ನೀನು ಕಳ್ಳಾ ಮತ್ತು ನಿಮ್ಮಪ್ಪಾನೂ ಕಳ್ಳಾ

2019ರ ಲೋಕಸಭಾ ಚುನಾವಣೆ ಕಾಂಗ್ರೇಸ್ ಮತ್ತು ಇತರೇ ವಿರೋಧ ಪಕ್ಷಗಳಿಗೆ ಒಂದು ರೀತಿಯ ಮಾಡು ಇಲ್ಲವೇ ಮಡಿ ಎನ್ನುವ ಚುನಾವಣೆಯಾಗಿತ್ತು. ಹೇಗಾದರೂ ಮಾಡಿ ಮೋದಿಯವರನ್ನು ಹಣಿಯದಿದ್ದರೆ ತಮ್ಮ ಉಳಿಗಾಲವಿಲ್ಲ ಎಂಬುದನ್ನು ಎಲ್ಲರೂ ಮನಗಂಡಿದ್ದರು. ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್ ಇದನ್ನು ಬಾಯಿ ಬಿಟ್ಟೇ ಹೇಳಿಯೂ ಬಿಟ್ಟರು. ಅದಕ್ಕಾಗಿಯೇ ಎಲ್ಲರೂ ಮೋದಿ…ಮೋದಿ…ಮೋದಿ… ಈ ಒಂದೇ ಒಂದು ಹೆಸರು ದೇಶಾದ್ಯಂತ ಯಾವ ರೀತಿಯ ಒಂದು ಹವಾ ಸೃಷ್ಟಿಸಿತೆಂದರೆ, ಮೋದಿಯವರ ಬೆಂಬಲಿಗರು ಬಿಡಿ ಮೋದಿಯವರ ವಿರೋಧಿಗಳ ಬಾಯಲ್ಲೂ ಮೊದಲು ಬರುವ ಪದವೇ ಮೋದಿ ಎಂದರೆ ಅಚ್ಚರಿ ಪಡಬೇಕಾಗಿಲ್ಲ. ಆನೆಗಳಿಗೆ ಸಿಂಹ ಕನಸಿನಲ್ಲಿ ಬಂದರೂ ಬೆಚ್ಚಿಬೀಳುತ್ತವೆ ಎಂದು ಕೇಳಿದ್ದೇವೆ. ಈ ಮಾತು ಇಲ್ಲಿ ಮೋದಿಗಳ ವಿರೋಧಿಗಳ ಪಾಲಿಗೆ ಅಕ್ಷರಶಃ ನಿಜವಾಗಿ ಹೋಗಿದೆ. ಹಾಗಾಗಿ ಹೋದಲ್ಲಿ ಬಂದಲ್ಲಿ, ಸದಾ ಮೋದಿಯವರನ್ನು ತೆಗಳುವುದನ್ನೇ ಆಭ್ಯಾಸ ಮಾಡಿಕೊಂಡು ಬಿಟ್ಟರು. ಒಂದು ಸುಳ್ಳನ್ನೇ ನೂರು ಬಾರಿ ಹೇಳಿ ಅದನ್ನೇ ನಿಜಮಾಡಿಸುವ ಗೋಬೆಲ್ಸ್ ನೀತಿಯನ್ನು ಅನುಸರಿಸಿ, ಕಳೆದ ಐದು ವರ್ಷಗಳ ಅವರ ಆಡಳಿತದಲ್ಲಿ ಯಾವುದೇ ಭ್ರಷ್ಟಾಚಾರಗಳು ನಡೆದಿಲ್ಲದಿದ್ದರೂ, ವಿರೋಧಿಗಳು ತಮ್ಮ ಅಸ್ತಿತ್ವವೇ ಕಳೆದುಹೋಗುತ್ತಿದೆ ಎಂಬ ಭಯದಿಂದ‌ ಎಲ್ಲಾ ಸೌಜನ್ಯಗಳನ್ನೂ ಮೀರಿ, ಶ್ರೀ ನರೇಂದ್ರ ಮೋದಿ ನಮ್ಮ ದೇಶದ ಪ್ರಧಾನಿಗಳು ಎಂಬುದನ್ನೂ ಮರೆತು ಆವರನ್ನು ಒಬ್ಬ ಕಳ್ಳ, ಚೌಕಿದಾರ್ ಚೋರ್ ಹೈ ಎಂದು ಹೋದಲ್ಲಿ ಬಂದಲ್ಲಿ ಟೀಕೆ ಮಾಡಲು ಆರಂಭಿಸಿದರು. ‌ ಮೋದಿಯವರ ಸಾರ್ವಜನಿಕ ನಡವಳಿಗೆ ಗಮನಿಸಿದಲ್ಲಿ ಅವರು ತನ್ನ ಮೇಲೆ ಯಾವುದೇ ಟೀಕೆ ಬಂದರೂ ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡದೆ, ಅದಕ್ಕೆ ಪ್ರತಿಕ್ರಿಯೆ ನೀಡುತ್ತಾ ತಮ್ಮ ಸಮಯ ವ್ಯರ್ಥ ಮಾಡಿದವರಲ್ಲ. ಅದೇ ಟೀಕೆಗಳನ್ನೇ ತಮ್ಮ ಯಶಸ್ವಿನ ಮೆಟ್ಟಿಲನ್ನಾಗಿ ಮಾಡಿಕೊಂಡು ನಮ್ಮ ಭಾರತವನ್ನು ವಿಶ್ವಗುರವನ್ನಾಗಿ ಮಾಡಲು ಪಣತೊಟ್ಟವರು ಮತ್ತು ಅದನ್ನು ಭಾಗಶಃ ಪೂರ್ಣಗೊಳಿಸಿಯೂ ಇದ್ದಾರೆ. ಮೋದಿಯವರು ಮೌನತೋ ಕಲಹಂ ನಾಸ್ತಿ ಎಂಬ ಸಿದ್ದಾಂತದ ಅನುಗುಣವಾಗಿ ತಮ್ಮ ಪಾಡಿಗೆ ತಾವಿದ್ದರೆ, ಅವರ ವಿರೋಧಿಗಳು, ಮೌನಂ ಸಮ್ಮತಿ ಲಕ್ಷಣಂ ಎಂಬಂತೆ ತಿಳಿದು ಅದದಲ್ಲೂ ವಿಶೇಷವಾಗಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಹೋದಲ್ಲಿ ಬಂದಲ್ಲಿ ಚೌಕಿದಾರ್ ಚೋರ್ ಹೈ ಎಂಬ ಮಂತ್ರವನ್ನೇ ಜಪಿಸ ತೊಡಗಿದರು.

ಎಲ್ಲರ ತಾಳ್ಮೆಗೂ ಒಂದು ಮಿತಿ ಇರುತ್ತದೆ. ಅಂತೆಯೇ ಮೋದಿಯವರೂ ಕಳೆದವಾರ ಅದಕ್ಕೆ ತಿರುಗೇಟು ನೀಡುವಂತೆ, ರಫೆಲ್ ಒಪ್ಪಂದದಲ್ಲಿ ಹಗರಣ ನಡೆದಿದೆ ಎಂದು ಹೇಳುತ್ತಿರುವ ರಾಹುಲ್ ಗಾಂಧಿಯವರೇ, ನನ್ನನ್ನು ಹಳಿಯುವ ಮುನ್ನ, ನೀವು ಕೂಡಾ ನ್ಯಾಷನಲ್ ಹೆರಾಲ್ಡ್ ಕೇಸಿನಲ್ಲಿ ಬೇಲ್ ಮೇಲಿದ್ದೀರಿ ಎಂದು ನೆನಪಿಸಿಕೊಳ್ಳಿ ಹಾಗೆಯೇ ಮಿಸ್ಟರ್ ಕ್ಲೀನ್ ಎಂದು ಕಾಂಗ್ರೇಸ್ ಭಟ್ಟಂಗಿಗಳಿಂದ ಕರೆಸಿಕೊಳ್ಳುತ್ತಿದ್ದ ನಿಮ್ಮ ತಂದೆ ದಿವಂಗತ ಶ್ರೀರಾಜೀವ್ ಗಾಂಧಿಯವರೂ ನಂ.1 ಭ್ರಷ್ಟಾಚಾರಿ ಎಂಬ ಹಣೆಪಟ್ಟಿ ಹೊತ್ತು ಜೀವನವನ್ನು ಅಂತ್ಯಗೊಳಿಸಿದರು ಎಂದು ಗುಡುಗಿದ್ದರು. ಗಲಿ ಗಲಿಮೇ ಶೋರ್ ಹೈ, ರಾಜೀವ್ ಗಾಂಧಿ ಚೋರ್ ಹೈ ಎಂಬುದಾಗಿ ಅಂದಿನ ಕಾಲದಲ್ಲೇ ನಿಮ್ಮ ತಂದೆಯವರ ವಿರುದ್ಧ ಅಬಾಲವೃಧ್ಧರಾಗಿ ಹೇಳುತ್ತಿದ್ದದ್ದನ್ನು ಜ್ಞಾಪಿಸಿದರು. ನೀನು ಕಳ್ಳಾ ಎಂದು ರಾಹುಲ್ ಮೋದಿಯವರಿಗೆ ಹೇಳಿದರೆ, ಮೋದಿಯವರು ಕಳ್ಳ ನಾನಲ್ಲ, ಬದಲಿಗೆ ನೀನು ಕಳ್ಳಾ ಮತ್ತು ನಿಮ್ಮಪ್ಪಾನೂ ಕಳ್ಳಾ ಎಂದು ಖಡಾಖಂಡಿತವಾಗಿ ಹೇಳಿದ್ದದ್ದು ಎಲ್ಲರನ್ನೂ ದಿಗ್ಬೃಮೆ ಗೊಳಿಸಿ, ಯಥಾ ಪ್ರಕಾರ ಕಾಂಗಿಗಳು ಮತ್ತವರ ಭಟ್ಟಂಗಿಗಳು ಮೋದಿಯವರು ಹೀಗೆ ಸತ್ತು ಹೋದರವರ ವಿಚಾರವನ್ನು ಚುನಾಚಣಾ ವಿಷಯವನ್ನಾಗಿಸಬಾರದಾಗಿತ್ತು ಎಂದು ಗೀಳಿದ ತೊಡಗಿದರು.

ರಾಹುಲ್ ಗಾಂಧಿಯವರಿಗೆ ಪ್ರಧಾನಿಯವರ ಕಠು ಸತ್ಯವನ್ನು ಅರಗಿಸಿಕೊಳ್ಳಲಾಗದೇ ಮೋದಿಯವರೇ ನಿಮ್ಮ ಕರ್ಮ ನಿಮಗಾಗಿ ಕಾಯುತ್ತಿದೆ. ನಿಮ್ಮ ಬಗ್ಗೆ ನಿಮ್ಮ ಆತ್ಮಕ್ಕಿರುವ ಅಭಿಪ್ರಾಯವನ್ನು ನೀವು ಇಷ್ಟು ಸುಲಭವಾಗಿ ನನ್ನ ತಂದೆಗೆ ವರ್ಗಾಯಿಸಲಾರಿರಿ, ನಿಮಗೊಂದು ಬಿಗಿ ಅಪ್ಪುಗೆ. ಎಂದು ತನ್ನ ಗುರು ಪಿತ್ರೋಡ ಬರೆದು ಕೊಟ್ಟ ಗಿಳಿಪಾಠವನ್ನು ಒಪ್ಪಿಸಿ ಬುಸು ಬುಸು ಗುಟ್ಟಲಾರಂಭಿಸಿದರು.

ನೆನ್ನೆ ಪ್ರಧಾನಿಗಳು ಇದೇ ಮಾತನ್ನು ಮುಂದುವರೆಸಿ, ರಾಜೀವ್ ಗಾಂಧಿ ಕುಟುಂಬ 1980ರಲ್ಲಿ ಐಎನ್‌ಎಸ್‌ ವಿರಾಟ್‌ ಯುದ್ಧನೌಕೆಯನ್ನೇ ತಮ್ಮ ವೈಯಕ್ತಿಕ ಟ್ಯಾಕ್ಸಿ ರೀತಿ ಬಳಸಿಕೊಂಡಿತ್ತು ಎಂಬ ಗಂಭೀರ ಆರೋಪ ಮಾಡಿರುವುದು ದೇಶದಲ್ಲೇ ಅಲ್ಲೋಲ ಕಲ್ಲೋಲ ಎಬ್ಬಿಸಿದೆ. ಇದಕ್ಕೆ ಪುರಾವೆ ಎಂಬಂತೆ ಮೈ ನೇಷನ್ ಪ್ರಕಟಿಸಿರುವ ವರದಿಯಲ್ಲಿ, 1950ರಲ್ಲೇ ಗಾಂಧೀ ಕುಟುಂಬ ಯುದ್ಧನೌಕೆಯನ್ನು ವೈಯುಕ್ತಿಕವಾಗಿ ಬಳಸಿಕೊಳ್ಳುತ್ತಿದ್ದ ಪದ್ಧತಿ ಆರಂಭವಾಗಿತ್ತು ಎಂಬ ಅಚ್ಚರಿಯ ವಿಚಾರ ಬಹಿರಂಗಗೊಂಡಿದೆ. ಇದಕ್ಕೇ ಮತ್ತೂ ತುಪ್ಪಾ ಸುರಿಯುವಂತೆ ನೌಕಾಸೇನೆಯ ನಿವೃತ್ತ ಅಧಿಕಾರಿ ಶ್ರೀ ಪ್ರಫುಲ್ಲ ಕುಮಾರ್ ಪಾತ್ರಾ ಎಂಬುವರು. ರಾಜೀವ್ ಗಾಂಧಿಯವರ ಕುಟುಂಬ ವಿರಾಟ್‌ ಯುದ್ಧನೌಕೆಯನ್ನೇ ತಮ್ಮ ವೈಯಕ್ತಿಕ ಟ್ಯಾಕ್ಸಿ ಯಂತೆ ಬಳೆಸಿಕೊಂಡ ಸಂಧರ್ಭದಲ್ಲಿ ತಾವೂ ಕೂಡಾ ಆ ನೌಕೆಯ ಸಿಬ್ಬಂಧಿಯಾಗಿದ್ದೆ ಮತ್ತು ಅದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದೇನೆ ಎಂದು ಘಂಟಾ ಘೋಷವಾಗಿ ಹೇಳಿದ್ದಾರೆ.

ಸ್ವಾತಂತ್ರ್ಯಾನಂತರ ಅರವತ್ತಕ್ಕೂ ಹೆಚ್ಚು ವರ್ಷಗಳ ಕಾಲ, ಒಂದೇ ಕುಟುಂಬದ ಮೂರು ತಲೆಮಾರಿನವರು ಪ್ರಧಾನಿಗಳಾಗಿ ದೇಶದ ಸಂಪತ್ತನ್ನು ಮತ್ತು ಯುದ್ಧನೌಕೆಯನ್ನೇ ತಮ್ಮ ವಯಕ್ತಿಯ ಹಿತಾಸಕ್ತಿಗಳಿಗೆ ಬಳೆಸಿಕೊಂಡು ದೇಶದ ರಕ್ಷಣಾ ಇಲಾಖೆಯ ಖರೀಧಿಗಳಲ್ಲಿ ಮಧ್ಯವರ್ತಿಗಳ ಜೊತೆ ಸಹಭಾಗಿತ್ವ ಹೊಂದಿ ಕೊಟ್ಯಾಂತರ ರೂಪಾಯಿಗಳನ್ನು ನುಂಗಿ ನೀರು ಕುಡಿದು, ಈಗ ದೇಶ ಕಂಡ ಅತ್ಯಂತ ನಿಷ್ಠಾವಂತ ಮತ್ತು ಪ್ರಾಮಾಣಿಕ, ದೇಶ ಭಕ್ತ ಪ್ರಧಾನಿಗಳನ್ನು ಕಳ್ಳ ಎಂದು ನಿಂದಿಸುತ್ತಿರುವುದು ಎಷ್ಟು ಸರಿ? ಇದೇ ವಿಷಯದಲ್ಲಿ ಸುಪ್ರೀಂ ಕೋರ್ಟ್ ಮುಂದೆ ಒಂದಲ್ಲಾ ಎರಡು ಬರಿ ಛೀಮಾರೀ ಹಾಕಿಸಿಕೊಂಡರೂ, ಕೇವಲ ಅಧಿಕಾರದ ದಾಹಕ್ಕಾಗಿ ಮತ್ತೊಬ್ಬರ ಮೇಲೆ ಸುಳ್ಳಾರೋಪಗಳನ್ನು ಮಾಡುವುಡುತ್ತಿರುವುದನ್ನು ನೋಡಿದರೆ, ತಾನು ಕಳ್ಳಾ ಪರ ನಂಬಾ ಎನ್ನುವ ಗಾದೆ ಮಾತು ರಾಹುಲ್ ಮತ್ತು ಅವರ ತಂಡಕ್ಕೇ ಹೇಳಿ ಮಾಡಿಸಿದೆ ಎನ್ನುವಂತಿದೆ. ಇನ್ನು ಕೆಲವೇ ದಿನಗಳಲ್ಲಿ ಚುನಾವಣೆಯ ಫಲಿತಾಂಶ ಹೊರಬಂದು ಇವರೆಲ್ಲರ ಬಾಯಿಯನ್ನು ಜನರೇ ಶಾಶ್ವತವಾಗಿ ಮುಚ್ಚಿಸಿ, ಮೋದಿಯವರನ್ನೇ ಮತ್ತೊಮ್ಮೆ ಪ್ರಧಾನಿಗಳನ್ನಾಗಿ ಮಾಡುತ್ತಾರೆ ಎಂಬ ಆಶಯ ನಮ್ಮದು.

ಏನಂತೀರೀ?

ಯತಾ ತಾತ ತಥಾ ಪೌತ್ರ: ಸ್ವಂತಕ್ಕೆ ವಾರ್ ಶಿಪ್ ಬಳ್ಸೋದು ಕಲಿಸಿದ್ದೇ ನೆಹರೂ!
https://www.msgp.pl/gOp267w