಜೊತೆ ಹೇಳಿದ ಸುಂದರ ಪ್ರಸಂಗವೊಂದು ನೆನಪಿಗೆ ಬಂತು. ಆಗ ಶಂಕರನಿಗೆ ಏಳೆಂಟು ವರ್ಷಗಳಿರಬಹುದು . ಪರೀಕ್ಷೆ ಮುಗಿದು ಬೇಸಿಗೆ ರಜಾ ಬಂದಿತೆಂದರೆ ತಾತನ ಮನೆಗೆ ಹೋಗುವುದಕ್ಕೆ ಅವನಿಗೆ ಪಂಚ ಪ್ರಾಣ. ಅದೇ ರೀತೀ ಅವನ ತಾತನೂ ಅಷ್ಟೇ.… Read More ಪುನರ್ಜನ್ಮ
