ಜೂನ್ 4ರ ದೆಹಲಿಯ ತೆರೆಮರೆಯ ಕ್ಷಿಪ್ರ ಬೆಳವಣಿಗೆಗಳು

ಅಬ್ ಕೀ ಬಾರ್ ಚಾರ್ ಸೌ ಪಾರ್ ಎಂದು ಚುನಾವಣೆಗೆ ಹೋಗಿದ್ದ ಮೋದಿ ಪರಿವಾರದವರಿಗೆ ಈ ಬಾರಿಯ ಲೋಕಸಭಾ ಫಲಿತಾಂಶದ ಬಹಳ ಅಚ್ಚರಿಯನ್ನು ತರಿಸುತ್ತು. 400 ದಾಟುವುದು ಬಿಡಿ ಕಳೆದ ಬಾರಿ ಗಳಿಸಿದ್ದ 303 ಬಿಡಿ, ಬಹುಮತಕ್ಕೆ ಅವಶ್ಯಕವಿದ್ದ 272 ಸ್ಥಾನಗಳನ್ನು ಸ್ವಂತ ಬಲದಿಂದ ಗೆಲ್ಲಲು ಸಾಧ್ಯವಾಗದೇ, ಕೇವಲ 240 ಸ್ಥಾನಗಳನ್ನು ಪಡೆದಾಗ, INDI ಒಕ್ಕೂಟದ ಎಲ್ಲಾ ನಾಯಕರುಗಳು ಇದ್ದಕ್ಕಿದ್ದಂತೆಯೇ ಗರಿ ಗೆದರಿಕೊಂಡು ಈ ಬಾರಿ ನಮ್ಮದೇ ಸರ್ಕಾರ ಎಂದು ಅಬ್ಬರಿಸಲು ಮುಂದಾದರು. ಚುನಾವಣಾ ಫಲಿತಾಂಶಗಳು ಪ್ರಕಟಗೊಳ್ಳುತಿದ್ದ ಸಂಧರ್ಭದಲ್ಲಿ, ಮೋದಿಯವರು ಬಿಜೆಪಿ ಪ್ರಧಾನ ಕಛೇರಿಗೆ ಸಂಜೆ 4 ಗಂಟೆಗೆ ಬರುವುದಾಗಿ ತಿಳಿಸಿದ್ದರೂ, ಸಂಜೆ ಬಹಳ ತಡವಾಗಿ ಬಿಜೆಪಿ ಕಛೇರಿಗೆ ಬಂದು ಎಲ್ಲರನ್ನು ಉದ್ದೇಶಿಸಿ ಮಾತನಾಡಿದ ತೆರೆಮರೆಯ ಕ್ಷಿಪ್ರ ಬೆಳವಣಿಗೆಗಳು ಬಹಳ ರೋಚಕವಾಗಿದೆ.

ಫಲಿತಾಂಶದ ನಂತರ ಮೋದಿ, ಅಮಿತ್ ಶಾ, ರಾಜನಾಥ್ ಸಿಂಗ್, ಮತ್ತು ನಡ್ಡಾ ಅವರೆಲ್ಲರೂ ಒಟ್ಟಾಗಿ ಮಾತನಾಡಿ ಈ ಬಾರಿ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ನಿರ್ಧರಿಸಿದ್ದಲ್ಲದೇ, ತಮ್ಮ ಜೊತೆಯಲ್ಲಿ NDA ಮಿತ್ರಪಕ್ಷಗಳಾಗಿ ಚುನಾವಣೆಯನ್ನು ಎದುರಿಸಿದ್ದ ನಾಯಕರುಗಳಿಗೆ ಕರೆ ಮಾಡಿ ತಮ್ಮ ನಿರ್ಧಾರವನ್ನು ತಿಳಿಸಿ, ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವುಗಳು ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸರ್ವ ಸ್ವತಂತ್ರರು ಎಂದು ತಿಳಿಸಿದರು. ಮೋದಿಯವರ ಈ ನಿರ್ಧಾರ ಕೇಳಿದ ಕೂಡಲೇ ಚಿರಾಗ್ ಪಾಸ್ವಾನ್ ಮತ್ತು ಶಿಂಧೆ ಅವರು ನಮ್ಮ ಬೆಂಬಲ ನಿಮಗೆ ಅಚಲವಾಗಿದ್ದು, ನಿಮ್ಮ ಎಲ್ಲಾ ನಿರ್ಧಾರಗಳಲ್ಲೂ ನಿಮ್ಮ ಜೊತೆಗಿರುತ್ತೇವೆ ಎಂಬ ಆಶ್ವಾಸನೆಯನ್ನು ನೀಡಿದರು. ವನ್ನು ಒಪ್ಪಿದ್ದೇವೆ ಮತ್ತು ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ಸಿದ್ಧರಿದ್ದೇವೆ ಎಂದು ಮೊದಲು ಹೇಳಿದರು.

ಈ ವೇಳೆಗಾಗಲೇ, INDI ಒಕ್ಕೂಟದವರು ತೆಲುಗು ದೇಶಂ ಚಂದ್ರಬಾಬು ನಾಯ್ಡು ಮತ್ತು ಜೆಡಿಯು ನಿತೀಶ್‌ ಕುಮಾರ್ ಅವರನ್ನು ಹೇಗಾದರೂ ಮಾಡಿ ತಮ್ಮ ಒಕ್ಕೂಟಕ್ಕೆ ಸೇರಿಸಿಕೊಳ್ಳಲು ಮುಂದಾಗಿದ್ದದ್ದರ ಅರಿವಿದ್ದ ಮೋದಿಯವರು ಅವರಿಬ್ಬರಿಗೂ ಸಹಾ ಕರೆ ಮಾಡಿ ನಿಮ್ಮ ಯಾವುದೇ ನಿರ್ಧಾರಕ್ಕೂ ನೀವು ಸ್ವತಂತ್ರರು ಅದಕ್ಕೆ ನಮ್ಮ ಕಡೆಯಿಂದ ಯಾವುದೇ ವಿರೋಧವಿಲ್ಲ ಎಂದು ಹೇಳಿದ್ದನ್ನು ಕೇಳಿದ ಅವರಿಬ್ಬರೂ ಕೆಲ ಕಾಲ ದಿಗ್ಭ್ರಮೆಗೊಂಡರು. ಅವರಿಬ್ಬರಿಗೂ ಈಗಾಗಲೇ NDA ಮತ್ತು INDI ಮೈತ್ರಿ ಕೂಟಗಳ ಮನಸ್ಥಿತಿಯ ಬಗ್ಗೆ ಚೆನ್ನಾಗಿ ಅರಿವಿತ್ತು. ಇದೇ ಸಮಯದಲ್ಲಿ ಮೋದಿಯವರ ಈ ನಿರ್ಧಾರದ ಬಗ್ಗೆ INDY ಮೈತ್ರಿಕೂಟಕ್ಕೆ ತಿಳಿಯುವಂತಹ ವ್ಯವಸ್ಥೆಯನ್ನು ಸಹಾ ಮೋದಿ ಮತ್ತು ಶಾ ಮಾಡಿ ಬಿಟ್ಟಿದ್ದರು.

ಮೋದಿಯವರ ಈ ನಿರ್ಧಾರ ಕಾಂಗ್ರೇಸ್ ನಾಯಕರುಗಳಾದ ಖರ್ಗೆ ಮತ್ತು ಜೈರಾಮ್ ರಮೇಶ್ ಅವರುಗಳಿಗೆ ತಿಳಿಯುತ್ತಲೇ ಅವರೂ ಸಹಾ ಕೆಲ ಕಾಲ ತಬ್ಬಿಬ್ಬಾದರೂ, ಅದನ್ನು ತೋರಿಸಿಕೊಳ್ಳದೇ, ನಿಧಾನವಾಗಿ ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು ಎಂದು ಮನಸ್ಸಿನಲ್ಲೇ ಮಂಡಿಗೆ ಸವಿಯುತ್ತಾ, ತಾವುಗಳು ನಾಯ್ಡು ಮತ್ತು ನಿತೀಶ್ ಜೊತೆ ಮಾತನಾಡಿದರೆ ಸಂಭಂಧ ಕುದುರದು ಎಂಬುದನ್ನು ಅರಿತು, ಮೋದಿಯವರ ನಿರ್ಧಾರ ಇತರರಿಗೆ ತಿಳಿಯುವ ಮುನ್ನವೇ, ಶರದ್ ಪವಾರ್ ಅವರಿಗೆ ಕರೆ ಮಾಡಿ ನಿತೀಶ್ ಮತ್ತು ನಾಯ್ಡು ಅವರನ್ನು ಸಂಪರ್ಕಿಸಿ, ತಮ್ಮ ಬಣಕ್ಕೆ ಸೇರಿದಲ್ಲಿ ಉಪಪ್ರಧಾನಿ ಮತ್ತು ಅವರು ಕೇಳಿದ ಖಾತೆಗಳನ್ನು ಕೊಡುವುದಾಗಿ ತಿಳಿಸಲು ಕೇಳಿಕೊಂಡರು. ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವ ಏಕೈಕ ಕಾರಣದಿಂದ ಕಾಂಗ್ರೇಸ್ ನಾಯಕರ ಕೋರಿಕೆಯಂತೆ ಪವಾರ್ ನಿತೀಶ್ ಗೆ ಕರೆ ಮಾಡಿ ವಿವಿಧ ಆಮಿಷಗಳನ್ನು ಒಡ್ಡಿದರು.

ಪವಾರ್ ಅವರ ಎಲ್ಲಾ ಮಾತುಗಳನ್ನು ತಾಳ್ಮೆಯಿಂದ ಕೇಳಿದ ನಿತೀಶ್, ಅಲ್ಲಾ ಪವಾರ್ ಅವರೇ, ಈ ಬಾರಿಯ ಚುನಾವಣಾ ಘೋಷಣೆಯಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬಂದಲ್ಲಿ ದೇಶದ ಪ್ರತಿ ಹೆಂಗಸರಿಗೆ ₹ 8500 ವಿತರಿಸುತ್ತೇವೆ ಮತ್ತು ಹಿಂದುಳಿದ ವರ್ಗಗಳೊಂದಿಗೆ, ಸಬಲರ ಸಂಪತ್ತನ್ನು ಹಂಚುತ್ತೇವೆ ಎಂದು ಹೋದ ಬಂದ ಕಡೆಯಲ್ಲೆಲ್ಲಾ ರಾಹುಲ್ ಮತ್ತು ಖರ್ಗೆ ಯವರು ಹೇಳಿಕೊಂಡು ಬಂದಿದ್ದ ಕಾರಣದಿಂದಲೇ, ಜನಾ ಅವರನ್ನು ಈ ಪರಿಯಾಗಿ ಬೆಂಬಲಿಸಿದ್ದಾರೆ. ಈಗ ನಿಮ್ಮ ಒಕ್ಕೂಟದ ಪ್ರಧಾನಿ ಯಾರು? ಮತ್ತು ಕಾಂಗ್ರೆಸ್ ಸಾರ್ವಜನಿಕರಿಗೆ ನೀಡಿದ ಪ್ರಮುಖ ಭರವಸೆಗಳನ್ನು ಹೇಗೆ ಈಡೇರಿಸುತ್ತದೆ ಎಂಬುದರ ಬಗ್ಗೆ ನಿಮಗೇನಾದರೂ ಅರಿವಿದೆಯೇ? ಎಂದು ಕೇಳಿದ್ದಲ್ಲದೇ, ಮೋದಿಯವರು ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ಸಿದ್ಧರಾಗಿದ್ದಾರೆ ಎಂದು ನಿಮಗೆ ಹೇಗೆ ತಿಳಿಯಿತು ಎಂದು ಕೇಳಿದಾಗ, ಅದರ ಕುರಿತಾಗಿ ನನಗೇನೂ ಅರಿವಿಲ್ಲಾ. ಆದರೆ ಕಾಂಗ್ರೇಸ್ ನಾಯಕರ ಕೋರಿಕೆಯ ಮೇಲೆ ತಾವು ಕರೆ ಮಾಡಿದ್ದಾಗಿ ಹೇಳುತ್ತಿದ್ದಂತೆಯೇ, ನಿತೀಶ್ ಅವರು ಮೋದಿಯವರ ನಿರ್ಧಾರವನ್ನು ಸ್ಪಷ್ಟವಾಗಿ ತಿಳಿಸಿದರು.

ಈ ಹೊಸಾ ಸುದ್ದಿಯನ್ನು ಕೇಳಿ ಹೌಹಾರಿದ ಪವಾರ್ ಅವರು ಅರೇ ಕಾಂಗ್ರೇಸ್ ಪಕ್ಷ ವಿಷಯವನ್ನು ಮುಚ್ಚಿಟ್ಟು ತೆರೆಯ ಮರೆಯಲ್ಲಿ ಏನೋ ಮಸಲತ್ತನ್ನು ನಡೆಸುತ್ತಿದೆ ಎಂಬುದನ್ನು ಅರಿತು ಕೂಡಲೇ ಅಖಿಲೇಶ್ ಯಾದವ್ ಅವರಿಗೆ ಕರೆ ಮಾಡಿ ಕಾಂಗ್ರೆಸ್ ಅವರಿಗೆ ಗೊತ್ತಿಲ್ಲದೆ ಏನೇನೋ ತಂತ್ರಗಳನ್ನು ಮಾಡುತ್ತಿರುವ ವಿಷಯವನ್ನು ತಿಳಿಸಿ ಅವರಿಬ್ಬರೂ ಒಟ್ಟಿಗೆ ಖರ್ಗ ಅವರಿಗೆ ಕರೆ ಮಾಡಿ ಬಿಜೆಪಿಯ ನಿರ್ಧಾರದ ಬಗ್ಗೆ ಏಕೆ ನಮಗೆ ಏಕೆ ತಿಳಿಸಲಿಲ್ಲ ಎಂದು ಪ್ರಶ್ನಿಸಿದಾಗ, ಆರಂಭದಲ್ಲಿ ತಬ್ಬಿಬ್ಬಾದ ಖರ್ಗೆ ನಂತರ ಸಾವರಿಸಿಕೊಂಡು ನಮಗೂ ಸಹಾ ಅದರ ಬಗ್ಗೆ ಖಚಿತವಾದ ಮಾಹಿತಿ ಇಲ್ಲದ ಕಾರಣ, ಆ ಬಗ್ಗೆ ಯಾರಿಗೂ ತಿಳಿಸಲಿಲ್ಲ ಎಂದು ಸಾವರಿಸಿಕೊಂಡು ಈಗ ಮೊದಲು ಪ್ರಧಾನಿಯನ್ನು ನಿರ್ಧರಿಸೋಣ ನಂತರ ಎಲ್ಲದರ ಕುರಿತಾಗಿ ಮಾತನಾಡೋಣ ಎಂದಾಗ ಪವಾರ್ ಅವರಿಗೆ ಕಾಂಗ್ರೇಸ್ ತಮ್ಮನ್ನು ಹೊರಗಿಟ್ಟು ಏನೋ ಮಾಡುತ್ತಿದೆ ಎಂಬುದು ಖಚಿತವಾಯಿತು. ಇದೇ ವೇಳೆ ಅಖಿಲೇಶ್ ಯಾದವ್ ಸಹಾ ತಮ್ಮೊಂದಿಗೆ ಸಮಾಲೋಚಿಸದೆ ಈ ರೀತಿಯಾಗಿ ನಿರ್ಧಾರ ಕೈಗೊಂಡಲ್ಲಿ ತಾವು ಪ್ರತ್ಯೇಕವಾಗಿ ಕುಳಿತುಕೊಳ್ಳುವುದಾಗಿ ಎಚ್ಚರಿಕೆ ಗಂಟೆಯನ್ನು ನೀಡಿದಾಗ, ಕಾಂಗ್ರೇಸ್ ನಾಯಕರ ಝಂಗಾ ಬಲವೇ ಅಡಗಿಹೋದಂತಾಗಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಭಾಯಿಸದೇ ಹೋದಲ್ಲಿೆ ಎಲ್ಲವೂ ಕೆಟ್ಟು ಹೋಗುವುದನ್ನು ಗ್ರಹಿಸಿದರು.

INDY ಮೈತ್ರಿಕೂಟಕ್ಕೆ ಕಾಂಗ್ರೇಸ್ಸಿನ ತಿಂಗಳಿಗೆ ₹ 8500 ಮತ್ತು ಹಿಂದುಳಿದ ವರ್ಗಗಳಿಗೆ ಸಂಪತ್ತು ಹಂಚಿಕೆ ಭರವಸೆಯನ್ನು ಈಡೇರಿಸುವುದು ಮತ್ತು ಮುಂದಿನ ಪ್ರಧಾನ ಮಂತ್ರಿ ಯಾರಾಗುವುದು ಎಂಬುದರ ಬಗ್ಗೆಯೇ ದೊಡ್ಡ ಸಮಸ್ಯೆಯಾಗಿರುವಾಗ, ಮೋದಿ ಮತ್ತು ಶಾ ಅವರು ಇಂತಹ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಅವರು ನಿರೀಕ್ಷಿಸಿರಲಿಲ್ಲ. ಬಿಜೆಪಿಯ 240 ಸ್ಥಾನಗಳು ಪಾಸ್ವಾನ್, ಶಿಂಧೆ ಮತ್ತು ಇತರ ಸಣ್ಣ ಮೈತ್ರಿಕೂಟಗಳೊಂದಿಗೆ ಒಟ್ಟುಗೂಡಿಸಿ, ಒಟ್ಟು ಬಲ 264 ಆಗಿದ್ದು, ಬಹುಮತಕ್ಕೆ ಕೇವಲ 8 ಸ್ಥಾನಗಳಷ್ಟೇ ಬೇಕಿದ್ದು ಅದನ್ನು ಪಕ್ಷೇತರರಾಗಿ ಆಯ್ಕೆಯಾಗಿರುವ 18 ಸದಸ್ಯರನ್ನು ತಮ್ಮೊಂದಿಗೆ ಸೆಳೆದುಕೊಂಡು ಬಹುಮತಸಾಧಿಸಲು ಕಷ್ಟ ಪಡಬೇಕಿಲ್ಲ ಆದರೂ ಮೋದಿ ಶಾ ವಿರೋಧ ಪಕ್ಷದಲ್ಲಿ ಕೂರಲು ನಿರ್ಧರಿಸಿದ್ದಾರೆ. ಹಾಗಾಗಿ INDY ಮೈತ್ರಿಕೂಟದ ಭಾಗವಾಗುವ ಬದಲು ಬಿಜೆಪಿಯೊಂದಿಗಿದ್ದು ತಮ್ಮ ತಮ್ಮ ರಾಜ್ಯಗಳಿಗೆ ಉತ್ತಮ ಸೌಲಭ್ಯ ಮತ್ತು ಕೆಲವು ಪ್ರಭಾವಿ ಖಾತೆಗಳನ್ನು ಪಡೆಯಬಹುದು ಎಂದು ನಿರ್ಧರಿಸಿ ಕೂಡಲೇ ನಿತೀಶ್ ಮತ್ತು ನಾಯ್ಡು ಬಿಜೆಪಿ ನಾಯಕರುಗಳನ್ನು ಸಂಪರ್ಕಿಸಿ ಅವರಿಬ್ಬರೂ ಬಿಜೆಪಿಯೊಂದಿಗೆ ಇರಲು ಬಯಸುವುದಾಗಿ ಭರವಸೆ ನೀಡಿದ್ದಲ್ಲದೇ, ಕಾಂಗ್ರೇಸ್ ಒಕ್ಕೂಟ ಮುಂದಿನ ನಡೆಯನ್ನು ನಡೆಸುವುದರೊಳಗೆ ಅತೀ ಶೀಘ್ರದಲ್ಲೇ ಸರ್ಕಾರ ರಚಿಸಲು ಮುಂದಾಗುವಂತೆ ಮೋದಿಯನ್ನು ಒತ್ತಾಯಿಸಿದರು.

ಇವೆಲ್ಲರದರ ನಡುವೆ ಜಯಂತ್ ಚೌಧರಿ ಮೂಲಕ, ಮೋದಿ ಮತ್ತು ಷಾ ಅವರಿಗೆ ಅದಾಗಲೇ INDY ಮೈತ್ರಿಯೊಳಗಿನ ಗೊಂದಲದ ಬಗ್ಗೆ ತಿಳಿದುಕೊಂಡಿದ್ದರು. ಕಾಂಗ್ರೆಸ್ ವಾಗ್ದಾನ ಮಾಡಿದಂತೆ ಪ್ರತಿ ವ್ಯಕ್ತಿಗೆ ತಿಂಗಳಿಗೆ ₹ 8500 ವಿತರಿಸಬೇಕಾದರೆ, ದೇಶದ ಅರ್ಧದಷ್ಟು ಮಹಿಳಾ ಜನಸಂಖ್ಯೆಯನ್ನು ಪರಿಗಣಿಸಿದರೂ ವರ್ಷಕ್ಕೆ ₹60 ಸಾವಿರ ಕೋಟಿ ವೆಚ್ಚವಾಗುತ್ತದೆ. ಇಷ್ಟೊಂದು ಹಣವನ್ನು ಹೇಗೆ ಮತ್ತು ಎಲ್ಲಿಂದ ತರುವುದು ಎನ್ನುವುದೇ ಒಂದು ಸಮಸ್ಯೆಯಾದರೆ, ಅಷ್ಟು INDY ಮೈತ್ರಿ ನಾಯಕರಲ್ಲಿ ಯಾರನ್ನು ಪ್ರಧಾನಿಯನಾಗಿ ಮಾಡುವುದು ಎನ್ನುವುದೂ ಸಹಾ ಮತ್ತೊಂದು ಸಮಸ್ಯೆಯಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಪ್ರಧಾನಿಯಾಗುವುದು ಮುಳ್ಳಿನ ಹಾದಿ ಇದ್ದಂತೆ ಎಂಬುದು INDY ನಾಯಕರಿಗೆ ಅರಿವಾಗುವಷ್ಟರಲ್ಲಿ, ಉತ್ತರ ಪ್ರದೇಶ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಬ್ಯಾಂಕ್ ಖಾತೆಗೆ ₹8500 ನೀಡುವುದನ್ನು ನಂಬಿದ್ದ ಮುಸ್ಲಿಂ ಸಮುದಾಯದ ಮಹಿಳೆಯರು ಬೆಂಗಳೂರಿನ ಪ್ರಧಾನ ಅಂಚೆ ಕಛೇರಿ ಮತ್ತು ಲಕ್ನೋದ ಕಾಂಗ್ರೇಸ್ ಪಕ್ಷದ ಕಛೇರಿಯ ಮುಂದೆ ಸರತಿ ಸಾಲಿನಲ್ಲಿ ನಿಲ್ಲಲು ಪ್ರಾರಂಭಿಸಿದ್ದದ್ದೂ ಸಹಾ ಅವರ ನಿದ್ದೆ ಗೆಡಿಸಿತ್ತು.

ಈ ಸಮಸ್ಯೆಗೆ ಪರಿಹಾರ ಎನ್ನುವಂತೆ ನಿತೀಶ್ ಮತ್ತು ನಾಯ್ಡು ಅವರನ್ನು ನೇರವಾಗಿ ಸರ್ಕಾರಕ್ಕೆ ಸೇರಿಸಿಕೊಳ್ಳದೇ ಅವರುಗಳ ಬಾಹ್ಯ ಬೆಂಬಲದೊಂದಿಗೆ INDY ಮೈತ್ರಿ ಸರ್ಕಾರ ಇಲ್ಲದೇ ಅವರನ್ನೇ ಪ್ರಧಾನಿಗಳಾಗಿಸಿ ಕಾಂಗ್ರೇಸ್ ಬಾಹ್ಯ ಬೆಂಬಲದ ಸರ್ಕಾರ ರಚಿಸಿದಾಗ, ಇದು ಕಾಂಗ್ರೆಸ್ ಸರ್ಕಾರವಾಗಿರದೇ ಮೈತ್ರಿ ಸರ್ಕಾರ ಆದ ಕಾರಣ, ತಿಂಗಳ ಕಂತಿನ ಹಣ ಮತ್ತು ಸಂಪತ್ತಿನ ಹಂಚಿಕೆಯನ್ನು ಉಳಿದ ಮೈತ್ರಿ ಪಕ್ಷಗಳು ಒಪ್ಪಿಕೊಳ್ಳುತ್ತಿಲ್ಲಾ ಎಂಬ ಸಬೂಬು ನೀಡಿ ಬಚಾವಾಗಬಹುದು ಎಂದು ಕೆಲವು ಕಾಂಗ್ರೇಸ್ ನಾಯಕರು ಯೋಚಿಸಿದ್ದರು.

ಈ ಹಿಂದೆ ಕಾಂಗ್ರೇಸ್ ಸರ್ಕಾರ ಚೌದರಿ ಚರಣ್ ಸಿಂಗ್, ಚಂದ್ರಶೇಖರ್, ದೇವೇಗೌಡ ಮತ್ತು ಗುಜ್ರಾಲ್ ಅವರಿಗೆ ಬಾಹ್ಯ ಬೆಂಬಲ ನೀಡಿ ಹೇಳದೇ ಕೇಳದೇ ತಮ್ಮ ಅನುಕೂಲಕ್ಕೆ ತಕ್ಕಂತೆ ಬೆಂಬಲವನ್ನು ಹಿಂತೆಗೆದುಕೊಂಡು ಸರ್ಕಾರಗಳ ಪತನಕ್ಕೆ ಕಾರಣವಾದದ್ದೂ ಸಹಾ ನಿತೀಶ್ ಮತ್ತು ನಾಯ್ಡು ಅವರಿಗೆ ಚೆನ್ನಾಗಿ ಗೊತ್ತಿತ್ತು. ಇನ್ನು ಮೋದಿಯವರು ವಿರೋಧ ಪಕ್ಷದ ನಾಯಕರಾಗಿ ಹೋದರಂತೂ ಅವರು ಮತ್ತಷ್ಟು ಪ್ರಬಲರಾಗಿ ಸರ್ಕಾರದ ಮೇಲೆ ಖಂಡಿತವಾಗಿ ಮತ್ತಷ್ಟು ಒತ್ತಡ ಹೇರುವುದನ್ನು ನೆನಪಿಸಿಕೊಂಡು INDY ಮೈತ್ರಿಗೆ ಸೇರಲು ನಿರಾಕರಿಸಿದರು. ಇದಲ್ಲದೇ INDY ಮೈತ್ರಿಯನ್ನು ಬೆಂಬಲಿಸಿದರೆ, ಬಿಹಾರದಲ್ಲಿ ಬಿಜೆಪಿ ತನ್ನ ಬೆಂಬಲವನ್ನು ಹಿಂಪಡೆದಾಗ, ಮತ್ತೆ ಮುಖ್ಯಮಂತ್ರಿಯಾಗುವುದು ಕಷ್ಟ. ಸುಖಾಸುಮ್ಮನೇ ತೇಜಸ್ವಿ ಯಾದವ್ ಅವರನ್ನು ಬಿಹಾರದಲ್ಲಿ ಮುಖ್ಯಮಂತ್ರಿ ಮಾಡಬೇಕಾಗುತ್ತದೆ. ಇಷ್ಟೆಲ್ಲವನ್ನು ತಪ್ಪಿಸುವ ಸಲುವಾಗಿ ನಿತೀಶ್ ಕುಮಾರ್ ಮತ್ತು ನಾಯ್ಡು ಅವರು ಮೋದಿ ಅವರಿಗೇ ತಮ್ಮ ಬೆಂಬಲವನ್ನು ಸೂಚಿಸಿದರು.

ಇಷ್ಟೆಲ್ಲಾ ನಾಟಕದ ಸೂತ್ರಧಾರಿಗಳಾದ ಮೋದಿ ಮತ್ತು ಶಾ INDY ಮೈತ್ರಿ ಮತ್ತು ನಿತೀಶ್ ನಾಯ್ಡು ಆವರ ಸಂಕಷ್ಟವನ್ನು ಕಂಡು ಒಳಗೊಳಗೇ ನಕ್ಕಿದ್ದಲ್ಲದೇ, ಇದೇ ದೌರ್ಬಲ್ಯವನ್ನು ಬಳಸಿಕೊಂಡು ನಿತೀಶ್ ಮತ್ತು ನಾಯ್ಡು ಅವರ ಚೌಕಾಶಿ ಶಕ್ತಿಯನ್ನು ಕಡಿಮೆ ಮಾಡುವ ದೃಷ್ಟಿಯಿಂದ, ಅಮಿತ್ ಶಾ ಅವರು ಸಿಸಿಎಸ್ (ಭದ್ರತಾ ಕ್ಯಾಬಿನೆಟ್ ಸಮಿತಿ) ಸಂಪೂರ್ಣವಾಗಿ ಬಿಜೆಪಿಯದ್ದಾಗಿರುತ್ತದೆ ಮತ್ತೊಂದು ಬಾಂಬ್ ಅನ್ನು ಎಸೆದ್ದಲ್ಲದೇ, ಪ್ರಮುಖ ಖಾತೆಗಳಾದ ಗೃಹ, ಹಣಕಾಸು, ರಕ್ಷಣೆ ಮತ್ತು ವಿದೇಶಾಂಗ ವ್ಯವಹಾರಗಳು ತಮ್ಮೊಂದಿಗೆ ಉಳಿಯುತ್ತವೆ ಎಂದು ಹೇಳಿದರು. ಆಡಕತ್ತರಿಗೆ ಸಿಕ್ಕಿಕೊಂಡ ಹಾಗೆ ಆಗಿದ್ದ ನಿತೀಶ್ ಮತ್ತು ನಾಯ್ಡು ಬೇರೆ ಆಯ್ಕೆಯಿಲ್ಲದೇ ಎಲ್ಲದ್ದಕ್ಕೂ ಒಪ್ಪಿಕೊಂಡ ನಂತರವಷ್ಟೇ, ಸಂಜೆ 7:30ಕ್ಕೆ ಬಿಜೆಪಿ ಕಚೇರಿಗೆ ಆಗಮಿಸಿದ ನರೇಂದ್ರ ಮೋದಿ ಅವರು ಬಹಳ ಆತ್ಮವಿಶ್ವಾಸದಿಂದ ಸರ್ಕಾರ ರಚಿಸುವುದಾಗಿ ಹೇಳಿದ್ದಲ್ಲದೇ ತಮ್ಮ ಮುಂದಿನ ಸರ್ಕಾರದ ಕಾರ್ಯಸೂಚಿಯನ್ನು ಜಾರಿಗೆ ತರುವುದಾಗಿ ಘೋಷಿಸಿದರು. ತೆರೆಮರೆಯ ಈ ಕ್ಷಿಪ್ರ ರಾಜಕೀಯ ಬೆಳವಣಿಗೆಗಳಿಂದಾಗಿ, ನಿತೀಶ್ ಕುಮಾರ್ ಅವರು ತಮ್ಮ ಉದ್ವಿಗ್ನತೆಯನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ಮೋದಿಯವರಿಗೆ ಜೂನ್ 9 ರ ಬದಲಿಗೆ ಜೂನ್ 8 ರಂದು ಪ್ರಮಾಣವಚನ ಸ್ವೀಕರಿಸಲು ಸೂಚಿಸಿದರು.

ಜೂನ್ 5 ಮತ್ತು 6 ರಂದು ಲಕ್ನೋ ಮತ್ತು ಬೆಂಗಳೂರಿನಲ್ಲಿರುವ ಬ್ಯಾಂಕ್‌ಗಳು ಮತ್ತು ಕಾಂಗ್ರೆಸ್ ಕಚೇರಿಗಳಿಗೆ ಜನರು ಹಣಕ್ಕಾಗಿ ಸಾಲುಗಟ್ಟಿದ್ದನ್ನೇ ಮುಂದಾಗಿಟ್ಟುಕೊಂಡದ್ದನ್ನು ಬಿಜೆಪಿ ಪರಿಣಾಮಕಾರಿಯಾಗಿ ಪ್ರಚಾರ ಮಾಡಿದ್ದನ್ನು ಗಮನಿಸಿದ INDY ಮೈತ್ರಿಕೂಟ ಆರಂಭದಲ್ಲಿ ಸರ್ಕಾರ ರಚಿಸಲು ಮುಂದಾದರೂ, ಕ್ರಮೇಣ ತಾವು ನೀಡಿದ್ದ ಗ್ಯಾರಂಟಿಗಳನ್ನು ಜಾರಿಗೆ ಗೊಳಿಸಲು ವಿಫಲರಾಗಿ ಸಾರ್ವಜನಿಕ ಹಿನ್ನಡೆಯ ಮುಜುಗರವನ್ನು ತಪ್ಪಿಜಕೊಳ್ಳುವ ಸಲುವಾಗಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೇಸ್ ಅಧ್ಯಕ್ಷರಾದ ಖರ್ಗೆ ಅವರು ನಾವು ಈಬಾರಿ ಸರ್ಕಾರ ರಚಿಸದೇ ಸಮರ್ಥ ವಿರೋಧ ಪಕ್ಷವಾಗಿ ಸರಿಯಾದ ಸಮಯದಲ್ಲಿ ಬಿಜೆಪಿ ಸರ್ಕಾರವನ್ನು ಸೋಲಿಸುತ್ತೇವೆ ಎಂಬುದಾಗಿ ತಿಪ್ಪೇ ಸಾರಿಸಿದರು.

ಹೀಗೆ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯುವಂತೆ, INDY ಮೈತ್ರಿ ಮತ್ತು NDA ಯೊಳಗಿನ ನಿತೀಶ್ ಮತ್ತು ನಾಯ್ಡು ಅವರ ಚೌಕಾಶಿ ಶಕ್ತಿ ಎರಡನ್ನೂ ತೆಗೆದುಹಾಕುವ ಮೂಲಕ, ಮೋದಿ ಮತ್ತು ಷಾ ಪರಿಸ್ಥಿತಿಯ ಮೇಲೆ ಹಿಡಿತ ಸಾಧಿಸುವ ಮೂಲಕ . ಜೂನ್ ೯ರಂದು ಅಧಿಕಾರ ಪ್ರಮಾಣ ವಚನವನ್ನು ಮುಗಿಸಿ ಜೂನ್ 10 ರಂದು ಯಾವುದೇ ಸಮಸ್ಯೆಗಳಿಲ್ಲದೇ ಖಾತೆಗಳ ಹಂಚಿಕೆಯನ್ನು ಮಾಡುವ ಮೂಲಕ ಪರಿಸ್ಥಿತಿಯ ಮೇಲೆ ಮೋದಿ ಮತ್ತು ಶಾ ಮತ್ತೊಮ್ಮೆ ಸಂಪೂರ್ಣ ಹಿಡಿತ ಸಾಧಿಸುವ ಮೂಲಕ ಇದು ಅಟಲ್ ಮತ್ತು ಅಡ್ವಾಣಿಯವರ ಬಿಜೆಪಿಯಲ್ಲ. ಇದು ಮೋದಿ ಮತ್ತು ಅಮಿತ್ ಶಾ ಅವರ ಚಾಣಕ್ಯ ನಡೆಯ ಆಕ್ರಮಣಕಾರಿ ಮತ್ತು ಅಷ್ಟೇ ರಕ್ಷಣಾ ತಂತ್ರದ ನಡೆ ಎಂದು ಸಾಭಿತು ಪಡಿಸಿದರು ಎಂದರೂ ತಪ್ಪಾಗದು ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಇದು ಸಂತೋಷ್ ಮಹೂರ್ಕರ್ ಅವರ ಮೂಲ ಮರಾಠಿ ಲೇಖನದ ಕನ್ನಡದ ಭಾವಾನುವಾದವಾಗಿದ್ದು, ಈ ಲೇಖನದ ಸಾಧಕ ಬಾಧಕಗಳೆಲ್ಲವೂ ಮೂಲ ಲೇಖಕರದ್ದೇ ಆಗಿರುತ್ತದೆ.

One thought on “ಜೂನ್ 4ರ ದೆಹಲಿಯ ತೆರೆಮರೆಯ ಕ್ಷಿಪ್ರ ಬೆಳವಣಿಗೆಗಳು

Leave a comment