ಈದ್ ಮಿಲಾದ್ ಅಥವಾ ಮೀಲಾದ್-ಉನ್-ನಬಿ ಇಸ್ಲಾಮಿಕ್ ಪರಂಪರೆಯಲ್ಲಿ ಪ್ರವಾದಿ ಮುಹಮ್ಮದ್ ಅವರ ಜನ್ಮವನ್ನು ಸ್ಮರಿಸುವ ಪ್ರಮುಖ ಧಾರ್ಮಿಕ ಆಚರಣೆಯಾಗಿದೆ. ಸಾಮಾನ್ಯವಾಗಿ ಪ್ರಾರ್ಥನೆ, ಕುರಾನ್ ಪಠಣ, ಧಾರ್ಮಿಕ ಪ್ರವಚನ, ದಾನಧರ್ಮ ಹಾಗೂ ಸಮುದಾಯದ ಕಾರ್ಯಕ್ರಮಗಳ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ. ಆದರೆ ಯಾವುದೇ ಧಾರ್ಮಿಕ ಹಬ್ಬದ ಮೂಲ ಉದ್ದೇಶವನ್ನೇ ಮೀರಿಸುವ ರೀತಿಯಲ್ಲಿ ಪ್ರಚೋದನಕಾರಿ ಘೋಷಣೆಗಳು, ವಿವಾದಾತ್ಮಕ ಬ್ಯಾನರ್‌ಗಳು, ರಾಜಕೀಯ ಅಥವಾ ವಿದೇಶಿ ಸಂಘರ್ಷಗಳಿಗೆ ಸಂಬಂಧಿಸಿದ ಸಂಕೇತಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಕಾರಿ ವಿಷಯಗಳು ಕಾಣಿಸಿಕೊಂಡಾಗ, ಸಹಜವಾಗಿಯೇ ಕಾನೂನು ಸುವ್ಯವಸ್ಥೆ ಮತ್ತು ಕೋಮು ಸೌಹಾರ್ದದ ಕುರಿತು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. 2026ರ ಆಗಸ್ಟ್ 26ರಂದು ಆಚರಿಸಲಾದ ಈದ್ ಮಿಲಾದ್ ಸಂದರ್ಭದಲ್ಲಿ ಅನಗತ್ಯವಾಗಿ ನಡೆದಿರುವ ಕೆಲವು ಅಹಿತಕರ ಘಟನೆಗಳಿಂದ ಕರ್ನಾಟಕ ರಾಜ್ಯದ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆಯಾಗಿರುವುದು ಆಘಾತಕಾರಿ ಹಾಗೂ ಆತಂಕಕಾರಿ ಬೆಳವಣಿಗೆಯಾಗಿದೆ.
ಚಿಕ್ಕಮಗಳೂರಿನ 40 ಅಡಿ ಟಿಪ್ಪು ಸುಲ್ತಾನ್ ಕಟೌಟ್ ವಿವಾದ

ಚಿಕ್ಕಮಗಳೂರಿನ ಟಿಪ್ಪುನಗರದಲ್ಲಿ ಈದ್ ಮಿಲಾದ್ ಆಚರಣೆಯ ಹಿನ್ನೆಲೆಯಲ್ಲಿ ಸುಮಾರು 40 ಅಡಿ ಎತ್ತರದ ಟಿಪ್ಪು ಸುಲ್ತಾನ್ ಕಟೌಟ್ ಅಳವಡಿಸಲಾಗಿತ್ತು. ಈ ಕಟೌಟ್‌ನ ಹಿನ್ನೆಲೆಯಲ್ಲಿರುವ ವಿಡಿಯೋವೊಂದಕ್ಕೆ ಪಾಕಿಸ್ತಾನ ಮತ್ತು ಮುಜಾಹಿದೀನ್ ಎಂಬ ಉಲ್ಲೇಖಗಳಿರುವ ಹಾಡನ್ನು ಸೇರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದ್ದು, ಈ ವಿಚಾರ ಎಲ್ಲೆಡೆ ಸುದ್ದಿಯಾಗಿತ್ತು. ಚಿಕ್ಕಮಗಳೂರು ನಗರ ಠಾಣೆಯ PSI ಧನರಾಜ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು BNS ಸೆಕ್ಷನ್ 196 ಮತ್ತು 299 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಡಿಯೋವನ್ನು ಮೊದಲು ಯಾರು ಸೃಷ್ಟಿಸಿದರು, ಯಾರು ಸಾಮಾಜಿಕ ಜಾಲತಾಣಕ್ಕೆ ಅಪ್‌ಲೋಡ್ ಮಾಡಿದರು ಮತ್ತು ನಂತರ ಯಾರು ಅದನ್ನು ಹಂಚಿಕೊಂಡರು ಎಂಬುದರ ಕುರಿತು ತನಿಖೆ ಆರಂಭಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 23 ವರ್ಷದ ಯುವಕನೊಬ್ಬನನ್ನು ಬಂಧಿಸಲಾಗಿದ್ದು, ಆತ ವಿಡಿಯೋವನ್ನು WhatsApp status, Instagram ಹಾಗೂ ಇತರರಿಗೆ ಕಳುಹಿಸುವ ಮೂಲಕ ಹರಡಿದ್ದಾನೆ ಎಂಬ ಆರೋಪವೂ ವರದಿಯಾಗಿದೆ. ವಿಡಿಯೋವನ್ನು ಮೂಲತಃ ಸೃಷ್ಟಿಸಿದ ವ್ಯಕ್ತಿಯನ್ನು ಪತ್ತೆಹಚ್ಚಲು Metaಗೆ IP ವಿವರಗಳನ್ನು ಕೇಳಲಾಗಿದೆ.
‘I Love Mohammad’ ಬ್ಯಾನರ್ ಮತ್ತೆ ಚರ್ಚೆಗೆ
ಟಿಪ್ಪು ಬ್ಯಾನರ್ ಕುರಿತಾದ ವಿವಾದಾತ್ಮಕ ಅಂಶಗಳು ಇನ್ನೂ ಹಚ್ಚಹಸಿರಾಗಿರುವಾಗಲೇ, ಈದ್ ಮಿಲಾದ್ ಮೆರವಣಿಗೆಯ ಸಂದರ್ಭದಲ್ಲಿ ಚಿಕ್ಕಮಗಳೂರಿನ ಟಿಪ್ಪುನಗರದಲ್ಲಿ ಮತ್ತು ಇನ್ನಿತರೆಡೆಯಲ್ಲಿ I Love Mohammad ಎಂಬ ಬ್ಯಾನರ್‌ಗಳು ಕಾಣಿಸಿಕೊಂಡಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.

I Love Mohammad ಎಂಬ ಘೋಷಣೆ ಸ್ವತಃ ಪ್ರವಾದಿಯ ಮೇಲಿನ ಧಾರ್ಮಿಕ ಪ್ರೀತಿಯನ್ನು ವ್ಯಕ್ತಪಡಿಸುವ ಪದಗಳಾಗಿರಬಹುದು. ಆದರೆ ಮೆರವಣಿಗೆಯ ಸಂದರ್ಭದಲ್ಲಿ ಅದನ್ನು ಎಲ್ಲಿ, ಯಾವ ರೀತಿಯಲ್ಲಿ ಮತ್ತು ಯಾವ ಸಂದರ್ಭದಲ್ಲಿಟ್ಟು ಪ್ರದರ್ಶಿಸಲಾಗಿದೆ ಎಂಬುದರ ಆಧಾರದ ಮೇಲೆ ಸ್ಥಳೀಯವಾಗಿ ವಿವಾದ ಉಂಟಾಗುವ ಸಾಧ್ಯತೆಯೂ ಇದೆ. 2025ರಲ್ಲಿ ಉತ್ತರ ಪ್ರದೇಶದ ಕಾನ್ಪುರದಲ್ಲಿ ಇದೇ ರೀತಿಯ ಬ್ಯಾನರ್ ವಿಚಾರ ವಿವಾದಕ್ಕೆ ಕಾರಣವಾಗಿತ್ತು. ನಂತರ ಈ ವಿಷಯ ಹಲವು ರಾಜ್ಯಗಳಿಗೆ ವಿಸ್ತರಿಸಿ ಪ್ರತಿಭಟನೆಗಳು ಮತ್ತು ಪೊಲೀಸ್ ಪ್ರಕರಣಗಳಿಗೆ ಕಾರಣವಾಗಿತ್ತು.
ಅಂಕೋಲಾದಲ್ಲಿ ಪ್ಯಾಲೆಸ್ತೀನ್ ಧ್ವಜ

ಚಿಕ್ಕಮಗಳೂರಿನ ಘಟನೆ ಹೀಗಿದ್ದರೆ, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿಯೂ ಈದ್ ಮಿಲಾದ್ ಮೆರವಣಿಗೆಯ ವೇಳೆ ಒಬ್ಬ ಯುವಕ ಪ್ಯಾಲೆಸ್ತೀನ್ ಧ್ವಜವನ್ನು ಪ್ರದರ್ಶಿಸಿದ ಘಟನೆ ವರದಿಯಾಗಿದೆ. ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಧ್ವಜವನ್ನು ವಶಕ್ಕೆ ಪಡೆದು ಯುವಕನನ್ನು ವಶಕ್ಕೆ ಪಡೆಯುವ ಸಂದರ್ಭದಲ್ಲಿ ಅಲ್ಪಸ್ವಲ್ಪ ಚಕಮಕಿ ನಡೆದಿತ್ತು. ಆದರೆ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಹಿರಿಯರು ಮಧ್ಯಪ್ರವೇಶಿಸಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ಕೈಮೀರದೆ ಮೆರವಣಿಗೆ ಶಾಂತಿಯುತವಾಗಿ ಮುಂದುವರಿದಿದೆ. ಪ್ಯಾಲೆಸ್ತೀನ್ ಪರ ಸಹಾನುಭೂತಿ ವ್ಯಕ್ತಪಡಿಸುವುದು ವ್ಯಕ್ತಿಯ ವೈಯಕ್ತಿಕ ಅಭಿಪ್ರಾಯವಾಗಿರಬಹುದು. ಆದರೆ ಅದನ್ನು ಧಾರ್ಮಿಕ ಮೆರವಣಿಗೆಯಲ್ಲಿ ಸಾರ್ವಜನಿಕವಾಗಿ ಪ್ರದರ್ಶಿಸುವಾಗ ಸ್ಥಳೀಯ ಕಾನೂನು, ಪೊಲೀಸ್ ಅನುಮತಿ ಮತ್ತು ಸಾರ್ವಜನಿಕ ಶಾಂತಿಯನ್ನೂ ಪರಿಗಣಿಸಬೇಕಾಗುತ್ತದೆ.
ಈದ್ ಮೆರವಣಿಗೆ ವೇಳೆ ಪುನೀತ್ ಕೆರೆಹಳ್ಳಿ ವಿರುದ್ಧ ಘೋಷಣೆ, ಹಿಂದೂ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ!
ಬಸವನಗುಡಿ ಬಳಿ ಈದ್ ಮಿಲಾದ್ ಮೆರವಣಿಗೆ ನಡೆಯುತ್ತಿದ್ದ ಸಂದರ್ಭದಲ್ಲಿ ಪುನೀತ್ ಕೆರೆಹಳ್ಳಿ ಅವರ ಕಚೇರಿಯ ಕೆಳಗಡೆ ಹತ್ತಾರು ಹುಡುಗರು ಬಂದು ಘೋಷಣೆಗಳನ್ನು ಕೂಗಿ ಪ್ರಚೋದನೆ ಮಾಡಿದ್ದಾರೆ. ಅವರನ್ನು ಆಚೆ ಕರೆಸಿಕೊಂಡು ಗಲಾಟೆ ಮಾಡಿದ್ದಲ್ಲದೇ, ರಾಷ್ಟ್ರರಕ್ಷಣಾ ಪಡೆ ಕಾರ್ಯಕರ್ತ ಮುರುಳಿ ಅವರ ಮೇಲೆ ಕೆಲ ಮುಸ್ಲಿಂ ಯುವಕರು ರಾಡ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿ ರಕ್ತ ಸೋರುವಂತೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದರ ಜೊತೆಗೆ “ಸರ್ ತಾನ್ ಸೆ ಜುದಾ ಪುನೀತ್ ಕೆರೆಹಳ್ಳಿ” ಅಂದರೆ ನಿನ್ನ ತಲೆಯನ್ನು ಕಡಿಯುತ್ತೇವೆ ಎಂಬ ಅರ್ಥದ ಘೋಷಣೆಗಳನ್ನು ಕೂಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದು ಮತ್ತಷ್ಟು ಆಘಾತಕಾರಿ ಸಂಗತಿಯಾಗಿದೆ.

ಇದೊಂದು ಪೂರ್ವನಿಯೋಜಿತ ಕೃತ್ಯ ಎನ್ನುವುದಕ್ಕೆ ಸಾಕ್ಷಿ ಎಂಬಂತೆ ಮತ್ತೊಂದು ವಿಡಿಯೋವೂ ವೈರಲ್ ಆಗಿದ್ದು, ಅದರಲ್ಲಿ ತಂಡ ತಂಡವಾಗಿ ಬೈಕ್‌ಗಳ ಮೇಲೆ ಮೂರ್ನಾಲ್ಕು ಹುಡುಗರು ಕುಳಿತುಕೊಂಡು ಘಟನೆ ನಡೆದ ಸ್ಥಳಕ್ಕೆ ಬಂದಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ ಎನ್ನಲಾಗಿದೆ. ಈದ್ ಮೆರವಣಿಗೆಯ ವೇಳೆ ಸುಮಾರು 100ಕ್ಕೂ ಹೆಚ್ಚು ಮುಸ್ಲಿಂ ಪುಂಡರು ರಾಷ್ಟ್ರ ರಕ್ಷಣಾ ಪಡೆ ಸ್ಥಾಪಕ ಪುನೀತ್ ಕೆರೆಹಳ್ಳಿ ಅವರ ಕಚೇರಿಯ ಮುಂದೆ ಹೋಗಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ತಮ್ಮ ಸಹಚರನ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನು ಪ್ರಶ್ನಿಸಿ ರಸ್ತೆಯ ಮೇಲೆ ಧರಣಿ ಕುಳಿತಿದ್ದ ಪುನೀತ್ ಕೆರೆಹಳ್ಳಿ ಮತ್ತು ಅವರ ಸಹಚರರನ್ನು ಪೊಲೀಸರು ಮನವೊಲಿಸಿದರು. ನಂತರ ಬಸವನಗುಡಿ ಪೊಲೀಸ್ ಇನ್ಸ್‌ಪೆಕ್ಟರ್ ಅವರೊಂದಿಗೆ ಚಿಕಿತ್ಸೆಗಾಗಿ ತಮ್ಮ ವಾಹನದಲ್ಲೇ ವಿಕ್ಟೋರಿಯಾ ಆಸ್ಪತ್ರೆಗೆ ಮುರುಳಿ, ಪುನೀತ್ ಕೆರೆಹಳ್ಳಿ, ತೇಜಸ್ ಗೌಡ, ನಿತಿನ್ ಅರಸು ಮುಂತಾದವರನ್ನು ಕರೆದೊಯ್ಯುತ್ತಿದ್ದಾಗಲೂ ಕಿಡಿಗೇಡಿಗಳು ಸುಮ್ಮನಾಗಲಿಲ್ಲ ಎನ್ನಲಾಗಿದೆ. ಅದೇ ಪುಂಡರು ಪೊಲೀಸ್ ವಾಹನವನ್ನು ಹಿಂಬಾಲಿಸಿ, ಅದನ್ನು ಅಡ್ಡಗಟ್ಟಿ ಮತ್ತೊಮ್ಮೆ ಅವರ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿದ್ದಲ್ಲದೇ, ಅಲ್ಲಾಹು ಅಕ್ಬರ್ ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ದಾಷ್ಟ್ಯತನವನ್ನು ತೋರಿದ್ದಾರೆ ಎಂಬ ಆರೋಪವೂ ಇದೆ. ಇಂತಹ ಬೆಳವಣಿಗೆಗಳು ದೇಶದ ಕಾನೂನು ಮತ್ತು ಸುವ್ಯವಸ್ಥೆಗೆ ಕವಡೆಯ ಕಾಸಿಗೂ ಬೆಲೆ ನೀಡದ ಮನೋಭಾವವನ್ನು ತೋರಿಸುವುದಲ್ಲದೇ, ಪೊಲೀಸರಿಗೂ ಬೆಲೆ ಕೊಡದ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದನ್ನು ಸೂಚಿಸುವ ಕಾರಣದಿಂದ ಅತ್ಯಂತ ಆತಂಕಕಾರಿ ಬೆಳವಣಿಗೆಗಳಾಗಿವೆ.
ಪುನೀತ್ ಕೆರೆಹಳ್ಳಿ ಮತ್ತು ಅವರ ಸಹಚರರ ಮೇಲೆ ಕೊಲೆ ಯತ್ನ ಹಾಗೂ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಕಮಲ್ ಪಾಷಾ, ಅಬೂಬಕರ್ ಸಿದ್ಧೀಕ್, ಸೈಯದ್ ಅನಾಸ್ ಎಂಬುವವರ ವಿರುದ್ಧ ಕೇಸ್ ದಾಖಲಾಗಿದೆ. ಅಚ್ಚರಿಯ ಸಂಗತಿಯೆಂದರೆ, ತನಿಖೆಯ ಸಂದರ್ಭದಲ್ಲಿ ಆ ಮೂವರು ಹುಡುಗರೂ ಸಹ ಅಪ್ರಾಪ್ತರು ಎಂಬ ಮಾಹಿತಿ ಹೊರಬಂದಿದೆ.
ಇದಕ್ಕಿಂತಲೂ ಅಚ್ಚರಿಯ ಸಂಗತಿಯೆಂದರೆ, ತಮ್ಮ ಮತ್ತು ತಮ್ಮ ಸಹಚರರ ಮೇಲೆ ನಡೆದ ದಾಳಿಯನ್ನು ಪ್ರತಿಭಟಿಸಿದ್ದ ಪುನೀತ್ ಕೆರೆಹಳ್ಳಿ, ಗೋಪಿ ಗೌಡ, ವಿನೋದ್ ನಾಯಕ್ ಎಂಬುವರನ್ನು ಸಾರ್ವಜನಿಕ ರಸ್ತೆ ತಡೆ ಹಾಗೂ ಸಂಚಾರಕ್ಕೆ ಅಡ್ಡಿ ಆರೋಪದಡಿ ಅರೆಸ್ಟ್ ಮಾಡಲಾಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿ, ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಾಗಿರುವ ಪರಿಣಾಮ, ಸದ್ಯ ಘಟನಾ ಸ್ಥಳದಲ್ಲಿ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಿ ಬಂದೋಬಸ್ತ್ ಮಾಡಿದ್ದು, ಸ್ಥಳೀಯ ಪೊಲೀಸರಿಂದಲೂ ಗಸ್ತು ಮುಂದುವರಿದಿದೆ.
ಎಲ್ಲಿದ್ದಾರೆ RSS ಗೃಹ ಸಚಿವರು? — ಜನರ ಆಕ್ರೋಶ
ತಮ್ಮ ಹೈಕಮಾಂಡ್ ನಾಯಕರನ್ನು ಓಲೈಸುವ ಸಲುವಾಗಿ ನಿರಂತರವಾಗಿ ಆರ್‌ಎಸ್‌ಎಸ್ ಸಂಘಟನೆಯ ನೋಂದಣಿ ಹಾಗೂ ಕಾನೂನು ಮಾನ್ಯತೆಯ ಕುರಿತಾಗಿ ಈ ಹಿಂದೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾಗಿದ್ದಾಗಲೂ, ಈಗ ಗೃಹ ಸಚಿವರಾದ ನಂತರವೂ ಪ್ರಿಯಾಂಕ್ ಖರ್ಗೆ ನಿರಂತರವಾಗಿ ಒಂದಲ್ಲಾ ಒಂದು ಪ್ರಶ್ನೆ ಎತ್ತುತ್ತಾ ಬಂದಿದ್ದಾರೆ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೂ ಪತ್ರ ಬರೆಯುವ ಮೂಲಕ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬಹುಚರ್ಚಿತ ವಿಚಾರವನ್ನಾಗಿಸಿ, ಒಂದು ರೀತಿಯಲ್ಲಿ “RSS ಗೃಹ ಸಚಿವರು” ಎಂದು ಜನರು ಆಡಿಕೊಳ್ಳುವಷ್ಟು ಪ್ರ(ಕು)ಖ್ಯಾತಿಯನ್ನು ಪಡೆದುಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ.

ಸಂಘಕ್ಕೆ ನೂರು ವರ್ಷ ಆದ ಸಂದರ್ಭದಲ್ಲಿ ದೇಶಾದ್ಯಂತ ನಡೆದ ಪಥಸಂಚಲನದ ಸಂದರ್ಭದಲ್ಲಿ ತಮ್ಮ ಸ್ವಕ್ಷೇತ್ರ ಗುಲ್ಬರ್ಗಾದಲ್ಲಿ ಪಥಸಂಚಲನ ನಡೆಸಲು ಮುಂದಾದಾಗ, RSS ಕೋಮು ಗಲಭೆಗಳನ್ನು ಸೃಷ್ಟಿ ಮಾಡುವಂತಹ ಸಂಘಟನೆ, ಹೊರತು ಕೋಮು ಗಲಭೆ ರಕ್ಷಣೆ ಮಾಡುವಂತಹ ಸಂಘಟನೆ ಅಲ್ಲ ಎಂದು ಹೋದಲ್ಲೆಲ್ಲಾ ಹೇಳುತ್ತಾ ಬಂದಿದ್ದ ಪ್ರಿಯಾಂಕ್ ಖರ್ಗೆ ಅವರನ್ನೇ ಪರಿಷತ್ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಛಲವಾದಿ ನಾರಾಯಣಸ್ವಾಮಿ ಅವರು ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 524ರಲ್ಲಿ ರಾಜ್ಯದಲ್ಲಿ ಆರೆಸ್ಸೆಸ್ ವಿರುದ್ಧ ಎಷ್ಟು ಪ್ರಕರಣಗಳು ದಾಖಲಾಗಿವೆ? ಸಂಘ ಯಾವುದಾದರೂ ಗಲಭೆ ಪ್ರಕರಣದಲ್ಲಿ ಭಾಗಿಯಾಗಿದೆಯೇ? ಪಥಸಂಚಲನದ ಸಂದರ್ಭದಲ್ಲಿ ಯಾವುದಾದರೂ ಅಹಿತಕರ ಘಟನೆ ದಾಖಲಾಗಿದೆಯೇ? ಎಂದು ಪ್ರಶ್ನಿಸಿದ್ದರು.
ಇದಕ್ಕೆ ಉತ್ತರಿಸಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಯಾವುದೇ ಪ್ರಕರಣಗಳು ದಾಖಲಾಗಿರುವುದಿಲ್ಲ ಎಂದು ಒಂದೇ ವಾಕ್ಯದಲ್ಲಿ ಹೇಳುವ ಮೂಲಕ ಭಾರೀ ಮುಖಭಂಗವನ್ನು ಅನುಭವಿಸಿದ್ದಲ್ಲದೇ, ಜನರ ಮುಂದೆ ನಗೆಪಾಟಲಿಗೆ ಗುರಿಯಾಗಿದ್ದಾರೆ.
ಅದೇ ರೀತಿಯಾಗಿ ಸಂಘದ ಹೆಸರನ್ನು ನೇರವಾಗಿ ಹೇಳದೇ, ಯಾವುದೇ ಸಂಘಟನೆ ಸರ್ಕಾರಿ ಅಥವಾ ಸರ್ಕಾರದ ಅಧೀನದಲ್ಲಿರುವ ಧಾರ್ಮಿಕ ಕಟ್ಟಡಗಳಲ್ಲಿ ಯಾವುದೇ ರೀತಿಯ ಸಭೆ, ಸಮಾರಂಭಗಳು ಅಥವಾ ಭೈಠಕ್ ನಡೆಸಲು ಸ್ಥಳೀಯ ಆಡಳಿತದ ಪೂರ್ವಾನುಮತಿ ಬೇಕು ಎನ್ನುವಂತಹ ಕಾನೂನು ತಂದು, ಸಾರ್ವಜನಿಕ ಮೈದಾನಗಳು ಮತ್ತು ಉದ್ಯಾನವನಗಳಲ್ಲಿ ನಡೆಯುವ ಸಂಘದ ದೈನಂದಿನ ಶಾಖೆಗಳ ಮೇಲೆ ಪರೋಕ್ಷವಾಗಿ ನಿಷೇಧ ಹೇರಲು ಮುಂದಾಗಿರುವ ಪ್ರಿಯಾಂಕ್ ಖರ್ಗೆ, ಇದೇ ಈದ್ ಮಿಲಾದ್ ಹೆಸರಿನಲ್ಲಿ ರಾಜ್ಯದಲ್ಲಿ ಈ ಪರಿಯ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವಾಗ ಈ ಕುರಿತಾಗಿ ಇದುವರೆಗೂ ಒಂದು ಮಾತನ್ನೂ ಆಡದಿರುವುದು ರಾಜ್ಯದ ಜನತೆಯ ಅಸಹನೆಗೆ ಕಾರಣವಾಗಿದೆ. ಈ ಕುರಿತಾಗಿ ರಾಜ್ಯದ ಗೃಹ ಸಚಿವರ ಬಗ್ಗೆ ಜನರು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ತಮ್ಮ ಇಡೀ ಇಲಾಖೆಯ ಕೆಲಸವನ್ನು ಬದಿಗಿಟ್ಟು ಸಂಘದ ವಿರುದ್ಧ ಮಾತನಾಡುವುದನ್ನೇ ಕಾಯಕ ಮಾಡಿಕೊಂಡು RSS ಗೃಹ ಸಚಿವರು ಎಂದೇ ಜನರು ಆಡಿಕೊಳ್ಳುವ ಪರಿಸ್ಥಿತಿಗೆ ತಕ್ಕಂತೆ, ತಮ್ಮದೇ ಇಲಾಖೆಯ ಅಡಿಯಲ್ಲಿ ಬರುವಂತಹ ಈ ಕುಕೃತ್ಯಗಳ ವಿರುದ್ಧ ಚಕಾರ ಎತ್ತದೇ ಇರುವುದು ಮತ್ತು ಪ್ರಸ್ತುತ ಮುಖ್ಯಮಂತ್ರಿಗಳು ಈ ಹಿಂದೆ ಉಪಮುಖ್ಯಮಂತ್ರಿಗಳಾಗಿದ್ದಾಗ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದ ಮುಸ್ಲಿಂ ಯುವಕನ ಪರವಾಗಿ ಆತ ತಮ್ಮ “ಬ್ರದರ್ಸ್ ಎಂದು ಹೇಳುವ ಮೂಲಕ ಮುಸಲ್ಮಾನರ ಪರವಾಗಿ ಓಲೈಕೆ ಮಾಡಿದ್ದನ್ನೇ ಗೃಹಸಚಿವರೂ ಮುಂದುವರೆಸಿಕೊಂಡು ಹೋಗುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.
ಒಬ್ಬರ ಕೃತ್ಯಕ್ಕೆ ಇಡೀ ಸಮುದಾಯವನ್ನು ಹೊಣೆ ಮಾಡುವುದು ಸರಿಯೇ?
ಮುಸಲ್ಮಾನರಿಂದ ದೇಶದಲ್ಲಿ ಪದೇ ಪದೇ ಇಂತಹ ದೇಶ ಮತ್ತು ಧರ್ಮ ವಿರೋಧಿ ಕುಕೃತ್ಯಗಳು ನಡೆಯುತ್ತಿದ್ದರೂ ಅದನ್ನು ವಿರೋಧಿಸದೇ, ಯಾರಾದರೂ ಪ್ರಚೋದನಕಾರಿ ಘೋಷಣೆ ಕೂಗಿದರೆ ಅದಕ್ಕೆ ಆ ವ್ಯಕ್ತಿಯೇ ಹೊಣೆಗಾರ. ಯಾರಾದರೂ ಸಾಮಾಜಿಕ ಮಾಧ್ಯಮದಲ್ಲಿ ದ್ವೇಷ ಹರಡುವ ವಿಡಿಯೋ ಹಾಕಿದರೆ, ಅದನ್ನು ಸೃಷ್ಟಿಸಿದ ಅಥವಾ ಉದ್ದೇಶಪೂರ್ವಕವಾಗಿ ಹಂಚಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು. ಆದರೆ ಅದಕ್ಕಾಗಿ ಇಡೀ ಮುಸ್ಲಿಂ ಸಮುದಾಯವನ್ನೇ ತಪ್ಪಿತಸ್ಥರೆಂದು ಹೇಳುವುದು ನ್ಯಾಯಸಮ್ಮತವಲ್ಲ ಎಂಬ ಸಿದ್ಧ ಘೋಷಣೆಯನ್ನು ಹೇಳಲು ಸ್ವಘೋಷಿತ ಜಾತ್ಯಾತೀತರು ಮುಂದೆ ಬರುವುದು ಈ ದೇಶದ ದೌರ್ಭಾಗ್ಯವಾಗಿದೆ.
ಕೋಮು ಸೌಹಾರ್ದದ ಮೂಲತತ್ವವೇ ಇದು
ಅಪರಾಧಕ್ಕೆ ವ್ಯಕ್ತಿಯೇ ಹೊಣೆ, ಸಮುದಾಯವಲ್ಲ. ಎಂದರೆ, ಪದೇ ಪದೇ ಅದೇ ಸಮುದಾಯದ ವ್ಯಕ್ತಿಗಳೇ ದೇಶದಲ್ಲಿ ನಡೆಯುವ ನೂರಾರು ದಂಗೆಗಳಲ್ಲಿ ಕಾಣಿಸಿಕೊಳ್ಳುವುದಾದರೂ ಹೇಗೆ? ಇದನ್ನೇ ಗಮನಿಸಿಯೇ ಏನೋ, ಈ ಹಿಂದೆ ಅಡ್ವಾಣಿಯವರು “ಈ ದೇಶದ ಎಲ್ಲಾ ಮುಸಲ್ಮಾನರೂ ಭಯೋತ್ಪಾದಕರಲ್ಲ, ಆದರೆ ಭಯೋತ್ಪಾದಕರು ಎಲ್ಲರೂ ಮುಸಲ್ಮಾನರೇ” ಎಂದು ಹೇಳಿದ್ದರು ಎನ್ನುವುದು ಇಲ್ಲಿ ಗಮನಾರ್ಹವಾಗಿದೆ.
ಆದರೆ ಈ ಮಾತಿನ ರಾಜಕೀಯ ಮತ್ತು ಸಾಮಾಜಿಕ ಪರಿಣಾಮಗಳನ್ನು ಬದಿಗಿಟ್ಟು ನೋಡಿದರೂ, ಒಂದು ಸಂಗತಿ ಮಾತ್ರ ಸ್ಪಷ್ಟ — ಯಾವುದೇ ಅಪರಾಧದ ಹೊಣೆಗಾರಿಕೆಯನ್ನು ಅಪರಾಧ ಎಸಗಿದ ವ್ಯಕ್ತಿಯ ಮೇಲೆಯೇ ನಿಗದಿಪಡಿಸುವುದು ಕಾನೂನಿನ ಮೂಲತತ್ವವಾಗಬೇಕು; ಇಡೀ ಸಮುದಾಯವನ್ನು ಅಪರಾಧಿಯನ್ನಾಗಿ ನೋಡುವುದು ಸಮಸ್ಯೆಗೆ ಪರಿಹಾರವಲ್ಲ.
ಹಬ್ಬದ ಹೆಸರಿನಲ್ಲಿ ರಾಜಕೀಯ
ಧಾರ್ಮಿಕ ಹಬ್ಬಗಳು ಸಮಾಜವನ್ನು ಒಗ್ಗೂಡಿಸುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕೇ ಹೊರತು, ಮೆರವಣಿಗೆಯ ಗಾತ್ರ, ಬ್ಯಾನರ್‌ಗಳು, ಕಟೌಟ್‌ಗಳು, ಧ್ವಜಗಳು, ಘೋಷಣೆಗಳು ಮತ್ತು ಸಾಮಾಜಿಕ ಮಾಧ್ಯಮದ ರೀಲ್ಸ್‌ಗಳ ಮೂಲಕ “ನಾವು–ಅವರು” ಎಂಬ ಮನೋಭಾವವನ್ನು ಬೆಳೆಸುವ ಪ್ರಯತ್ನ ನಡೆದರೆ, ಹಬ್ಬದ ಮೂಲ ಉದ್ದೇಶವೇ ಹಾಳಾಗುತ್ತದೆ.
ಯಾವುದೇ ಧರ್ಮದ ಮೆರವಣಿಗೆಯಲ್ಲಿ ಪ್ರಚೋದನಕಾರಿ ಘೋಷಣೆ, ದ್ವೇಷಪೂರಿತ ಪೋಸ್ಟರ್, ಇನ್ನೊಂದು ಧರ್ಮದ ಸಂಕೇತದ ಅವಹೇಳನ ಅಥವಾ ಹಿಂಸೆಗೆ ಪ್ರಚೋದನೆ ಕಂಡುಬಂದರೆ ಕಾನೂನು ಎಲ್ಲರಿಗೂ ಒಂದೇ ರೀತಿಯಲ್ಲಿ ಅನ್ವಯಿಸಬೇಕು. ಕರ್ನಾಟಕಕ್ಕೆ ಬೇಕಾಗಿರುವುದು ‘ಮೆರವಣಿಗೆ ರಾಜಕೀಯ’ ಅಲ್ಲ; ‘ಮೆರವಣಿಗೆ ಶಿಸ್ತು’.
ಕರ್ನಾಟಕಕ್ಕೆ ಬೇಕಿರುವುದು ಒಂದೇ ಕಾನೂನು, ಒಂದೇ ಮಾನದಂಡ
ಕರ್ನಾಟಕದಲ್ಲಿ ವಿವಿಧ ಧರ್ಮಗಳ ಹಬ್ಬಗಳು ವರ್ಷವಿಡೀ ನಡೆಯುತ್ತವೆ. ಗಣೇಶೋತ್ಸವ, ಈದ್ ಮಿಲಾದ್, ಮೊಹರಂ, ಕ್ರಿಸ್‌ಮಸ್, ದೀಪಾವಳಿ, ಉರುಸ್ ಸೇರಿದಂತೆ ಅನೇಕ ಆಚರಣೆಗಳು ಸಾರ್ವಜನಿಕ ಸ್ಥಳಗಳೊಂದಿಗೆ ಸಂಪರ್ಕ ಹೊಂದಿವೆ. ಆದ್ದರಿಂದ ಸರ್ಕಾರವು ಎಲ್ಲ ಧಾರ್ಮಿಕ ಮೆರವಣಿಗೆಗಳಿಗೂ ಒಂದೇ ರೀತಿಯ ಸ್ಪಷ್ಟ ನಿಯಮಗಳನ್ನು ರೂಪಿಸುವುದು ಅಗತ್ಯ. ಯಾವ ಧರ್ಮದ ಮೆರವಣಿಗೆಯೇ ಆಗಿರಲಿ, ಅನುಮತಿ, ಮಾರ್ಗ, ಧ್ವನಿವರ್ಧಕ, ಬ್ಯಾನರ್, ಕಟೌಟ್, ಧ್ವಜ, ಘೋಷಣೆ, ಸಾಮಾಜಿಕ ಮಾಧ್ಯಮದ ಪ್ರಸಾರ ಮತ್ತು ಸಾರ್ವಜನಿಕ ಸಂಚಾರದ ವಿಚಾರದಲ್ಲಿ ಒಂದೇ ರೀತಿಯ ನಿಯಮಗಳು ಅನ್ವಯವಾಗಬೇಕು. ಕಾನೂನು ಒಂದು ಸಮುದಾಯಕ್ಕೆ ಕಠಿಣವಾಗಿ, ಮತ್ತೊಂದು ಸಮುದಾಯಕ್ಕೆ ಸಡಿಲವಾಗಿ ಅನ್ವಯವಾದರೆ ಅದು ಕಾನೂನಿನ ಮೇಲಿನ ಜನರ ನಂಬಿಕೆಗೆ ಧಕ್ಕೆ ತರುತ್ತದೆ.
ಕೊನೆಯ ಮಾತು
ಈದ್ ಮಿಲಾದ್ ಒಂದು ಧಾರ್ಮಿಕ ಆಚರಣೆ. ಅದರ ಮೂಲ ಸಂದೇಶವನ್ನು ಯಾವುದೇ ಒಂದು ಘಟನೆ, ಒಂದು ಬ್ಯಾನರ್, ಒಂದು ಕಟೌಟ್ ಅಥವಾ ಒಬ್ಬ ವ್ಯಕ್ತಿಯ ಕೃತ್ಯದಿಂದ ಅಳೆಯಲು ಸಾಧ್ಯವಿಲ್ಲ ಎನ್ನುವುದು ಸತ್ಯ.
ಆದರೆ ಯಾವುದೇ ಸಮುದಾಯದ ವ್ಯಕ್ತಿ ಹಿಂಸಾಚಾರ ನಡೆಸಿದರೆ, ಮತ್ತೊಂದು ಸಮುದಾಯದ ವಿರುದ್ಧ ದ್ವೇಷ ಹರಡಿದರೆ, ದೇಶವಿರೋಧಿ ವಿಷಯವನ್ನು ಉದ್ದೇಶಪೂರ್ವಕವಾಗಿ ಪ್ರಚಾರ ಮಾಡಿದರೆ, ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದರೆ ಅಥವಾ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ, ಆತ ಪ್ರಭಾವಿ ವ್ಯಕ್ತಿಯೇ ಆಗಿರಲಿ, ಆತನ ಧರ್ಮ, ಜಾತಿ ಯಾವುದಾಗಿರಲಿ ಎಂಬುದನ್ನು ಪರಿಗಣಿಸದೇ, ಯಾರ ಮುಲಾಜಿಗೂ ಒಳಗಾಗದೆ ಕಾನೂನಿನ ಪ್ರಕಾರ ಕ್ರಮ ಕೈಗೊಂಡಾಗಲೇ ಅದು ಜಾತ್ಯಾತೀತ ಸರ್ಕಾರ ಎನಿಸಿಕೊಳ್ಳುತ್ತದೆ.
ಅದು ಬಿಟ್ಟು ಬಹುಸಂಖ್ಯಾತ ಹಿಂದೂಗಳ ವಿರುದ್ಧ ಕಾನೂನು ಕ್ರಮ ಮತ್ತು ಅಲ್ಪಸಂಖ್ಯಾತರಿಗೆ ಓಲೈಕೆ ಮಾಡಿದರೆ, ಅದೊಂದು ದೇಶವಿರೋಧಿ ಕೃತ್ಯ ಎನಿಸಿಕೊಳ್ಳುತ್ತದೆ ಅಲ್ವೇ?