ಕಾಶ್ಮೀರದ 370ನೇ ವಿಧಿಯ ನಿರ್ಭಂಧ ಊರ್ಜಿತ

modi_Shaಸ್ವಾತ್ರಂತ್ರ್ಯಾ ನಂತರ ಕಾಶ್ಮೀರಿಗರಿಗೆ 370ನೇ ವಿಧಿಯ ಮೂಲಕ ನೀಡಿದ್ದ ವಿಶೇಷವಾದ ಸೌಲಭ್ಯಗಳನ್ನು ದುರುಪಯೋಗ ಪಡಿಸಿಕೊಂಡು ದೇಶವಿರೋಧಿ ಕೃತ್ಯಗಳಲ್ಲಿ ಭಾಗಿಗಳಾಗುತ್ತಿದ್ದದ್ದಲ್ಲದೇ, ದೇಶ ವಿಭಜನೆಗಾಗಿ ಹವಣಿಸುತ್ತಿದ್ದ ಕೆಲ ಪಟ್ಟಭದ್ರ ಹಿತಾಸಕ್ತಿಗಳನ್ನು ಗಮನಿಸಿದ ಪ್ರಸ್ತುತ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಮತ್ತು ಗೃಹ‍ಸಚಿವರಾದ ಶ್ರೀ ಅಮಿತ್ ಶಾ ಅವರುಗಳು ಕಾಶ್ಮೀಗರಿಗೆ ತಾತ್ಕಾಲಿಕವಾಗಿ ಎಂದು ನೀಡಿದ್ದ ಸಂವಿಧಾನಾತ್ಮಕ 370ನೇ ವಿಧಿಯನ್ನು ಆಗಸ್ಟ್ 5, 2019 ರಂದು ರದ್ದುಗೊಳಿಸಿದ್ದರ ವಿರುದ್ಧ ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಹೂಡಿದ್ದ ಕೇಸಿನಲ್ಲಿ ಇಂದು ಅಂತಿಮ ತೀರ್ಮಾನ ಹೊರಡಿಸಲಾಗಿದ್ದು. ನ್ಯಾಯಾಲಯವು ಭಾರತ ಸರ್ಕಾರ ತೆಗೆದುಕೊಂಡಿದ್ದ ನಿರ್ಣಯವನ್ನು ಎತ್ತಿ ಹಿಡಿಯುವ ಮೂಲಕ, ಕಾಶ್ಮೀರದ ಭಾಗ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಸಾಭೀತು ಮಾಡುವ ಮೂಲಕ ದೇಶ ವಿರೋಧಿ ಕೃತ್ಯಗಳನ್ನು ನಡೆಸುತ್ತಿದ್ದವರಿಗೆ ಭಾರಿ ಹಿನ್ನಡೆಯಾಗಿದೆ.

hari_singh1947 ಆಗಸ್ಟ್ 15ರಂದು ಭಾರತಕ್ಕೆ ಸ್ವಾತ್ರಂತ್ರ್ಯ ಬಂದಾಗ ಆಗ ಇದ್ದ 565 ರಾಜ್ಯಗಳಿಗೆ ಭಾರತ ಇಲ್ಲವೇ ಪಾಕೀಸ್ಥಾನದ ಒಕ್ಕೂಟಕ್ಕೆ ಸೇರಿಕೊಳ್ಳುವ ಅವಕಾಶ ನೀಡಿದಾಗ ಬಹುತೇಕ ರಾಜ್ಯಗಳು ಭಾರತ ಒಕ್ಕೂಟಕ್ಕೆ ಸೇರಿಕೊಳ್ಳಲು ಒಪ್ಪಿಕೊಂಡರೆ, ಅಂದು ಕಾಶ್ಮೀರವನ್ನು ಆಳುತ್ತಿದ್ದ ರಾಜ ಹರಿಸಿಂಗ್ ಭಾರತ ಮತ್ತು ಪಾಕೀಸ್ಥಾನದ ಪರ ಸೇರಿಕೊಳ್ಳದೇ, ತಟಸ್ಥ ನೀತಿ ತಾಳುವ ಮೂಲಕ ಸ್ವತ್ರಂತ್ರ್ಯ ದೇಶವಾಗಿ ಇರಬೇಕೆಂದು ಬಯಸಿದ್ದರು. ದುರಾದೃಷ್ಟವಷಾತ್ ಮಹಾತ್ಮಾ ಗಾಂಧಿಯವರ ಒತ್ತಾಯ ಮೇರೆಗೆ (ಉಪವಾಸ ಸತ್ಯಾಗ್ರಹ ಕೂಡಾ ಮಾಡಿದ್ದರು) ಭಾರತ ನೀಡಿ 50 ಕೋಟಿ ರೂಪಾಯಿಗಳನ್ನು ದೇಶದ ಅಭಿವೃದ್ಧಿಗೆ ಬಳಸಿಕೊಳ್ಳದೇ ಆ ಹಣದಲ್ಲಿ ಶಸ್ತ್ರಾಸ್ತ್ರಗಳನ್ನು ಖರೀಧಿಸಿ ಕಾಶ್ಮೀರದ ಮೇಲೆ ಧಾಳಿ ಮಾಡಲು ಮುಂದಾಗುತ್ತಿದ್ದದ್ದನ್ನು ಗಮನಿಸಿ 26 ಅಕ್ಟೋಬರ್ 1947 ರಂದು ಮಹಾರಾಜ ಹರಿ ಸಿಂಗ್ ಅಧಿಕೃತವಾಗಿ ಭಾರತದ ಒಕ್ಕೂಟಕ್ಕೆ ಸೇರಿಕೊಳ್ಳಲು ಸಹಿಹಾಕಿದ ನಂತರ ಅಂದಿನ ಗೃಹಸಚಿವರಾಗಿದ್ದ ಶ್ರೀ ಸರ್ದಾರ್ ವಲ್ಲಭಾಯಿ ಪಟೇಲ್ ಕೂಡಲೇ ಭಾರತೀಯ ಸೈನ್ಯವನ್ನು ಕಳುಹಿಸಿ ಪಾಕೀಸ್ಥಾನದ ಸೈನ್ಯವನ್ನು ಹಿಮ್ಮೆಟ್ಟಿಸುವ ಮೂಲಕ ಕಾಶ್ಮೀರ ಅಧಿಕೃತವಾಗಿ ಭಾರತದ ಭಾಗವಾಯಿತು.

article1ನಂತರ ಪ್ರಧಾನಿಗಳಾಗಿದ್ದ ಶ್ರೀ ಜವಹರ್ ಲಾಲ್ ನೆಹರು ಮತ್ತು ಅಂದಿನ ಮುಸ್ಲಿಂ ಮುಖಂಡ ಷೇಕ್ ಅಬ್ದುಲ್ಲಾ ಅವರುಗಳು ಬಹುಸಂಖ್ಯಾತ ಕಾಶ್ಮೀರೀ ಪಂಡಿತರ ವಿರೋಧವನ್ನೂ ಲೆಕ್ಕಿಸದೇ ಅಲ್ಪ ಸಂಖ್ಯಾತರ ಓಲೈಕೀರಣಕ್ಕಾಗಿ, ಆರ್ಟಿಕಲ್ 370 ಎಂಬ ವಿಶೇಷವಾದ ಸ್ವಾಯುತ್ತತೆಯನ್ನು ನೀಡದ ಪರಿಣಾಮ, ಭಾರತದ ಸಂಸತ್ತು ಅಂಗೀಕರಿಸಿದ ಕೇಂದ್ರ ಕಾನೂನುಗಳು ಕಾಶ್ಮೀರದಲ್ಲಿ ಜಾರಿಯಾಗದೇ, ಕಾಶ್ಮೀರಕ್ಕೆಂದೇ ಪ್ರತ್ಯೇಕ ಸಂವಿಧಾನ, ಬಾವುಟ ಮತ್ತು ಪ್ರಧಾನಿಗಳನ್ನು ಹೊಂದಿರುವಂತಹ ಕಾನೂನನ್ನು ಜಾರಿಗೊಳಿಸಿದ್ದಲ್ಲದೇ ಭಾರತೀಯರು ಕಾಶ್ಮೀರದಲ್ಲಿ ಯಾವುದೇ ಆಸ್ತಿ ಪಾಸ್ತಿಯನ್ನು ಖರೀಧಿಸುವ ಹಕ್ಕಿಲ್ಲ ಮತ್ತು ಖಾಯಂ ಆಗಿ ನೆಲಸುವಂತಿಲ್ಲ, ಅಲ್ಲಿನ ಸರ್ಕಾರಿ ಕೆಲಸ ಪಡೆಯುವಂತಿಲ್ಲ. ಆದರೇ ಅದೇ ಕಾಶ್ಮೀರಿಗರು ಭಾರತದ ಯಾವುದೇ ಭಾಗದಲ್ಲಿ ಬೇಕಾದರೂ ನೆಲೆಸಬಹುದು ಎಷ್ಟು ಬೇಕಾದರೂ ಆಸ್ತಿಯನ್ನು ಖರೀದಿಸಬಹುದು ಎಂಬ ವಿಶೇಷ ಅಧಿಕಾರವನ್ನು ಪಡೆದಿದ್ದರು.

article4ಸುದೀರ್ಘವಾಗಿ ವಾದ ವಿವಾದಗಳನ್ನು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ. ವೈ. ಚಂದ್ರಚೂಡ ನೇತೃತ್ವದ ಐವರು ನ್ಯಾಯಾಧೀಶರುಗಳು ಸುಮಾರು ನಾಲ್ಕುವರ್ಷಗಳ ನಂತರ ಅಂತಿಮವಾಗಿ ಕೇಂದ್ರ ಸರ್ಕಾರ, ಕಾಶ್ಮೀರದಲ್ಲಿ ಸಂವಿಧಾನದ ವಿಶೇಷವಾಗಿ ಜಾರಿಯಲ್ಲಿದ್ದ 370ನೇ ವಿಧಿಯನ್ನು ರದ್ದು ಪಡಿಸಿದ್ದಲ್ಲದೇ ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರವನ್ನು ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿದ್ದ ನಿರ್ಧಾರವನ್ನು ಒಮ್ಮತದಿಂದ ಎತ್ತಿ ಹಿಡಿದಿದೆ. ತೀರ್ಪಿನಲ್ಲಿ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಲು ರಾಷ್ಟ್ರಪತಿಯವರು ಸಾಂವಿಧಾನಿಕ ಆದೇಶ ಹೊರಡಿಸುವ ಅಧಿಕಾರ ಹೊಂದಿದ್ದಾರೆ. ಅಂದು ಜಾರಿಗೆ ತಂದಿದ್ದ ಆರ್ಟಿಕಲ್ 370 ತಾತ್ಕಾಲಿಕ ನಿಬಂಧನೆಯಾಗಿದ್ದು ಅದು ಕೇವಲ ಮಧ್ಯಂತರ ಪ್ರಕ್ರಿಯೆಯಾಗಿ ಕಾರ್ಯನಿರ್ವಹಿಸುತ್ತಿತ್ತು. ಆಗಿನ್ನೂ ದೇಶ ವಿಭಜನೆ ಆಗಿದ್ದ ಪರಿಸ್ಥಿತಿಯ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿನ ಯುದ್ಧದ ಭೀತಿಯಿಂದ ಕಾಶ್ಮೀರಿಗರನ್ನು ಹೊರತರಲು 370 ನೇ ವಿಧಿಯು ಮಧ್ಯಂತರ ವ್ಯವಸ್ಥೆಯಾಗಿದ್ದ ಕಾರಣ, ಅಂದು ತಾತ್ಕಾಲಿಕವಾಗಿ ಜಾರಿಗೆ ಗೊಳಿದಿದ್ದ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ರಾಷ್ಟ್ರಪತಿಗಳ 2019 ರ ಆದೇಶವು ಮಾನ್ಯವಾಗಿದೆ ಎಂದು ತಿಳಿಸಿದೆ.

aticle5ಅದೇ ರೀತಿಯಾಗಿ ತೀರ್ಪಿನಲ್ಲಿ ಸೆಪ್ಟೆಂಬರ್ 2024 ರೊಳಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಸುವ ಮೂಲಕ ಪ್ರಜಾಪ್ರಭುತ್ವದ ಸರ್ಕಾರವನ್ನು ತರಬೇಕು ಮತ್ತು ಅತೀ ಶೀಘ್ರವಾಗಿಯೇ ರಾಜ್ಯತ್ವವನ್ನು ಮರುಸ್ಥಾಪಿಸಬೇಕು ಎಂದು ಹೇಳಿದೆಯಲ್ಲದೇ, ಕೇಂದ್ರದ ಪ್ರತಿಯೊಂದು ನಡೆಯನ್ನೂ ಈ ರೀತಿಯಾಗಿ ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಪದೇ ಪದೇ ಕೇಂದ್ರ ಸರ್ಕಾರದ ನೀತಿ ನಿಯಮಗಳ ವಿರುದ್ಧ ತೊಡೆ ತಟ್ಟಿ ನಿಲ್ಲುತ್ತಿದ್ದ ಎಡಪಕ್ಷಗಳು ಮತ್ತು ಕಾಂಗ್ರೇಸ್ ಆದಿಯಾಗಿ ಎಲ್ಲಾ ವಿರೋಧ ಪಕ್ಷಗಳಿಗೂ ಸರಿಯಾದ ತಪರಾಕಿ ಹಾಕಿದೆ ಎಂಬುದೇ ದೇಶವಾಸಿಗಳ ನಂಬಿಕೆಯಾಗಿದೆ. ಸರ್ಕಾರದ ಆದೇಶದ ಸಿಂಧುತ್ವದ ಬಗ್ಗೆ ನ್ಯಾಯಾಲಯ ತೀರ್ಪು ನೀಡಲು ಸಾಧ್ಯವಿಲ್ಲ ಮತ್ತು ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ ಎಂದೂ ಸಹಾ ಸ್ಪಷ್ಟ ಪಡಿಸಿದ್ದಾರೆ.

ಸ್ವಾತಂತ್ರ ಪೂರ್ವದಲ್ಲಿಯೂ ಸಹಾ ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿತ್ತೇ ಹೊರತು ಅದೆಂದೂ ಆಂತರಿಕ ಸಾರ್ವಭೌಮತ್ವವನ್ನು ಹೊಂದಿರಲಿಲ್ಲ. ಮಹಾರಾಜ ಹರಿಸಿಂಗರು ಭಾರತದ ಒಕ್ಕೂಟಕ್ಕೆ ಸೇರಲು ತಡಮಾಡಿದರೇ ಹೊರತು, ಸರ್ದಾರ್ ಪಟೇಲರ ನೇತೃತ್ವದಲ್ಲಿ ಭಾರತದ ಒಕ್ಕೂಟದ ಭಾಗವಾಗಿ ಸೇರಿಕೊಳ್ಳುವ ಒಪ್ಪಂದಕ್ಕೆ ಹಾಗಿದ್ದ ತೀರ್ಪೇ ಅಂದಿಮ ಎಂದು ಹೇಳಿದೆ. ಸಂವಿಧಾನದ 370 ನೇ ವಿಧಿ ಜಮ್ಮು ಮತ್ತು ಕಾಶ್ಮೀರ ಏಕೀಕರಣಕ್ಕಾಗಿಯೇ ಹೊರತು ವಿಘಟನೆಗಾಗಿ ಅಲ್ಲ. ಹಾಗಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ಅಂದು ತಾತ್ಕಾಲಿಕವಾಗಿ ನೀಡಿದ್ದ ವಿಶೇಷ ಸ್ಥಾನಮಾನ 370ನೇ ವಿಧಿಯ ರದ್ದತಿಯ ಸಾಂವಿಧಾನಿಕ ಸಿಂಧುತ್ವದವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ ಮತ್ತು ನ್ಯಾಯಮೂರ್ತಿಗಳಾದ ಸಂಜಯ ಕಿಶನ್ ಕೌಲ್, ಸಂಜೀವ ಖನ್ನಾ, ಬಿ.ಆರ್. ಗವಾಯಿ ಮತ್ತು ಸೂರ್ಯಕಾಂತ ಅವರನ್ನೊಳಗೊಂಡ ಐವರು ನ್ಯಾಯಾಧೀಶರ ತಂಡವು ಕಳೆದ ಆಗಸ್ಟ್ 2ರಿಂದ 370 ನೇ ವಿಧಿಯ ರದ್ದತಿಯನ್ನು ಪ್ರಶ್ನಿಸುವ ಅರ್ಜಿಗಳ ವಿಚಾರಣೆಯನ್ನು ಆಲಿಸಲು ಪ್ರಾರಂಭಿಸಿ, ವಿಚಾರಣೆಯ ನಂತರ ತನ್ನ ತೀರ್ಪನ್ನು ಸೆಪ್ಟೆಂಬರ್ 5 ರಂದು ಕಾಯ್ದಿರಿಸಿತ್ತು.

ಅರ್ಜಿದಾರ ಪರ ಹಿರಿಯ ವಕೀಲರಾದ ಕಪಿಲ್ ಸಿಬಲ್, ಗೋಪಾಲ ಸುಬ್ರಮಣಿಯಂ, ರಾಜೀವ ಧವನ್, ದುಶ್ಯಂತ್ ದವೆ, ಗೋಪಾಲ್ ಶಂಕರನಾರಾಯಣನ್ ಮತ್ತು ಜಾಫರ್ ಶಾ ಅವರುಗಳು ಆರಂಭದಲ್ಲಿ 370 ನೇ ವಿಧಿಯು ತಾತ್ಕಾಲಿಕ ಎಂದು ತಿಳಿಸಲಾಗಿದ್ದರೂ, 1957 ರಲ್ಲಿಆಲ್ಲಿನ ಸಂವಿಧಾನ ಸಭೆಯ ವಿಸರ್ಜನೆಯ ನಂತರ 370 ನೇ ವಿಧಿಯು ಶಾಶ್ವತವಾದ ಕಾರಣ, 370 ನೇ ವಿಧಿಯನ್ನು ರದ್ದುಗೊಳಿಸಲು ಸಂವಿಧಾನ ರಚನಾ ಸಭೆಯ ಪಾತ್ರವನ್ನು ಕೇಂದ್ರವು ವಹಿಸಬಾರದಿತ್ತು ಎಂದೇ ಬಲವಾಗಿ ವಾದಿಸಿದ್ದರು. ಅವರ ವಿರುದ್ಧವಾಗಿ ಕೇಂದ್ರ ಸರ್ಕಾರದ ಪರ, ಅಟಾರ್ನಿ ಜನರಲ್ ಆರ್ ವೆಂಕಟರಮಣಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹರೀಶ್ ಸಾಳ್ವೆ, ರಾಕೇಶ್ ದ್ವಿವೇದಿ ಮತ್ತು ವಿ ಗಿರಿಯವರು ಈ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರವು ಎಲ್ಲಾ ರೀತಿಯ ಸಾಂವಿಧಾನಿಕ ಕಾರ್ಯವಿಧಾನಗಳನ್ನು ಸರಿಯಾಗಿ ಅನುಸರಿಸಲಾಗಿದೆಯಲ್ಲದೇ, ಯಾವುದೇ ರೀತಿಯ ಲೋಪವನ್ನು ಎಸಗಿಲ್ಲ ಮತ್ತು ಅರ್ಜಿದಾರರಉ ಕೇಂದ್ರದಿಂದ ಸಾಂವಿಧಾನಿಕ ವಂಚನೆಯಾಗಿದೆ ಎಂಬುದರಲ್ಲಿ ಹುರುಳಿಲ್ಲ ಎಂದೇ ಸಮರ್ಥವಾಗಿ ವಾದವನ್ನು ಮಾಡಿದ್ದರು.

ಕೇಂದ್ರಸರ್ಕಾರದ ಪರವಾಗಿ ಬಂದಿರುವ ಈ ತೀರ್ಪನ್ನು ಇಡೀ ದೇಶವೇ ಕೊಂಡಾಡುತ್ತಿದ್ದರೆ, ಸುಮಾರು ವರ್ಷಗಳ ಕಾಶ್ಮೀರವನ್ನು ತಮ್ಮ ಜಹಗೀರು ಎಂದು ಕೊಂಡಿದ್ದ ಮುಫ್ತಿ ಮಹಮ್ಮದ್ ಸಯೀದ್ ಅವರ ಮಗಳು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಸಹಜವಾಗಿ ಬೇಸರದಿಂದಲೇ, 370 ರದ್ಧತಿ ಬಗ್ಗೆ ಸುಪ್ರೀಂ ಕೋರ್ಟ್‌ ತೀರ್ಪಿನಿಂದ ನಾವು ನಿರಾಶರಾಗಬಾರದು. ಜಮ್ಮು ಮತ್ತು ಕಾಶ್ಮೀರ ಹಲವಾರು ಏಳು ಬೀಳುಗಳನ್ನು ಕಂಡಿದೆ. 370 ನೇ ವಿಧಿಯು ತಾತ್ಕಾಲಿಕ ನಿಬಂಧನೆಯಾಗಿದೆ ಎಂದು ಹೇಳುವ ತೀರ್ಪು ನಮ್ಮ ಸೋಲಲ್ಲ. ಆದರೆ ಇದು ಭಾರತದ ಕಲ್ಪನೆಯ ಸೋಲು ಹಾಗಾಗಿ ಇಂದು ಈ ತೀರ್ಪಿನ ಪರವಾಗಿ ಸಂಭ್ರಮಿಸುವವರು ಮುಂದೆ ಪಶ್ಚಾತ್ತಾಪ ಪಡ ಬೇಕಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದೇ ರೀತಿಯಾಗಿ ಕಾಶ್ಮೀರದ ಮತ್ತೊಬ್ಬ ಮಾಜೀ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಉಪಾಧ್ಯಕ್ಷ ಒಮರ್ ಅಬ್ದುಲ್ಲ ಅವರು ಸಾಮಾಜಿಕ ಜಾಲತಾಣದಲ್ಲಿ ವಯಕ್ತಿಕವಾಗಿ ನ್ಯಾಯಾಲಯದ ಈ ತೀರ್ಪಿನಿಂದಾಗಿ ನಿರಾಶೆಗೊಂಡಿದ್ದೇನಾದರೂ, ಭರವಸೆಯನ್ನು ಕಳೆದುಕೊಂಡಿಲ್ಲ ಮತ್ತು ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ.

ಇನ್ನು ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಕಾನ್ಫರೆನ್ಸ್ ಮುಖ್ಯಸ್ಥ ಸಜಾದ್ ಲೋನ್ ಅವರೂ ಸಹಾ ಉಚ್ಚನ್ಯಾಯಾಲಯದ ಈ ತೀರ್ಪಿನ ಬಗ್ಗೆ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿರುವುದಲ್ಲದೇ, ಸಂವಿಧಾನದ 370 ನೇ ವಿಧಿಯ ಕುರಿತು ನ್ಯಾಯಾಲಯದ ತೀರ್ಪು ನಿರಾಶಾದಾಯಕವಾಗಿದೆ. ನ್ಯಾಯವು ಮತ್ತೊಮ್ಮೆ ಜಮ್ಮು ಮತ್ತು ಕಾಶ್ಮೀರ ಜನರನ್ನು ತಪ್ಪುತ್ತಿದೆ. ಆರ್ಟಿಕಲ್ 370 ಕಾನೂನುಬದ್ಧವಾಗಿರಬಹುದು. ಆದರೆ ಯಾವಾಗಲೂ ನಮ್ಮ ರಾಜಕೀಯ ಆಕಾಂಕ್ಷೆಗಳ ಭಾಗವಾಗಿ ಉಳಿಯುತ್ತದೆ ಎಂದು ಹೇಳಿದ್ದಾರೆ. ರಾಜ್ಯತ್ವದ ವಿಷಯದಲ್ಲಿ ಸುಪ್ರೀಂ ಕೋರ್ಟ್ ಅದರ ಬಗ್ಗೆ ಕಾಮೆಂಟ್ ಮಾಡುವುದನ್ನು ಸಹ ಬದಿಗೊತ್ತಿದೆ. ಹೀಗಾಗಿ ಇಡೀ ದೇಶದ ಆದ್ಯತೆಯನ್ನು ಉಲ್ಲೇಖಿಸುವ ಮೂಲಕ ಭವಿಷ್ಯದ ದುರುಪಯೋಗದಿಂದ ರಕ್ಷಿಸುತ್ತದೆ. ಆದರೂ ಅದೇ ದುರುಪಯೋಗವನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಸೂಕ್ಷ್ಮವಾಗಿ ಅನುಮೋದಿಸಲಾಗಿದೆ. ನಾವು ಆಶಿಸೋಣ. ಭವಿಷ್ಯದಲ್ಲಿ ನ್ಯಾಯ ತನ್ನ ನಿದ್ದೆಯಿಂದ ಎಚ್ಚರಗೊಳ್ಳಬಹುದು ಎಂದು ಬರೆದುಕೊಂಡಿದ್ದಾರೆ.

article2ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ನ್ಯಾಯಾಲಯವು ಇಂದು ನೀಡಿರುವ ತೀರ್ಪು, ಚುನಾಯಿತ ಸರ್ಕಾರದ ಬಹುಮತದ ಆದೇಶಗಳನ್ನು ಪದೇ ಪದೇ ವಿರೋಧವನ್ನು ವ್ಯಕ್ತಪಡಿಸುತ್ತಾ, ದೇಶಾದ್ಯಂತ ದೊಂಬಿ ಎಬ್ಬಿಸುತ್ತಾ, ಓಲೈಕೆ ರಾಜಕಾರಣ ಮಾಡುತ್ತಿದ್ದವರಿಗೆ ಮತ್ತು ಇಂತಹ ದೇಶ ವಿರೋಧಿಗಳ ಪರವಾಗಿಯೇ ವಾದ ಮಾಡಲು ಸದಾಕಾಲವೂ ಸಿದ್ಧವಾಗಿರುತ್ತಿದ್ದ ವಕೀಲರಿಗೆ ಕಾಶ್ಮೀರದಲ್ಲಿ 370 ನೇ ವಿಧಿಯ ಶಾಶ್ವತವಾಗಿ ರದ್ದಾದಂತೆ ಅವರೆಲ್ಲರಿಗೂ ಶಾಶ್ವತವಾಗಿ ಮನೆಯಲ್ಲಿಯೇ ಕೂರುವಂತಾಗಿದೆ ಎಂದೇ ದೇಶವಾಸಿಗಳು ಸಂಭ್ರಮಿಸುತ್ತಿರುದರಲ್ಲಿ ತಪ್ಪಿಲ್ಲ ಎಂದು ಅನಿಸುತ್ತದೆ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ, ಉಮಾಸುತ

Leave a comment