ನಾಡಪ್ರಭು ಶ್ರೀ ಕೆಂಪೇಗೌಡರು ಸುಮಾರು 500 ವರ್ಷಗಳ ಹಿಂದೆ ಕಟ್ಟಿಸಿದ್ದ ಬೆಂಗಳೂರು,ಇಂದು ಭಾರತದ ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಪಡೆದು ಅದೆಷ್ಟೇ ಆಧುನೀಕರಣಗೊಂಡಿದ್ದರೂ, ಅದರಲ್ಲಿನ ಗ್ರಾಮೀಣ ಸೊಗಡು ಇನ್ನೂ ಹಾಗೆಯೇ ಇದೆ. ಅದರಲ್ಲೂ ಬೆಂಗಳೂರಿನ್ಗ ಹೃದಯಭಾಗ ಸುಭಾಷ್ ನಗರ ಅರ್ಥಾತ್ ಮೆಜೆಸ್ಟಿಕ್ (ರಾಜ ಗಾಂಭೀರ್ಯವಾದ, ಭವ್ಯವಾದ) ಎಂದೇ ಚಿರಪರಿಚಿತವಾಗಿರುವ ಈ ಭಾಗದಲ್ಲಿ ನಿಂತು ಸುಮ್ಮನೇ ಕಲ್ಲು ತೂರಿದರೆ ಅದೊಂದು ದೇವಾಲಯದ ಮೇಲೆ ಬೀಳುತ್ತದೆ ಎಂದರೆ ಅತಿಶಯವಾಗದು. ಕೆಂಪೇಗೌಡರು ಅಂದು ಕಟ್ಟಿಸಿದ್ದ, ಚಿಕ್ಕ ಪೇಟೆ, ದೊಡ್ಡ ಪೇಟೆ, ಬಳೇ ಪೇಶೇ, ಅರಳೇ ಪೇಟೆ, ಅಕ್ಕೀ ಪೇಟೇ, ಉಪ್ಪಾರ ಪೇಟೆ ಹೀಗೆ ಹತ್ತಾರು ಪೇಟೇಗಳಲ್ಲಿ ನೂರಾರು ಏಕೇ? ಸಾವಿರಾರು ದೇವಾಲಯಗಳು ಇಂದಿಗೂ ಸಹಾ ಇದ್ದು ಆಸ್ತಿಕ ಭಕ್ತಮಹಾಶಯರಿಂದ ದಿನನಿತ್ಯ ಪೂಜೆ ಪುನಸ್ಕಾರಗಳು ನಡೆಯುತ್ತಿದೆ
ದುರಾದೃಷ್ಟವಷಾತ್ ಮೆಜೆಸ್ಟಿಕ್ಕಿನ ಮತ್ತೊಂದು ತುದಿಯಲ್ಲಿರುವ ಉಪ್ಪಾರಪೇಟೆ ಪೋಲೀಸ್ ಠಾಣೆಯಿಂದ ಕೂಗಳತೇ ದೂರದಲ್ಲಿರುವ ತುಳಸೀ ತೋಟದ ಮಹಾನಗರಪಾಲಿಕೆ ಕ್ರೀಡಾಂಗಣದ ಪಕ್ಕದಲ್ಲೇ ಇರುವ, ಕೇಂಪೇಗೌಡರಿಂದ ಪ್ರತಿಷ್ಠಾಪನೆಗೊಂಡಿದೆ ಎಂದು ಹೇಳಲ್ಪಡುವ ನಾಗರಕಟ್ಟೆ ಕೆಲವು ವರ್ಷಗಳ ಹಿಂದೆ ಯಾರದ್ದೇ ಆಸ್ಥೆ ಇಲ್ಲದ ಪರಿಣಾಮ ಪಾಳು ಬಿದ್ದಂತಾಗಿ ಹೋಗಿ ಅನೈತಿಕ ಚಟುವಟಿಕೆಗಳ ಕೇಂದ್ರವಾಗಿತ್ತಲ್ಲದೇ, ಹಾದಿ ಬೀದಿ ದಾರಿಹೋಕರು ಮೂತ್ರವಿಸರ್ಜನೆ ಮಾಡುವ ಕೇಂದ್ರವಾಗಿ ಅಪವಿತ್ರಗೊಂಡಿತ್ತು. ಪುರಾಣ ಪ್ರಸಿದ್ಧವಾದ ತುಳಸೀ ತೋಟದಲ್ಲಿ ಇಂದಿಗೂ ಇತಿಹಾಸ ಪ್ರಸಿದ್ಧವಾದ ಶ್ರೀನಿವಾಸ ದೇವಾಲಯವಿದ್ದು, ಸ್ವಾತಂತ್ರ ಹೋರಾಟದ ಕಾಲದಲ್ಲಿ ಇದೇ ತುಳಸೀ ತೋಟದಲ್ಲಿ ನೂರಾರು ಸ್ವಾತ್ರಂತ್ರ್ಯ ಹೋರಾಟಗಾರರ ಭಾಷಣಗಳ ಕೇಂದ್ರವಾಗಿತ್ತು. ಇಂತಹ ಐತಿಹಾಸಿಕ ಸ್ಥಳದಲ್ಲಿದ್ದ ನಾಗರಕಟ್ಟೆ ಈ ರೀತಿಯ ಅವ್ಯವಸ್ಥೆಯನ್ನು ಕಂಡ ಹಿಂದೂ ಹುಲಿ ಮತ್ತು ರಾಷ್ಟ ರಕ್ಷಣಾ ಪಡೆಯ ಸಂಸ್ಥಾಪಕ ಶ್ರೀ ಪುನೀತ್ ಕೆರೇಹಳ್ಳಿಯವರು ಮತ್ತು ಅವರ ತಂಡದವರು ಆ ಸ್ಥಳವನ್ನು ಶುಧ್ಧೀಕರಿಸಿ, ವಿಶಾಲ ಹೃದಯದ ಕೆಲವು ಹಿಂದೂ ದಾನಿಗಳ ಸಹಾಯದಿಂದ ಜೀರ್ಣೋದ್ಧಾರ ಮಾಡಿಸಿದ್ದು ಸ್ಥಳೀಯ ಹಿಂದೂಗಳಿಗೆ ಸಂತಸವಾದರೂ, ಕೆಲವು ಪಟ್ಟ ಭಧ್ರಹಿತಾಸಕ್ತಿಯ ಜನರಿಗೆ ಕಣ್ಣುಕುಕ್ಕಿದಂತಾಗಿ ಅನಾವಶ್ಯಕವಾಗಿ ಪುನೀತ್ ಅವರ ವಿರುದ್ಧ ಪೋಲೀಸರಿಗೆ ದೂರು ನೀಡಿದ ಕಾರಣ, ಪುನೀತ್ ಕೆಲ ದಿನಗಳ ಕಾಲ ಸೆರೆಮನೆಯ ವಾಶ ಅನುಭವಿಸ ಬೇಕಾಯಿತಾದರೇ, ನಗರ ಪಾಲಿಕೆ ಅಲ್ಲಿ ಪೂಜಿ ಮಾಡುವುದನ್ನೂ ನೀಷೇಧಿಸುವಂತಹ ಸುಗ್ರೀವಾಜ್ಞೆಯನ್ನು ಜಾರಿಗೆ ತಂದಿತ್ತು.
ಹಿಂದೂ ಎದ್ದರೆ ದೇಶ ಎದ್ದೀತು ಎಂಬ ನಾಣ್ಣುಡಿಯಂತೆ, ಈ ವಿಷಯ ವಿಧಾನಸೌಧದಲ್ಲೂ ಚರ್ಚೆಯಾಗಿ ನಂತರ ಎಲ್ಲವೂ ಸುಸೂತ್ರವಾಗಿ ಅಲ್ಲಿ ವಿವಿಧ ನಾಗದೇವತೆಗಳ ಸಮೇತ ಶ್ರೀ ಸುಬ್ರಹ್ಮಣ್ಯೇಶ್ವರ, ಶ್ರೀ ಗಣಪತಿ, ಶ್ರೀ ಉಮಾಮಹೇಶ್ವರ, ಶ್ರೀ ಲಕ್ಷ್ಮೀನಾರಾಯಣ, ಶ್ರೀ ವಾಗ್ದೇವಿ ವಾಗೇಶ್ವರರ ವಿಗ್ರಹಗಳು ಸಹಸ್ರಾರು ಹಿಂದೂಗಳ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಪುನರ್ ಪ್ರಾಣ ಪ್ರತಿಷ್ಠಾಪನೆಯಾಗಿ ದಿನನಿತ್ಯವೂ ಪೂಜೆ ಪುನಸ್ಕಾರಗಳು ನಡೆಯುತ್ತಿದೆ ಎನ್ನುವಾಗ, ಇದ್ದನ್ನು ಸಹಿಸದ ಕೆಲವು ಹಿಂದೂ ವಿರೋಧಿ ಕಿಡಿಗೇಡಿಗಳು ಹೇಡಿಗಳಂತೆ ರಾತ್ರೋ ರಾತ್ರಿ ಅಲ್ಲಿನ ಶ್ರೀ ಸುಬ್ರಹ್ಮಣ್ಯೇಶ್ವರ ದೇವರನ್ನು ಭಂಗ ಮಾಡಿದಾಗ ಅಲ್ಲಿನ ಪರಿಸ್ಥಿತಿ ಕೆಲ ಕಾಲ ವಿಕೋಪಕ್ಕೆ ತಲುಪಿ ನಂತರ ಎಲ್ಲರ ಮಧ್ಯಸ್ಥಿಕೆಯ ಮೇರೆಗೆ ಮತ್ತೆ ವಿಗ್ರಹ ಪ್ರತಿಷ್ಟಾಪನೆ ಮಾಡಲಾಯಿತು. ದೇವಾಲಯಗಳನ್ನು ಜೀರ್ಣೋಧ್ಧಾರ ಮಾಡುವುದು ಸುಲಭ ಆದರೆ ಆದು ಅರಂಭಶೂರತ್ವವಾಗದೇ, ನಿರಂತರವಾಗಿ ದೈನಂದಿನ ಪೂಜಾಕೈಂಕರ್ಯಗಳನ್ನು ನಡೆಸಿಕೊಂಡು ಹೀಗುವುದು ನಿಜಕ್ಕೂ ಕಷ್ಟ ಸಾಧ್ಯವೇ ಸರಿ. ಆದರೆ ರಾಷ್ಟ ರಕ್ಷಣಾ ಪಡೆಯ ಇದನ್ನು ಫಣವಾಗಿ ಸ್ವೀಕರಿಸಿ ಅವರ ಕಡೆಯಿಂದಲೇ ಪ್ರತಿ ದಿನವೂ ಪೂಜೆ ನಡೆಸಲಾರಂಭಿಸಿದ್ದಲ್ಲದೇ, ಪ್ರತೀ ವಾರ ಅಲ್ಲಿ ಭಜನಾಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅದೊಂದು ಶ್ರದ್ಧಾಕೇಂದ್ರವಾಗಿ ಮಾರ್ಪಟ್ಟಿದ್ದು ನಿಜಲ್ಲೂ ಅನನ್ಯ ಮತ್ತು ಅಭಿನಂದನಾರ್ಹವಾಗಿತ್ತು.
2025ರ ಫೆಬ್ರವರಿ 1 & 2, ಶನಿವಾರ ಮತ್ತು ಭಾನುವಾರಗಳಂದು ಧರ್ಮಾಬುಂಧಿ ನಾಗರಕಟ್ಟೆಯ 2ನೇ ವಾರ್ಷಿಕೋತ್ಸವ ಬಹಳ ಶಾಸ್ತ್ರೋಕ್ತವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲ್ಪಟ್ಟಿತು. ಶನಿವಾರ ಸಂಜೆ ಸಂಕಲ್ಕ, ಸ್ವಸ್ತಿವಾಚನ, ಗಣಪತಿ ಪೂಜೆಯ ನಂತರ ಎಲ್ಲಾ ದೇವರುಗಳ ಕಳಸ ಸ್ಥಾಪನೆಯಾದರೆ, ಭಾನುವಾರ ಬೆಳಿಗ್ಗೆ ಬ್ರಾಹ್ಮೀ ಮಹೂರ್ತದಲ್ಲಿ ಎಲ್ಲಾ ದೇವರುಗಳಿಗೆ ಅಭಿಷೇಕ ದುದ್ರ ಹೋಮ, ಜಯಾದಿ ಹೋಮದ ಜೊತೆಗೆ ಎಲ್ಲಾ ದೇವರುಗಳಿಗೆ ಶೋಡಶೋಪಚಾರಗಳ ಪೂಜೆಗಳು ನಡೆದು ನೆರೆದಿದ್ದ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗದ ಮೂಲಕ ಎರಡೂ ದಿನಗಳ ಕಾರ್ಯಕ್ರಮ ಸುಸಂಪನ್ನವಾಯಿತು.
ಧರ್ಮಾಂಬುಧಿ ಪುರಾತನ ನಾಗರಕಟ್ಟೆ ದೇವಾಲಯದ ಸುತ್ತಮುತ್ತಲೂ ಕೇಸರೀ ಧ್ವಜದ ತೋರಣಗಳಿಂದ ಅಲಂಕೃತಗೊಂಡಿದ್ದರೆ, ಕೇಸರಿ ಶಾಲು ಧರಿಸಿದ್ದ ಸಾವಿರಾರು ಹಿಂದೂಕಾರ್ಯಕರ್ತ ಅಮಿತೋತ್ಸಾಹವನ್ನು ವರ್ಣಿಸುವುದಕ್ಕಿಂತಲೂ ಅಲ್ಲಿ ಖುದ್ದು ನೋಡಿದ್ದರೆ ಮಹದಾನಂದವಾಗುತ್ತಿತ್ತು. ಹೋಮ ಹವನಾದಿಗಳೆಲ್ಲವೂ ಮುಗಿದ ನಂತರ ಬಂದಿದ್ದ ಭಕ್ತಾದಿಗಳೆಲ್ಲರಿಗೂ ಶುಚಿರುಚಿಯಾದ ಪ್ರಸಾದದ ವಿವಿಯೋಗ ಒಂದು ಕಡೆ ನಿರಂತರವಾಗಿ ನಡೆಯುತ್ತಿದ್ದರೆ ಮತ್ತೊಂದು ಕಡೆ, ಕಾರ್ಯಕ್ರಮದ ರೂವಾರಿ ಮತ್ತು ಕೇಂದ್ರ ಬಿಂದು ಪುನೀತ್ ಕೆರೇಹಳ್ಳಿ ಬಂದಿದ್ದ ಮಾಧ್ಯಮದವರಿಗೆ ಕಾರ್ಯಕ್ರಮದ ಸ್ಥೂಲ ಪರಿಚಯವನ್ನು ಮಾಡಿಕೊಟ್ಟು, ನದಿ ದಾಟಿದ ಮೇಲೆ ಅಂಬಿನ ನಂಟೇಕೆ ಎಂದು ತಮ್ಮ ಎಲ್ಲಾ ಹೋರಾಟಗಳ ಹಿಂದೆ ಸಮರ್ಥವಾಗಿ ಬೆಂಬಲಿಸುವ ಕಾರ್ಯಕರ್ತರನ್ನು ಮರೆಯದೇ, ಈ ನಾಗರಕಟ್ಟೆಯನ್ನು ಈ ಪರಿಯಾಗಿ ಕಟ್ಟಲು ಪಟ್ಟ ಪರಿಶ್ರಮ ಮತ್ತು ಆ ಕಾರ್ಯದಲ್ಲಿ ಅವರೊಂದಿಗೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ ಮತ್ತು ತಮ್ಮೆಲ್ಲಾ ಕಾರ್ಯಕ್ರಮಗಳಿಗೆ ಬೆನ್ನುಲುಬಾಗಿ ಸಕರಿಸುತ್ತಿರುವ ರಾಜ್ಯಾದ ವಿವಿಧ ಭಾಗಗಳಿಂದ ಬಂದಿದ್ದ ಎಲ್ಲಾ ಕಾರ್ಯಕರ್ತರನ್ನೂ ಕರೆದು ಅವರಿಗೆ ಗೌರವ ಸಮರ್ಪಿಸುವ ಮೂಲಕ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದು ಎಲ್ಲ್ರ ಮೆಚ್ಚುಗೆಗೆ ಪಾತ್ರವಾಯಿತು.
ಅದರಲ್ಲೂ ಅತೀ ಶ್ರೀಮಂತ ಕುಟುಂಬದ ಸದಸ್ಯೆಯಾಗಿ ಒಂದು ಕಾಲದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರೀಡಪಟುವಾಗಿ ನೂರಾರು ಪ್ರಶಸ್ತಿಗಳನ್ನು ಗಳಿಸಿದ್ದ ಭಾರತದ ಪರ ಓಲಂಪಿಕ್ಸ್ ಕ್ರೀಡಾಕೂಟದ ಭಾಗವಾಗಿದ್ದ ಶ್ರೀಮತಿ ಲೀಲಮ್ಮನವರು ತಮ್ಮ ಎಲ್ಲಾ ಹಮ್ಮು ಮತ್ತು ಬಿಮ್ಮುಗಳನ್ನೂ ಬದಿಗಿಟ್ಟು ನಿಸ್ವಾರ್ಥವಾಗಿ ಪ್ರತೀ ದಿನವೂ ನಾಗರ ಕಟ್ಟೆಯ ಸ್ವಚ್ಚಗೊಳಿಸುವುದಲ್ಲದೇ, ಅಲ್ಲಿ ಯಾವುದೇ ರೀತಿಯ ಅನೈತಿಕ ಚಟುವಟಿಕೆಗಳು, ಮೂತ್ರವಿಸರ್ಜನೆ ಆಗುವುದನ್ನು ತಡೆಗಟ್ಟಿ ಪ್ರತಿದಿನವೂ ದೇವರ ಕೈಂಕರ್ಯದಲ್ಲಿ ಭಾಗವಹಿಸುತ್ತಿರುವುದನ್ನು ಪುನೀತ್ ಅವರು ವಿವರಿಸುತ್ತಿದ್ದಾಗ ನೆರೆದಿದ್ದವರ ಮೆಚ್ಚುಗೆಯ ಕರತಾಡನ ಮುಗಿಲು ಮುಟ್ಟುವಂತಿತ್ತು. ಅದೇ ರೀತಿ ಹಿಂದು ಪರ ಹೋರಾಟಗಾರರ ಎಲ್ಲಾ ರೀತಿಯ ನ್ಯಾಯಾಲಯದ ವ್ಯಾಜ್ಯಗಳನ್ನು ಸ್ವಂತ ಖರ್ಚಿನಲ್ಲಿ ಪರಿಹರಿಸುವ ನ್ಯಾಯವಾದಿ ಶ್ರೀಮತಿ ಚೇತನ ಚಿತ್ರದುರ್ಗ ಅವರ ಸೇವೆಯನ್ನೂ ಹೃದಯಪೂರ್ವಕವಾಗಿ ನೆನೆಸಿಕೊಂಡು ಆಭಿನಂದಿಸಲಾಯಿತು. ಒಟ್ಟಿನಲ್ಲಿ ಈ ರೀತಿಯ ಕಾರ್ಯಕರ್ತರ ಅಭಿನಂದನಾ ಶ್ಲಾಘನೀಯ ಕಾರ್ಯ ನಿಶ್ಚಿತವಾಗಿಯೂ ಆ ಎಲ್ಲಾ ಕಾರ್ಯಕರ್ತರ ನೈತಿಕತೆಯನ್ನು ಹೆಚ್ಚಿಸುವುದಲ್ಲದೇ, ಅವರೆಲ್ಲರೂ ಹೀಗೆಯೇ ಮತ್ತಷ್ಟು ಮಗದಷ್ಟು ಹಿಂದೂ ಪರ ಕಾರ್ಯಕ್ರಮಗಳಲ್ಲಿ ಮತ್ತು ಹೋರಾಟಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಪ್ರೇರಣೆ ನೀಡುತ್ತದೆ ಎಂದರೂ ತಪ್ಪಾಗದು.
ಈ ಕಾರ್ಯಕ್ರಮದಲ್ಲಿ ಕೊಡಗು ಮತ್ತು ಮೈಸೂರಿನ ಮಾಜೀ ಸಂಸದರಾದ ಶ್ರೀ ಪ್ರತಾಪ್ ಸಿಂಹ, ಹಿಂದೂ ಜನಜಾಗೃತಿ ಸಮಿತಿಯ ಸಂಸ್ಥಾಪಕರು ಮತ್ತು ಹಿಂದೂ ಪರ ಹೋರಾಟರರಾದ ಶ್ರೀ ಮೋಹನ್ ಗೌಡ, ಸಾಮಾಜಿಕ ಕಾರ್ಯಕರ್ತರಾದ ಶ್ರೀ ಕಿಶೋರ್ ಪಟುವರ್ಢನ್, ಶ್ರೀ ಪ್ರಶಾಂತ್ ಸಂಬರ್ಗಿ, ಮಾಜಿ ಪೋಲೀಸ್ ಕಮಿಷಿನರ್ ಭಾಸ್ಕರ್ ರಾವ್, ಹಿರಿಯ ನ್ಯಾಯವಾದಿ ಹರ್ಷಾ ಮುತಾಲಿಕ್, ಜನಸ್ನೇಹಿ ವೃದ್ಧಾಶ್ರಮದ ಯೋಗಿಶ್ಲ್ ಕರ್ನಾಟಕ ಕಾರ್ಮಿಕ ಪರಿಷತ್ತಿನ ರವಿ ಶೆಟ್ಟಿ ಬೈಂದೂರು ಅಂಕಣಕಾರರಾದ ಶ್ರೀ ಶ್ರೀಕಂಠ ಬಾಳಗಂಚಿ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಾಮಿಯ ಕೃಪಾಶೀರ್ವಾದಕ್ಕೆ ಪಾತ್ರರಾಗಿದ್ದಲ್ಲದೇ, ಅಲ್ಲಿದ್ದ ವಿಶಾಲವಾದ ಧ್ವಜಸ್ಥಂಬದಲ್ಲಿ ರಾಮಧ್ವಜವನ್ನು ಆರೋಹಣ ಮಾಡಿ, ಒಂದೆರಡು ಮಾತುಗಳ ಮೂಲಕ ನೆರೆದಿದ್ದ ಎಲ್ಲಾ ಹಿಂದೂ ಕಾರ್ಯಕರ್ತರ ಉತ್ಸಾಹಕ್ಕೆ ಮತ್ತಷ್ಟು ಪ್ರೇರಣೆ ನೀಡುವ ಮೂಲಕ ಇಡೀ ಕಾರ್ಯಕ್ರಮ ಅರ್ಥಪೂರ್ಣವಾಗಿ ಯಶಸ್ವಿಯಾಯಿತು.
ತನ್ನನ್ನು ಹಂದಿ ಎಂದು ಬೇಕಾದರೂ ಕರೆಯಿರಿ. ಆದರೆ ಹಿಂದೂ ಎಂದು ಕರೆಯದಿರಿ ಎಂದು ನಮ್ಮ ಮಹಾನ್ ನಾಯಕರುಗಳೇ ಹೇಳುತ್ತಿದ್ದಂತಹ್ ಒಂದು ಕಾಲವಿತ್ತು. ಆದರೆ ಇಂದು ಹಿಂದೂ ಜಾಗೃತನಾಗಿ ಎಚ್ಚೆತ್ತು ಕೊಂಡಿರುವ ಕಾರಣ, ಜೋರ್ಸೆ ಬೋಲೋ ಪ್ಯಾರ್ಸೇ ಬೋಲೋ ಹಿಂದೂಸ್ಥಾನ್ ಹಮಾರಾ ಹೈ ಎಂದು ಹೇಳುವ ಕಾಲ ಬಂದಾಗಿದೆ. ಈ ಪರಿಯಾಗಿ ಹಿಂದೂ ಜಾಗೃತಗೊಳ್ಳುತ್ತಿರುವ ಪರಿಣಾಮವಾಗಿಯೇ ಆತೀ ಶೀಘ್ರದಲ್ಲಿಯೇ ನಮ್ಮ ಭಾರತ ಮತ್ತೊಮ್ಮೆ ವಿಶ್ವಗುರುವಾಗುವಂತಹ ಕಾಲ ಬಂದೇ ಬರುತ್ತದೆ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ