ದಾನ- ಮತದಾನ

ನಮ್ಮ ಸನಾತನದ ಧರ್ಮದಲ್ಲಿ ದಾನಕ್ಕೆ ಹೆಚ್ಚಿನ ಪ್ರಾಮುಖ್ಯತೆಯಿದೆ. ಪ್ರತಿಯೊಂದು ಪುಣ್ಯ ಕೆಲಸ ಮಾಡುವ ಮೊದಲು ನಾವು ಏನಾದರೂ ದಾನ ಮಾಡಿಯೇ ಮುಂದಿನ ಶಾಸ್ತ್ರಗಳಲ್ಲಿ ತೊಡಗುತ್ತೇವೆ. ದಾನ ಎಂದರೆ ಅಗತ್ಯವಿದ್ದವರಿಗೆ ತಮ್ಮಲ್ಲಿರುವ ವಸ್ತುಗಳನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕೊಡುವುದು ಎಂದರ್ಥ. ಹಾಗೆ ದಾನ ಮಾಡುವವರು ಶ್ರೀಮಂತರಾಗಿಯೇ ಇರಬೇಕೆಂದಿಲ್ಲ. ಕೊಡಲು ಕೈಯಲ್ಲಿ ಏನಿಲ್ಲದಿದ್ದರೂ ಸಂಕಷ್ಟದಲ್ಲಿರುವವರನ್ನು ಸಂತೈಸುವುದು, ಸಾಂತ್ವನದ ನುಡಿಗಳನ್ನು ಆಡುವುದು, ಅಷ್ಟೇ ಏಕೆ ಒಬ್ಬ ವ್ಯಕ್ತಿಯನ್ನು ಭೇಟಿಯಾದಾಗ ಅವನನ್ನು ಕಂಡು ಮುಗುಳ್ನಗುವುದೂ ಸಹ ದಾನದ ಚೌಕಟ್ಟಿನಲ್ಲಿಯೇ ಬರುತ್ತದೆ. ಹಾಗೆ ದಾನ ಮಾಡುವುದರಿಂದ… Read More ದಾನ- ಮತದಾನ