ಮತ್ತೆ ಮುದುಡಿತು ಕೈ , ಮತ್ತೊಮ್ಮೆ ಅರಳಿತು ಕಮಲ.

ಕಳೆದ ಎರಡು ತಿಂಗಳುಗಳಲ್ಲಿ , ಇಡೀ ವಿಶ್ವದ ಚಿತ್ತ ನಮ್ಮ ದೇಶದತ್ತ ಇತ್ತು. ಕಾರಣ, ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶದ ಸಾರ್ವತ್ರಿಕ ಚುನಾವಣೆ ನಡೆಯುತ್ತಲಿತ್ತು. ಬಹುಶಃ ಪ್ರಪಂಚದ ಅತ್ಯಂತ ದೀರ್ಘಕಾಲದ ಮತ್ತು ಅತ್ಯಂತ ಹೆಚ್ಚಿನ ಕ್ಷೇತ್ರಗಳು ಮತ್ತು ಮತದಾರರು ಪಾಲ್ಗೊಂಡ ಚುನಾವಣೆ ಎಂದರೆ ಇದುವೇ ಇರಬೇಕು. 2014 ರಲ್ಲಿ UPA-1 ಮತ್ತು UPA-2ರ ದುರಾಡಳಿತ ಮತ್ತು ಭ್ರಷ್ಟಾಚಾರದಿಂದ ಬೇಸತ್ತಿದ್ದ ಭಾರತೀಯರಿಗೆ ತಮ್ಮ ದೇಶವನ್ನು ಮುನ್ನಡೆಸಲು ಕಾಣಿಸಿದ ಏಕೈಕ ಆಶಾಕಿರಣವೆಂದರೆ ನರೇಂದ್ರ ದಾಮೋದರ್ ದಾಸ್ ಮೋದಿ. ಅರ್ಥಾತ್… Read More ಮತ್ತೆ ಮುದುಡಿತು ಕೈ , ಮತ್ತೊಮ್ಮೆ ಅರಳಿತು ಕಮಲ.

ಮನೆ ಮನೆಯಲ್ಲೂ , ಮನ ಮನದಲ್ಲೂ , ಮೋದಿ ಮತ್ತೊಮ್ಮೆ

ಕಳೆದ ವಾರಾಂತ್ಯದಲ್ಲಿ ಲೋಕಸಭಾ ಚುನಾವಣೆಯ ಪ್ರಚಾರಕ್ಕೆಂದು ನಮ್ಮ ಸ್ನೇಹಿತರೊಂದಿಗೆ ಮನೆ ಮನೆಗೂ ಭೇಟಿ ನೀಡಿ ಪ್ರತಿಯೊಬ್ಬರಿಗೂ ಮತದಾನದ ಮಹತ್ವವನ್ನು ತಿಳಿಸಿ ಕಡ್ಡಾಯವಾಗಿ ಮತದಾನ ಮಾಡಲು ವಿನಂತಿಸಿಕೊಂಡೆವು. ಸಾಧಾರಣವಾಗಿ ಹೀಗೆ ಮತ ಪ್ರಚಾರಮಾಡಲು ಬರುವವರನ್ನು ಎಲ್ಲರೂ ಕೇಳುವ ಪ್ರಶ್ನೆ, ನೀವು ಯಾವ ಪಕ್ಷದವರು? ಯಾರ ಸಮರ್ಥಕರು? ಆದರೆ ನಾವು ಯಾವುದೇ ಪಕ್ಷದ ಪರವಾಗಿರದೆ ಜನಜಾಗೃತಿ ಹೆಸರಿನಲ್ಲಿ ಪ್ರತಿಯೊಬ್ಬರಿಗೂ ಮತದಾನ ದಿನವನ್ನು ನೆನಪಿಸಿ, ಮತ ಪಟ್ಟಿಯಲ್ಲಿ ಅವರ ಹೆಸರು ಇದೆಯೇ ಎಂದು ಪರೀಕ್ಷಿಸಲು ತಿಳಿಸಿ,ಕಳೆದ ಬಾರೀ ಮತ ಚಲಾವಣೆ ಮಾಡಿದ್ದರೇ… Read More ಮನೆ ಮನೆಯಲ್ಲೂ , ಮನ ಮನದಲ್ಲೂ , ಮೋದಿ ಮತ್ತೊಮ್ಮೆ

ಪರಿಶ್ರಮ

ಮೊನ್ನೆ RCB ಮತ್ತು MI ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ರೋಚಕವಾಗಿತ್ತು. ಚೆನ್ನೈ ತಂಡ ಹಿಂದೆ ಮೊದಲನೇ ಪಂದ್ಯದಲ್ಲಿ ಕೇವಲ 70 ರನ್ ಗಳಿಸಿ ಅಲೌಟ್ ಆಗಿ ಸುಲಭವಾಗಿ ಪಂದ್ಯ ಸೋತಿದ್ದ ಕೋಹ್ಲಿ ಪಡೆ ಈ ಬಾರಿ ಟಾಸ್ ಗೆದ್ದು ಮುಂಬೈ ತಂಡಕ್ಕೆ ಮೊದಲು ಬ್ಯಾಟ್ ಮಾಡಲು ಹೇಳಿ 187 ರನ್ ಗಳಿಗೆ ಅವರನ್ನು ನಿರ್ಬಂಧಿಸಿ, ಬ್ಯಾಟ್ ಮಾಡಲು ಬಂದ RCB 20 ಓವರ್ಗಳಲ್ಲಿ ಕೇವಲ 181 ರನ್ ಗಳಿಸಲು ಸಾಧ್ಯವಾಗಿ 6 ರನ್… Read More ಪರಿಶ್ರಮ

ಮೋದಿ ಮತ್ತೊಮ್ಮೆ

ಒಂದು ಎರಡು ಮತದಾನಕ್ಕೆ ಹೊರಡು ಮೂರು ನಾಲ್ಕು ಅದು ನಿನ್ನದೇ ಹಕ್ಕು ಐದು ಆರು ತುಸು ಜಾಣ್ಮೆಯ ತೋರು ಏಳು ಎಂಟು ಅದು ಪ್ರಜಾಪ್ರಭುತ್ವದ ನಂಟು ಒಂಭತ್ತು ಹತ್ತು ಯೋಗ್ಯರಿಗೆ ಗುಂಡಿ ಒತ್ತು   ಒಂದರಿಂದ ಹತ್ತರವರೆಗಿನ ಆಟವು ಹೀಗಿತ್ತು ಮೋದಿಯವರನ್ನು ಮತ್ತೆ ಪ್ರಧಾನಿ ಮಾಡಿಯಾಗಿತ್ತು.   ಜಿ. ಪಿ. ರಾಜರತ್ನಂ ಅವರಲ್ಲಿ ಕ್ಷಮೆ ಕೋರುತ್ತೇನೆ

ಭಾರತದ ಉತ್ತಮ ಭವಿಷ್ಯಕ್ಕಾಗಿ ಮೋದಿ ಮತ್ತೊಮ್ಮೆ

ನೀವೇನೂ ಮೋದಿ ಗೆಲ್ಬೇಕು ಅಂತಿರಾ ಆದ್ರೆ ನಮ್ಮ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಿಂತ ಬೇರೆ ಪಕ್ಷದ ಅಭ್ಯರ್ಥಿ ಉತ್ತಮವಾಗಿ ಕೆಲಸ ಮಾಡ್ತಾನೆ ಏನ್ ಮಾಡೋದು ? ಸದ್ಯಕ್ಕೆ ಬಹುತೇಕರು ಕೇಳೊ ಪ್ರಶ್ನೆ ಇದು, ಸಣ್ಣದಾಗಿ ಒಂದ್ ರೌಂಡ್ ಪುರಾಣ ಸುತ್ಕೊಂಡ್ ಬರೋಣ, ಕುಂತಿ ಮಾಡಿದ ತಪ್ಪಿಗೆ ಕರ್ಣನ ಜನನವಾಯ್ತು, ಆಮೇಲೆ ಕೀಳು ಜಾತಿಯಲ್ಲಿ ಬೆಳೆದವ ಎಂಬ ಕಾರಣಕ್ಕೆ ದ್ರೋಣರು ಕರ್ಣನಿಗೆ ವಿದ್ಯೆ ಕಲಿಸಲಿಲ್ಲ, ತಾನು ಬ್ರಾಹ್ಮಣ ಅಂತ ಸುಳ್ಳು ಹೇಳಿ ಕ್ಷತ್ರಿಯರ ಕಟು ವಿರೋಧಿ ಪರಶುರಾಮರ ಬಳಿ ವಿದ್ಯೆ… Read More ಭಾರತದ ಉತ್ತಮ ಭವಿಷ್ಯಕ್ಕಾಗಿ ಮೋದಿ ಮತ್ತೊಮ್ಮೆ