ದೊಡ್ದವರೆಲ್ಲಾ ಜಾಣರಲ್ಲಾ!

ದ್ವಾರಕೀಶ್ ಅವರು ನಿರ್ಮಿಸಿದ ವಿಷ್ಣುವರ್ಧನ್ ಮತ್ತು ಮಂಜುಳ ಅವರು ನಟಿಸಿದ ಕನ್ನಡದ ಅತ್ಯಂತ ಜನಪ್ರಿಯ ಸಿನಿಮಾ ಗುರು ಶಿಷ್ಯರು ಚಿತ್ರದ ಹಾಡಿನೊಂದರಲ್ಲಿ ದೊಡ್ಡವರೆಲ್ಲಾ ಜಾಣರಲ್ಲ ಚಿಕ್ಕವರೆಲ್ಲಾ ಕೋಣರಲ್ಲಾ, ಗುರುಗಳು ಹೇಳಿದ ಮಾತುಗಳೆಲ್ಲಾ ಎಂದೂ ನಿಜವಲ್ಲಾ! ಎಂಬ ಸಾಲು ಬರುತ್ತದೆ. ಪ್ರಸ್ತುತವಾಗಿ ಈ ದೇಶದ ಅತ್ಯಂತ ಹಳೆಯ ಪಕ್ಷ ಎಂದು ಕರೆಸಿಕೊಳ್ಳುವ  ಕಾಂಗ್ರೇಸ್ ಪಕ್ಷದ ನಾಯಕರುಗಳು ಮತ್ತು ವಕ್ತಾರರ ಹೇಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕಾಂಗ್ರೇಸ್ ನಾಯಕರುಗಳೆಲ್ಲಾ ಜಾಣರಲ್ಲ, ಅವರ್ಯಾರೂ ಸತ್ಯಸಂಧರಲ್ಲಾ, ಕಾಂಗ್ರೇಸ್ ವಕ್ತಾರರು ಅಡಿದ ಮಾತುಗಳೆಲ್ಲಾ ಎಂದೂ ನಿಜವಲ್ಲಾ… Read More ದೊಡ್ದವರೆಲ್ಲಾ ಜಾಣರಲ್ಲಾ!

ಖರ್ಗೆ ಅವರ ಓಲೈಕೆ ಮತ್ತು ಭಟ್ಟಂಗಿತನದ ಪರಮಾವಧಿ

ರಾಮ, ಕೃಷ್ಣಾ, ಗೋವಿಂದಾ ಎಂದು ಭಗವಂತನ ನಾಮ ಸ್ಮರಣೆ ಮಾಡಿಕೊಂಡು ಕಾಲ ದೂಡುವಂತಹ ಸಮಯದಲ್ಲಿರುವ ಮಲ್ಲಿಕಾರ್ಜುನ ಖರ್ಗೆ, ಇಟಾಲಿಯನ್ ಗಾಂಧಿ ಕುಟುಂಬದ ಗುಲಾಮಿತನ ಮತ್ತು ಅಲ್ಪಸಂಖ್ಯಾತರ ಓಲೈಕೆಗಾಗಿ ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ನಂಬಿಕೆಗಳನ್ನು ಅನಾವಶ್ಯಕವಾಗಿ ಆಡಿಕೊಳ್ಳಲು ಯಾವ ಅರ್ಹತೆ ಇದೇ?… Read More ಖರ್ಗೆ ಅವರ ಓಲೈಕೆ ಮತ್ತು ಭಟ್ಟಂಗಿತನದ ಪರಮಾವಧಿ

ಖರ್ಗೆ ಅವರ ಓಲೈಕೆ ಮತ್ತು ಭಟ್ಟಂಗಿತನದ ಪರಮಾವಧಿ

ರಾಮ, ಕೃಷ್ಣಾ, ಗೋವಿಂದಾ ಎಂದು ಭಗವಂತನ ನಾಮ ಸ್ಮರಣೆ ಮಾಡಿಕೊಂಡು ಕಾಲ ದೂಡುವಂತಹ ಸಮಯದಲ್ಲಿರುವ ಮಲ್ಲಿಕಾರ್ಜುನ ಖರ್ಗೆ, ಇಟಾಲಿಯನ್ ಗಾಂಧಿ ಕುಟುಂಬದ ಗುಲಾಮಿತನ ಮತ್ತು ಅಲ್ಪಸಂಖ್ಯಾತರ ಓಲೈಕೆಗಾಗಿ ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ನಂಬಿಕೆಗಳನ್ನು ಅನಾವಶ್ಯಕವಾಗಿ ಆಡಿಕೊಳ್ಳಲು ಯಾವ ಅರ್ಹತೆ ಇದೇ?… Read More ಖರ್ಗೆ ಅವರ ಓಲೈಕೆ ಮತ್ತು ಭಟ್ಟಂಗಿತನದ ಪರಮಾವಧಿ

ಇದ್ದದ್ದನ್ನು ಇದ್ದ ಹಾಗೇ ಹೇಳಿದರೆ ಎದ್ದು ಬಂದು ಎದೆಗೆ ಒದ್ದರಂತೆ!

ಸಂವಿಧಾನದ ಪುಸ್ತಕ ಹಿಡಿದು, ಈ ದೇಶದಲ್ಲಿ ಅಭಿವ್ಯಕ್ತಿ ಸ್ವಾತ್ರಂತ್ರ್ಯಕ್ಕೆ ಧಕ್ಕೆ ಆಗುತ್ತಿದೆ ಎಂದು ಬೊಬ್ಬಿಡುವ ಕಾಂಗ್ರೇಸ್ ನಾಯಕರೇ, ಕರ್ನಾಟಕದಲ್ಲಿ ಅವರ ವಿರುದ್ಧ ಮಾತನಾಡುವವರ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿರುವುದು ವಿಪರ್ಯಾಸ. ಕೈಯಲ್ಲಿ ಸಂವಿಧಾನದ ಪುಸ್ತಕ ಹಿಡಿದರೆ ಮಾತ್ರಾ ಸಾಲದು ಆದನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಂಡು ಅದರ ಅನ್ವರ್ಥವಾಗಿ ನಡೆದು ಕೊಳ್ಳಬೇಕು ಅಲ್ವೇ?

ಏನಂತೀರೀ?… Read More ಇದ್ದದ್ದನ್ನು ಇದ್ದ ಹಾಗೇ ಹೇಳಿದರೆ ಎದ್ದು ಬಂದು ಎದೆಗೆ ಒದ್ದರಂತೆ!

ರೈತರ ಪಾಲಿನ ಮರಣ ಶಾಸನ ವಕ್ಫ್ ಕಾಯ್ದೆ?

ಕಾಂಗ್ರೇಸ್ ಪಕ್ಷದ ಓಲೈಕೆ ರಾಜಕಾರಣದ ಪಾಪದ ಕೂಸಾದ ವಕ್ಫ್ ಮಂಡಳಿಯಿಂದ (waqf board) ಈ ದೇಶದ ಹಿಂದೂಗಳಿಗೆ ಆಗುತ್ತಿರುವ ತೊಂದರೆಗಳೇನು? ಪ್ರಸ್ತುತ ಕೇಂದ್ರ ಸರ್ಕಾರ ಈ ಕಾಯ್ದೆಯಲ್ಲಿ ಬಲಾವಣೆ ತರಲು ಏಕೆ ಮುಂದಾಗಿದೆ? ಆ ಮಸೂದೆಯ ಸಾಧಕ ಬಾಧಕಗಳ ಕುರಿತಾದ ವಾಸ್ತವ ಚಿತ್ರಣ ಇದೋ ನಿಮಗಾಗಿ… Read More ರೈತರ ಪಾಲಿನ ಮರಣ ಶಾಸನ ವಕ್ಫ್ ಕಾಯ್ದೆ?

ಅಕ್ರಮ ಸೈಟ್ ಗೆ ಹೋದ ಮಾನ, ಸೈಟ್ ಹಿಂದಕ್ಕೆ ಕೊಟ್ರೂ ಬಾರದು.

ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ಭೂಕಬಳಿಕೆ ಮಾಡಿ, ಜನತೆ ಮತ್ತು ನ್ಯಾಯಾಂಗದಿಂದ ತಪರಾಕಿ ಹಾಕಿಸಿಕೊಂಡ ನಂತರ ಭೂಮಿಯನ್ನು ಹಿಂದಿರುಗಿಸಿ ಸತ್ಯ ಹರಿಶ್ಚಂದ್ರರಂತೆ ಮೆರೆಯುತ್ತಿರುವ ಸಿದ್ದು ಮತ್ತು ಖರ್ಗೆ ಕುಟುಂಬದಿಂದ ಪ್ರೇರಣೆ ಪಡೆದ ದೆಹಲಿಯ ಕಾರು ಕಳ್ಳನ ಕುಕೃತ್ಯದ ಕಥೆ-ವ್ಯಥೆ ಇದೋ ನಿಮಗಾಗಿ… Read More ಅಕ್ರಮ ಸೈಟ್ ಗೆ ಹೋದ ಮಾನ, ಸೈಟ್ ಹಿಂದಕ್ಕೆ ಕೊಟ್ರೂ ಬಾರದು.

ತಲೆಕೆಳಗಾದ ಚುನಾವಣೋತ್ತರ ಸಮೀಕ್ಷೆಗಳು

ರಾಜಕೀಯ ವಿಶ್ಲೇಷಕರ ಚುನಾವಣಾ ಸಮೀಕ್ಷೆಗಳೆಲ್ಲವನ್ನೂ ತಲೆಕೆಳಗಾಗಿಸಿ, ಕೂಸಿಗೆ ಮುಂಚೆ ಕುಲಾವಿ ಹೊಲಿಸಿದರು ಎನ್ನುವಂತೆ, ಪೂರ್ಣ ಫಲಿತಾಂಶ ಪ್ರಕಟವಾಗುವ ಮುನ್ನವೇ ಜಿಲೇಬಿ ಹಂಚಿ ಸಂಭ್ರಮಿಸಿದ್ದ ಪಕ್ಷಗಳಿಗೆ ಹರ್ಯಾಣ ಮತ್ತು ಕಾಶ್ಮೀರದ ಚುನಾವಣಾ ಫಲಿತಾಂಶದ ಕಲಿಸಿದ ಅಸಲೀ ಪಾಠವೇನು ಎಂಬ ಪ್ರಶ್ನೆಗೆ ಇದೋ ಇಲ್ಲಿದೆ ಉತ್ತರ… Read More ತಲೆಕೆಳಗಾದ ಚುನಾವಣೋತ್ತರ ಸಮೀಕ್ಷೆಗಳು

ಸೊಸೆಗೆ ಬುದ್ದಿ ಹೇಳಿ, ಅತ್ತೇನೇ ಓಡಿ ಹೋದ್ಲಂತೇ!!  

ಲೋಕಲ್ಲೆಲ್ಲಾ ಬುದ್ದಿ ಹೇಳುತ್ತಾ, ಸರ್ಕಾರದ ಎಲ್ಲಾ ಮಂತ್ರಿಗಳ ಖಾತೆಯಲ್ಲೂ ಮೂಗು ತೂರಿಸುತ್ತಾ, ಬಿಜೆಪಿಯರನ್ನೆಲ್ಲಾ ಜೈಲಿಗೆ ಕಳುಹಿಸುತ್ತೇನೆ ಎಂದು ಬೊಬ್ಬಿರುವ, ಕರ್ನಾಟಕದ Super CM ಪ್ರಿಯಾಂಕ್ ಖರ್ಗೆ ಮತ್ತು CM ಸಿದ್ದರಾಮಯ್ಯ ಅವರಿಗೆ ಸ್ವಪಕ್ಷೀಯರೇ ಖೆಡ್ಡಾಕ್ಕೆ ತೋಡಿರುವ ರೋಚಕತೆ ಇದೋ ನಿಮಗಾಗಿ… Read More ಸೊಸೆಗೆ ಬುದ್ದಿ ಹೇಳಿ, ಅತ್ತೇನೇ ಓಡಿ ಹೋದ್ಲಂತೇ!!  

ಎಲ್ಲದರಲ್ಲೂ ಜಾತಿಯನ್ನು ಹುಡುಕು/ತುರುಕುವುದೇ ಜಾತ್ಯಾತೀತತೆಯೇ?

ಪ್ರಸ್ತುತ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ, ಜಾತ್ಯಾತೀತತೆ ಎಂದರೇ, ದೇಶದ ಎಲ್ಲಾ ಧರ್ಮೀಯರನ್ನು ಯಾವುದೇ ತಾರತಮ್ಯವಿಲ್ಲದೆ ಸಮಾನವಾಗಿ ಕಾಣುವುದೋ? ಇಲ್ಲವೇ, ತಮ್ಮ ಅಧಿಕಾರದ ಆಸೆಗಾಗಿ ಸ್ವಾರ್ಥದಿಂದ ಬಹುಸಂಖ್ಯಾತ ಹಿಂದೂಗಳನ್ನು ಜಾತಿಯ ಹೆಸರಿನಲ್ಲಿ ಒಡೆದು ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ಕಾಪಾಡುವುದೋ? ಎಂಬ ಜಿಜ್ಞಾಸೆ ಕಾಡುತ್ತಿದೆ ಅಲ್ವೇ?… Read More ಎಲ್ಲದರಲ್ಲೂ ಜಾತಿಯನ್ನು ಹುಡುಕು/ತುರುಕುವುದೇ ಜಾತ್ಯಾತೀತತೆಯೇ?