ಭುವನಗಿರಿ ಶ್ರೀ ಭುವನೇಶ್ವರಿ ದೇವಾಲಯ
ಎಲ್ಲರಿಗೂ ತಿಳಿದಿರುವಂತೆ ತಾಯಿ ಭುವನೇಶ್ವರಿ ದೇವಿಯನ್ನು ಕರ್ನಾಟಕದ ರಾಜ್ಯ ದೇವತೆ ಅರ್ಥಾತ್ ಕನ್ನಡ ದೇವತೆ ಎಂದು ಪೂಜಿಸಲಾಗುತ್ತದೆ. ಇಂತಹ ಭುವನೇಶ್ವರಿ ದೇವಿಯು ಪಾರ್ವತಿ ದೇವಿಯ ಹತ್ತು ಮಹಾ ವಿದ್ಯಾ ದೇವತೆಗಳಲ್ಲಿ ಒಬ್ಬಳಾಗಿದ್ದು, ನಾಲ್ಕನೆಯವಳಾಗಿ ತಾಯಿ ದುರ್ಗೆಯ ಒಂದು ಅಂಶವಾಗಿದ್ದಾಳೆ. ಭುವನೇಶ್ವರಿ ಎಂಬುದು ಸಂಸ್ಕತ ಪದವಾಗಿದ್ದು ಭುವನ ಎಂದರೆ ವಿಶ್ವ ಎಂಬರ್ಥವಾಗಿದ್ದು ಭುವನೇಶ್ವರಿ ಎಂದರೆ ವಿಶ್ವಕ್ಕೇ ಒಡತಿ ಅರ್ಥಾತ್ ವಿಶ್ವಕ್ಕೇ ತಾಯಿ ಎಂಬ ಅರ್ಧವಿದೆ. ಇಂತಹ ಭುವನೇಶ್ವರಿಯ ಸುಮಾರು ಸಾವಿರ ವರ್ಷಗಳಷ್ಟು ಇತಿಹಾಸವಿರುವ ದೇವಾಲಯವು ಉತ್ತರ ಕನ್ನಡ ಜಿಲ್ಲೆಯ… Read More ಭುವನಗಿರಿ ಶ್ರೀ ಭುವನೇಶ್ವರಿ ದೇವಾಲಯ
