ಮನುಷ್ಯರು ನೆಮ್ಮದಿಯಾಗಿ ಜೀವನವನ್ನು ನಡೆಸಲು ತಿನ್ನಲು ಕನಿಷ್ಟ ಪಕ್ಷ ಎರಡು ಹೊತ್ತಿನ ಊಟ, ಮೈ ಮತ್ತು ಮಾನ ಮುಚ್ಚಿಕೊಳ್ಳಲು ಬಟ್ಟೆ ಮತ್ತು ಛಳಿ, ಗಾಳಿ, ಮಳೆ ಮತ್ತು ಬಿಸಿಲುಗಳಿಂದ ತಪ್ಪಿಸಿಕೊಳ್ಳಲು ಒಂದು ಮನೆ ಇದ್ದರೆ ಸಾಕು. ಭಾರತದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈಗ ಎತ್ತರೆತ್ತರದ ಗಗನಚುಂಬಿ ಕಟ್ಟಡಗಳನ್ನೇ ಕಾಣುತ್ತಿರುವ ಈ ಸಂಧರ್ಭದಲ್ಲಿ ಒಂದನೇ ವಿಶ್ವ ಸಮರದ ಆರಂಭದಲ್ಲಿ ಬೆಂಗಳೂರಿನ ಆಸ್ಟಿನ್ ಟೌನ್ ನಲ್ಲಿ ವಿಶಿಷ್ಟವಾಗಿ ಕಟ್ಟಲಾಗಿದ್ದ ನಿಸಾನ್ ಮನೆಗಳ ಕುರಿತಾಗಿ ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಮೊದಲನೇ ವಿಶ್ವಯುದ್ದದ ಸಮಯದಲ್ಲಿ ಯುದ್ಧ ಭೂಮಿಯಲ್ಲಿ ಅಥವಾ ಇತರೆಡೆಗಳಲ್ಲಿದ್ದ ಯೋಧರಿಗೆ ವಿಶ್ರಾಂತಿಗೆ, ಚಿಕಿತ್ಸೆಗೆ, ಸೈನ್ಯಕ್ಕೆ ಅವಶ್ಯಕವಿದ್ದ ಯುದ್ಧಸಾಮಗ್ರಿಗಳು ಮತ್ತು ಆಹಾರ ಸಾಮಾಗ್ರಿಗಳನ್ನು ಸಂಗ್ರಹಿಸುವ ಸಲುವಾಗಿ ತ್ವರಿತವಾಗಿ ಸರಳ ಖರ್ಚಿನಲ್ಲಿ ಮತ್ತು ಮರುಬಳಕೆ ಮಾಡಬಹುದಾದಂತಹ ಮನೆಗಳ ಅವಶ್ಯಕತೆ ಇದ್ದಂತಹ ಸಂಧರ್ಭದಲ್ಲಿ ಬ್ರಿಟಿಷ್ ಸೈನ್ಯದ ಅಧಿಕಾರಿ ಮೇಜರ್ ಪೀಟರ್ ನಿಸ್ಸೆನ್ ಅವರು ಎಂದಿನ ಗುಡಿಸಲು ಅಥಾವಾ ಸಾಂಪ್ರಾಂದಾಯಕ ಮನೆಗಳ ಹೊರತಾಗಿ ಸರಳವಾಗಿ ಸುಕ್ಕುಗಟ್ಟಿದ ತಗಡನ್ನು ಬಳಸಿ ತಯಾರಿಸಲಾದ ಅರೆ-ವೃತ್ತಾಕಾರದ ರಚನೆಯ ಬಂಕರ್ ಅಥವಾ ಶೆಟ್ ರೀತಿಯಲ್ಲಿ ವಿನ್ಯಾಸಗೊಳಿಸಿದರು. ಇವುಗಳು ಅರ್ಧ ಸಿಲಿಂಡರಾಕಾರದ ಮನೆಗಳಾಗಿದ್ದು ಸುಮಾರು ನಾಲ್ಕೈದು ಜನರ ಸಹಾಯದಿಂದ ಕೇವೆಲ ಮೂರ್ನಾಲ್ಕು ಗಂಟೆಗಳಲ್ಲಿ ನಿರ್ಮಾಣ ಮಾಡಿದ ನಂತರ ಅದರೊಳಗೆ ಇರುವ ಸೈನಿಕರನ್ನು ಮಳೆ ಗಾಳೀ ಬಿಸಿಲುಗಳಿಂದ ರಕ್ಷಿಸುತಿದ್ದಲ್ಲದೆ, ಬೇಡವೆನಿಸಿದಾಗ ಸುಲಭವಾಗಿ ಅವುಗಳನ್ನು ವಿಭಜಿಸಿ ಮತ್ತೆ ಮತ್ತೊಂದು ಕಡೆ ಅದೇ ರೀತಿಯ ಮನೆಗಳನ್ನು ನಿರ್ಮಿಸಬಹುದಾಗಿತ್ತು.
1916 ರ ಏಪ್ರಿಲ್ 16 ಮತ್ತು 18 ರ ನಡುವೆ, ಬ್ರಿಟಿಷ್ ಸೈನ್ಯದ 29 ನೇ ಕಂಪನಿ ರಾಯಲ್ ಇಂಜಿನಿಯರ್ಸ್‌ನ ಮೇಜರ್ ಪೀಟರ್ ನಾರ್ಮನ್ ನಿಸ್ಸೆನ್ ತಮ್ಮ ಈ ಗುಡಿಸಲು ವಿನ್ಯಾಸಗಳೊಂದಿಗೆ ಪ್ರಯೋಗವನ್ನು ಪ್ರಾರಂಭಿಸಿದರು. ನಿಸ್ಸೆನ್, ಗಣಿಗಾರಿಕೆ ಇಂಜಿನಿಯರ್ ಮತ್ತು ಸಂಶೋಧಕ, ಮೂರು ಮೂಲಮಾದರಿ ಅರೆ ಸಿಲಿಂಡರಾಕಾರದ ಗುಡಿಸಲುಗಳನ್ನು ನಿರ್ಮಿಸಿದರು. ಅರೆ-ಸಿಲಿಂಡರಾಕಾರದ ಆಕಾರವನ್ನು ಒಂಟಾರಿಯೊದ ಕಿಂಗ್‌ಸ್ಟನ್‌ನ ಕ್ವೀನ್ಸ್ ವಿಶ್ವವಿದ್ಯಾನಿಲಯದಲ್ಲಿನ ಡ್ರಿಲ್-ಶೆಡ್ ಛಾವಣಿಯಿಂದ ಪ್ರೇರಣೆ ಪಡೆಯಾಗಿದ್ದು, ಈ ರೀತಿಯ ಗುಡಿಸಲಿನ ವಿನ್ಯಾಸವು ಅವರ ಸಹ ಅಧಿಕಾರಿಗಳಾದ ಶೆಲ್ಲಿ, ಸೆವೆಲ್ ಮತ್ತು ಮೆಕ್‌ಡೊನಾಲ್ಡ್ ಮತ್ತಿತರ ಲೆಫ್ಟಿನೆಂಟ್ ಕರ್ನಲ್‌ಗಳಿಂದ ತೀವ್ರ ಪರಿಶೀಲನೆಗೆ ಒಳಪಟ್ಟು ಮೂಲ ಮಾದರಿಯು ಪೂರ್ಣಗೊಂಡ ನಂತರ, ವಿನ್ಯಾಸವನ್ನು ಔಪಚಾರಿಕಗೊಳಿಸಿ, ಆಗಸ್ಟ್ 1916 ರಲ್ಲಿ ನಿಸ್ಸೆನ್ ಗುಡಿಸಲು ಉತ್ಪಾದನೆಗೆ ಒಳಪಡಿಸಲಾಯಿತು. ಇಂತಹ ಮನೆಗಳು ತ್ವರಿತವಾಗಿ, ಸುಲಭವಾಗಿ ಮತ್ತು ಜೋಡಿಸಲು ಅಗ್ಗವಾಗಿದ್ದಲ್ಲದೇ ಹಲವಾರು ಉದ್ದೇಶಗಳಿಗಾಗಿ ಹೊಂದಿಕೊಳ್ಳಬಲ್ಲಂತೆ ಇದ್ದದ್ದರಿಂದ, ಕೆಲವೇ ಸಮಯದಲ್ಲಿ ಅತ್ಯಂತ ಜನಪ್ರಿಯವಾಯಿತು. ಮೇಜರ್ ನಿಸ್ಸೆನ್ ಅವರು ಈ ರೀತಿಯ ಮನೆಗಳನ್ನು ವಿನ್ಯಾಸಗೊಳಿಸಿದ್ದ ಕಾರಣ, ಸಹಜವಾಗಿಯೇ ಈ ರೀತಿಯ ಮನೆಗಳು ನಿಸಾನ್ ಮನೆಗಳೆಂದೇ ಪ್ರಸಿದ್ಧಿ ಪಡೆದಿದ್ದಲ್ಲದೇ ಮೊದಲ ವಿಶ್ವ ಯುದ್ಧದ ಸಮಯದಲ್ಲೇ ವಿಶ್ವಾದ್ಯಂತ ಕನಿಷ್ಠ ಪಕ್ಷ 1,00,000 ಮನೆಗಳನ್ನು ಉತ್ಪಾದಿಸಲಾಯಿತು.
1916 ರಲ್ಲಿ ನಿಸ್ಸೆನ್ ಇಂಗ್ಲೇಂಡಿನಲ್ಲಿ ತಮ್ಮೀ ಆವಿಷ್ಕಾರಕ್ಕೆ ಪೇಟೆಂಟ್ ಪಡೆದು ನಂತರ ಅಮೇರಿಕಾ, ಕೆನಡಾ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾಗಳಲ್ಲಿಯೂ ಪೇಟೆಂಟ್‌ಗಳನ್ನು ಪಡೆದುಕೊಂಡು. ಯುದ್ದದ ಸಮಯದಲ್ಲಿ ಬ್ರಿಟಿಷ್ ಸೈನಿಕರ ಅನುಕೂಲಕ್ಕೆಂದು ಈ ರೀತಿಯ ಮನೆಗಳನ್ನು ನಿರ್ಮಿಸಿ ಯುದ್ದಾ ನಂತರ ಆ ಮನೆಗಳನ್ನು ಗೃಹಪೋಯೋಗಿ ಮತ್ತು ವಾಣಿಜ್ಯ ಬಳಕೆಗಾಗಿ ಮಾರಿಕೊಂಡಿದ್ದ ಕಾರಣ, ನಿಸ್ಸೆನ್ ಬ್ರಿಟಿಷ್ ಸರ್ಕಾರದಿಂದಲೂ ರಾಯಧನವನ್ನು ಪಡೆದಿದ್ದರು.
ಗುಡಿಸಲಿನ ವಿನ್ಯಾಸದ ಮೇಲೆ ಎರಡು ಅಂಶಗಳು ಪ್ರಭಾವ ಬೀರಿವೆ. ಮೊದಲನೆಯದಾಗಿ, ಕಟ್ಟಡವು ವಸ್ತುಗಳ ಬಳಕೆಯಲ್ಲಿ ಆರ್ಥಿಕವಾಗಿರಬೇಕು, ವಿಶೇಷವಾಗಿ ಕಟ್ಟಡ ಸಾಮಗ್ರಿಗಳ ಯುದ್ಧಕಾಲದ ಕೊರತೆಯನ್ನು ಪರಿಗಣಿಸಿ. ಎರಡನೆಯದಾಗಿ, ಕಟ್ಟಡವು ಪೋರ್ಟಬಲ್ ಆಗಿರಬೇಕು. ಹಡಗು ಸ್ಥಳಾವಕಾಶದ ಯುದ್ಧಕಾಲದ ಕೊರತೆಯ ದೃಷ್ಟಿಯಿಂದ ಇದು ವಿಶೇಷವಾಗಿ ಮುಖ್ಯವಾಗಿತ್ತು. ಇದು ಸರಳವಾದ ರೂಪಕ್ಕೆ ಕಾರಣವಾಯಿತು, ಇದು ನಿರ್ಮಾಣ ಮತ್ತು ತೆಗೆದುಹಾಕುವಿಕೆಯ ಸುಲಭಕ್ಕಾಗಿ ಪೂರ್ವನಿರ್ಮಿತವಾಗಿದ್ದು, ಗುಡಿಸಲಿನ ಪರಿಕರಗಳನ್ನು ಸ್ಟ್ಯಾಂಡರ್ಡ್ ಆರ್ಮಿ ವ್ಯಾಗನ್‌ನಲ್ಲಿ ಪ್ಯಾಕ್ ಮಾಡಿ ತೆಗೆದುಕೊಂಡು ಹೋಗಿ ಅಗತ್ಯ ಇದ್ದ ಕಡೇ ಆರು ಜನರ ಸಹಾಯದಿಂದ ಕೇವಲ ನಾಲ್ಕು ಗಂಟೆಗಳಲ್ಲಿ ನಿರ್ಮಿಸಬಹುದಾಗಿತ್ತು. ಅದೊಮ್ಮೆ ಕೇವಲ 1 ಗಂಟೆ 27 ನಿಮಿಷಗಳಲ್ಲಿ ಈ ರೀತಿಯ ಮನೆಯನು ನಿರ್ಮಿಸಿ, ವಿಶ್ವ ದಾಖಲೆಯನ್ನೂ ಸ್ಥಾಪಿಸಲಾಗಿತ್ತು. ನಿಸ್ಸೆನ್ ಬಿಲ್ಡಿಂಗ್ಸ್ ಲಿಮಿಟೆಡ್ ಎರಡನೇ ಮಹಾಯುದ್ಧದ ಸಮಯದಲ್ಲಿ (1939-45) ಯುದ್ಧಕಾಲದ ಉತ್ಪಾದನೆಗೆ ತನ್ನ ಪೇಟೆಂಟ್ ಹಕ್ಕುಗಳನ್ನು ಬಿಟ್ಟುಕೊಟ್ಟಿದ್ದದ್ದು ನಿಜಕ್ಕೂ ಶ್ಲಾಘನೀಯವಾಗಿತ್ತು. ನಿಸ್ಸಾನ್ ಆವರ ಈ ಸಾಧನೆಗಾಗಿ 1917 ರಲ್ಲಿ ಹೊಸ ವರ್ಷಕ್ಕೆ ಕೊಡಲಾಗುತ್ತಿದ್ದ ಡಿಸ್ಟಿಂಗ್ವಿಶ್ಡ್ ಸರ್ವೀಸ್ ಆರ್ಡರ್ ಅನ್ನು ಬ್ರಿಟೀಷ್ ಸರ್ಕಾರ ನಿಡಿದ್ದಲ್ಲದೇ, 1919 ರಲ್ಲಿ ಸೆರ್ಬಿಯಾದಿಂದ ಆರ್ಡರ್ ಆಫ್ ಸೇಂಟ್ ಸಾವಾ ಎಂಬ ಪ್ರಶಸ್ತಿಗೂ ಭಾಜನರಾಗಿದ್ದರು. ಮೊದಲನೇ ಮಹಾ ಯುದ್ಧದ ನಂತರ ಅವರು ಲೆಫ್ಟಿನೆಂಟ್ ಕರ್ನಲ್ ಹುದ್ದೆಯೊಂದಿಗೆ ಸೈನ್ಯವನ್ನು ತೊರೆದು ವಿಶ್ರಾಂತ ಜೀವನ ನಡೆಸುತ್ತಾ, ಮಾರ್ಚ್ 2, 1930ರಂದು ಲಂಡನ್ನಿನಲ್ಲಿ ವಯೋಸಹಜವಾಗಿ ಮರಣಹೊಂದಿದರು.
ಮೊದಲ ವಿಶ್ವ ಯುದ್ದದ ಸಮಯದಲ್ಲೇ ಬೆಂಗಳೂರಿನ ಆಸ್ಟಿನ್ ಟೌನ್‌ನಲ್ಲಿರುವ ಪಾಮ್‌ಗ್ರೋವ್ ರಸ್ತೆಯಲ್ಲಿಯೂ ಸಹಾ ಬ್ರಿಟೀಷರು, ಸುಮಾರು 40 ನಿಸ್ಸಾನ್ ಮನೆಗಳನ್ನು ಆರಂಭದಲ್ಲಿ ಬ್ರಿಟಿಷರ ಸೈನ್ಯದ ಕುದುರೆಗಳಿಗಾಗಿ ನಿರ್ಮಿಸಿದರಾದರೂ ನಂತರದ ದಿನಗಳಲ್ಲಿ ಬ್ರಿಟೀಷರ ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದಂತಹ ಸಿಬ್ಬಂದ್ಧಿಗಳಿಗೆ ಬಾಡಿಗೆಗೆ ನೀಡಲಾಯಿತು. ಸ್ವಾತ್ರಂತ್ರ್ಯಾನಂತರ ಆ ಮನೆಯ ಬಾಡಿಗೆ 5 ರೂಪಾಯಿಗಳಿಗೆ ಏರಿಸಲಾಗಿತ್ತಾದರೂ ನಂತರದ ದಿನಗಳಲ್ಲಿ ಆ ಮನೆಗಳನ್ನು ಅಲ್ಲಿನ ನಿವಾಸಿಗಳೇ ಸರ್ಕಾರದಿಂದ ಕೊಂಡು ಕೊಂಡು ಅಲ್ಲೇ ವಾಸಿಸತೊಡಗಿದರು.
ಇಂದು ಆ ಸ್ಥಳದಲ್ಲಿ ಕೇವಲ ನಿಸಾನ್ ಮನೆಗಳು ಎಂಬ ದೊಡ್ಡದಾದ ನಾಮಫಲಕದ ಹೊರತಾಗಿ ಸುಮಾರು ಮನೆಗಳು ಅಳಿದು ಹೋಗಿದ್ದರೆ, ಕೇವಲ ಬೆರಳೆಣಿಕೆಯಷ್ಟು ಮನೆಗಳು ಇನ್ನೂ ಉಳಿದಿವೆ. ಇನ್ನು ಹಳೆಯ ನಿಸ್ಸಾನ್ ಮನೆಗಳು ಇದ್ದ ಜಾಗದಲ್ಲಿ ಆಧುನಿಕ ಐಶಾರಾಮ್ಯ ಮನೆಗಳು ತಲೆ ಎತ್ತಿವೆ.
ಇದೇ ರೀತಿಯ ಮನೆಗಳನ್ನು ಕೋಲಾರದ ಚಿನ್ನದ ಗಣಿ ಪ್ರದೇಶ ಅರ್ಥಾತ್ ಕೆಜಿಎಫ್ ಗಳಲ್ಲಿಯೂ ಕಾಣಬಹುದಾಗಿದ್ದು, ಆ ಕಟ್ಟಡಗಳಲ್ಲಿ ಪೋಲೀಸ್ ಕಛೇರಿ ಮತ್ತು ಅಲ್ಲಿನ ಸಿಬ್ಬಂದ್ಧಿಗಳು ಇತ್ತೀಚಿನವರೆವಿಗೂ ವಾಸಿಸುತ್ತಿದ್ದು ಚಿನ್ನದ ಗಣಿಗಳು ಎಲ್ಲವೂ ಮುಚ್ಚಿಹೋದ ನಂತರ ಆ ಮನೆಗಳಲ್ಲಿ ಇದ್ದವರೆಲ್ಲರೂ ಬೇರೇ ಕಡೆ ಗುಳೇ ಹೋದ ಕಾರಣ, ಆ ಮನೆಗಳು ಪಾಳು ಬಿದ್ದು ಹೋಗಿರುವುದನ್ನು ಕಾಣಬಹುದಾಗಿದೆ.
ಬೆಂಗಳೂರು ನಗರ ಕೇವಲ ಉದ್ಯಾನ ನಗರಿಯಿಂದ ಸಿಲಿಕಾನ್ ನಗರಿಯಾಗಿ ನಂತರದ ದಿನಗಳಲ್ಲಿ ಪಬ್ ನಗರಿ ಎಂಬ ಕುಖ್ಯಾತಿಯನ್ನೂ ಪಡೆದಿರುವುದಷ್ಟೇ ಅಲ್ಲದೇ, ಇಂತಹ ಅನೇಕ ಕೌತುಕಗಳನ್ನು ತನ್ನ ಒಡಲಾಳದಲ್ಲಿ ಇಟ್ಟುಕೊಂಡಿರುವುದು ಅಚ್ಚರಿಯನ್ನು ಮೂಡಿಸುತ್ತದೇ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ, ಉಮಾಸುತ
ಈ ಲೇಖನದಲ್ಲಿ ಬಳಸಿಕೊಂಡಿರುವ ಪೋಟೋಗಳು ಇಂಟರ್ನೆಟ್ ನಿಂದ ಬಳಿಸಿಕೊಳ್ಳಲಾಗಿದ್ದು, ಅವುಗಳ ಸಂಪೂರ್ಣ ಹಕ್ಕುಗಳು ಮೂಲ ಛಾಯಾಗ್ರಾಹಕರದ್ದಾಗಿರುತ್ತದೆ.
Good information
LikeLiked by 1 person
The photographs are not from internet and taken by Mr Shyam Kodavarthi. You have no right to use them – you should have taken his permission before using them. Just by putting a disclaimer doesn’t absolve of stealing content
LikeLike
ಸರ್ ಈ ವಿಷಯ ಮುಖಪುಟದಲ್ಲಿ ತಿಳಿದು ಬಂದ ಕೂಡಲೇ ಅವರೊಂದಿಗೆ ಮುಖಪುಟಲ್ಲೇ ಕ್ಷಮೆಕೋರಿ ಅವರು ಪೋಟೋಗಳನ್ನು ಲೇಖನದಿಂದ ತೆಗೆದುಹಾಕಿದ್ದೇನೆ.
ಹಾಗಾಗಿ ಈ ವಿಷಯ ಸುಖಾಂತ್ಯವಾಗಿದ್ದು ತಮ್ಮ ಕಾಳಜಿಗಾಗಿ ಅಭಿನಂದನೆಗಳು. ನಿಮಗೆ ಶುಭವಾಗಲಿ
LikeLike
ಈ ತರಹದ ಮನೆಗಳನ್ನು ನೋಡಿದ್ದರೂ ಅಂತಹ ಕುತೂಹಲವನ್ನೇನೂ ಉಂಟು ಮಾಡಿರಲಿಲ್ಲ. ವಿವರಪೂರ್ಣ ಲೇಖನ, ಧನ್ಯವಾದಗಳು. ಯಾರೂ ತಲೆಕೆಡಿಸಿಕೊಳ್ಳದ ವಿಷಯದ ಜಾಡು ಹಿಡಿದು ತಳಸೋಸುವ ತಮ್ಮ ವಿಶೇಷ ಪ್ರವೃತ್ತಿಗೆ ಮತ್ತೊಮ್ಮೆ ಧನ್ಯವಾದಗಳು. 🙏🙏
LikeLiked by 1 person
ಧನ್ಯೋಸ್ಮಿ. ಇಂತಹ ಕುತೂಹಲಕಾರಿ ವಿಷಯವೇ ಮನಸ್ಸಿಗೆ ನೆಮ್ಮದಿ ಕೊಡುತ್ತದೆ
LikeLike
1970 ರ ದಶಕದವರೆವಿಗೂ ಬಿ ಇ ಎಲ್ ನ ನಾಗಾಲ್ಯಾಂಡ್ ಕಾಲೋನಿಯಲ್ಲೂ ನಿಸಾನ್ ಮನೆಗಳಿದ್ದವು.
LikeLiked by 1 person
ಓಹ್!! ಇದು ನನಗೆ ತಿಳಿಯದಿದ್ದ ಹೊಸಾ ವಿಷಯ
LikeLike