ಸಂತ ಶ್ರೇಷ್ಠ ಶ್ರೀ ರಾಜಾರಾಮರ ಜಯಂತಿ

ಹದಿನೇಳನೇ ಶತಮಾನದಲ್ಲಿ ಪರಕೀಯರ ಆಕ್ರಮಣಕ್ಕೆ ತುತ್ತಾದ ನಮ್ಮ ದೇಶ ಧಾರ್ಮಿಕವಾಗಿಯೂ ಮತ್ತು ಸಂಸ್ಕೃತಿಕವಾಗಿಯೂ ಅಧೋಗತಿಯಲ್ಲಿ ಸಾಗುತ್ತಿದ್ದಾಗ ಶ್ರೀಮಾರ್ತಾಂಡ ದೀಕ್ಷೀತರು ಮತ್ತು ಲಕ್ಷ್ಮೀದೇವಿಯವರ ತಪಸ್ಸಿನ ಫಲವಾಗಿ ದೈವಾನುಗ್ರಹದಿಂದ ದೈವಾಂಶ ಸಂಭೂತರಾಗಿ ಶ್ರೀ ಚಿದಂಬರ ಮಹಾಸ್ವಾಮಿಗಳು ಮುರುಗೋಡದಲ್ಲಿ ಜನಿಸಿದರು. ತಮ್ಮ ಆಧ್ಯಾತ್ಮಿಕ ಶಕ್ತಿಯಿಂದ ಬಹಳ ಬೇಗ ಅಪಾರ ಭಕ್ತವೃಂದವನ್ನು ಗಳಿಸಿದ ಮಹಾಸ್ವಾಮಿಗಳು ತಮ್ಮ ಲೀಲೆಯಿಂದ ಕಾಲ ಕಾಲಕ್ಕೆ ಮಳೆ ಬೆಳೆ ಆಗುವಂತೆ ನೋಡಿಕೊಂಡು ಎಲ್ಲರೂ ಸುಸಂಸ್ಕೃತರಾಗಿ, ಸುಭೀಕ್ಷವಾಗಿರುವಂತೆ ನೋಡಿಕೊಂಡರು. ಅವರು ಬೆಳೆಸಿದ ಅನೇಕ ಶಿಷ್ಯವೃಂದದಲ್ಲಿ ಸಂತ ಶ್ರೇಷ್ಠ ರಾಜಾರಾಮರು ಅಗ್ರಗಣ್ಯರು.… Read More ಸಂತ ಶ್ರೇಷ್ಠ ಶ್ರೀ ರಾಜಾರಾಮರ ಜಯಂತಿ