ಧ್ರುವ್ ರಾಠಿ ಟೀಕೆಗೆ ಬಿಟ್ಟು ತಬಾಹಿ ಸಮಯೋಚಿತ ತಿರುಗೇಟು!

ರಾಜಕೀಯಕ್ಕಿಂತ ದೊಡ್ಡದು ನಾಗರಿಕ ಜವಾಬ್ದಾರಿ! ಜರ್ಮನಿಯಲ್ಲಿರುವ ಧ್ರುವ್ ರಾಠಿಯ ನದಿ ಸ್ವಚ್ಛತೆಯ ಕ್ರೆಡಿಟ್ ಕುರಿತಾದ ಟೀಕೆಗೆ 20 ಹರೆಯದ ಸುರೇಂದ್ರ ಸಿಂಗ್ ಚೌಧರಿಯ (ಬಿಟ್ಟು ತಬಾಹಿ) ಸಮಯೋಚಿತ ತಿರುಗೇಟು!

ಮಧ್ಯಪ್ರದೇಶದ ಬಿಯೋರಾ ಪಟ್ಟಣದ ಅಜನಾರ್ ನದಿ ಇಂದು ಕೇವಲ ಒಂದು ನದಿಯ ಕಥೆಯಲ್ಲ. ಅದು ಒಬ್ಬ ಸಾಮಾನ್ಯ ಯುವಕನ ಅಸಾಮಾನ್ಯ ನಾಗರಿಕ ಜವಾಬ್ದಾರಿಯ ಕಥೆ. ಸಾಮಾಜಿಕ ಜಾಲತಾಣದಲ್ಲಿ ಬಿಟ್ಟು ತಬಾಹಿ ಎಂದು ಪರಿಚಿತರಾಗಿರುವ ಸುರೇಂದ್ರ ಸಿಂಗ್ ಚೌಧರಿ, ಕಲುಷಿತಗೊಂಡಿದ್ದ ಅಜನಾರ್ ನದಿಯ ಸ್ವಚ್ಛತೆಗೆ ಸ್ವತಃ ಕೈಜೋಡಿಸಿ ದೇಶದ ಗಮನ ಸೆಳೆದಿದ್ದಾರೆ.

While many people complained about the polluted Ajnar River ...

ತಾನಿದ್ದ ಪ್ರದೇಶದ ಬಳಿಯೇ ಇದ್ದ ಅಜನಾರ್ ನದಿಗೆ ಜನ ಸಾಮಾನ್ಯರು ಕಸ ಕಡ್ಡಿಗಳನ್ನು ಹಾಕಿ ಕೊಳಕು ಮಾಡಿದ್ದನ್ನು ಕಂಡು ಆತನಿಗೆ ಬಹಳ ಬೇಸರವಾಗಿಯಿತು. ಸಾಮಾನ್ಯವಾಗಿ ಬಹುತೇಕರು ಸರ್ಕಾರ ಎನು ಮಾಡುತ್ತಿದೆ ಎಂದು ಜೋರಾಗಿ ಪ್ರತಿಭಟಿಸುವುದು ಸಹಜ ಪ್ರಕ್ರಿಯೆಯಾದರೆ, ಬಿಟ್ಟು ತನ್ನ ಪಾಡಿಗೆ ತಾನು, ಸದ್ದಿಲ್ಲದೇ,  ಜನವರಿ 26ರಂದು ಕೈಯಲ್ಲಿ ಹಾರೆ, ಪಿಕಾಸಿ, ಗುದ್ದಲಿ ಹಿಡಿದು ಆರಂಭಿಸಿದ ಈ ಪ್ರಯತ್ನ ಮುಂದೆ ಹಲವು ತಿಂಗಳ ಅಭಿಯಾನವಾಗಿ ಬೆಳೆದಿದೆ. ಪ್ಲಾಸ್ಟಿಕ್, ಬಾಟಲಿ, ಕಳೆ ಹಾಗೂ ಇತರ ತ್ಯಾಜ್ಯವನ್ನು ಅವರು ಸ್ವತಃ ತೆರವುಗೊಳಿಸುತ್ತಾ ಬಂದಿದ್ದಾರೆ. ಅವರ before-after ಚಿತ್ರಗಳು ವೈರಲ್ ಆದ ಬಳಿಕ ಈ ಪ್ರಯತ್ನ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಯಿತು. ಸ್ಥಳೀಯ ಆಡಳಿತವೂ ನಂತರ ಯಂತ್ರೋಪಕರಣಗಳ ಮೂಲಕ ನೆರವು ನೀಡಿತು.

Bittu Tabahi meets Madhya Pradesh CMಇದೀಗ ಈ ಯುವಕನ ಕೆಲಸಕ್ಕೆ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಮೆಚ್ಚುಗೆ ವ್ಯಕ್ತಪಡಿಸಿರುವುದು ಮಾತ್ರವಲ್ಲ, ನೆದರ್‌ಲ್ಯಾಂಡ್ಸ್‌ನ The Ocean Cleanup ಸಂಸ್ಥೆಯ ಸಂಸ್ಥಾಪಕ ಬೊಯಾನ್ ಸ್ಲಾಟ್ ಕೂಡ ಅವರಿಗೆ ಕೆಲಸದ ಆಹ್ವಾನ ನೀಡಿದ್ದಾರೆ. ಆದರೆ ತಾನೂ ಒಳ್ಳೆಯ ಕೆಲಸವನ್ನು ಮಾಡುವುದಿಲ್ಲ ಮತ್ತು ಬೇರೆಯವರು ಮಾಡಿದರೂ ಸಹಿಸುವುದಿಲ್ಲ ಎನ್ನುವಂತಹ ದೂರದ ಜರ್ಮನಿಯಲ್ಲಿರುವ ಧ್ರುವ್ ರಾಠಿ ಕೈಯ್ಯಲ್ಲಿ ಆಗದೇ ಇರೋನು ಮೈಯೆಲ್ಲಾ ಪರಚಿಕೊಂಡ ಎನ್ನುವಂತೆ ಅನಗತ್ಯವಾಗಿ ಈ ವಿಚಾರವಾಗಿ ಕ್ರೆಡಿಟ್ ವಿವಾದವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಬಿಟ್ಟು ತಬಾಹಿ ಯಾರು?

Bittu Tabahi 20-Year-Old Youth Gives Polite Retort to Dhruv Rathee Over BJP Remark

ಸುರೇಂದ್ರ ಸಿಂಗ್ ಚೌಧರಿ ಮಧ್ಯಪ್ರದೇಶದ ಯುವ ವಿದ್ಯಾರ್ಥಿ. ಸಾಮಾಜಿಕ ಜಾಲತಾಣದಲ್ಲಿ ಅವರು Bittu Tabahi ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದಾರೆ. ಅಜನಾರ್ ನದಿಯ ದುಸ್ಥಿತಿಯನ್ನು ಕಂಡು ಯಾರಾದರೂ ಬಂದು ಸ್ವಚ್ಛ ಮಾಡುತ್ತಾರೆ” ಎಂದು ಕಾಯದೆ, ತಾವೇ ಕೆಲಸ ಆರಂಭಿಸುವ ನಿರ್ಧಾರ ಕೈಗೊಂಡರು. ವರದಿಗಳ ಪ್ರಕಾರ, ಆರಂಭದಲ್ಲಿ ಕೆಲವು ಸ್ನೇಹಿತರು ಅವರೊಂದಿಗೆ ಇದ್ದರೂ ನಂತರ ಅವರು ಹಿಂದೆ ಸರಿದರು. ಆದರೆ ಸುರೇಂದ್ರ ತಮ್ಮ ಪ್ರಯತ್ನವನ್ನು ನಿಲ್ಲಿಸಲಿಲ್ಲ. ಸ್ವಂತ ಶ್ರಮ ಮತ್ತು ಸಂಪನ್ಮೂಲ ಬಳಸಿ ನದಿಯ ತ್ಯಾಜ್ಯವನ್ನು ತೆರವುಗೊಳಿಸುತ್ತಾ ಮುಂದುವರಿದರು.  ಈ ಕೆಲಸದ ವೇಳೆ ಅವರಿಗೆ ಆರೋಗ್ಯ ಸಮಸ್ಯೆಯೂ ಎದುರಾಯಿತು. ಸ್ಥಳೀಯ ವರದಿಗಳ ಪ್ರಕಾರ, ನದಿ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಕಾಲಿಗೆ ಸೋಂಕು ಉಂಟಾಗಿತ್ತು. ಆದರೂ ಅವರು ಕೆಲಸ ಮುಂದುವರಿಸಿದರು. ಅವರ ಕೆಲಸದ ವಿಶೇಷತೆ ಏನೆಂದರೆ,  ಯಾವುದೇ ದೊಡ್ಡ ಸಂಸ್ಥೆ, ದೊಡ್ಡ ಬಜೆಟ್ ಅಥವಾ ರಾಜಕೀಯ ವೇದಿಕೆಯ ನಿರೀಕ್ಷೆಯಿಲ್ಲದೆಒಬ್ಬ ಯುವಕ ತನ್ನ ಊರಿನ ಸಮಸ್ಯೆಯನ್ನು ತನ್ನದೇ ಸಮಸ್ಯೆ ಎಂದುಕೊಂಡದ್ದು. ಇದೇ ಕಾರಣಕ್ಕೆ ಅವರ ಕಥೆ ದೇಶದಾದ್ಯಂತ ಗಮನ ಸೆಳೆಯಿತು.

ಬಿಟ್ಟು ಭೇಟಿಯಾದ ಮಧ್ಯಪ್ರದೇಶದ ಮುಖ್ಯಮಂತ್ರಿ

ಬಿಟ್ಟು ತಬಾಹಿ ಅವರ ಕೆಲಸ ವೈರಲ್ ಆಗುತ್ತಿದ್ದಂತೆಯೇ ಮಧ್ಯಪ್ರದೇಶದ ಮುಖ್ಯಮಂತ್ರಿಗಳಾದ ಶ್ರೀ ಮೋಹನ್ ಯಾದವ್ ಬಿಟ್ಟು ತಬಾಹಿಯನ್ನು ಭೋಪಾಲ್‌ನಲ್ಲಿ ಭೇಟಿಯಾಗಿ ಆವನ ಪ್ರಯತ್ನವನ್ನು ಶ್ಲಾಘಿಸಿ, ಒಬ್ಬ ವ್ಯಕ್ತಿಯ ಪ್ರಾಮಾಣಿಕ ಪ್ರಯತ್ನವೂ ಸಾಮಾಜಿಕ ಬದಲಾವಣೆಗೆ ಹೇಗೆ ಕಾರಣವಾಗಬಹುದು ಎಂಬುದಕ್ಕೆ ತಬಾಹಿ ಕೆಲಸವೇ ಉದಾರಣೆ ಎಂಬ ಸಂದೇಶವನ್ನು ನೀಡಿದರು. ಇತರರಿಗೂ ಅದರಲ್ಲೂ ಇಂದಿನ ಝೆನ್ ಜೀ ಯುವಜನತೆಗೆ ಪ್ರೇರಣೆಯಾಗಲಿ ಎಂದು ಈ ಭೇಟಿಯ ವಿಡಿಯೋವನ್ನು ಮುಖ್ಯಮಂತ್ರಿಯವರ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲೂ ಹಂಚಿಕೊಳ್ಳುತ್ತಿದ್ದಂತೆಯೇ, ಅದರ ಶಾಖ ದೂರದ ಜರ್ಮನಿಯಲ್ಲಿದ ಧ್ರುವ್ ರಾಠಿಯ ಬುಡಕ್ಕೆ ತಗುಲಿ ಅಲ್ಲಿಂದಲೇ ಆತ ಟೀಕೆಯನ್ನು ಪ್ರಾರಂಭಿಸಿದ

ಧ್ರುವ್ ರಾಠಿಯ ಟೀಕೆಯೇನು?

Bittu Tabahi has responded to YouTuber Dhruv Rathee's criticism of his meeting with Madhya Pradesh Chief Minister Mohan Yadav, saying the interaction was not about the government taking credit for his river-cleaning

ಮೋಹನ್ ಯಾದವ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಧ್ರುವ್ ರಾಠಿ, ಸರ್ಕಾರ ಬಿಟ್ಟು ತಬಾಹಿ ಅವರ ಕೆಲಸಕ್ಕೆ ಕ್ರೆಡಿಟ್ ಪಡೆಯಲು ಮುಂದಾಗಿದೆ ಎಂದು ಆರೋಪಿಸಿದರು.

ಒಬ್ಬ ಹುಡುಗ ಎಲ್ಲಾ ಕೆಲಸ ಮಾಡಿದ್ದಾನೆ. ವೈರಲ್ ಆದ ನಂತರ ಅವನನ್ನು ಫೋಟೋಶೂಟ್‌ಗಾಗಿ ಕರೆಸಿಕೊಂಡಿದ್ದಾರೆ. ಸರ್ಕಾರ ಏನನ್ನೂ ಮಾಡುತ್ತಿಲ್ಲ, ಕೇವಲ PR ಮಾಡುತ್ತಿದೆ ಎಂಬ ಧೃವ್ ರಾಟಿಯ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಗೆ ಕಾರಣವಾಯಿತು. ಜನರು ಈ ವಿಷಯದ ಕುರಿತ ಪರ/ವಿರೋಧ ಚರ್ಹೆಯನ್ನು ಆರಂಭಿಸಿದರೆ ಬಿಟ್ಟು ತಬಾಹಿ ಮಾತ್ರಾ ಧ್ರುವ್ ರಾಠಿಯೊಂದಿಗೆ ಯಾವುದೇ ವಾದ ವಿವಾದಕ್ಕಾಗಲೀ ಜಗಳಕ್ಕಾಗಲೀ ಇಳಿಯಲಿಲ್ಲ. ಬದಲಾಗಿ ಆತ ನೀಡಿದ ರ ಉತ್ತರವೇ ಈ ಇಡೀ ಘಟನೆಯ ಅತ್ಯಂತ ಗಮನಾರ್ಹ ಭಾಗವಾಗಿ ಎಲ್ಲರ ಗಮನ ಸೆಳೆದಿದ್ದಲ್ಲದೇ, ತಾನು ಕಳ್ಳ ಪರರ ನಂಬ ಎನ್ನುವಂತಹ ಧೃವ್ ರಾಟಿಗೆ ಸರಿಯಾದ ಜಾಗಕ್ಕೆ ತಾಕಿದೆ.

ಧ್ರುವ್ ಭಯ್ಯಾ, ಇದು ಕ್ರೆಡಿಟ್ ಪಡೆಯುವ ವಿಷಯವಲ್ಲ…  

Bittu Tabahi has responded to YouTuber Dhruv Rathee’s criticism over his meeting with Madhya Pradesh Chief Minister Mohan Yadav., The 21-year-old clarified that the meeting was not about the ...

ಧ್ರುವ್ ಭಯ್ಯಾ, ಇದು ಕ್ರೆಡಿಟ್ ತೆಗೆದುಕೊಳ್ಳುವ ವಿಷಯವಲ್ಲ. ಸರ್ಕಾರ ಹಿಂದೆಯೂ ಕೂಡ ನನ್ನ ಕೆಲಸವನ್ನು ಮೆಚ್ಚಿದೆ. ಇಲ್ಲಿ ವಿಷಯ ನಾಗರಿಕ ಪ್ರಜ್ಞೆಯದ್ದು. ಜನರು ತಮ್ಮ ಜವಾಬ್ದಾರಿಯನ್ನು ಅರ್ಥಮಾಡಿಕೊಂಡು, ನನ್ನಂತೆ ಸ್ವಚ್ಛತೆಗಾಗಿ ಮುಂದೆ ಬರಬೇಕು ಎಂಬುದೇ ನನ್ನ ಆಶಯ.

ತಬಾಹಿಯ ಈ ಉತ್ತರದಲ್ಲಿ ರಾಜಕೀಯ ಆರೋಪವಿಲ್ಲ. ಯಾರ ಮೇಲೂ ವೈಯಕ್ತಿಕ ದಾಳಿ ಇಲ್ಲ. ಯಾವ ಪಕ್ಷದ ಪರ ಘೋಷಣೆಯೂ ಇಲ್ಲ. ಬದಲಿಗೆ ಒಂದು ಸರಳ ಸಂದೇಶ ನದಿಯನ್ನು ಯಾರು ಸ್ವಚ್ಛ ಮಾಡಿದರು ಎಂಬುದಕ್ಕಿಂತ, ಮುಂದಿನ ಬಾರಿ ನದಿಗೆ ಕಸ ಹಾಕದಿರುವುದು ಮುಖ್ಯ ಇದೇ ಬಿಟ್ಟು ತಬಾಹಿ ಅವರ ಪ್ರಯತ್ನದ ನಿಜವಾದ ಅರ್ಥ.

ಅಷ್ಟಕ್ಕೂ ಈ ಧ್ರುವ್ ರಾಠಿ ಯಾರು?

ಧ್ರುವ್ ರಾಠಿ ಭಾರತೀಯ ಮೂಲದ ಯೂಟ್ಯೂಬರ್, ಸಾಮಾಜಿಕ ಮಾಧ್ಯಮದ ರಾಜಕೀಯ ವಿಶ್ಲೇಷಕ ಮತ್ತು ಕಂಟೆಂಟ್ ಕ್ರಿಯೇಟರ್. ಅವರ ಅಧಿಕೃತ ವೆಬ್‌ಸೈಟ್ ಪ್ರಕಾರ, ಅವರು ಹರಿಯಾಣದಲ್ಲಿ ಜನಿಸಿದ್ದು, ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಶಿಕ್ಷಣ ಪಡೆದಿದ್ದು, ಜರ್ಮನಿಯಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ. ಪರಿಸರ, ರಾಜಕೀಯ, ವಿಜ್ಞಾನ, ಇತಿಹಾಸ ಮತ್ತು ಸಾಮಾಜಿಕ ವಿಚಾರಗಳ ಕುರಿತು ವಿಡಿಯೋಗಳನ್ನು ಮಾಡುತ್ತಾರೆ.  2014ರ ಸುಮಾರಿಗೆ ಯೂಟ್ಯೂಬ್‌ನಲ್ಲಿ ವಿಡಿಯೋ ಮಾಡಲು ಆರಂಭಿಸಿದ ಅವರು, ನಂತರ ಭಾರತದ ರಾಜಕೀಯ ಮತ್ತು ಸಾಮಾಜಿಕ ವಿಚಾರಗಳ ಕುರಿತು ನಿರಂತರವಾಗಿ ವಿಡಿಯೋಗಳನ್ನು ಪ್ರಕಟಿಸುವ ಮೂಲಕ ದೊಡ್ಡ ಪ್ರೇಕ್ಷಕವರ್ಗವನ್ನು ನಿರ್ಮಿಸಿಕೊಂಡರು. 2023ರಲ್ಲಿ TIME ಪತ್ರಿಕೆಯ Next Generation Leaders ಪಟ್ಟಿಯಲ್ಲೂ ಅವರ ಹೆಸರು ಕಾಣಿಸಿಕೊಂಡಿತ್ತು. Reuters Institute ಕೂಡ ಅವರನ್ನು ಜರ್ಮನಿಯಲ್ಲಿ ನೆಲೆಸಿರುವ, ಮುಖ್ಯವಾಗಿ ಹಿಂದಿಯಲ್ಲಿ ರಾಜಕೀಯ, ಸುದ್ದಿ ಮತ್ತು ಸಾಮಾಜಿಕ ನ್ಯಾಯದ ವಿಷಯಗಳ ಕುರಿತು ಮಾತನಾಡುವ ಭಾರತೀಯ ಕಂಟೆಂಟ್ ಕ್ರಿಯೇಟರ್ ಎಂದು ವಿವರಿಸಿದೆ.

ಧ್ರುವ್ ರಾಠಿ ಹೆಸರಿನಲ್ಲೇ ವಿವಾದ

ಸಾಮಾಜಿಕ ಜಾಲತಾಣಗಳಲ್ಲಿ ಹಲವು ವರ್ಷಗಳಿಂದ ಧ್ರುವ್ ರಾಠಿಯ ನಿಜವಾದ ಹೆಸರು ಬದ್ರುದ್ದೀನ್ ರಶೀದ್ ಲಾಹೋರಿ, ಅವರು ಪಾಕಿಸ್ತಾನದಲ್ಲಿ ಹುಟ್ಟಿದ್ದಾರೆ ಎಂಬ ಸುದ್ದಿಯೂ ಇದ್ದು, ಸ್ವತಃ ಧ್ರುವ್ ರಾಠಿಯೇ ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ. NDTV ಸೇರಿದಂತೆ ಹಲವು ಮಾಧ್ಯಮಗಳು ಈ ವದಂತಿಗಳನ್ನು ವರದಿ ಮಾಡಿ, ಅವುಗಳ ವಿರುದ್ಧ ರಾಠಿಯ ಪ್ರತಿಕ್ರಿಯೆಯನ್ನೂ ದಾಖಲಿಸಿವೆ.

ಹಾಗಾದರೆ ಧ್ರುವ್ ರಾಠಿಗೂ ಭಾರತಕ್ಕೂ ಏನು ಸಂಬಂಧ?

ತಾನು ಹರಿಯಾಣ ಮೂಲದ ಭಾರತೀಯ. ಭಾರತದಲ್ಲೇ ಹುಟ್ಟಿ ಬೆಳೆದು ಉನ್ನತ ಶಿಕ್ಷಣಕ್ಕಾಗಿ ಜರ್ಮನಿಗೆ ತೆರಳಿ ಅಲ್ಲೇ ನೆಲೆಸಿದ್ದರೂ, ಆರ್‌ಎಸ್ಎಸ್, ಬಿಜೆಪಿ ಮತ್ತು ಮೋದಿ ಸರ್ಕಾರದ ವಿರುದ್ಧದ ತನ್ನ ಸೈದ್ಧಾಂತಿಕ ವಿರೋಧಾಭಾಸಕ್ಕಾಗಿ ಸದಾ ಕಾಲವೂ ತನ್ನದೇ ಆದ ಯೂಟ್ಯೂಬ್ ಚಾನೆಲ್‌ನ ಮೂಲಕ ಭಾರತೀಯ ರಾಜಕೀಯ, ಭಾರತೀಯ ಸಮಾಜ, ಭಾರತೀಯ ಚುನಾವಣೆಗಳು, ಭಾರತದ ಆರ್ಥಿಕತೆ ಮತ್ತು ಭಾರತದ ಸಾರ್ವಜನಿಕ ನೀತಿಗಳನ್ನು ವಿರೋಧಿಸುವ ಭರದಲ್ಲಿ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸಿರುವುದು ಹಲವಾರು ಬಾರಿ ಗೋಚರಿಸಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಅವರ ವಿರುದ್ಧ ಆಪಾದನೆಗಳನ್ನು ಮಾಡುವುದರ ಹಿಂದೆ ವಿದೇಶಿ ವ್ಯಕ್ತಿಗಳ ಕೈಗೊಂಬೆಯಾಗಿ ಅವರಿಂದ ಹಣವನ್ನು ಪಡೆಯುತ್ತಿದ್ದಾರೆ ಎಂಬ ಗಂಭೀರವಾದ ಅರೋಪವೂ ಸಹಾ ರಾಠಿಯ ವಿರುದ್ಧವಿದೆ. ಇದಕ್ಕೆ ಪೂರಕ ಎನ್ನುವಂತೆ 2024 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಮತ್ತು ಮೋದಿಯವವರ ವಿರುದ್ಧ ತಲೆಬುಡವಿಲ್ಲದೇ ಮಾಡಿದ್ದ ವೀಡಿಯೊಗಳು ಭಾರಿ ಪ್ರಮಾಣದಲ್ಲಿ ವೈರಲ್ ಆದವು. ದೇಶಾದ್ಯಂತ ಮತ್ತು ವಿದೇಶಗಳಲ್ಲಿ ಭಾರತೀಯರು ಅವರ ಚಾನೆಲ್‌ಗೆ ಸೇರುತ್ತಿದ್ದರು. ಇದರಿಂದಾಗಿ ಆತ ಭಾರತೀಯ ರಾಜಕೀಯ ವ್ಯಾಖ್ಯಾನದಲ್ಲಿ ವೇಗವಾಗಿ ಬೆಳೆಯುತ್ತಿರುವ ಧ್ವನಿಗಳಲ್ಲಿ ಒಬ್ಬ ಎಂದು ಗುರಿತಿಸಿಕೊಂಡಿದ್ದ. ಇನ್ನು ಬಿಹಾರ ಚುನಾವಣೆಯ ಸುತ್ತಲಿನ ನೋಟು ರದ್ದತಿ, ರೈತರ ಪ್ರತಿಭಟನೆಗಳು ಮತ್ತು ಭ್ರಷ್ಟಾಚಾರ ಆರೋಪಗಳ ಕುರಿತಾದ ಅವರ ವೀಡಿಯೊಗಳು ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡವು. ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ಮೋದಿ ಅವರನ್ನು ಅವರು ತೀಕ್ಷ್ಮವಾಗಿ ಪ್ರಶ್ನಿಸಿದ್ದು 2024 ರ ಸಾರ್ವತ್ರಿಕ ಚುನಾವಣಾ ಫಲಿತಾಂಶದ ಮೇಲೆ ಗಮನಾರ್ಹ ಪರಿಣಾಮ ಬೀರಿದೆ ಎಂದು ವ್ಯಾಪಕವಾಗಿ ನಂಬಲಾಗಿದೆ.

ಧ್ರುವ್ ರಾಠಿ ದೇಶವಿರೋಧಿ ಕೃತ್ಯಗಳಿಗೆ ಯುವಕರನ್ನು ಪ್ರೇರೇಪಿಸುತ್ತಾರೆಯೇ?

ಅತನ ವಿಡಿಯೋಗಳು ಕೇವಲ ಬಿಜೆಪಿ, ನರೇಂದ್ರ ಮೋದಿ ಸರ್ಕಾರದ ನೀತಿಗಳು, ಚುನಾವಣೆಗಳು, ಮಾಧ್ಯಮ, ಆರ್ಥಿಕತೆ, ಸಾಮಾಜಿಕ ವಿಚಾರಗಳು ಮುಂತಾದವುಗಳ ಬಗ್ಗೆ ತೀವ್ರ ಟೀಕೆಯನ್ನು ಒಳಗೊಂಡಿರುತ್ತದೆಯೇ ಹೊರತು ದೇಶದಲ್ಲಿರುವ ಬಿಜೆಪೆಯೇತರ ಸರ್ಕಾರಗಳ ವಿರುದ್ಧ ಒಂದೇ ಒಂದು ಮಾತು ಸಹಾ ಇರದೇ ಇರುವುದು ಆತನ ವಿರೋಧಿ ಮನಸ್ಥಿತಿಯನ್ನು ತೋರಿಸುತ್ತದೆ. ಹಾಗಾಗಿಯೇ ಆತ Reuters Institute ಕೂಡ ಅವರು ಮೋದಿ ಸರ್ಕಾರವನ್ನು ಆಗಾಗ್ಗೆ ಟೀಕಿಸುತ್ತಾನೆ ಎಂದು ದಾಖಲಿಸಿರುವುದು ಗಮನಾರ್ಹವಾಗಿದೆ.

ಸರ್ಕಾರವನ್ನು ಟೀಕಿಸುವುದು ಎಂದರೆ ದೇಶವಿರೋಧಿ ಚಟುವಟಿಕೆಗೆ ಪ್ರೇರಣೆ ಎಂದು ನೇರವಾಗಿ ಹೇಳಲು ಸಾಧವಿಲ್ಲದೇ ಹೋದರೂ ಆತ ಮಾಡುವ ಸುಳ್ಳು ಸುಳ್ಳು ಆರೋಪಗಳು ಆಕ್ಷಣದಲ್ಲಿ ಅತನನ್ನು ಅನುಸರಿಸುವ ಕೆಲವರ ತಲೆಯನ್ನು ಕೆಡಿಸಿ ದೇಶ ವಿರೋಧಿ ಕೃತ್ಯಗಳಾಗಲೀ ಅಥವಾ ದೇವವಿರೋಧಿ ಘೋಷಣೆಯನ್ನು ಕೂಗುವಂತೆ ಪ್ರೇರೆಪಿಸುವುದಂತೂ ನಿಶ್ಚಿತ. ಈ ದೇಶದ ಆತನೂ ಸೇರಿದಂತೆ ಯಾರೂ ಸಹಾ ಪ್ರಶ್ನತೀತರಲ್ಲಾ. ಅದರೆ ರಚನಾತ್ಮಕ ಟೀಕೆಗಳಿಗೆ ಖಂಡಿತವಾಗಿಯೂ ಸ್ವಾಗತವಿದೆ. ಆದರೆ ಗಾಳಿಯಲ್ಲಿ ಗುಂಡು ಹೊಡೆಯುವಂತೆ ಸುಳ್ಳು ಸುಳ್ಳು ಅಂಕಿ ಅಂಶಗಳನ್ನು ಹೇಳಿ ಜನರನ್ನು ಪ್ರಚೋದಿಸುವುದು ಆಕ್ಷೇಪಾರ್ಹವಾಗಿದೆ

ರಾಠಿಯ ವಿಡಿಯೋಗಳಲ್ಲೂ ತಪ್ಪುಗಳಾಗಿಲ್ಲವೇ?

ದೊಡ್ಡ ಪ್ರಮಾಣದ ರಾಜಕೀಯ ಕಂಟೆಂಟ್ ಮಾಡುವ ಯಾವುದೇ ವ್ಯಕ್ತಿಯಂತೆ, ಧ್ರುವ್ ರಾಠಿಯ ಕೆಲವು ವಿಡಿಯೋಗಳು ಮತ್ತು ವೈರಲ್ ಕ್ಲಿಪ್‌ಗಳ ಬಗ್ಗೆ fact-check ಚರ್ಚೆಗಳು ನಡೆದಿವೆ. ಉದಾಹರಣೆಗೆ 2026ರಲ್ಲಿ ರಾಠಿ ಯಾವುದೋ ಪಕ್ಷದ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ತೋರಿಸಲು ವೈರಲ್ ಆದ ಒಂದು ವಿಡಿಯೋವನ್ನು The Quint altered/edited video ಎಂದು fact-check ಮಾಡಿದೆ. ಅಂದರೆ ರಾಠಿಯ ಬಗ್ಗೆ ಹರಡುವ ಪ್ರತಿಯೊಂದು ವೈರಲ್ ವಿಡಿಯೋ ಕೂಡ ನಿಜವಲ್ಲ.

ಹಾಗಾದರೆ ಬಿಟ್ಟು ತಬಾಹಿ ಪ್ರಕರಣ ನಮಗೆ ಏನು ಕಲಿಸುತ್ತದೆ?

ಇಲ್ಲಿಯೇ ಈ ಕಥೆಯ ನಿಜವಾದ ಸೌಂದರ್ಯವಿದ್ದು ಧ್ರುವ್ ರಾಠಿ ಇದನ್ನು ಸರ್ಕಾರದ PR ಎಂದು ನೋಡಿದರೆ, ಅದೇ ಬಿಟ್ಟು ತಬಾಹಿ ಅದನ್ನು ನಾಗರಿಕ ಜವಾಬ್ದಾರಿ ಎಂದು ನೋಡಿದರು. ಇಬ್ಬರ ದೃಷ್ಟಿಕೋನ ಬೇರೆ. ಆದರೆ ಬಿಟ್ಟು ತಬಾಹಿಯ ಉತ್ತರ ಬಹಳ ದೊಡ್ಡ ಸಂದೇಶ ನೀಡುತ್ತದೆ: ನನ್ನ ಕೆಲಸಕ್ಕೆ ಯಾರಿಗೆ ಕ್ರೆಡಿಟ್ ಸಿಗುತ್ತದೆ ಎಂಬುದು ಮುಖ್ಯವಲ್ಲ. ಜನರು ತಮ್ಮ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳಬೇಕು ಇದು ರಾಜಕೀಯಕ್ಕಿಂತ ದೊಡ್ಡ ಮಾತು.

ಒಬ್ಬ ಯುವಕ ನದಿಗೆ ಇಳಿದಾಗ, ಇಂದು ಸಾಮಾಜಿಕ ಜಾಲತಾಣದಲ್ಲಿ ನಾವು ಒಂದು ಪೋಸ್ಟ್‌ಗೆ ಸಾವಿರ ಕಾಮೆಂಟ್ ಮಾಡಬಹುದು. ಸರ್ಕಾರವನ್ನು ಬೈಯಬಹುದು. ವಿರೋಧ ಪಕ್ಷವನ್ನು ಬೈಯಬಹುದು. ಬಿಜೆಪಿಯನ್ನು ಟೀಕಿಸಬಹುದು.  ಆದರೆ ಅಜನಾರ್ ನದಿಗೆ ಬಿದ್ದ ಪ್ಲಾಸ್ಟಿಕ್ ಬಾಟಲಿಯನ್ನು ಎತ್ತಲು ಎಷ್ಟು ಜನ ನದಿಗೆ ಇಳಿಯುತ್ತಾರೆ? ಅದೇ ಬಿಟ್ಟು ತಬಾಹಿ ಅವರ ಪ್ರಶ್ನೆ.

ತಬಾಹಿ ರಾಜಕೀಯ ಭಾಷಣ ಮಾಡಲಿಲ್ಲ. ಕೈಯಲ್ಲಿ ಸಾಧನ ಹಿಡಿದು ನದಿಗೆ ಇಳಿದರು. ಅವರ ಕೆಲಸ ವೈರಲ್ ಆದ ನಂತರ ರಾಜಕೀಯ ಚರ್ಚೆ ಆರಂಭವಾಯಿತು. ಆದರೆ ಅವರ ಮೂಲ ಕೆಲಸ ಮಾತ್ರ ಬದಲಾಗಲಿಲ್ಲ—ನದಿಯನ್ನು ಸ್ವಚ್ಛಗೊಳಿಸುವುದು.

ಬಿಟ್ಟು ತಬಾಹಿಗೆ ಈಗಾಗಲೇ ಸಿಕ್ಕಿರುವ ದೊಡ್ಡ ಕ್ರೆಡಿಟ್ ಯಾವುದು ಗೊತ್ತೇ?

ಅದು ಮುಖ್ಯಮಂತ್ರಿ ಅವರಿಂದ ಸಿಕ್ಕ ಪ್ರಶಂಸೆ ಅಲ್ಲ. ಅದು ವಿದೇಶದಿಂದ ಬಂದ ಉದ್ಯೋಗದ ಆಹ್ವಾನವೂ ಅಲ್ಲ. ಅದು ಸಾಮಾಜಿಕ ಜಾಲತಾಣದ ಲಕ್ಷಾಂತರ ವೀಕ್ಷಣೆಗಳೂ ಅಲ್ಲ. ನಾನೂ ನನ್ನ ಊರಿಗಾಗಿ ಏನಾದರೂ ಮಾಡಬೇಕುಎಂದು ಒಬ್ಬ ಯುವಕನ ಮನಸ್ಸಿನಲ್ಲಿ ಹುಟ್ಟುವ ಆಲೋಚನೆಯೇ ಅವರ ದೊಡ್ಡ ಗೆಲುವು.

ಧ್ರುವ್ ರಾಠಿ ಸೇರಿದಂತೆ ಯಾರೇ ಆಗಿರಲಿ—ರಾಜಕೀಯ ಪ್ರಶ್ನೆಗಳನ್ನು ಕೇಳುವುದು ಪ್ರಜಾಪ್ರಭುತ್ವದ ಭಾಗ. ಸರ್ಕಾರವನ್ನು ಪ್ರಶ್ನಿಸುವುದೂ ಪ್ರಜಾಪ್ರಭುತ್ವದ ಭಾಗ. ಆದರೆ ಒಬ್ಬ ನಾಗರಿಕ ಒಳ್ಳೆಯ ಕೆಲಸ ಮಾಡಿದಾಗ ಅದನ್ನು ರಾಜಕೀಯ ಕನ್ನಡಕದಿಂದ ಮಾತ್ರ ನೋಡುವ ಅಗತ್ಯವಿಲ್ಲ. ಅದೇ ರೀತಿ, ಸರ್ಕಾರದ ಪ್ರಶಂಸೆಯನ್ನು ಸ್ವೀಕರಿಸುವಾಗಲೂ ಆ ಕೆಲಸಕ್ಕೆ ಸರ್ಕಾರದ ಪಾತ್ರವೇನು, ನಾಗರಿಕನ ಪಾತ್ರವೇನು ಎಂಬುದನ್ನು ಪ್ರಾಮಾಣಿಕವಾಗಿ ಗುರುತಿಸಬೇಕು.

ನಮಾಮಿ ಗಂಗಾ ಯೋಜನೆಯ ರಾಯಾಭಾರಿಯನ್ನಾಗಿಸಿ

ಮಧ್ಯಪ್ರದೇಶದ ಮುಖ್ಯಮಂತ್ರಿಗಳು ಸುಮ್ಮನೆ ತಮ್ಮ ಬಳಿಗೆ ಕರೆಸಿಕೊಂಡು ಆತನ ಸಾಧನೆಯನ್ನು ಶ್ಲಾಘಿಸಿ ಸನ್ಮಾನ ಮಾಡಿ ಆತನೊಂದಿಗೆ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಸಿ ಮೈಲೇಜ್ ಪಡೆಯುದಕ್ಕಷ್ಟೇ ಸೀಮಿತವಾಗಿದೇ, ಇಂತಹ ಯುವಕರನ್ನು ನದಿಗಳನ್ನು ಶುಚಿ ಮಡುವ ನಮಾಮಿ ಗಂಗಾ ಯೋಜನೆಯ ರಾಯಾಭಾರಿಯನ್ನಾಗಿಸಿ ಆರ್ಥಿಕವಾಗಿಯೂ ಅತನಿಗೆ ಸಹಾಯ ಮಾಡುವುದಲ್ಲದೇ, ದೇಶಾದ್ಯಂತ ಇಂತಹ ಯುವಕರ ತಂಡ ಅಂತಹವರ ನೇತೃತ್ವದಲ್ಲಿ ಕಟ್ಟುವಂತೆ ಮಾಡಿದಲ್ಲಿ ಮಾತ್ರವೇ, ಎಲ್ಲಾ ಊರಿನ ಕರೆ ಕಟ್ಟೆಗಳು, ನದಿಗಳು ಸ್ವಚ್ಛವಾಗುತ್ತದೆ ಅದೇವೇ ನಿಜವಾದ ಪ್ರಜೆಗಳಿಂದ ಪ್ರಜೆಗಳಿಗಾಗಿ ಮತ್ತು ಪ್ರಜೆಗಳಿಗೋಸ್ಕರವೇ ಇರುವ ಪ್ರಜಾಪ್ರಭುತ್ವಕ್ಕೆ ಜ್ವಲಂತ ಸಾಕ್ಷಿಯಾಗುತ್ತದೆ.

ಕೊನೆಯ ಮಾತು: ಭಾರತಕ್ಕೆ ಬೇಕಿರುವುದು ವೈರಲ್ ಯುವಕರು ಅಲ್ಲವೈಯಕ್ತಿಕ ಜವಾಬ್ದಾರಿಯ ಯುವಕರು

ಬಿಟ್ಟು ತಬಾಹಿ ಅವರ ಕಥೆ ಒಂದು ಸರಳ ಸತ್ಯವನ್ನು ನೆನಪಿಸುತ್ತದೆ. ದೇಶ ಬದಲಿಸಲು ಯಾವಾಗಲೂ ದೊಡ್ಡ ಹುದ್ದೆ ಬೇಕಿಲ್ಲ. ದೊಡ್ಡ ಸಂಘಟನೆ ಬೇಕಿಲ್ಲ. ದೊಡ್ಡ ಹಣ ಬೇಕಿಲ್ಲ. ಕೆಲವೊಮ್ಮೆ ಬೇಕಾಗಿರುವುದು, ಇದು ನನ್ನ ಊರು, ಇದು ನನ್ನ ನದಿ, ಇದನ್ನು ಸ್ವಚ್ಛಗೊಳಿಸುವುದು ನನ್ನ ಜವಾಬ್ದಾರಿ ಎಂಬ ಒಂದು ಆಲೋಚನೆ ಮಾತ್ರ.  ಬಿಟ್ಟು ತಬಾಹಿ ಅವರ ಪರಿಸರ ಸೇವೆಯನ್ನು ಪಕ್ಷದ ಬಣ್ಣದಲ್ಲಿ ನೋಡುವ ಬದಲು, ನಾಗರಿಕ ಜವಾಬ್ದಾರಿಯ ಉದಾಹರಣೆಯಾಗಿ ನೋಡುವುದು ಇನ್ನೂ ದೊಡ್ಡ ಪಾಠವಾಗಬಹುದು.

ಏಕೆಂದರೆ ಅಂತಿಮವಾಗಿ ದೇಶವನ್ನು ಬದಲಿಸುವುದು ಯೂಟ್ಯೂಬ್ ವಿಡಿಯೋಗಳಲ್ಲ. ನಮ್ಮ ಕೈಯಲ್ಲಿರುವ ಸಣ್ಣ ಕೆಲಸಗಳು. ಒಬ್ಬ ಯುವಕ ನದಿಗೆ ಇಳಿದಿದ್ದಾನೆ. ಈಗ ಉಳಿದವರು ಕೇವಲ ಕಾಮೆಂಟ್ ಮಾಡುತ್ತಾರೆಯೇ ಅಥವಾ ತಮ್ಮ ಊರಿನ ಒಂದು ಸಮಸ್ಯೆಗೆ ಕೈಜೋಡಿಸುತ್ತಾರೆಯೇ? ಎಂಬುದೇ  ನಿಜವಾದ ಪ್ರಶ್ನೆ. ಆದರೆ ಎಲ್ಲೋ ದೂರದ ದೇಶದಲ್ಲಿ ಕುಳಿತಿರುವ, ಧೃವ್ ರಾಠಿ ಅಂತಹವರಿಗೆ ಇದೆಲ್ಲಿಂದ ಅರ್ಥ ಆಗಬೇಕು ಹೇಳೀ? ಅವರದ್ದೇನಿದ್ದರೂ ಕಂಡವರ ಮಕ್ಕಳನ್ನು ಭಾವಿಗೆ ತಳ್ಳಿ ಭಾಯಿಯ ಆಳ ನೋಡುವ ಅಥವಾ, ಉರಿಯುತ್ತಿವ ಮನೆಯ ಗಾಳೆ ಹಿರಿದು ಬೀಡಿಗೆ ಬೆಂಕಿ ಹಚ್ಚಿಕೊಳ್ಳುವ ಮನಸ್ಥಿತಿಯವರು. 

ಧೃವ್ ರಾಠಿಯಂತೆ ತನ್ನ ಸೈದ್ಧಾಂತಿಕ ವಿರೋಧಾಭಾಸಕ್ಕಾಗಿ ದೇಶದಿಂದ ಎಲ್ಲೋ ಕುಳಿತು ಸಾಮಾಜಿಕ ಜಾಲತಾಣದ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುವುದು ಸುಲಭ. ಆದರೆ ಯಾವುದೇ ಹೊಗಳಿಕೆ, ಪ್ರಸಿದ್ಧಿ, ಅಧಿಕಾರ ಅಥವಾ ರಾಜಕೀಯ ಆಕಾಂಕ್ಷೆಗಳಿಲ್ಲದೇ ಕೇವಲ ಮತ್ತು ಕೇವಲ ತನ್ನ ಪ್ರದೇಶದ ಅಭಿವೃದ್ಧಿಗಾಗಿ ಸ್ವಪ್ರೇರಣೆಯಿಂದ ತನ್ನ ಪಾಡಿಗೆ ತಾನು ಆಸೆಪಟ್ಟ ಕೆಲಸವನ್ನು ಸಂಪೂರ್ಣಗೊಳಿಸಿ ತನ್ನ ಕೆಲಸ ಮೂಲಕ ಪ್ರಸಿದ್ಧಿ ಪಡೆಯುವುದು ನಿಜಕ್ಕೂ ಅದ್ಭುತ ಮತ್ತು ಅನನ್ಯ. ತನಗೆ ದೇಶ ಏನು ಮಾಡಿದೆ ಎಂದು ಕೇಳುವ ಧೃವ್ ರಾಠಿಯಂತ ಜನರಿಗಿಂತ, ಈ ದೇಶಕ್ಕಾಗಿ ನಾನು ಏನು ಮಾಡಿದೆ ಎಂಬುದನ್ನು ತನ್ನ ಸಾಧನೆಯ ಮೂಲಕ ತೋರಿದ ಬಿಟ್ಟು ತಬಾಹಿಯಂತಹ ಯುವಕರ ಸಂಖ್ಯೆ ನಮ್ಮ ದೇಶದಲ್ಲಿ ಅಗಣಿತವಾಗಲಿ ಎಂದು ಆಶಿಸೋಣ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply