ಕಾಂಗ್ರೆಸ್‌ನ ‘ವೋಟ್ ಚೋರಿ’ ಆರೋಪಕ್ಕೆ ಹಾವೇರಿಯಲ್ಲೇ ಸವಾಲು? ಆಶಾ ಪಾಟೀಲ್ ಹೆಸರಿನಲ್ಲಿ ಶಿಲ್ಪಾ ಬುಡೆಣ್ಣನವರು ಮತದಾನ1

ಹಾವೇರಿಯಲ್ಲಿ ನಡೆದ ಪಶ್ಚಿಮ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ, ಮತದಾರರ ಗುರುತು ಪರಿಶೀಲನೆಯೇ ಪ್ರಶ್ನಾರ್ಥಕ! ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಪತ್ನಿಯ ಹೆಸರಿನಲ್ಲಿ ಶಿಲ್ಪಾ ಬಡಮ್ಮನವರ್ ಮತ ಚಲಾಯಿಸಿದರೆಂಬ ಆರೋಪ — ತನಿಖೆಗೆ ಬಿಜೆಪಿ ಆಗ್ರಹ.

1980ರಲ್ಲಿ ಮೊದಲ ಬಾರಿ ಮತಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಸೋನಿಯಾ ಗಾಂಧಿ ಆಗ, ಮತದಾರರೆನಿಸಿಕೊಳ್ಳಲು ಇರುವ ಕನಿಷ್ಠ ಅರ್ಹತೆಯಾದ ಪೌರತ್ವವನ್ನೇ ಪಡೆದಿರಲಿಲ್ಲ | Sonia ...

ನೇರವಾಗಿ ಪ್ರಜೆಗಳ ಮನಸ್ಸನ್ನು ಗೆದ್ದು, ಪ್ರಜೆಗಳಿಂದ ಗೆಲ್ಲಲಾಗದ ಕಾಂಗ್ರೇಸ್ ನೇತೃತ್ವದ ಇಂಡಿ ಒಕ್ಕೂಟದವರು ಇತ್ತೀಚೆಗೆ ಹೋದ ಬಂದ ಕಡೆಯಲೆಲ್ಲಾ ಓಟ್ ಚೋರಿ ಎಂಬ ಹೆಸರಿನಲ್ಲಿ ಬೀದಿಯಲ್ಲಿ ರಂಪ ರಾಮಾಯಣ ಮಾಡಿ, ದೇಶದಲ್ಲಿರುವ ಸುಭಧ್ರ ಸರ್ಕಾರವನ್ನು ಅಲುಗಾಡಿಸಲು ಪ್ರಯತ್ನಿಸುತ್ತಿರುವ ಸಂಧರ್ಭದಲ್ಲಿ, ದೀಪದ ಕೆಳಗೆ ಸದಾಕಾಲವೂ ಕತ್ತಲೆ ಎನ್ನುವಂತೆ, ರಾಹುಲ್ ಗಾಂಧಿಯವರ ತಾಯಿ ಮತ್ತು ಕಾಂಗ್ರೆಸ್ ಪಕ್ಷದ ಅಧಿನಾಯಕಿ ನಾಯಕಿ ಸೋನಿಯಾ ಗಾಂಧಿ ಅವರು ಫೆಬ್ರವತಿ 25, 1968ರಲ್ಲೇ ಅಂದಿನ ಪ್ರಧಾನಿ ಇಂದಿರಾ ಅವರ ಮಗ ರಾಜೀವ್ ಅವರನ್ನು ಮದುವೆಯಾಗಿದ್ದರೂ, 1983ರ ಏಪ್ರಿಲ್ 30 ರಂದು ಅಧಿಕೃತವಾಗಿ ಭಾರತದ ಪೌರತ್ವ ಪಡೆದುಕೊಂಡಿದ್ದ ವಿಷಯ ಎಲ್ಲರಿಗೂ ತಿಳಿದ ಸಂಗತಿ. ಇತರರೆಡೆ ಒಂದು ಬೆರಳು ತೋರುವಾಗ ಉಳಿದ ನಾಲ್ಕೂ ಬೆರಳುಗಳು ತಮ್ಮತ್ತವೇ ತೋರುತ್ತದೆ ಎನ್ನುವಂತೆ, ರಾಹುಲ್ ಗಾಂಧಿ ಆರೋಪಿಸುವ ಓಟ್ ಚೋರಿ ಆರಂಭವಾದದ್ದೇ ಅವರ ಮನೆಯಿಂದಲೇ ಎನ್ನುವುದಕ್ಕೆ, ಪುರಾವೆಯಾಗಿ ಅವರ ತಾಯಿ ಸೋನಿಯಾ ಭಾರತದ ಪೌರತ್ವ ಪಡೆಯುವ ಮುನ್ನವೇ 1980ರ ನವದೆಹಲಿ ಸಂಸದೀಯ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ (ಪ್ರಧಾನಿ ಇಂದಿರಾ ಗಾಂಧಿ ಅವರ ಅಧಿಕೃತ ನಿವಾಸದ ವಿಳಾಸದಲ್ಲಿ) ಸೋನಿಯಾ ಗಾಂಧಿ ಅವರ ಹೆಸರು ನೋಂದಣಿಯಾಗಿತ್ತು ಮತ್ತು ಆಕೆ ಚುನಾವಣೆಯಲ್ಲಿ ಮತ ಚಲಾಯಿಸಿದ್ದರು ಎಂಬ ಗಂಭೀರ ಆರೋಪವು ಈಗ ಕೋರ್ಟಿನಲ್ಲಿ ವಿಚಾರಣೆಯ ಹಂತದಲ್ಲಿದೆ.

ಚುನಾವಣೆಯಲ್ಲಿ ಮತಗಳ್ಳತನ ನಡೆಯುತ್ತಿದೆ ಎಂದು ಆರೋಪಿಸಿ ರಾಜಕೀಯ ಎದುರಾಳಿಗಳನ್ನು ಪ್ರಶ್ನಿಸುವ ಕಾಂಗ್ರೆಸ್ ಪಕ್ಷಕ್ಕೆ, ಇದೀಗ ಕರ್ನಾಟಕದಲ್ಲೇ ಮುಜುಗರ ಉಂಟುಮಾಡುವಂತಹ ಪ್ರಸಂಗ ಎದುರಾಗಿದೆ. ಹಾವೇರಿಯಲ್ಲಿ ನಡೆದ ಪಶ್ಚಿಮ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ, ಹಾವೇರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅವರ ಪತ್ನಿ ಆಶಾ ಪಾಟೀಲ್ ಅವರ ಹೆಸರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತೆ ಶಿಲ್ಪಾ ಬಡಮ್ಮನವರ್ ಎಂಬ ಮಹಿಳೆ ಮತ ಚಲಾಯಿಸಿದ್ದಾರೆ  ಈ ಘಟನೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ದೇಶಾದ್ಯಂತ ವೋಟ್ ಚೋರಿ ವಿಚಾರವನ್ನು ಮುಂದಿಟ್ಟುಕೊಂಡು ಚುನಾವಣಾ ವ್ಯವಸ್ಥೆಯ ಪಾರದರ್ಶಕತೆಯನ್ನು ಪ್ರಶ್ನಿಸುತ್ತಿರುವ ಕಾಂಗ್ರೆಸ್ ಪಕ್ಷದವರ ವಿರುದ್ಧವೇ ಇಂತಹ ಆರೋಪ ಕೇಳಿಬಂದಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ಹಾವೇರಿಯ ಮತಗಟ್ಟೆ ಸಂಖ್ಯೆ 85ರಲ್ಲಿ ಈ ಘಟನೆ ನಡೆದಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದು, ಮತದಾರರ ಗುರುತಿನ ಚೀಟಿಯನ್ನು ಸರಿಯಾಗಿ ಪರಿಶೀಲಿಸಲಾಗಿತ್ತೇ ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ.

ಮತಗಟ್ಟೆ ಸಂಖ್ಯೆ 85ರಲ್ಲಿ ನಡೆದಿದ್ದೇನು?

ಪದವೀಧರ ಚುನಾವಣೆಯಲ್ಲಿ ವೋಟ್ ಚೋರಿ ಆರೋಪ: ಹಾವೇರಿ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಪತ್ನಿ ಮತವೇ ಚೋರಿ! | TV9 Kannada

2026ರ ಅಕ್ಟೋಬರ್ 24ರಂದು ನಡೆದ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನದ ವೇಳೆ,   ಹಾವೇರಿಯ ಮತಗಟ್ಟೆ ಸಂಖ್ಯೆ 85ರಲ್ಲಿ  ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅವರ ಪತ್ನಿ ಆಶಾ ಪಾಟೀಲ್ ಮತಗಟ್ಟೆಗೆ ಬಂದು ಮತ ಚಲಾಯಿಸಿರಲಿಲ್ಲ.  ಅವರ ಹೆಸರಿನಲ್ಲಿ ಶಿಲ್ಪಾ ಬಡಮ್ಮನವರ್ ಮತ ಚಲಾಯಿಸಿದ್ದಾರೆ. ಮತದಾರರ ಪಟ್ಟಿಯಲ್ಲಿ ಆಶಾ ಪಾಟೀಲ್ ಅವರ ಹೆಸರು ಇದ್ದಾಗ,

  • ಮತ್ತೊಬ್ಬ ಮಹಿಳೆ ಆ ಹೆಸರಿನಲ್ಲಿ ಮತ ಚಲಾಯಿಸಲು ಹೇಗೆ ಸಾಧ್ಯವಾಯಿತು?
  • ಮತಗಟ್ಟೆ ಸಿಬ್ಬಂದಿ ಗುರುತಿನ ಚೀಟಿಯನ್ನು ಪರಿಶೀಲಿಸಿದ್ದರೇ? ಮತದಾರರ ಗುರುತನ್ನು ಖಚಿತಪಡಿಸಿಕೊಳ್ಳುವ ಚುನಾವಣಾ ಪ್ರಕ್ರಿಯೆ ಸರಿಯಾಗಿ ನಡೆದಿತ್ತೇ?

ಎಂಬ ಪ್ರಶ್ನೆಗಳು ಈಗ ಎದ್ದಿವೆ. ಈ ಆರೋಪದ ಕುರಿತು ಬಿಜೆಪಿ ನಾಯಕರು ವಿಡಿಯೊ ದೃಶ್ಯಾವಳಿ ಮತ್ತು ಮತದಾರರ ಪಟ್ಟಿಗೆ ಸಂಬಂಧಿಸಿದ ವಿವರಗಳನ್ನು ಉಲ್ಲೇಖಿಸಿ ತನಿಖೆಗೆ ಒತ್ತಾಯಿಸಿದ್ದಾರೆ.

ಶಿಲ್ಪಾ ಬಡಮ್ಮನವರ್ ವಿರುದ್ಧದ ಆರೋಪವೇನು?

ಮಾಧ್ಯಮ ವರದಿಗಳ ಪ್ರಕಾರ, ಶಿಲ್ಪಾ ಬಡಮ್ಮನವರ್ ಅವರು ಕಾಂಗ್ರೆಸ್‌ನ ಎಸ್‌ಟಿ ಮೋರ್ಚಾದೊಂದಿಗೆ ಸಂಬಂಧ ಹೊಂದಿರುವ ಮಹಿಳಾ ಕಾರ್ಯಕರ್ತೆ ಎಂದು ಗುರುತಿಸಲಾಗಿದೆ. ಶಿಲ್ಪಾ ಬಡಮ್ಮನವರ್ ಅವರಿಗೆ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಮತ ಚಲಾಯಿಸುವ ಅರ್ಹತೆ ಇರಲಿಲ್ಲ ಅದರೂ ಆಶಾ ಪಾಟೀಲ್ ಅವರ ಹೆಸರಿನಲ್ಲಿ ಮತ ಚಲಾಯಿಸಿದ್ದಾರೆ ಎನ್ನುವುದಕ್ಕೆ ಆಕೆ ಮತದಾನದ ಸರದಿಯ ಸಾಲಿನಲ್ಲಿ ನಿಂತಿರುವುದು ಮತ್ತು ಮತಪೆಟ್ಟಿಗೆಯ ಮುಂದೆ ರುದ್ರಪ್ಪ ಲಮ್ಹಾಣಿಯವರ ಜೊತೆ ಮತ ಚಲಾಯಿಸಲು ಮತಪಟ್ಟಿಯನ್ನು  ಹಿಡಿದು ಮತ ಚಲಾಯಿಸಿರುವ ವಿಡಿಯೊ & ಪೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರೂ, ಲಜ್ಜೆಗೆಟ್ಟ ಕಾಂಗ್ರೇಸ್ ನಾಯಕರು ಇದು ಬಿಜೆಪಿಯ ಕಟ್ಟು ಕಥೆ ಎನ್ನುತ್ತಿರುವುದು ನಿಜಕ್ಕೂ ಅಸಹ್ಯಕರ ಎನಿಸುತ್ತದೆ.

ಈ ಅಂಶವನ್ನು ಚುನಾವಣಾ ಪಟ್ಟಿಯ ಅಧಿಕೃತ ದಾಖಲೆಗಳ ಮೂಲಕ ದೃಢಪಡಿಸುವುದು ಅಗತ್ಯ. ಇಲ್ಲಿ ಎರಡು ಪ್ರತ್ಯೇಕ ಪ್ರಶ್ನೆಗಳಿವೆ:

  • ಮತದಾರರ ಗುರುತಿನ ದುರುಪಯೋಗ ನಡೆದಿದೆಯೇ? ಆಶಾ ಪಾಟೀಲ್ ಅವರ ಹೆಸರಿನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು.
  • ಮತದಾನದ ಅರ್ಹತೆ ಮತ್ತು ದಾಖಲೆಗಳು ಸರಿಯಾಗಿದ್ದವೇ? ಸಂಬಂಧಪಟ್ಟ ವ್ಯಕ್ತಿಯ ಅರ್ಹತೆ, ಗುರುತಿನ ದಾಖಲೆಗಳು ಮತ್ತು ಮತಗಟ್ಟೆಯಲ್ಲಿನ ಪ್ರಕ್ರಿಯೆಯನ್ನು ಪರಿಶೀಲಿಸಬೇಕು.

ಈ ಎರಡೂ ಅಂಶಗಳು ದೃಢಪಟ್ಟರೆ, ಚುನಾವಣಾ ನಿಯಮಗಳ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಬಹುದು. ಅದಕ್ಕೂ ಮೊದಲು ಆರೋಪವನ್ನು ಸಾಬೀತಾದ ಅಪರಾಧವೆಂದು ಪರಿಗಣಿಸುವುದು ಸರಿಯಲ್ಲ.

ಸಚಿವ ರುದ್ರಪ್ಪ ಲಮಾಣಿ ಅವರ ಹೆಸರೂ ಏಕೆ ಪ್ರಸ್ತಾಪವಾಗಿದೆ?

Haveri: ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ನಕಲಿ ಮತದಾನ; ಸಚಿವರ ಹಿಂದೆಯೇ ಬಂದು ವೋಟ್ ಹಾಕಿದ ಈ ಮಹಿಳೆ ಯಾರು? | - News18 Kannada

ಈ ಪ್ರಕರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅವರದ್ದೂ ಪಾತ್ರವಿದೆ ಎಂದು ಬಿಜೆಪಿಯು ಆರೋಪಿಸುತ್ತಿರುವುದು ನಿಜಕ್ಕೂ ಆಘಾತಕಾರಿಯಾಗಿದೆ. ಕಾಂಗ್ರೆಸ್‌ನ ಎಸ್‌ಟಿ ಮೋರ್ಚಾದೊಂದಿಗೆ ಸಂಬಂಧ ಹೊಂದಿರುವ ಮತ್ತು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯಲ್ಲಿ ಸಕ್ರೀಯವಾಗಿರುವ ಮಹಿಳಾ ಕಾರ್ಯಕರ್ತೆ ಶಿಲ್ಪಾ ಬಡಮ್ಮನವರ್ ವಯಕ್ತಿಕವಾಗಿ ಸಚಿವರಿಗೆ ಪರಿಚಯವಿದ್ದು, ಆಕೆಗೆ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಮತ ಚಲಾಯಿಸುವ ಅರ್ಹತೆ ಇರಲಿಲ್ಲ ಎಂಬುದೂ ಸಚಿವರಿಗೆ ತಿಳಿದಿದ್ದು, ಅದೇ ರೀತಿ ಜಿಲ್ಲಾ ಅಧ್ಯಕ್ಷರ ಧರ್ಮಪತ್ನಿ ಆಶಾ ಪಾಟೀಲ್ ಅವರು ಕಾರಣಾಂತರಗಳಿಂದ ಮತಚಲಾಯಿಸಲು ಬರಲಾಗುತ್ತಿಲ್ಲಾ ಎಂಬುದನ್ನೂ ತಿಳಿದಿದ್ದ ಕಾರಣ, ಉಸ್ತುವಾರಿ ಸಚಿವರೇ, ತಮ್ಮೊಂದಿಗೆ ಶಿಲ್ಪಾ ಬಡಮ್ಮನವರ್ ಅವರನ್ನು ಮತಗಟ್ಟೆಗೆ ಕರೆತಂದು ಚುನಾವಣಾಧಿಕಾರಿಗಳು ಯಾವುದೇ ರೀತಿಯಾಗಿ ಆಕ್ಷೇಪ ಎತ್ತದಂತೆ ತಮ್ಮ ಅಧಿಕಾರವನ್ನು ದುರುಪಯೋಗ ಪಡೆದುಕೊಂಡಿರುವುದು ಈಗಾಗಲೇ ವೈರಲ್ ಆಗಿರುವ ಪೋಟೋಗಳು ವಿಡೀಯೋಗಳಲ್ಲಿ ಸ್ಪಷ್ಟವಾಗಿ ಕಾಣಬರುತ್ತಿದೆ

ಸಂಜೀವಕುಮಾರ ನೀರಲಗಿ ಹೇಳಿದ್ದೇನು?

ತಮ್ಮ ಪತ್ನಿಯ ಹೆಸರನ್ನು ದುರುಪಯೋಗಪಡಿಸಿಕೊಂಡು ಮತ್ತೊಬ್ಬರು ಮತ ಚಲಾಯಿಸಿರುವುದು ತಮ್ಮ ಗಮನಕ್ಕೆ ಬಂದಿಲ್ಲ ಎಂದಿರುವುದು ಅಚ್ಚರಿಯನ್ನು ಮೂಡಿಸಿದೆ. ಈ ಕುರಿತು, ತನಿಖೆಯಾಗಬೇಕು ಎಂದು ಆಗ್ರಹಿಸಿರುವುದಲ್ಲದೇ, ತಮ್ಮ ವಕೀಲರೊಂದಿಗೆ ಚರ್ಚಿಸಿ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸುವುದಾಗಿಯೂ ತಿಳಿಸಿದ್ದಾರೆ. ಮತಗಟ್ಟೆ ಸಿಬ್ಬಂದಿ ಗುರುತಿನ ಚೀಟಿಯನ್ನು ಪರಿಶೀಲಿಸಬೇಕಿತ್ತು ಎಂಬ ಪ್ರಶ್ನೆಯನ್ನೂ ಅವರು ಎತ್ತಿದ್ದಾರೆ.

ಹಾವೇರಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅವರ ಪತ್ನಿ ಆಶಾ ಪಾಟೀಲ್ ಅವರ ಹೆಸರಿನಲ್ಲೇ ಅದೂ ಸಚಿವ ರುದ್ರಪ್ಪ ಲಮಾಣಿಯವರ ಜೊತೆಯಲ್ಲಿಯೇ (ಈ ಪ್ರಕರಣದಲ್ಲಿ ಅವರದ್ದೂ ಪಾತ್ರವಿದೆ ಎಂಬುದು ಬಿಜೆಪಿಯ ಆರೋಪ) ಕಾಂಗ್ರೇಸ್ ಪಕ್ಷ ನಡೆಸಬಹುದಾದರೆ, ಇನ್ನು ಸಾಮಾನ್ಯ ಮತದಾರರ ಮತಗಳನ್ನು ಯಾವೆಲ್ಲಾ ರೀತಿಯಲ್ಲಿ ಕಾಂಗ್ರೇಸ್ ದುರುಪಯೋಗ ಪಡಿಸಿಕೊಳ್ಳಬಹುದು ಎಂದು ಜನರು ಕೇಳುತ್ತಿದ್ದಾರೆ. ತಮ್ಮ ತಟ್ಟೆಯಲ್ಲೇ ಹೆಗ್ಗಣ ಬಿದ್ದಿದ್ದರೂ, ಬೇರೆಯವರ ತಟ್ಟೆಯಲ್ಲಿ ನೊಣ ಬಿದಿದ್ದೆ ಎನ್ನುವಂತೆ ಮರಣ ಹೊಂದಿರುವ, ವಿವಿಧ ಕಡೆಯಲ್ಲಿ ಒಂದಕ್ಕೂ ಹೆಚ್ಚು ಮತವನ್ನು ಹೊಂದಿರುವ ಮತ್ತು ಅಕ್ರಮ ನುಸುಳುಗೋರರ ಮತದಾರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯುವ ಸಲುವಾಗಿ ನಡೆಸುತ್ತಿರುವ SIRರನ್ನು ವಿರೋಧಿಸುವುದು ನಿಜಕ್ಕೂ ಅಚ್ಚರಿ ಮೂಡಿಸುತ್ತಿದೆ

ಕಾಂಗ್ರೆಸ್‌ನ ‘ವೋಟ್ ಚೋರಿ’ ಅಭಿಯಾನಕ್ಕೆ ರಾಜಕೀಯ ಪ್ರಶ್ನೆ

ಕಾಂಗ್ರೆಸ್ ಪಕ್ಷವು ವಿವಿಧ ಸಂದರ್ಭಗಳಲ್ಲಿ ಮತದಾರರ ಪಟ್ಟಿಯಲ್ಲಿನ ಅಕ್ರಮಗಳು, ಮತದಾನದ ಪಾರದರ್ಶಕತೆ ಮತ್ತು ಚುನಾವಣಾ ಪ್ರಕ್ರಿಯೆಯ ಕುರಿತು ಪ್ರಶ್ನೆಗಳನ್ನು ಎತ್ತಿದೆ. ಇಂತಹ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತೆಯೊಬ್ಬರ ವಿರುದ್ಧವೇ ನಕಲಿ ಮತದಾನದ ಆರೋಪ ಕೇಳಿಬಂದಿರುವುದು ಬಿಜೆಪಿಗೆ ಕಾಂಗ್ರೆಸ್ ಅನ್ನು ಪ್ರಶ್ನಿಸಲು ಅವಕಾಶ ನೀಡಿದೆ. ಬಿಜೆಪಿ ನಾಯಕರು, ಇತರ ಪಕ್ಷಗಳ ವಿರುದ್ಧ ಮತಗಳ್ಳತನದ ಆರೋಪ ಮಾಡುವ ಕಾಂಗ್ರೆಸ್ ತನ್ನ ಪಕ್ಷದವರ ವಿರುದ್ಧ ಕೇಳಿಬಂದಿರುವ ಆರೋಪಕ್ಕೂ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.

ರಾಜಕೀಯವಾಗಿ ಇದು ಕಾಂಗ್ರೆಸ್‌ಗೆ ಅಸಹಜ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಆದರೆ ಒಂದು ಪ್ರಕರಣದ ಆರೋಪದಿಂದಲೇ ಕಾಂಗ್ರೆಸ್ ಪಕ್ಷವು ದೇಶದಾದ್ಯಂತ ಮಾಡಿರುವ ಎಲ್ಲ ಚುನಾವಣಾ ಸಂಬಂಧಿತ ಆರೋಪಗಳು ಸುಳ್ಳು ಎಂದು ನಿರ್ಧರಿಸಲಾಗದು. ಹಾಗೆಯೇ, ಕಾಂಗ್ರೆಸ್ ಈ ಆರೋಪವನ್ನು ನಿರಾಕರಿಸಿದೆ ಎಂಬ ಕಾರಣಕ್ಕೆ ಪ್ರಕರಣವನ್ನು ಕಡೆಗಣಿಸಲೂ ಆಗುವುದಿಲ್ಲ.

ಚುನಾವಣೆಯ ಪಾರದರ್ಶಕತೆಯ ಕುರಿತು ಮಾತನಾಡುವ ಪ್ರತಿಯೊಂದು ಪಕ್ಷವೂ ತನ್ನದೇ ಪಕ್ಷದ ಸದಸ್ಯರ ವಿರುದ್ಧ ಆರೋಪ ಕೇಳಿಬಂದಾಗಲೂ ಅದೇ ಮಾನದಂಡವನ್ನು ಅನ್ವಯಿಸಬೇಕು. ಮತದಾನದ ಪ್ರಾಮಾಣಿಕತೆ ಪಕ್ಷಾತೀತ ವಿಷಯ. ಅಕ್ರಮ ನಡೆದಿದೆ ಎಂದು ಆರೋಪಿಸುವವರು ಸಾಕ್ಷ್ಯ ಒದಗಿಸಬೇಕು. ಆರೋಪ ಎದುರಿಸುವವರು ತನಿಖೆಗೆ ಸಹಕರಿಸಬೇಕು. ಚುನಾವಣಾಧಿಕಾರಿಗಳು ನಿಷ್ಪಕ್ಷಪಾತವಾಗಿ ಸತ್ಯವನ್ನು ಹೊರತರಬೇಕು.

ಚುನಾವಣಾಧಿಕಾರಿಗಳ ಜವಾಬ್ದಾರಿಯೂ ಪ್ರಶ್ನಾರ್ಹವೇ?

ಈ ಪ್ರಕರಣದ ಮತ್ತೊಂದು ಪ್ರಮುಖ ಅಂಶ ಮತಗಟ್ಟೆಯಲ್ಲಿನ ಗುರುತಿನ ಪರಿಶೀಲನೆ. ಮತದಾರರ ಪಟ್ಟಿಯಲ್ಲಿ ಹೆಸರಿರುವ ವ್ಯಕ್ತಿಯ ಗುರುತನ್ನು ಖಚಿತಪಡಿಸಿಕೊಳ್ಳುವುದು ಮತ್ತು ನಿಗದಿತ ನಿಯಮಗಳಂತೆ ಮತದಾನಕ್ಕೆ ಅವಕಾಶ ನೀಡುವುದು ಮತಗಟ್ಟೆ ಸಿಬ್ಬಂದಿಯ ಕರ್ತವ್ಯ.

ಒಬ್ಬ ವ್ಯಕ್ತಿ ಮತ್ತೊಬ್ಬರ ಹೆಸರಿನಲ್ಲಿ ಮತ ಚಲಾಯಿಸಿದ್ದರೆ, ಅದು ಹೇಗೆ ಸಾಧ್ಯವಾಯಿತು? ಎಂಬುದನ್ನು ಪರಿಶೀಲಿಸುವುದು ಅಗತ್ಯ. ಆದರೆ ದಾಖಲೆಗಳನ್ನು ಪರಿಶೀಲಿಸದೆ ಮತದಾನಕ್ಕೆ ಅವಕಾಶ ನೀಡಲಾಗಿದೆಯೇ? ಎಂಬುದನ್ನು ಅಧಿಕೃತ ತನಿಖೆಯೇ ನಿರ್ಧರಿಸಬೇಕು. ತನಿಖೆಯಲ್ಲಿ ಕರ್ತವ್ಯಲೋಪ ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ಅದೇ ರೀತಿ, ಉದ್ದೇಶಪೂರ್ವಕವಾಗಿ ಮತದಾರರ ಗುರುತನ್ನು ದುರುಪಯೋಗಪಡಿಸಿಕೊಂಡಿರುವುದು ಸಾಬೀತಾದರೆ, ಸಂಬಂಧಪಟ್ಟ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.

ಮತದಾನದ ಪಾವಿತ್ರ್ಯ ಕಾಪಾಡುವುದು ಕೇವಲ ಚುನಾವಣಾ ಆಯೋಗದ ಜವಾಬ್ದಾರಿಯಲ್ಲ; ಮತದಾರರು, ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಕರ್ತವ್ಯದಲ್ಲಿರುವ ಪ್ರತಿಯೊಬ್ಬರಿಗೂ ಅದರಲ್ಲಿ ಪಾಲಿದೆ.

ಈಗ ಆಗಬೇಕಿರುವುದೇನು?

ಈ ಪ್ರಕರಣದ ಸತ್ಯಾಸತ್ಯತೆ ಹೊರಬರಲು ಕೆಲವು ಕ್ರಮಗಳು ಅತ್ಯಗತ್ಯ:

  1. ಮತಗಟ್ಟೆ ಸಂಖ್ಯೆ 85ರ ಮತದಾರರ ಪಟ್ಟಿ, ಗುರುತಿನ ದಾಖಲೆಗಳು ಮತ್ತು ಮತದಾನಕ್ಕೆ ಸಂಬಂಧಿಸಿದ ಅಧಿಕೃತ ದಾಖಲೆಗಳನ್ನು ಪರಿಶೀಲಿಸಬೇಕು.
  2. ಆಶಾ ಪಾಟೀಲ್ ಅವರಿಂದ ಅಧಿಕೃತ ಹೇಳಿಕೆ ಪಡೆದು, ಅವರು ಮತ ಚಲಾಯಿಸಿದ್ದರೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
  3. ಆರೋಪಿತ ವ್ಯಕ್ತಿ ಮತ್ತು ಮತಗಟ್ಟೆ ಸಿಬ್ಬಂದಿಯಿಂದ ವಿವರಣೆ ಪಡೆಯಬೇಕು.
  4. ಲಭ್ಯವಿರುವ ವಿಡಿಯೊ ದೃಶ್ಯಾವಳಿಗಳನ್ನು ಸಂಪೂರ್ಣ ಸಂದರ್ಭದೊಂದಿಗೆ ಪರಿಶೀಲಿಸಬೇಕು.
  5. ಅಕ್ರಮ ಅಥವಾ ಕರ್ತವ್ಯಲೋಪ ದೃಢಪಟ್ಟರೆ, ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು.

ಈ ಕ್ರಮಗಳು ಯಾವುದೇ ಪಕ್ಷದ ಪರ ಅಥವಾ ವಿರುದ್ಧವಲ್ಲ. ಚುನಾವಣಾ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸವನ್ನು ಉಳಿಸಿಕೊಳ್ಳಲು ಅಗತ್ಯವಾದ ಕ್ರಮಗಳಾಗಿವೆ.

ಕೊನೆಯ ಮಾತು. ಓಟ್ ಚೋರಿ ಆರೋಪಕ್ಕೆ ಉತ್ತರ ಸಿಗಬೇಕಾದರೆ ತನಿಖೆ ಅನಿವಾರ್ಯ

ಹಾವೇರಿಯ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಆಶಾ ಪಾಟೀಲ್ ಅವರ ಹೆಸರಿನಲ್ಲಿ ಶಿಲ್ಪಾ ಬಡಮ್ಮನವರ್ ಮತ ಚಲಾಯಿಸಿದ್ದಾರೆ ಎಂಬ ಆರೋಪವು ಗಂಭೀರವಾಗಿದೆ. ಇದು ನಿಜವೆಂದು ಸಾಬೀತಾದರೆ, ಮತದಾರರ ಹಕ್ಕು ಮತ್ತು ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಯ ಕುರಿತು ಗಂಭೀರ ಪ್ರಶ್ನೆಗಳು ಎದುರಾಗುತ್ತವೆ. ಕಾಂಗ್ರೆಸ್ ಈ ಆರೋಪವನ್ನು ನಿರಾಕರಿಸಿರುವ ಹಿನ್ನೆಲೆಯಲ್ಲಿ, ಅಧಿಕೃತ ತನಿಖೆಯ ಮೂಲಕ ಸತ್ಯವನ್ನು ಹೊರತರುವುದು ಇನ್ನಷ್ಟು ಮುಖ್ಯವಾಗಿದೆ.

ಕಾಂಗ್ರೆಸ್ ಪಕ್ಷವು ವೋಟ್ ಚೋರಿ ಕುರಿತು ಇತರರ ವಿರುದ್ಧ ಪ್ರಶ್ನೆಗಳನ್ನು ಎತ್ತುವಾಗ, ತನ್ನ ಪಕ್ಷದವರ ವಿರುದ್ಧ ಕೇಳಿಬಂದಿರುವ ಆರೋಪಗಳಿಗೂ ಪಾರದರ್ಶಕವಾಗಿ ಉತ್ತರಿಸಬೇಕು. ಅದೇ ರೀತಿ, ಬಿಜೆಪಿ ಕೂಡ ಆರೋಪವನ್ನು ರಾಜಕೀಯ ಪ್ರಚಾರಕ್ಕೆ ಮಾತ್ರ ಸೀಮಿತಗೊಳಿಸದೆ, ಸೂಕ್ತ ತನಿಖೆ ಮತ್ತು ಸಾಕ್ಷ್ಯಗಳ ಆಧಾರದ ಮೇಲೆ ನ್ಯಾಯ ದೊರೆಯುವಂತೆ ಒತ್ತಾಯಿಸಬೇಕು.

ಮತದಾನವೆಂಬುದು ಪ್ರಜಾಪ್ರಭುತ್ವದ ಮೂಲಭೂತ ಆಧಾರ. ಮತದಾರನ ಹೆಸರಿನಲ್ಲಿ ಬೇರೊಬ್ಬರು ಮತ ಚಲಾಯಿಸಿರುವುದು ಸಾಬೀತಾದರೆ, ಅದು ಯಾರೇ ಮಾಡಿದರೂ ಗಂಭೀರ ತಪ್ಪು. ಆರೋಪದ ಹಿಂದೆ ಇರುವ ಸತ್ಯವನ್ನು ಹೊರತರುವುದು ಮತ್ತು ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಕ್ರಮ ಕೈಗೊಳ್ಳುವುದು ಈಗ ಚುನಾವಣಾ ಅಧಿಕಾರಿಗಳ ಜವಾಬ್ದಾರಿ.

ಈ ಕಾರ್ಯಕ್ಕೆ ಕರ್ನಾಟಕದ ಕಾಂಗ್ರೇಸ್ ಸರ್ಕಾರ ಮತ್ತು ಉಸ್ತುವಾರಿ ಸಚಿವರಾದ ರುದ್ರಪ್ಪ ಲಮ್ಹಾಣಿಯವರು ಯಾವುದೇ ಪಕ್ಷಪಾತವಿಲ್ಲದೇ ತನಿಖೆ ನಡೆಸುತ್ತಾರೆಯೇ? ಎನ್ನುವುದೇ ಈಗ ಯಕ್ಷಪ್ರಶ್ನೆಯಾಗಿ ಉಳಿದಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply