ಭಜರಂಗಿ ಮಹೇಂದ್ರ ಕುಮಾರ್

ಅದು ತೊಂಭತ್ತರ ಕಡೆಯ ದಿನಗಳು ಮತ್ತು ಎರಡು ಸಾವಿರ ಇಸ್ವಿಯ ಆರಂಭದ ದಿನಗಳು. ರಾಜ್ಯದಲ್ಲಿ ಭಜರಂಗ ದಳ ಉಚ್ಛ್ರಾಯ ಸ್ಥಿತಿಯಲ್ಲಿದ್ದ ದಿನಗಳು. ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಲಕ್ಷಾಂತರ ಯುವಕರು ಭಜರಂಗ ದಳಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು. ಅಂತಹ ಯುವಕರಲ್ಲಿ ಚಿಕ್ಕಮಗಳೂರಿನ ಮೂಲದ ಮಹೇಂದ್ರ ಕುಮಾರು ಅತ್ಯಂತ ವೇಗವಾಗಿ ಪ್ರವರ್ಧಮಾನಕ್ಕೆ ಬಂದಂತಹ ಯುವಕ. ತನ್ನ ನಡೆ ನುಡಿ, ವಾಗ್ಪಟುತ್ವತೆ, ಪ್ರಖರ ಹಿಂದುತ್ವ ಮತ್ತು ಉಗ್ರ ಹೋರಾಟದ ಫಲವಾಗಿ ಮಹೇಂದ್ರ ಕುಮಾರ್ ನೋಡ ನೋಡುತ್ತಿದ್ದಂತೆಯೇ ಬಜರಂಗದ ರಾಜ್ಯ ಸಂಚಾಲಕರಾಗಿ ಹೋದರು. ಎಲ್ಲೇ ಹಿಂದೂಗಳಿಗೆ ಯಾವುದೇ ತೊಂದರೆ ಯಾದರೂ ಅಲ್ಲಿಯ ಪ್ರತಿಭಟನೆಗಳಲ್ಲಿ ಮಹೇಂದ್ರ ಕುಮಾರ್ ಮುಂದಾಳತ್ವ ಇರುತ್ತಿತ್ತು ಇಲ್ಲವೇ ಅವರ ಮಾರ್ಗದರ್ಶನದಲ್ಲಿಯೇ ನಡೆಯುತ್ತಿತ್ತು. ಬಾಬಾಬುಡನ್ ಗಿರಿ ದತ್ತ ಮಾಲೆಯ ಹೋರಾಟದಲ್ಲೂ ಪ್ರಮುಖಪಾತ್ರ ವಹಿಸಿ ಅತ್ಯಂತ ಕಡಿಮೆ ಸಮಯದಲ್ಲಿಯೇ ಒಳ್ಳೆಯ ಖ್ಯಾತಿ ಮತ್ತು ಕುಖ್ಯಾತಿ ಎರಡನ್ನೂ ಗಳಿಸಿದ್ದರು

mh1ಏರುವನು ರವಿ ಏರುವನು. ಬಾನೊಳು ಸಣ್ಣಗೆ ತೋರುವನು. ಏರಿದವ ಚಿಕ್ಕವನಿರಲೇ ಬೇಕೆಂಬ ಮಾತನು ಸಾರುವನು ರವಿ ಸಾರುವನು ಎನ್ನುವಂತೆ ಉನ್ನತ ಪದವಿಗೆ ಏರುತ್ತಿದ್ದಂತೆ ವಿನಯವೂ ಅದರ ಜೊತೆಗೆ ಹೆಚ್ಚಾಗಬೇಕಿತ್ತು. ಆದರೆ ಯಾವಾಗ ಸಂಘಟನೆಯಿಂದಾಗಿ ತಾನು ಬೆಳೆದೆ ಎಂಬುದನ್ನು ಮರೆತು, ನನ್ನಿಂದಲೇ ಸಂಘಟನೆ ಬೆಳೆಯಿತು ಎಂಬ ಅಹಂಕಾರ ತೋರತೊಡಗಿದರೋ ಅಂದಿನಿಂದಲೇ, ಅವರ ಖ್ಯಾತಿ ಬೆಳೆದಷ್ಟೇ ವೇಗದಲ್ಲಿ ಇಳಿಯ ತೊಡಗಿತು. ಸಂಘಟನೆಯನ್ನು ತಮ್ಮ ವಯಕ್ತಿಕಕಾರಣಗಳಿಗೆ ದುರ್ಬಳಕೆ ಮಾಡಿಕೊಂಡ ಆರೋಪ ಕೇಳಿಬಂತು. ಗಳಿಸಿರುವ ಖ್ಯಾತಿಯಿಂದ ರಾಜಕೀಯಕ್ಕೆ ಧುಮುಕಿ ಹೇಗಾದರೂ ಮಾಡಿ ಅಧಿಕಾರ ಗಳಿಸಬೇಕೆಂಬ ಹಪಾಹಪಿಗೆ ಬಿದ್ದು. ತಾವೇ ಕಟ್ಟಿ ಬೆಳೆಸಿದ ಬಜರಂಗದಳದ ಸಂಘಟನೆಯಿಂದ ದೂರವಾಗ ತೊಡಗಿದರು. ಸಂಘಟನೆಯಿಂದ ದೂರ ಸರಿದರೆ ಪರವಾಗಿಲ್ಲ. ಆದರೆ ಯಾವಾಗ ಅಧಿಕಾರಕ್ಕಾಗಿ ಯಾವು ನಂಬಿದ್ದ ಸಿದ್ಧಾಂತಗಳಿಗೇ ತಿಲಾಂಜಲಿ ಇತ್ತು , ಸಂಘ ಪರಿವಾರವನ್ನು ಹಿಂದೂಗಳ ಆಚರಣೆಗಳನ್ನು ಉಗ್ರವಾಗಿ ವಿರೋಧಿಸತೋಡಗಿದರೋ ಆಗ ಅವರ ನಿಜವಾದ ಬಣ್ಣ ಬಯಲಿಗೆ ಬಂದಿತ್ತು. ಜೊತೆಗಿದ್ದ ನಂಬಿಕಸ್ತ ಜೊತೆಗಾರರೆಲ್ಲರೂ ಇವರ ಗೊಸುಂಬೆ ತನಕ್ಕೆ ಬೇಸತ್ತು ದೂರವಾದರು. ಇನ್ನು ಆವರನ್ನು ಬಳೆಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳಬಹುದು ಎಂದು ಅವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ರಾಜ್ಯಮಟ್ಟದ ಅಧಿಕಾರವನ್ನು ನೀಡಿದ್ದ ಪ್ರಾದೇಶೀಕ ಪಕ್ಷವೂ ಇವರಿಂದ ತಮ್ಮ ಪಕ್ಷಕ್ಕೆ ಯಾವ ಲಾಭವೂ ಇಲ್ಲ ಎಂದು ತಿಳಿಯುತ್ತಲೇ, ಅವರನ್ನು ಕಾಲ ಕಸಕ್ಕಿಂತಲೂ ಕೀಳಾಗಿ ನೋಡುತ್ತಾ ಅವರನ್ನು ಸದ್ದಿಲ್ಲದೇ ಮೂಲೆಗೆ ತಳ್ಳಿದ್ದು ಅವರಿಗೆ ತಡೆಯಲಾರದ ದುಃಖ ಸಂಗತಿಯಾಗಿತ್ತು.

mh3ಯಾವ ವ್ಯಕ್ತಿ ಎಲ್ಲೆಲ್ಲಿ ಹಿಂದೂಗಳಿಗೆ ನೋವಾದಾಗ ಅವರ ಪರ ಸ್ಪಂದಿಸುತ್ತಿದ್ದರೋ ಅದೇ ವ್ಯಕ್ತಿ ಈಗ ಅದೇ ಹಿಂದೂಗಳ ವಿರುದ್ಧ ಎಲ್ಲೆಲ್ಲಿ ಪ್ರತಿಭಟನೆ ನಡೆದರೂ ತನ್ನ ಅಸ್ತಿತ್ವಕ್ಕಾಗಿ ಮತ್ತು ಅಸ್ಮಿತೆಗಾಗಿ ಆಯೋಜಕರು ಕರೆಯದಿದ್ದರೂ ತಾನೇ ಹೋಗಿ ಪ್ರತಿಭಟನೆ ಮಾಡುವಂತಹ ಪರಿಸ್ಥಿತಿಯನ್ನು ತಾನೇ ತಂದುಕೊಂಡರು. ಹಿಂದೂಗಳ ವಿರುದ್ಧದ ಕುರಿತು ಟಿವಿಯಲ್ಲಿ ಯಾವುದೇ ಚರ್ಚೆಗಳು ನಡೆದರೂ ಅದರಲ್ಲಿ ಭಾಗವಹಿಸುತ್ತಿದ್ದದ್ದು ಎಲ್ಲರಿಗೂ ಅಸಹ್ಯ ಮೂಡಿಸಿ ಮಹೇಂದ್ರ ಕುಮಾರರನ್ನು ಅಕ್ಷರಶಃ ಒಬ್ಬಂಟಿಯನ್ನಾಗಿ ಮಾಡಿಬಿಟ್ಟಿದ್ದರು ಇತ್ತೀಚೆಗೆ ನಡೆದ CAA & NRC ಪ್ರತಿಭಟನೆಗಳಲ್ಲಿಯೂ ಒಂದು ಕೋಮಿನ ಪರವಾಗಿ ನಿಂತಿದ್ದು ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದರೂ ಅರೇ, ಒಬ್ಬ ಪ್ರಖರ ಹಿಂದೂವಾಗಿ, ಅಧಿಕಾರದ ಲಾಲಸೆಯಿಂದಾಗಿ ಹಿಂದೂಗಳ ವಿರುದ್ಧವೇ ಮಾತನಾಡುವ ಇಂತಹ ವ್ಯಕ್ತಿ ನಂಬಿಕೆಗೆ ಅರ್ಹನಲ್ಲ ಎಂಬುದನ್ನು ಬಹಿರಂಗವಾಗಿಯೇ ಹೇಳತೊಡಗಿದಾಗ ಈ ವ್ಯಕ್ತಿಗೆ ಭ್ರಮನಿರಸನವಾಗ ತೊಡಗಿತು. ಆ ವ್ಯಕ್ತಿ ಮಾನಸಿಕವಾಗಿ ಕುಗ್ಗುತ್ತಾ ಅದೇ ನೋವಿನಲ್ಲಿಯೇ ಇಂದು ಬೆಳಗಿನ ಜಾವ ತಮ್ಮ 47 ನೇ ವಯಸ್ಸಿನಲ್ಲಿಯೇ ಅಚಾನಕ್ಕಾಗಿ ಹೃದಯಾಘಾತಕ್ಕೆ ಒಳಗಾಗಿ ಮತ್ತೆ ಬಾರದಿರುವ ಲೋಕಕ್ಕೆ ಹೋಗಿರುವುದು ನಿಜಕ್ಕೂ ದುಃಖಕರವಾದ ವಿಷಯ.

mh4ಹೋದವರೆಲ್ಲ ಒಳ್ಳೆಯವರು ಹರಸೋ ಹಿರಿಯರು ಎನ್ನುವಂತೆ ಸತ್ತ ಮೇಲೆ ಯಾರನ್ನೂ ದ್ವೇಷಿಸಬಾರದು. ಸಾವನ್ನು ಸಂಭ್ರಮಿಸುವ ಸಂಸ್ಕಾರವೂ ನಮ್ಮದಲ್ಲ. ಆದರೆ ಮಹೇಂದ್ರ ಕುಮಾರ್ ಅವರಂತಹ ವ್ಯಕ್ತಿಗಳ ಜೀವನದ ಏರಿಳಿತ ಖಂಡಿತವಾಗಿಯೂ, ಅನೇಕ ಸಂಘಟನೆಗಳಲ್ಲಿ ಕ್ಷಿಪ್ರವಾಗಿ ಬೆಳೆದು ಅಧಿಕಾರ ಗಳಿಸ ಬೇಕೆಂದು ಬಯಸುವ ಅನೇಕ ಯುವ ಜನತೆಗೆ ಪಾಠವನ್ನಂತೂ ಕಲಿಸುತ್ತದೆ ಎಂಬುದು ಸುಳ್ಳಲ್ಲ. ಮೃತರ ಆತ್ಮಕ್ಕೆ ಆ ಭಗವಂತ ಚಿರಶಾಂತಿಯನ್ನು ಕೊಡಲಿ ಎಂದು ಪ್ರಾರ್ಥಿಸೋಣ.

ಏನಂತೀರೀ?

One thought on “ಭಜರಂಗಿ ಮಹೇಂದ್ರ ಕುಮಾರ್

  1. ಮಹೇಂದ್ರರ ಮನಸ್ಸಿನ ಕೊರಗು ಈ ಸ್ಥಿತಿಗೆ ಕಾರಣವೆನಿಸುತ್ತೆ. ಮನಸ್ಸಿನಲ್ಲಿ ಅಧಿಕಾರ ದಾಹ ಇಟ್ಟುಕೊಂಡು ಅದು ಈಡೇರದೇ ಸಮಾಜದ , ಗೆಳೆಯರ ವಿರೋಧ , ಸತ್ಯವನ್ನು ಒಪ್ಪಿಕೊಳ್ಳದ ಸ್ಥಿತಿ ಇವರದ್ದಾಗಿತ್ತು.ಹಾಗಾಗಿಯೇ ಸಾವನ್ನಪ್ಪಿದರು. ಇವರು ಒಳ್ಳೆಯ ಮಾತುಗಾರರಾಗಿದ್ದರು. ಅವರ ಆತ್ಮಕ್ಕೆ ಶಾಂತಿಸಿಗಲಿ…

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s