ಮಜ್ಜಿಗೆ ಹುಳಿ

ಹಬ್ಬ ಹರಿದಿನಗಳಲ್ಲಿ ಮತ್ತು ಸಭೆ ಸಮಾರಂಭಗಳಲ್ಲಿ ಉಣಬಡಿಸುವ ಸಾಂಪ್ರದಾಯಕವಾದ ಮಜ್ಜಿಗೆಹುಳಿಯನ್ನು ನಮ್ಮ ಮನೆಗಳಲ್ಲಿಯೇ ತಯಾರಿಸುವ ವಿಧಾನವನ್ನು ನಮ್ಮ ಅನ್ನಪೂರ್ಣ ಮಾಲಿಕೆಯ ಮೂಲಕ ತಿಳಿದು ಕೊಳ್ಳೋಣ. ಸುಮಾರು 5-6 ಜನರಿಗೆ ಸಾಕಾಗುವಷ್ಟು ಮಜ್ಜಿಗೆ ಹುಳಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಕಡಲೇ ಬೇಳೆ/ಹುರಿಗಡಲೆ – 1 ಬಟ್ಟಲು ತೆಂಗಿನ ತುರಿ – 1 ಬಟ್ಟಲು ಮೊಸರು – 1 ಬಟ್ಟಲು ಜೀರಿಗೆ – 8-10 ಸಾಸಿವೆ – 8-10 ಒಣಮೆಣಸಿನಕಾಯಿ – 2-3 ಹಸೀಮೆಣಸಿನಕಾಯಿ – 6-8 ಖಾರಕ್ಕೆ ತಕ್ಕಷ್ಟು… Read More ಮಜ್ಜಿಗೆ ಹುಳಿ

ನೆರೆ ಮನೆಯ ಸಾರಿನ ರುಚಿಯೇ ಚೆನ್ನ

ಪ್ರತಿದಿನ ಮಧ್ಯಾಹ್ನ ನಮ್ಮ ಕಛೇರಿಯ ಊಟದ ಸಮಯದಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವುದನ್ನು ಬಹಳ ವರ್ಷಗಳಿಂದ ರೂಢಿ ಮಾಡಿಕೊಂಡಿದ್ದೇವೆ. ನಮ್ಮಲ್ಲಿ ಒಬ್ಬರು ಪ್ರತಿದಿನವೂ ಅವರ ಮನೆಯಾಕಿ ಶ್ರಧ್ದೆಯಿಂದ ಪ್ರೀತಿಯಿಂದ ಅಡುಗೆ ಮಾಡಿ ಊಟದ ಡಬ್ಬಿಯನ್ನು ಕಟ್ಟಿ ಕಳುಹಿಸಿದ್ದರೂ ಅದೇಕೋ ಏನೋ ಬಹಳಷ್ಟು ಬಾರಿ ಯಾರು ಹೋಟೆಲ್ನಿಂದ ಊಟ ತರಿಸಿರುತ್ತಾರೋ ಅವರಿಗೆ ತಮ್ಮ ಮನೆಯ ಊಟವನ್ನು ಕೊಟ್ಟು ತಾವು ಹೋಟೆಲ್ ಊಟ ಮಾಡುತ್ತಾರೆ. ಕುತೂಹಲದಿಂದ ಹಾಗೇಕೆ ಮಾಡುತ್ತೀರೆಂದು ಕೇಳಿದರೆ ಇದು ಒಂದು ಊಟವೇ ಒಳ್ಳೇ ದನದ ಆಹಾರ… Read More ನೆರೆ ಮನೆಯ ಸಾರಿನ ರುಚಿಯೇ ಚೆನ್ನ

ದಾನ ಮತ್ತು ಧರ್ಮ ಎಲ್ಲಾ, ಇಲ್ಲೇ ಡ್ರಾ, ಇಲ್ಲೇ ಬಹುಮಾನ

ಸುಮಾರು ಹನ್ನೆರಡು ಹದಿಮೂರು ವರ್ಷಗಳ ಹಿಂದಿನ ಮಾತು. ಅವತ್ತು ಶನಿವಾರವಾದ್ದರಿಂದ ಕೆಲಸಕ್ಕೆ ರಜೆ ಇದ್ದ ಕಾರಣ ಯಾವುದೋ ಕೆಲಸಕ್ಕೆಂದು ಹೊರಗೆ ಹೋಗಿ ಮನೆಗೆ ಹಿಂದಿರುಗುವಾಗ ಮಟ ಮಟ ಮಧ್ಯಾಹ್ನವಾಗಿ ಹೊಟ್ಟೆ ಕೂಡಾ ತುಂಬಾನೇ ಹಸಿದಿತ್ತು. ಮನೆ ಒಳಗೆ ಕಾಲಿಟ್ಟೊಡನೆಯೇ ನಮ್ಮ ತಾಯಿಯವರು ಯಾರೊಂದಿಗೂ ಮಾತನಾಡುತ್ತಿರುವ ಶಬ್ಧ ಕೇಳಿಸಿ, ಯಾರು ಬಂದಿರಬಹುದು ಎಂದು ಯೋಚಿಸುತ್ತಾ ಸೀದಾ ಬಚ್ಚಲು ಮನೆಗೆ ಹೋಗಿ ಕೈ ಕಾಲು ತೊಳೆದುಕೊಂಡು ಬಂದು ನೋಡಿದರೆ, ಯಾರೋ ಅಪರಿಚಿತ ಹೆಂಗಸು ನೋಡಲು ಬಹಳ ಕೃಶಕಾಯಳು, ಉಡಲು ಒಂದು… Read More ದಾನ ಮತ್ತು ಧರ್ಮ ಎಲ್ಲಾ, ಇಲ್ಲೇ ಡ್ರಾ, ಇಲ್ಲೇ ಬಹುಮಾನ