ವೆಜ್ ಮೋಮೋಸ್

ವೆಜ್ ಮೋಮೋಸ್ ನೇಪಾಳೀ ಹಾಗೂ ಈಶಾನ್ಯ ಭಾರತದ ಸಾಂಪ್ರದಾಯಿಕ ತಿಂಡಿಯಾಗಿದೆ. ಸರಳ ತರಕಾರಿಗಳು ಮತ್ತು ಕಡಿಮೆ ಎಣ್ಣೆ ಬಳಸಿ, ಕೇವಲ ಹಬೆಯಲ್ಲಿ ಬೇಯಿಸುವ ಕಾರಣ ಆರೋಗ್ಯಕರ ಆಹಾರವೂ (ಮೈದಾ ಬದಲು ಗೋದಿ ಹಿಟ್ಟು ಬಳೆಸಿದಲ್ಲಿ) ಹೌದು. ಇತ್ತೀಚಿನ ದಿನಗಳಲ್ಲಿ ಈಶಾನ್ಯ ಭಾರತೀಯರು ಭಾರತದ್ಯಂತ ಸಂಜೆ ಹೊತ್ತಿನಲ್ಲಿ ಮೋಮೋಸ್ ಗಳನ್ನು ಜನಪ್ರಿಯ ಬೀದಿ ಆಹಾರವನ್ನಾಗಿ ಮಾಡಿ ನಮ್ಮ ನಾಲಿಗೆ ಬರವನ್ನು ತಣಿಸುತ್ತಾ , ತಮ್ಮ ಹೊಟ್ಟೆಯ ಪಾಡನ್ನು ನೋಡಿ ಕೊಳ್ಳುತ್ತಿದ್ದಾರೆ.

ವೆಜ್ ಮೋಮೋಸ್ ತಯಾರಿಸಲು ಬೇಕಾಗುವ ಸಾಮಗ್ರಿಗಳು

WhatsApp Image 2020-04-13 at 9.20.41 PM

  • ಮೈದಾ /ಗೋದಿ ಹಿಟ್ಟು- 1½ ಕಪ್
  • ಆಡುಗೆ ಎಣ್ಣೆ – 2-3 ಚಮಚ
  • ಉಪ್ಪು – 1 ಚಮಚ

ಹೂರಣಕ್ಕೆ ಬೇಕಾಗುವ ಪದಾರ್ಥಗಳು.

WhatsApp Image 2020-04-13 at 9.21.21 PM

  • ಸಣ್ಣಗೆ ಹೆಚ್ಚಿದ ಎಲೆ ಕೋಸು – 2 ಕಪ್
  • ತುರಿದ ಕ್ಯಾರೆಟ್- 1 ಕಪ್
  • ಸಣ್ಣಗೆ ಕತ್ತರಿಸಿದ ಈರುಳ್ಳಿ – 1
  • ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ – ೩-೪ ಎಸಳು
  • ಸಣ್ಣಗೆ ಹೆಚ್ಚಿದ ಶುಂಠಿ- 1 ಇಂಚು
  • ಸಣ್ಣಗೆ ಹೆಚ್ಚಿದ ಹಸೀ ಮೆಣಸಿನ ಕಾಯಿ- 2
  • ಕಾಳು ಮೆಣಸು ಪುಡಿ – ½ ಚಮಚ
  • ಅಡುಗೆ ಎಣ್ಣೆ – 3 ಚಮಚ
  • ರುಚಿಗೆ ತಕ್ಕಷ್ಟು ಉಪ್ಪು.

ಮೋಮೋಸ್ ಸಾಸ್ ತಯಾರಿಸಲು ಬೇಕಾಗುವ ಸಾಮಗ್ರಿಗಳು

  • ಜೋಳದ ಹಿಟ್ಟು – 1 ಚಮಚ
  • ಸೋಯಾಸಾಸ್ – 1/2ಚಮಚ
  • ಸಕ್ಕರೆ -1 ಚಮಚ
  • ಟೊಮ್ಯಾಟೋ – 2
  • ಬ್ಯಾಡಗೀ ಮೆಣಸಿನಕಾಯಿ 6-8
  • ಸಣ್ಣಗೆ ಹೆಚ್ಚಿದ ಶುಂಠಿ- 1 ಇಂಚು
  • ಬೆಳ್ಳುಳ್ಳಿ ಎಸಳು 3-4
  • ರುಚಿಗೆ ತಕ್ಕಷ್ಟು ಉಪ್ಪು

ಮೋಮೋಸ್ ಹೂರಣ ತಯಾರಿಸುವ ವಿಧಾನ

WhatsApp Image 2020-04-13 at 9.20.13 PM

  • ಒಲೆಯ ಮೇಲೆ ಅಗಲವಾದ ಬಾಣಲೆಯನ್ನು ಇಟ್ಟು ಅದಕ್ಕೆ 3 ಚಮಚ ಎಣ್ಣೆಯನ್ನು ಹಾಕಿ ಅದು ಬಿಸಿ ಆದ ಮೇಲೆ, ಕತ್ತರಿಸಿದ ಬೆಳ್ಳುಳ್ಳಿ, ಶುಂಠಿ ಮತ್ತು ಮೆಣಸಿನಕಾಯಿಯನ್ನು ಹಾಕಿ ಬಾಡಿಸಿಕೊಳ್ಳಬೇಕು.
  • ಎಣ್ಣೆಗೆ ಸಣ್ಣದಾಗಿ ಹೆಚ್ಚಿದ ಈರುಳ್ಳಿಯನ್ನು ಸೇರಿಸಿ ಅದು ಕಂದು ಬರುವವರೆಗೂ ಬಾಡಿಸಿಕೊಳ್ಳಬೇಕು.
  • ತುರಿದ ಕ್ಯಾರೆಟ್ ಮತ್ತು ಸಣ್ಣಗೆ ಹೆಚ್ಚಿದ ಎಲೆಕೋಸನ್ನು ಸೇರಿಸಿ ದೊಡ್ಡದಾದ ಉರಿಯಲ್ಲಿ ಚೆನ್ನಾಗಿ ಬಾಡಿಸಿಕೊಳ್ಳಬೇಕು.
  • ಈಗ ಮೆಣಸಿನಕಾಳು ಪುಡಿ ಮತ್ತು ಉಪ್ಪುನ್ನು ಸೇರಿಸಿ ಸ್ವಲ್ಪ ಕಾಲ ತಿರುವಿದಲ್ಲಿ ಹೂರಣ ಸಿದ್ದವಾಗುತ್ತದೆ.
  • ಬಾಣಲೆಯನ್ನು ಒಲೆಯ ಮೇಲಿಂದ ಹೊರ ತೆಗೆದು ಹೂರಣ ತಣ್ಣಗಾಗಲು ಬಿಡಬೇಕು.

ಮೋಮೋಸ್ ತಯಾರಿಸುವ ವಿಧಾನ

WhatsApp Image 2020-04-13 at 9.19.45 PM

  • ಮೈದಾ/ಗೋದಿ ಹಿಟ್ಟು, ಉಪ್ಪು, ಎಣ್ಣೆ, ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿಕೊಂಡು ಅರ್ಧ ಗಂಟೆ ನೆನೆಯಲು ಬಿಡಬೇಕು.
  • ಕಲೆಸಿ ಇಟ್ಟ ಹಿಟ್ಟನ್ನು ಸಣ್ಣ ಸಣ್ಣದಾದ ಗಾತ್ರದ ಉಂಡೆಗಳನ್ನಾಗಿ ಮಾಡಿಕೊಂಡು ಚಪಾತಿ ಲಟ್ಟಿಸಿಕೊಳ್ಳುವಂತೆ ಲಟ್ಟಿಸಿಕೊಳ್ಳಬೇಕು.
  • ಲಟ್ಟಿಸಿಕೊಂಡ ಹಿಟ್ಟಿನೊಳಗೆ ಒಂದು ಚಮಚ ಹೂರಣವನ್ನು ಹಾಕಿ ಮೊದಕದಂತೆ ಅದನ್ನು ಚೆನ್ನಾಗಿ ತಿರುಗಿಸಿಕೊಳ್ಳಬೇಕು.
  • ಹೀಗೆ ಮಾಡಿದ ಹಸೀ ಮೋಮೋಸ್ ಗಳನ್ನು ಇಡ್ಲಿ ಪಾತ್ರೆಯಲ್ಲಿ ಇಟ್ಟು 12-15 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿದಲ್ಲಿ ರುಚಿರುಚಿಯಾದ ವೆಜ್ ಮೋಮೋಸ್ ಸವಿಯಲು ಸಿದ್ಧ.

ಮೋಮೋಸ್ ಸಾಸ್ ತಯಾರಿಸುವ ವಿಧಾನ

WhatsApp Image 2020-04-13 at 9.19.11 PM

  • ಬ್ಯಾಡಗಿ ಮೆಣಸಿನಕಾಯಿಯನ್ನು ಅರ್ಧ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಕೊಳ್ಳಬೇಕು.
  • ನೆನೆಸಿದ ಬ್ಯಾಡಗೀ ಮೆಣಸಿನಕಾಯಿ, ಬೆಳ್ಳುಳ್ಳಿ ಪೇಸ್ಟ್ ಮತ್ತು ಸಣ್ಣಗೆ ಕತ್ತರಿಸಿದ ಟೊಮ್ಯಾಟೋ ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಬೇಕು.
  • ಬಾಣಲೆಗೆ ಸ್ವಲ್ಪ ಎಣ್ಣೆ, ಹಾಕಿ ಸಣ್ಣ ಉರಿಯಲ್ಲಿ ಎಣ್ಣೆ ಕಾದ ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಬಾಡಿಸಿ ಅದಕ್ಕೆ ರುಬ್ಬಿಟ್ಟುಕೊಂಡ ಟೊಮೇಟೋ ಪೇಸ್ಟ್ ಹಾಕಿ ಕುದಿಸ ಬೇಕು
  • ಮಿಶ್ರಣ ಒಂದೆರಡು ಕುದಿ ಬಂದ ತಕ್ಷಣವೇ ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ ಮತ್ತು ಸೋಯಾ ಸಾಸ್ ಸೇರಿಸ ಬೇಕು.
  • ಸಾಸ್ ಸ್ವಲ್ಪ ದಪ್ಪಗಿರಲು ಒಂದು ಚಮಚ ಜೋಳದ ಹಿಟ್ಟನ್ನು ಅರ್ಧ ಕಪ್ ನೀರಿನಲ್ಲಿ ಗಂಟಿಲ್ಲದಂತೆ ಕರಗಿಸಿಕೊಂಡು ಕುದಿಯುತ್ತಿರುವ ಮಿಶ್ರಣಕ್ಕೆ ಹಾಕಿ ಐದು ನಿಮಿಷ ಸಣ್ಣ ಊರಿಯಲ್ಲಿ ಕುದಿಸಿದಲ್ಲಿ ಕಡು ಕೆಂಪನೆಯ ಖಾರದ ಮೋಮೋಸ್ ಸಾಸ್ ಸಿದ್ಧ.
  • ಬಿಸಿ ಬಿಸಿಯಾಗಿರುವಾಗಲೇ ಮೋಮೋಸ್ ಅನ್ನು ಕೆಂಪನೆಯ ಸಾಸ್ ಜೊತೆಗೆ ತಿಂದರೆ ಬಹಳ ಮಜವಾಗಿರುತ್ತದೆ.
  • ಮೋಮೋಸ್ ಸಾಸ್ ಮಾಡಿಕೊಳ್ಳಲಾಗದವರು, ಟೋಮ್ಯಾಟೋ ಮತ್ತು ಚಿಲ್ಲಿ ಸಾಸ್ ಜೊತೆಗೆ ಕೂಡಾ ತಿನ್ನಬಹುದಾಗಿದೆ.

ಮೃದುವಾದ ಈಶಾನ್ಯ ಭಾರತದ ಸಾಂಪ್ರದಾಯಿಕ ತಿಂಡಿ ಮೋಮೋಸ್ ತಯಾರಿಸುವ ವಿಧಾನವನ್ನು ತಿಳಿಸಿಕೊಟ್ಟಿದ್ದೇವೆ.

ಓದ್ಕೋಳ್ಳಿ , ಮಾಡ್ಕೋಳ್ಳಿ, ತಿಂದ್ಕೋಳ್ಳಿ

ಏನಂತೀರೀ?

ಮದದಾಳದ ಮಾತು : ಅಪರೂಪಕ್ಕೊಮ್ಮೆ ಮಕ್ಕಳೊಂದಿಗೆ ಸಂಜೆ ಹೊತ್ತು ಹೊರಗಡೆ ತಿನ್ನಲು ಹೋದಾಗ, ಮೊದಲೆಲ್ಲಾ ಮಕ್ಕಳು ಮಸಾಲೆ ಪುರಿ ಮತ್ತು ಪಾನಿ ಪುರಿ ಕೇಳುತ್ತಿದ್ದವರು, ಈಗ ಮೋಮೋಸ್ ತಿನ್ನಲು ಹಾತೋರೆಯುತ್ತಾರೆ. ರಸ್ತೆ ಬದಿಗಳಲ್ಲಿ ಕೈಕೆಟುಕುವ ಬೆಲೆಯಲ್ಲಿ ಈಶಾನ್ಯ ಭಾರತೀಯರು ಮೊಮೊಸ್ ಮಾರಾಟ ಮಾಡುತ್ತಾರೆ. ತಿನ್ನುವ ಮೊದಲು ಅದು ಸಸ್ಯಾಹಾರವೋ ಇಲ್ಲವೇ ಮಾಂಸಾಹಾರವೋ ಎಂದು ಪರೀಕ್ಷಿಸಿ ತಿನ್ನುವುದು ಒಳಿತು. ಇನ್ನೂ ಕೆಲವು ಚಾಟ್ ಸೆಂಟರಿನಲ್ಲಿ ಎಂದೋ ಮಾಡಿದ ಮೊಮೋಸ್ ಅನ್ನು ಪ್ರೀಜರ್ನಲ್ಲಿಟ್ಟು ಕೇಳಿದಾಗ ಓವನ್ನಿನಲ್ಲಿ ಬಿಸಿ ಮಾಡಿಕೊಡುತ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ತಂಗಳು ಮೋಮೋಸ್ ತಿನ್ನುವುದರಿಂದ ದೂರ ಉಳಿದರೆ ಒಳಿತು.

One thought on “ವೆಜ್ ಮೋಮೋಸ್

  1. ನಾವು ಮನೆಯಲ್ಲಿ ತಯಾರಿಸಲು ಪ್ರಯತ್ನಿಸುತ್ತೇವೆ.

    Like

Leave a comment