ಅನ್ನಂ ಪರಂ ಬ್ರಹ್ಮ ಎನ್ನುತ್ತೇವೆ. ಅದೇ ರೀತಿಯಲ್ಲಿ ದಾನೆ ದಾನೆ ಪರ್ ಲಿಖಾ ಹೈ ಖಾನೆ ವಾಲೇ ಕಾ ನಾಮ್ ಎಂದು ತುಳಸೀದಾಸರೂ ಸಹಾ ಹೇಳಿದ್ದಾರೆ. ಇನ್ನು ಊಟದ ಸಮಯದಲ್ಲಿ ಶತ್ರುವೇ ಮನೆಗೆ ಬಂದರೆ ಮೊದಲು ಊಟ ಹಾಕಿ ಆನಂತರ ಜಗಳ ಮಾಡು ಎನ್ನುತ್ತದೆ ನಮ್ಮ ಧರ್ಮ. ಬಾಯಿ ಮಾತಿನಲ್ಲಿ ಮಾತ್ರಾ ಹಿಂದೂ ಮುಸ್ಲಿಂ ಭಾಯಿ ಭಾಯಿ ಅಂತ ಹೇಳಿಕೊಂಡು ಸ್ನೇಹಿತನ ಆಹ್ವಾನದ ಮೇರೆಗೆ ಮುಸ್ಲಿಂ ಮದುವೆ ಹೋಗಿದ್ದ ರಾಜು ಎಂಬ ದಲಿತ ಹಿಂದೂ ಹುಡುಗ ಹಣೆಯ ಮೇಲೆ ತಿಲಕ ಇಟ್ಟುಕೊಂಡು ಊಟ ಮಾಡುತ್ತಿದ್ದದ್ದನ್ನು ಗಮನಿಸಿ ಸಮೀವುಲ್ಲಾ ಎಂಬುವರು ಇಮಾಂ ಸಾಬಿಗೂ ಗೋಕುಲಾಷ್ಟಮಿಗೂ ಎಲ್ಲಿಯ ಸಂಬಂಧ? ಎನ್ನುವಂತೆ ಆ ದಲಿತ ಹಿಂದೂ ಹುಡುಗ ನನ್ನು ಎಬ್ಬಿಸಿ ಊಟದಿಂದ ಹೊರಕ್ಕೆ ದಬ್ಬಿರುವ ಅಮಾನವೀಯ ಘಟನೆ ನೆಲಮಂಗಲದಲ್ಲಿ ಇತ್ತೀಚೆಗೆ ನಡೆದಿದ್ದು ಸಮಾಜದ ಶಾಂತಿಗೆ ಭಂಗವಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ, ಸುಬ್ರಹ್ಮಣ್ಯ, ಕಟೀಲು, ಕೃಷ್ಣ ಮಠ ಸೇರಿದಂತೆ ಹೀಗೆ ನಮ್ಮ ಅನೇಕ ದೇವಾಯಗಳಲ್ಲಿ ಯಾವುದೇ ಜಾತಿ ಧರ್ಮವನ್ನೂ ನೋಡದೇ ಉಚಿತವಾಗಿ ಪ್ರಸಾದ ರೂಪದಲ್ಲಿ ಸುಗ್ರಾಸವಾದ ಭೋಜನವನ್ನು ಹಾಕುವುದಕ್ಕೆ, ಪಂಕ್ತಿ ಬೇಧ, ಮಡೆ ಸ್ನಾನ ಅದು ಇದು ಎಂದು ತೋರಿಸಿ ಮೂದಲಿಸುವ ಸ್ವಘೋಷಿತ ಜಾತ್ಯಾತೀತರು/ ಬುದ್ಧಿಜೀವಿಗಳಿಗೆ ಈಗ ಮುಸ್ಲಿಮರ ಮದುವೆಯ ಊಟದ ಪಂಕ್ತಿಯಲ್ಲಿ ತಿಲಕ ಇಟ್ಟುಕೊಂಡು ಊಟ ಮಾಡುತ್ತಿದ್ದವರನ್ನು ಊಟದ ಮಧ್ಯದಲ್ಲೇ ಅಮಾನವೀಯವಾಗಿ ಎಬ್ಬಿಸಿ ಹೊರಗೆ ಕಳುಹಿಸಿದ್ದಕ್ಕಾಗಿ ಒಂದು ಚೂರು ಆಕ್ಷೇಪ ಎತ್ತದೇ ಇರುವುದು ಅವರ ನಕಲಿ ಜಾತ್ಯಾತೀತೆಯನ್ನು ಜಗಜ್ಜಾಹೀರಾತು ಮಾಡಿದೆ ಎಂದರೂ ತಪ್ಪಾಗದು.
ಅಂದು ವಿಧಾನಸೌಧದಲ್ಲಿ ನಾಸೀರ್ ಖಾನ್ ರಾಜ್ಯಸಭೆಗೆ ಆಯ್ಕೆಯ ವಿಷಯ ತಿಳಿಯುತ್ತಿದ್ದಂತೆಯೇ, ವಿಧಾನ ಸೌಧದ ಬಾಂಕ್ವೆಟ್ ಹಾಲಿನಲ್ಲೇ ನಿರ್ಲಜ್ಜರಾಗಿ ಪಾಕೀಸ್ಥಾನಕ್ಕೆ ಜೈಕಾರ ಹಾಕಿದರೂ, ಅದೇ ರೀತಿಯಲ್ಲಿ ಪಹೆಲ್ಗಾಂನಲ್ಲಿ ಧರ್ಮ ಕೇಳಿ, ಪ್ಯಾಂಟ್ ಜಾರಿಸಿ ನೋಡಿ ಖಚಿತ ಪಡಿಸಿಕೊಂಡು ಗುಂಡು ಹಾರಿಸಿ ತಮ್ಮ ಪತ್ನಿಯರ ಮುಂದೆಯೇ ಅಮಾಯಕ ಹಿಂದೂಗಳನ್ನು ಕೊಂದು ಹಾಕಿದರೂ, ಬಿರ್ಯಾನಿಗಾಗಿ ಆಸೆ ಪಟ್ಟು ನಮ್ಮ ಮುಖ್ಯಮಂತ್ರಿಗಳು ಇಸ್ಲಾಂ ಎಂದರೆ ಶಾಂತಿ .. ಎಂದಎರ್ ಶಾಂತಿಧೂತ ಎಂದು ಹೇಳುತ್ತಾರೆ. ಇನ್ನು ಕಚ್ಚಾ ಬಾಂಬ್ ತಯಾರಿಸಿ ಧರ್ಮಕ್ಷೇತ್ರದಲ್ಲಿ ಅದನ್ನು ಸ್ಪೋಟಿಸಿ ಹಿಂದೂಗಳನ್ನು ಹತ್ಯೆ ಮಾಡಲು ಕುಕ್ಕರಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಬಾಂಬ್ ಇದ್ದಕ್ಕಿದ್ದಂತೆಯೇ ಆಟೋನಲ್ಲಿ ಸ್ಪೋಟ ಗೊಂಡಾಗ ಅವರುಗಳು ನಮ್ಮ ಬ್ರರ್ದರ್ಸ್ ಎಂದು ಉಪಮುಖ್ಯ ಮಂತ್ರಿಗಳು ಸಮರ್ಥನೆ ಮಾಡಿಕೊಳ್ಳುತ್ತಾರೆ, ಇನ್ನು ಡಿಜೆ ಹಳ್ಳಿ ಕೆಜೆ ಹಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ದಲಿತ ಶಾಸಕರ ಮನೆ ಮತ್ತು ಪೋಲೀಸ್ ಠಾಣೆಯನ್ನು ಸುಟ್ಟು ಹಾಕಿದವರನ್ನು ಅಮಾಯಕರು ಎಂದು ಬಿಡುಗಡೆ ಮಾಡುವ ಗೃಹಮಂತ್ರಿ, ಗುಲ್ಬರ್ಗಾದಲ್ಲಿ ವಿವಿಧ ದೇಶದ್ರೋಹಿ ಚಟುವಟಿಕಗಳಲ್ಲಿ ಭಾಗಿಯಾಗಿದ್ದ ಮುಸಲ್ಮಾನರನ್ನು ಬಿಡುಗಡೆ ಮಾಡಿಸುವ ಪ್ರಿಯಾಂಕ್ ಖರ್ಗೆ ಅಂತಹವರು ನಮ್ಮ ರಾಜ್ಯವನ್ನು ಆಳುತ್ತಿರುವಾಗ ಇಂತಹ ಘಟನೆಗಳು ನಡೆಯುವುದು ಸಹಜ ಎಂದು ಜನರು ಮಾತನಾಡಿಕೊಳ್ಳುತ್ತಿರುವುದು ಸತ್ಯ ಎಂದೆನಿಸುತ್ತಿದೆ.
2025ರ ಅಕ್ಟೋಬರ್ ಅಕ್ಟೋಬರ್ 26ರಂದು ನೆಲಮಂಗಲದ ಬಳಿಯ ಖಾಸಗಿ ಕಲ್ಯಾಣ ಮಂಟಪದಲ್ಲಿ ಅಲ್ಲಿನ ಇಸ್ಲಾಂಪುರದ ನಿವಾಸಿ ಸಮಿವುಲ್ಲಾ ಕುಟುಂಬದ ಮುಜಾಮಿಲ್ ಪಾಷ ಹಾಗೂ ಸಾನಿಯಾ ಎಂಬ ಜೋಡಿಯ ಮದುವೆ ಕಾರ್ಯಕ್ರಮ ಆಯೋಜನೆಗೊಂಡಿದ್ದು ಆ ಶುಭ ಸಮಾರಂಭಕ್ಕೆ ಸವಿತಾ ಜನಾಂಗದ ರಾಜು ಎನ್ನುವವರ ಹೇರ್ ಕಟಿಂಗ್ ಶಾಪಿಗೆ ತಲೆ ಕೂದಲು ಕತ್ತರಿಸಿಕೊಳ್ಳಲು ಆಗ್ಗಾಗ್ಗೆ ಬರುತ್ತಿದ್ದ ಹುಡುಗನೊಬ್ಬ, ಅಣ್ಣಾ ನಮ್ಮ ಅಕ್ಕನ ಮಗಳ ಮದುವೆ ಬಾಲಾಜಿ ಛತ್ರದಲ್ಲಿ ನಡೆಯುತ್ತಿದೆ ದಯವಿಟ್ಟು ಮದುವೆಗೆ ಬನ್ನಿ ಎಂದು ಆಹ್ವಾನಿಸಿದಾಗ, ರಾಜು ಅವರೂ ಸಹಾ ಅಗಲೀ ಅವತ್ತು ಗಿರಾಕಿಗಳು ಇಲ್ಲದೇ ಇದ್ದಲ್ಲೀ ಬರ್ತೀನಿ ಎಂದು ಹೇಳಿದ್ದಾರೆ. ಮದುವೆಯ ದಿನ ಹೆಚ್ಚಿನ ಗಿರಾಕಿಗಳು ಇಲ್ಲದೇ ಇದ್ದ ಪರಿಣಾಮ, ತಮ್ಮ ಕೆಲಸವನ್ನು ಬೇಗನೆ ಮುಗಿಸಿ ಅಂಗಡಿಯನ್ನು ಮುಚ್ಚಿಕೊಂಡು ವಧು ವರರನ್ನು ಆಶೀರ್ವಾದ ಮಾಡಲು ರಾಜು ಅವರು ಮದುವೆಗೆ ತೆರಳಿದ್ದರು. ಮದುವೆ ಮನೆಯಲ್ಲಿ ಎಲ್ಲರೊಂದಿಗೇ ಸಾಲಿನಲ್ಲಿ ನಿಂದು ನವ ಜೋಡಿಗಳಿಗೆ ಶುಭ ಕೋರಿ, ತಂದಿದ್ದ ಉಡುಗೊರೆಯನ್ನು ನೀಡಿದ ಬಳಿಕ ಸಹಜವಾಗಿ ಎಲ್ಲರೊಂದಿಗೆ ಊಟಕ್ಕೆ ಕುಳಿತು ಸಹಭೋಜನ ಮಾಡುತ್ತಿದ್ದರು.
ರಾಜು ಅವರು ಮದುವೆಯ ಊಟವನ್ನು ಅರ್ಧ ಮಾಡುತ್ತಿದ್ದಾಗಲೇ ಮದುವೆಗೆ ಬಂದಿದ್ದ ಬಂಧು ಮಿತ್ರರರ ಯೋಗಕ್ಷೇಮವನ್ನು ವಿಚಾರಿಸಿಕೊಂಡು ಮದುವೆಗೆ ಬಂದಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿ, ನಿಧಾನವಾಗಿ ಊಟ ಮಾಡಿ ಎಂದು ತಿಳಿಸುವ ಸಂಪ್ರದಾಯದಂತೆ ಊಟದ ಮನೆಗೆ ಬಂದಿದ್ದ ಕುಟುಂಬದ ಯಜಮಾನ ಸಮೀವುಲ್ಲಾ ಅವರಿಗೆ ಕುಂಕುಮ ಧರಿಸಿದ್ದ ರಾಜು ಅವರು ಕಾಣಿಸಿದ ಕೂಡಲೇ, ಸಮೀವುಲ್ಲಾ ಅವರ ಧರ್ಮ ಜಾಗೃತವಾಗಿ ಪಿತ್ತ ನೆತ್ತಿಗೇರಿ, ಯಾರ್ರೀ ನಿಮ್ಮನ್ನೆಲ್ಲಾ ಮದುವೆಗೆ ಕರೆದಿದ್ದು, ಹಣೆಯಲ್ಲಿ ತಿಲಕ ಇಟ್ಟುಕೊಂಡವರಿಗೆ ನಾವು ಊಟ ಹಾಕೋದಿಲ್ಲಾ ಏಳ್ರೀ ಏಳ್ರೀ ಎಂದು ಎಲ್ಲರ ಮುಂದೆಯೇ ಊಟದಿಂದ ಎಬ್ಬಿಸಿ ಕಳುಹಿಸಿದ ಕಳುಹಿಸಿದ ಘಟನೆ ಮೂಲಕ ಹಿಂದೂಗಳಿಗೆ ಅವಮಾನ ಮಾಡಿರುವ ವಿಡೀಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ, ಇದೇ ಕುರಿತಾಗಿ ದೃಶ್ಯ ಮಾಧ್ಯಮದಲ್ಲೂ ಪ್ರಸಾರವಾಗಿ ಹಿಂದೂಗಳ ಈ ರೀತಿಯ ಅವಹೇಳನದ ವಿರುದ್ಧ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಸಮೀವುಲ್ಲಾ ಅವರು ನಿಮ್ಮನ್ನು ಕರೆದಿದ್ದು ಯಾರು? ತಿಲಕ ಇಟ್ಟವರಿಗೆ ಊಟ ಹಾಕಲ್ಲ ಎಂದು ರಾಜು ಅವರನ್ನು ಬಲವಂತದಿಂದಾಗಿ ಊಟದಿಂದ ಎಬ್ಬಿಸುತ್ತಿರುವಾಗ, ಇದೇನ್ರೀ ಸಾಬ್ರೇ, ಮದುವೆಗೆ ಬಂದು ಊಟ ಮಾಡುತ್ತಿರುವವರನ್ನು ಊಟದ ಮಧ್ಯದಲ್ಲಿ ಎಬ್ಬಿಸುವುದು ಧರ್ಮ ಏನ್ರೀ? ಯಾರೇ ಆಗಲಿ ಊಟ ಹಾಕಿ ಈ ರೀತಿ ಮಾಡಬಾರದು. ನೀವು ಮಾಡುತ್ತಿರುವುದು ತಪ್ಪು! ಹಿಂದೂಗಳಿಗೆ ಊಟ ಹಾಕೋದಿಲ್ಲಾ ಅಂದ್ರೇ ಮದುವೆ ನಮ್ಮಗಳನ್ನು ಏಕೆ ಕರೆದ್ರೀ? ಹಿಂದೂಗಳಿಗೆ ಊಟ ಹಾಕೋದಿಲ್ಲಾ ಅಂತ ಬೋರ್ಡ್ ಹಾಕಿದ್ರೇ ನಾವುಗಳು ಊಟಕ್ಕೇ ಬರ್ತಾ ಇರಲಿಲ್ಲಾ ಎಂದು ಯಾರೋ ಮಹನೀಯರೊಬ್ಬರು ತಿಲಕಧಾರಿ ರಾಜು ಅವರ ಪರ ಸಮೀವುಲ್ಲಾ ಅವರನ್ನು ತರಾಟೆಗೆ ತೆಗೆದುಕೊಂಡರೂ ಕೋಣನ ಮುಂದೆ ತಮಟೆ ಬಾರಿಸಿದಂತೆಯೋ ಇಲ್ಲವೇ ಸುಂಕದವನ ಮುಂದೆ ಸಂಕಟ ಹೇಳಿಕೊಂಡಂತೆ ಅವರು ಹೇಳುತ್ತಿರುವುದು ನನಗಲ್ಲಾ ಎನ್ನುವಂತೆ ಸಮೀವುಲ್ಲಾ ಜೋರು ಧನಿಯಲ್ಲಿ ರಾಜು ಆವರನ್ನು ಏಳ್ರೀ ಏಳ್ರೀ!! ಎದ್ದು ಹೊರಗೆ ಹೋಗ್ರೀ ಎಂದು ದಬಾಯಿಸುತ್ತಿರುವ ವೀಡೀಯೋ ಎಲ್ಲರಲ್ಲೂ ಆಕ್ರೋಶ ಮೂಡಿಸುತ್ತಿದೆ.
ಅಲ್ಲಾ ಬಿಟ್ರೇ ಬೇರೆ ಯಾವ ದೇವರೂ ಇಲ್ಲಾ! ಅಲ್ಲಾಹ್ ನನ್ನು ನಂಬದವರು ಕಾಫೀರರು ಎಂದು ಹಿಂದೂಗಳನ್ನೂ ಮತ್ತು ಹಿಂದೂ ದೇವರುಗಳನ್ನು ಹೋದ ಬಂದ ಕಡೆಯಲ್ಲೆಲ್ಲಾ ಅವಹೇಳನ ಮಾಡುವವರಿಗೆ ಹಿಂದೂಗಳ ಜಾತ್ರೆಗಳಲ್ಲಿ ಕೆಲ ವರ್ಷಗಳ ಹಿಂದೆ ವ್ಯಾಪಾರ ಮಾಡಲು ಅವಕಾಶ ನೀಡದೇ ಹೋದಾಗ, ಸರ್ವಜನಾಂಗದ ಶಾಂತಿಯ ತೋಟದಂತಹ ಈ ದೇಶದಲ್ಲಿ ಸರ್ವರಿಗೂ ಸಮಪಾಲು ಮತ್ತು ಸರ್ವರಿಗೂ ಸಮಬಾಳು ಎನ್ನುವಂತೆ ಈ ರೀತಿಯಾಗಿ ಮುಸಲ್ಮಾನರಿಗೆ ವ್ಯಾಪಾರ ಮಾಡಲು ಅವಕಾಶ ನೀಡದೇ ಹೋಗುವುದು ಸರಿಯಲ್ಲಾ ಎಂದು ಬೀದಿಗಿಳಿದು ಹೋರಾಟ ಮಾಡಿದ ಸ್ವಘೋಷಿತ ಜಾತ್ಯಾತೀತರು, ಬುದ್ದಿ ಜೀವಿಗಳಿಗೆ ಈ ರೀತಿಯಾಗಿ ಮದುವೆಗೆ ಕರೆದು ಹಣೆಗೆ ತಿಲಕವಿಟ್ಟ ಹಿಂದೂ ಎಂದೂ ಊಟದಿಂದ ಎಬ್ಬಿಸಿ ಕಳುಹಿಸಿದರ ವಿರುದ್ಧ ಸೊಲ್ಲತ್ತದೇ ಇರುವುದು ನಿಜಕ್ಕೂ ಅವರ ನಿಜ ಬಣ್ಣವನ್ನು ಬಯಲು ಮಾಡಿದೆ.
ಊಟಕ್ಕೆ ಕುಳಿತಲ್ಲಿಂದ ರಾಜುವನ್ನು ಎಬ್ಬಿಸಿದ ಅಕ್ಟೋಬರ್ 26ರಂದು ನಡೆದು ತಡವಾಗಿ ಬೆಳಕಿಗೆ ಬಂದಿದ್ದರೂ ಈ ಘಟನೆ ಕುರಿತು ಈಗ ಸಾರ್ವಜನಿಕ ವಲಯದಲ್ಲಿ ಪರ ಮತ್ತು ವಿರೋಧದ ಭಾರಿ ಆಕ್ರೋಶಗಳು ಕೇಳಿಬರುತ್ತಿದೆ. ಎಂದಿನಂತೆ ವಿಧಾನಸೌಧದಲ್ಲಿ ಪಾಕೀಸ್ಥಾನಕ್ಕೆ ಜಿಂದಾಬಾದ್ ಎಂದು ಹೇಳಿದ್ದರೂ ಅದು ನಾಸೀರ್ ಸಾಬ್ ಜಿಂದಾಬಾದ್ ಎಂದು ಹೇಳಿದ್ದು ಮಾಧ್ಯಮದಲ್ಲಿ ತಪ್ಪಾಗಿ ಕೇಳಿಸಿದೆ ಎಂದು ಸಮರ್ಥನೆ ಮಾಡಿಕೊಂಡಿದ್ದಂತೆ, ಈಗಲೂ ಸಹಾ ಕೆಲವರು ರಾಜು ಅವರಿಗೆ ಆಹ್ವಾನ ನೀಡದೇ ಇದ್ದರೂ ಮದುವೆಗೆ ಬಂದಿದ್ದಾರೆ ಎಂದು ಸಮೀವುಲ್ಲಾ ಅವರ ಪರವಾಗಿ ಮಾತನಾಡಿದ್ದರೆ, ಸ್ವತಃ ರಾಜು ಅವರೇ ಮಾಧ್ಯಮವೊಂದರ ಸಂದರ್ಶನವೊಂದರಲ್ಲಿ ತಿಳಿಸಿದಂತೆ, ಸಮೀವುಲ್ಲಾ ಅವರ ಸಂಬಂಧೀಕರೇ ಅಂಗಡಿಗೆ ಬಂದಿದ್ದಾಗ ಮದುವೆಗೆ ಆಹ್ವಾನಿಸುತ್ತಿದ್ದಕ್ಕಾಗಿಯೇ ಕೆಲಸ ಕಾರ್ಯಗಳನ್ನು ಬೇಗನೆ ಮುಗಿಸಿ ಬಂದಿದ್ದೆ ಆದರೂ ಹೀಗೆ ಕರೆದು ಅವಮಾನ ಮಾಡಿದ್ದು ಬಹಳ ಅವಮಾನವಾಗಿದೆ ಎಂದು ತಿಳಿಸಿದ್ದಾರೆ.
100-150/- ರೂಪಾಯಿಗೆ ಬೀದಿ ಬೀದಿಗಳಲ್ಲಿ ಬಿರ್ಯಾನಿ ಸಿಕ್ಕುವಾಗ ಈ ರೀತಿ ಬಿಟ್ಟಿ ಬಿರ್ಯಾನಿ ಆಸೆಗಾಗಿ ಅವರ ಮದುವೆ ಮನೆಗಳಿಗೆ ಹೋಗಿ ಅವಮಾನ ಮಾಡಿಸಿಕೊಂಡಿರುವುದು ಕೇವಲ ಆ ವ್ಯಕ್ತಿಗಷ್ಟೇ ಅವಮಾನ ಆಗಿರದೇ ಅದು ಸಕಲ ಹಿಂದೂಗಳಿಗೂ ಆದ ಅವಮಾನ. ಹಾಗಾಗಿ ಅಂತಹ ಮದುವೆಗಳಿಗೆ ಹೋಗಬೇಕೇ? ಎಂದು ಹಿಂದೂ ಪರ ಹೋರಾಟಗಾರರು ನಮ್ಮ ಹಿಂದೂಗಳಲ್ಲೇ ಪ್ರಶ್ನಿಸುತ್ತಿರುವುದು ಸರಿಯಾಗಿದೆ ಅಲ್ವೇ? ಸಂವಿಧಾನ, ಸಹ ಬಾಳ್ವೆ, ಭ್ರಾತೃತ್ವಾ ಎಲ್ಲಾ ಎನ್ನುವುದು ಕೇವಲ ಪುಸ್ತಕದ ಬದನೇಕಾಯಿ ಎನ್ನುವಂತಾಗಿದ್ದು, ದಂಡ ಹಿಡಿದು ಗಣವೇಶಧಾರಿಗಳಾಗಿ ಪಥಸಂಚಲನ ಮಾಡಿದರೆ ದಂಗೆಯಾಗುತ್ತದೆ ಎಂದು ಮಾಧ್ಯಮಗಳಲ್ಲಿ ಬೊಬ್ಬಿರಿವ, ಸಂಘದವರರಿಗೆ ಪಥಸಂಚಲನಕ್ಕೆ ಅವಕಾಶ ಕೊಟ್ಟಲ್ಲಿ ನಾವೂ ಸಹಾ ಬಿದಿರು ಕೋಲು, ಖಡ್ಗ ಮತ್ತು ಬಂದೂಕು ಹಿಡಿದು ಚಿತ್ತಾಪುರದಲ್ಲಿ ಪಥಸಂಚಲ ಮಾಡುತ್ತೇವೆ ಎಂದು ಜಿದ್ದಾ ಜಿದಾಗಿ ಬಿದ್ದಿರುವ ದಲಿತ ಸಂಘರ್ಷ ಸಮಿತಿ, ಭೀಮ್ ಆರ್ಮಿ, ಶಾಂತಿ ಸಮನ್ವಯ ಸಮಿತಿಯಂತಹ ದಲಿತ ಸಂಘಟನೆಗಳು ಈಗ ಹಣೆಗೆ ತಿಲಕವಿಟ್ಟ ದಲಿತನನ್ನು ಅವರದ್ದೇ ಬ್ರದರ್ಸ್ ಅಳು ಊಟದಲ್ಲಿ ಅವಮಾನ ಮಾಡಿರುವುದನ್ನುಯಾವ ರೀತಿ ಪ್ರತಿಕ್ರಿಯಿಸುತ್ತಾರೇ ಎಂಬುದೇ ಈಗ ಕುತೂಹಲಕ್ಕೆ ಕಾರಣವಾಗಿ ಕಾರಣವಾಗಿದ್ದು, ಕರೆದು/ಕರೆಯದೋ ಊಟಕ್ಕೆ ಹೋಗಿದ್ದಾಗ, ತಿಲಕ ಇಟ್ಟುಕೊಂಡ ಕಾರಣ ನೀಡಿ ಅರ್ಧದಲ್ಲೇ ಊಟದಿಂದ ದಲಿತ ಹಿಂದೂ ವ್ಯಕ್ತಿಯನ್ನು ಎಬ್ಬಿಸಿ ಹೊರಗೆ ಕಳುಹಿಸಿರುವುದು ಸಮಾಜದ ಸ್ವಾಸ್ಥ್ಯಕ್ಕೆ ಭಂಗ ತಂದಂತಾಗುವುದಿಲ್ಲವೇ?
ಏನಂತೀರೀ?
ನಿಮ್ಮವನೇ ಉಮಾಸುತ