ಉಗುರಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡರಂತೆ
‘ಉಗುರಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡರಂತೆ’ ಎಂಬುದು ಕನ್ನಡದ ಒಂದು ಜನಪ್ರಿಯ ಗಾದೆ ಮಾತಾಗಿದೆ. ಇದನ್ನು ಕೆಲವೊಮ್ಮೆ ‘ಬೆರಳಲ್ಲಿ ಆಗುವ ಕೆಲಸಕ್ಕೆ ಕೊಡಲಿ ತೆಗೆದುಕೊಂಡರಂತೆ’ ಎಂದೂ ಬಳಸುತ್ತಾರೆ. ಅತ್ಯಂತ ಸುಲಭವಾಗಿ ಮತ್ತು ಶಾಂತಿಯುತವಾಗಿ ಬಗೆಹರಿಯುವ ಸಣ್ಣ ಸಮಸ್ಯೆಗೆ ಅನಗತ್ಯವಾಗಿ ದೊಡ್ಡ ಮಟ್ಟದ ಪ್ರಯತ್ನ ಅಥವಾ ಕಠಿಣ ಕ್ರಮ ಕೈಗೊಳ್ಳುವುದನ್ನು ಈ ಗಾದೆ ಸೂಚಿಸುತ್ತದೆ. ಉಗುರಿನಿಂದ ಸುಲಭವಾಗಿ ಚಿವುಟಿ ತೆಗೆಯಬಹುದಾದ ಸಣ್ಣ ಕಡ್ಡಿ ಅಥವಾ ಚಿಗುರನ್ನು ಕಡಿಯಲು ದೊಡ್ಡ ಕೊಡಲಿಯನ್ನು ಬಳಸಿದರೆ ಅದು ಮೂರ್ಖತನವಾಗುತ್ತದೆ. ಅದೇ ರೀತಿ, ಮಾತುಕತೆಯಿಂದ ಬಗೆಹರಿಯುವ ಸಣ್ಣ ಜಗಳಕ್ಕೆ ಪೊಲೀಸ್ ಠಾಣೆ ಅಥವಾ ನ್ಯಾಯಾಲಯದ ಮೆಟ್ಟಿಲೇರುವುದು ಈ ಗಾದೆಗೆ ನಿದರ್ಶನವಾಗಿದೆ.
ಈ ಗಾದೆಗೆ ಸರಿಯಾದ ಉದಾಹರಣೆಯಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬಸ್ನಲ್ಲಿ ನಡೆದಿರುವ ಘಟನೆಯೊಂದು ಈಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಕೆ.ಆರ್. ಪೇಟೆಗೆ ತೆರಳಬೇಕಿದ್ದ ಮುಸ್ಲಿಂ ದಂಪತಿ ತಪ್ಪಾಗಿ ಶಿವಮೊಗ್ಗ ಮಾರ್ಗದ ಬಸ್ ಹತ್ತಿದಾಗ, ನಿರ್ವಾಹಕ ಅವರೊಂದಿಗೆ ವಾಗ್ವಾದ ನಡೆಸಿ, ‘ಇದು ಅಫ್ಘಾನಿಸ್ತಾನನಾ? ಪಾಕಿಸ್ತಾನನಾ?’ ಎಂಬ ಧಾರ್ಮಿಕ ಗುರುತನ್ನು ಗುರಿಯಾಗಿಸಿಕೊಂಡ ಹೇಳಿಕೆ ನೀಡಿದ್ದಾರೆ. ಈ ಮಾತು ಪ್ರಯಾಣಿಕರ ಧಾರ್ಮಿಕ ಗುರುತನ್ನು ಗುರಿಯಾಗಿಸಿಕೊಂಡ ಅವಹೇಳನಕಾರಿ ಹೇಳಿಕೆಯೆಂದು ಆರೋಪಿಸಿ, ಸಕಲ ಮುಸಲ್ಮಾನರ ಸ್ವಘೋಷಿತ ರಕ್ಷಕ ಅಬ್ದುಲ್ ರಜಾಕ್ ಬೆಂಗಳೂರಿನಿಂದ ಚನ್ನರಾಯಪಟ್ಟಣಕ್ಕೆ ಬಂದು, ಕಾಂಗ್ರೆಸ್ ಸರ್ಕಾರದೊಂದಿಗಿರುವ ತನ್ನ ಧರ್ಮದ ದರ್ಪವನ್ನು ಪ್ರಯೋಗಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಲ್ಲದೆ, ಆ ದೂರಿನ ಪ್ರತಿಯನ್ನು ಕಂಡಕ್ಟರ್ ಅವರ ಡಿಪೋ ಮ್ಯಾನೇಜರ್ ಅವರಿಗೂ ನೀಡಿ ಅವರನ್ನು ಅಮಾನತುಗೊಳಿಸುವಂತೆ ಮಾಡಿಸಿ, ತಾನೊಬ್ಬ ಜಾತ್ಯತೀತವಾದಿ ಎಂದು ಹಾರಾಡುತ್ತಿರುವುದು ನಿಜಕ್ಕೂ ಅಚ್ಚರಿಯ ವಿಷಯವಾಗಿದೆ.
ಏನಿದು ಘಟನೆ?
ವರದಿಗಳ ಪ್ರಕಾರ, KA-42-F-2253 ನೋಂದಣಿ ಸಂಖ್ಯೆಯ ಕೆಎಸ್ಆರ್ಟಿಸಿ ಬಸ್ ಶಿವಮೊಗ್ಗದ ಕಡೆಗೆ ಪ್ರಯಾಣಿಸುತ್ತಿತ್ತು. ಮೌಲಾನಾ ಸಾಹೇಬ್ ಮತ್ತು ಅವರ ಪತ್ನಿ ಕೆ.ಆರ್. ಪೇಟೆಗೆ ತೆರಳಬೇಕಾಗಿದ್ದು, ತಿಳಿದೋ ಅಥವಾ ತಿಳಿಯದೆಯೋ ಶಿವಮೊಗ್ಗ ಕಡೆಗೆ ಪ್ರಯಾಣಿಸುತ್ತಿದ್ದ ಬಸ್ ಹತ್ತಿ ಮಧ್ಯಭಾಗದ ಆಸನದಲ್ಲಿ ಕುಳಿತಿದ್ದರು. ಆಗಲೇ ತಡವಾಗಿದ್ದ ಕಾರಣ ಚಾಲಕರೂ ತುಸು ವೇಗವಾಗಿ ಬಸ್ ಚಲಾಯಿಸುತ್ತಿದ್ದರು. ನಿರ್ವಾಹಕರು ಟಿಕೆಟ್ ನೀಡುವ ಸಮಯದಲ್ಲಿ ಮೌಲಾನಾ ಅವರಿಗೆ ತಮ್ಮ ತಪ್ಪಿನ ಅರಿವಾಗಿ ಕೂಡಲೇ ಬಸ್ ನಿಲ್ಲಿಸುವಂತೆ ಮನವಿ ಮಾಡಿದಾಗ, ವಿಪರೀತ ಜನಸಂದಣಿಯ ನಡುವೆಯೂ ಚಾಲಕರು ಮತ್ತು ನಿರ್ವಾಹಕರು ಬಸ್ ನಿಲ್ಲಿಸಿ, ಗಂಡ ಮತ್ತು ಹೆಂಡತಿಗೆ ಬಸ್ ಇಳಿಯಲು ಅವಕಾಶ ಮಾಡಿಕೊಟ್ಟಿದ್ದಾರೆ.
ಈ ಮಧ್ಯೆ, ಅವರು ಇಳಿಯುವುದು ಸ್ವಲ್ಪ ತಡವಾದಾಗ ತುಸು ಬೇಸರಗೊಂಡ ನಿರ್ವಾಹಕರು, ಕೇಳದೇ-ಕೇಳಿಸದೇ ಬಸ್ ಹತ್ತಿಬಿಡುತ್ತಾರೆ ಮತ್ತು ಇಳಿಯುವಾಗ ನಿಧಾನ ಮಾಡುತ್ತಾರೆ. ಈಗಾಗಲೇ ತಡವಾಗಿದ್ದು, ಮತ್ತಷ್ಟು ತಡ ಮಾಡಿದರೆ ಡಿಪೋ ಮ್ಯಾನೇಜರ್ ನಮ್ಮನ್ನು ಬೈಯುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ತಮ್ಮದೇ ತಪ್ಪಿದ್ದರೂ ಅಷ್ಟಕ್ಕೇ ಸುಮ್ಮನಾಗದ ಮೌಲಾನಾ ದಂಪತಿಗಳು, ಬಸ್ಸಿನಿಂದ ಇಳಿಯುವ ಸಂದರ್ಭದಲ್ಲಿ, “ಕೆ.ಆರ್. ಪೇಟೆಗೆ ಬಾ, ನೋಡಿಕೊಳ್ಳುತ್ತೇವೆ” ಎಂದು ಕರ್ತವ್ಯ ನಿರತನಾಗಿದ್ದ ಸರ್ಕಾರಿ ನೌಕರನ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಆ ಬಸ್ ನಿರ್ವಾಹಕರೂ ಬಸ್ನ ಗಮ್ಯಸ್ಥಾನದ ಫಲಕವನ್ನು ನೋಡದೆ ಏಕೆ ಹತ್ತಿದ್ದೀರಿ ಎಂದು ಪ್ರಶ್ನಿಸಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ನಂತರ ಕೋಪದಲ್ಲಿ, “ಕೆ.ಆರ್. ಪೇಟೆ ಇರೋದೋ ಅಫ್ಘಾನಿಸ್ತಾನದಲ್ಲಾ, ಇಲ್ಲಾ ಪಾಕಿಸ್ತಾನದಲ್ಲಾ?” ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನವೆಂಬರ್ 9ರ ಸೋಮವಾರ ಸಂಜೆ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿತು. ನವೆಂಬರ್ 10ರಂದು ವಿವಿಧ ಮಾಧ್ಯಮಗಳಲ್ಲಿ ವರದಿಯಾಯಿತು. ಪ್ರಯಾಣಿಕರು ಮತ್ತು ನಿರ್ವಾಹಕರ ನಡುವೆ ಈ ರೀತಿಯ ವಾದ-ಪ್ರತಿವಾದಗಳು, ಘರ್ಷಣೆಗಳು ಮತ್ತು ಮಾತಿನ ಚಕಮಕಿಗಳು ಸಹಜ ಪ್ರಕ್ರಿಯೆಯಾಗಿದ್ದು, ಅವುಗಳ ಬಗ್ಗೆ ಯಾರೂ ಹೆಚ್ಚಿನ ಗಮನ ಹರಿಸುವುದಿಲ್ಲ. ದುರದೃಷ್ಟವಶಾತ್, ಕೆಲವು ಕಿಡಿಗೇಡಿಗಳು ಬಸ್ಸಿನೊಳಗೆ ಮೌಲಾನಾ ದಂಪತಿಗಳು ಎರಡು-ಮೂರು ಬಾರಿ ಅವಾಜ್ ಹಾಕಿದ್ದನ್ನು ವಿಡಿಯೋ ಮಾಡದೇ, ಕೇವಲ ಬಸ್ಸಿನ ಹೊರಗಿನಿಂದ ನಿರ್ವಾಹಕರು ಆಡಿದ ಮಾತನ್ನು ಮಾತ್ರ ವಿಡಿಯೋ ಮಾಡಿ, ಅದಕ್ಕೆ ಧರ್ಮದ ಸೋಗು ಹಾಕಿ ಇಷ್ಟು ರಾದ್ಧಾಂತ ಮಾಡಿದ್ದಾರೆ. ಇದೇ ಕಾರಣದಿಂದಲೇ ‘ಬೆರಳಲ್ಲಿ ಆಗುವ ಕೆಲಸಕ್ಕೆ ಕೊಡಲಿ ತೆಗೆದುಕೊಂಡರು’ ಎಂದೇ ಲೇಖನವನ್ನು ಆರಂಭಿಸಿದ್ದು.
ಈ ರೀತಿಯ ಸಣ್ಣ ಘಟನೆಗಾಗಿಯೇ ಬಕಪಕ್ಷಿಯಂತೆ ಕಾಯುವ ಮತ್ತು ಪದೇ ಪದೇ ಕೋಮು ಸೌಹಾರ್ದತೆಗೆ ಧಕ್ಕೆ ಬರುವಂತೆ ಹೇಳಿಕೆಗಳನ್ನು ನೀಡುವ ಟಿವಿ ಸ್ಟಾರ್ ಅಬ್ದುಲ್ ರಜಾಕ್ ಇಡೀ ಪ್ರಕರಣಕ್ಕೆ ಮತ್ತೊಂದು ಮಟ್ಟದ ಧರ್ಮದ ಬಣ್ಣ ಹಚ್ಚಿರುವುದು ಅಕ್ಷಮ್ಯ ಅಪರಾಧವಾಗಿದೆ. ಅಬ್ದುಲ್ ರಜಾಕ್ ಅವರಿಗೆ ನಿಜವಾಗಿಯೂ ಪ್ರಕರಣವನ್ನು ಇತ್ಯರ್ಥಪಡಿಸಬೇಕು ಎಂದಿದ್ದರೆ, ಮೌಲಾನಾ ಮತ್ತು ನಿರ್ವಾಹಕರಿಬ್ಬರನ್ನೂ ಒಂದೆಡೆ ಕರೆಸಿ, ಪರಸ್ಪರ ಮಾತನಾಡಿಸಿ, ತಪ್ಪೊಪ್ಪಿಗೆಯ ಹೇಳಿಕೆಗಳನ್ನು ಇಬ್ಬರಿಂದಲೂ ಕೊಡಿಸಿ ಪ್ರಕರಣಕ್ಕೆ ಸುಖಾಂತ್ಯ ಹಾಡಬಹುದಾಗಿತ್ತು.
ಪ್ರಯಾಣಿಕರು ತಪ್ಪು ಬಸ್ ಹತ್ತಿದರೆ ಯಾರ ಜವಾಬ್ದಾರಿ?
ಈ ಘಟನೆಯಲ್ಲಿ ಒಂದು ಅಂಶವನ್ನು ನಿರ್ಲಕ್ಷಿಸುವಂತಿಲ್ಲ. ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕನಿಗೂ ತಾನು ಹತ್ತುವ ಬಸ್ ಯಾವ ಊರಿಗೆ ಹೋಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಇದೆ. ಬಸ್ನ ಮುಂಭಾಗ ಮತ್ತು ಬದಿಗಳಲ್ಲಿ ಪ್ರದರ್ಶಿಸುವ ಗಮ್ಯಸ್ಥಾನದ ಫಲಕವನ್ನು ಗಮನಿಸುವುದು, ಅಗತ್ಯವಿದ್ದರೆ ಬಸ್ ನಿಲ್ದಾಣದಲ್ಲಿರುವ ಸಿಬ್ಬಂದಿ ಅಥವಾ ನಿರ್ವಾಹಕರನ್ನು ವಿಚಾರಿಸುವುದು ಪ್ರಯಾಣಿಕರ ಕರ್ತವ್ಯ.
ಹಿರಿಯ ನಾಗರಿಕರು, ಓದಲು ಕಷ್ಟಪಡುವವರು, ಮೊದಲ ಬಾರಿಗೆ ಪ್ರಯಾಣಿಸುವವರು ಮತ್ತು ಸ್ಥಳೀಯ ಭಾಷೆ ತಿಳಿಯದವರು ಇಂತಹ ಗೊಂದಲಕ್ಕೆ ಹೆಚ್ಚು ಒಳಗಾಗಬಹುದು. ಆದ್ದರಿಂದ ಪ್ರಯಾಣಿಕರು ಎಚ್ಚರಿಕೆ ವಹಿಸುವುದು ಎಷ್ಟು ಮುಖ್ಯವೋ, ಸಾರಿಗೆ ಸಿಬ್ಬಂದಿ ಅವರಿಗೆ ಸರಿಯಾದ ಮಾಹಿತಿ ನೀಡುವುದೂ ಅಷ್ಟೇ ಮುಖ್ಯ. ಪ್ರಯಾಣಿಕರು ತಪ್ಪು ಬಸ್ ಹತ್ತಿದರೆ ಅದನ್ನು ತಕ್ಷಣ ಗುರುತಿಸಿ, ಅವರಿಗೆ ಯಾವ ಬಸ್ ಹತ್ತಬೇಕು, ಎಲ್ಲಿ ಇಳಿಯಬೇಕು ಮತ್ತು ಮುಂದಿನ ಪ್ರಯಾಣವನ್ನು ಹೇಗೆ ಮುಂದುವರಿಸಬೇಕು ಎಂಬುದನ್ನು ತಿಳಿಸುವುದು ನಿರ್ವಾಹಕರಿಂದ ನಿರೀಕ್ಷಿಸಲಾಗುವ ವೃತ್ತಿಪರ ವರ್ತನೆ.
ನಿರ್ವಾಹಕರ ದೃಷ್ಟಿಕೋನದಿಂದ ನೋಡಿದರೆ…
ಈ ಘಟನೆಯನ್ನು ವಿಶ್ಲೇಷಿಸುವಾಗ ಬಸ್ ನಿರ್ವಾಹಕರ ಕೆಲಸದ ಸ್ವರೂಪವನ್ನೂ ಅರ್ಥಮಾಡಿಕೊಳ್ಳಬೇಕು. ಸಾರ್ವಜನಿಕರು ಸಾಮಾನ್ಯವಾಗಿ ನಿರ್ವಾಹಕನನ್ನು ಟಿಕೆಟ್ ನೀಡುವ ವ್ಯಕ್ತಿ ಎಂದು ಮಾತ್ರ ಪರಿಗಣಿಸುತ್ತಾರೆ. ಆದರೆ ಅವರ ಜವಾಬ್ದಾರಿ ಅದಕ್ಕಿಂತ ಹೆಚ್ಚು ವ್ಯಾಪಕವಾಗಿದೆ. ಪ್ರತಿದಿನ ನಿಗದಿತ ವೇಳಾಪಟ್ಟಿಯಂತೆ ಬಸ್ ಸಂಚಾರ ನಡೆಸುವುದು, ಪ್ರಯಾಣಿಕರಿಗೆ ಸರಿಯಾದ ಟಿಕೆಟ್ ನೀಡುವುದು, ಪ್ರಯಾಣದ ದರ ಸಂಗ್ರಹಿಸುವುದು, ಪ್ರಯಾಣಿಕರು ಇಳಿಯಬೇಕಾದ ನಿಲ್ದಾಣಗಳ ಬಗ್ಗೆ ಮಾಹಿತಿ ನೀಡುವುದು, ಬಸ್ನಲ್ಲಿನ ಶಿಸ್ತು ಕಾಪಾಡುವುದು ಮತ್ತು ಚಾಲಕರೊಂದಿಗೆ ಸಮನ್ವಯ ಸಾಧಿಸುವುದು ನಿರ್ವಾಹಕರ ದೈನಂದಿನ ಕೆಲಸದ ಭಾಗವಾಗಿದೆ.
ಕೆಲವು ಸಂದರ್ಭಗಳಲ್ಲಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿರುತ್ತದೆ. ಬಸ್ ಸಮಯಕ್ಕೆ ಹೊರಡಬೇಕಾಗಿರುತ್ತದೆ. ಟಿಕೆಟ್ ವಿತರಣೆ, ಹಣದ ಲೆಕ್ಕ, ಪ್ರಯಾಣಿಕರ ಪ್ರಶ್ನೆಗಳು, ಹಿರಿಯರು ಮತ್ತು ಮಹಿಳೆಯರಿಗೆ ನೆರವು, ಮಾರ್ಗದ ಮಧ್ಯೆ ಉಂಟಾಗುವ ಸಮಸ್ಯೆಗಳು ಹೀಗೆ ಹಲವು ಜವಾಬ್ದಾರಿಗಳನ್ನು ಒಂದೇ ಸಮಯದಲ್ಲಿ ನಿರ್ವಹಿಸಬೇಕಾಗುತ್ತದೆ.
ಬಸ್ ಎಲ್ಲೆಂದರಲ್ಲಿ ನಿಲ್ಲಿಸಲು ಸಾಧ್ಯವಿಲ್ಲ. ಸುರಕ್ಷಿತವಾದ ನಿಲ್ದಾಣ ಅಥವಾ ಸೂಕ್ತ ಸ್ಥಳದಲ್ಲಿ ಪ್ರಯಾಣಿಕರನ್ನು ಇಳಿಸುವುದು ಅಗತ್ಯ. ಪ್ರಯಾಣಿಕರ ಸುರಕ್ಷತೆ ಮತ್ತು ಬಸ್ ಸಂಚಾರದ ವೇಳಾಪಟ್ಟಿಯ ನಡುವೆಯೂ ಸಮತೋಲನ ಕಾಯ್ದುಕೊಳ್ಳಬೇಕಾಗುತ್ತದೆ. ಹೀಗಾಗಿ ನಿರ್ವಾಹಕರ ಕೆಲಸದಲ್ಲಿ ಒತ್ತಡವಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು.
‘ಪಾಕಿಸ್ತಾನ, ಅಫ್ಘಾನಿಸ್ತಾನ’ ಎಂಬ ಹೋಲಿಕೆಯ ಅಗತ್ಯವಿತ್ತೇ?
ಈ ಘಟನೆಯ ಅತ್ಯಂತ ವಿವಾದಾತ್ಮಕ ಭಾಗವೆಂದರೆ ನಿರ್ವಾಹಕರು ಬಳಸಿದ್ದಾರೆ ಎನ್ನಲಾದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಉಲ್ಲೇಖ. ಅದು ತಪ್ಪಾದರೂ, ತಮ್ಮದೇ ತಪ್ಪಿದ್ದರೂ ಅದಕ್ಕೆ ಪ್ರತಿಯಾಗಿ ಚಾಲಕರು ಬಸ್ ನಿಲ್ಲಿಸಿ ಇಳಿಯಲು ಅನುವು ಮಾಡಿಕೊಟ್ಟಾಗಲೂ ಕರ್ತವ್ಯನಿರತ ಸರ್ಕಾರಿ ನೌಕರನನ್ನು ಅವಹೇಳನ ಮಾಡಿರುವುದು ಮೌಲಾನಾ ದಂಪತಿಗಳ ತಪ್ಪು ಎಂದು ಯಾರೂ ಹೇಳದೇ ಇರುವುದು ನಿಜಕ್ಕೂ ಅಚ್ಚರಿಯಾಗುತ್ತಿದೆ.
ನಿರ್ವಾಹಕರು ಧರ್ಮದ ಹೆಸರನ್ನು ಹೇಳದೇ ನಮ್ಮ ನೆರೆಯ ರಾಷ್ಟ್ರಗಳ ಹೆಸರನ್ನೇ ಹೇಳಿರುವುದಕ್ಕೇ ಧರ್ಮಾಧಾರಿತ ಅವಹೇಳನ ಎಂದು ವಾದಿಸುವ ಇದೇ ಅಬ್ದುಲ್ ರಜಾಕ್, ಮಾತಿನ ಭರದಲ್ಲಿ “ಸುವ್ವರ್ ಕೇ ಬಚ್ಚೇ”, “ಸರ್ಕಾರಿ ಗುಲಾಮ” ಎಂದು ಹೇಳಿರುವ ಕೆಲವು ವಿಡಿಯೋಗಳೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕರ್ತವ್ಯದಲ್ಲಿರುವ ಸರ್ಕಾರಿ ನೌಕರನಾದ ನಿರ್ವಾಹಕರನ್ನು ಈ ರೀತಿಯಾಗಿ ಅವಾಚ್ಯ ಶಬ್ದಗಳಿಂದ ನಿಂದಿಸುವ ಹಕ್ಕನ್ನು ಅಬ್ದುಲ್ ರಜಾಕ್ ಅವರಿಗೆ ಯಾವ ಸಂವಿಧಾನ ನೀಡಿದೆ? ಅಷ್ಟೇ ಅಲ್ಲದೆ, ತಮ್ಮ ವೈಯಕ್ತಿಕ ಶಿಫಾರಸನ್ನು ಬಳಸಿರುವ ಅವಿವೇಕಿ ಅಬ್ದುಲ್ ರಜಾಕ್, ನಿರ್ವಾಹಕರನ್ನು ಕೆಲಸದಿಂದ ಅಮಾನತುಗೊಳಿಸಿರುವ ಕೃತ್ಯಕ್ಕೆ ತೀಕ್ಷ್ಣವಾದ ಶಿಕ್ಷೆಯಾಗಲೇಬೇಕು ಎಂದು ಹಿಂದೂ ಪರ ಸಂಘಟನೆಗಳು ಕೇಳುತ್ತಿರುವುದರಲ್ಲಿ ಸರಿ ಇದೆ ಎಂದು ಕಾಣಿಸುತ್ತದೆ.
ಅಬ್ದುಲ್ ರಜಾಕ್ ಅವರ ಇಂತಹ ಅಪಸವ್ಯಗಳು ಇದೇ ಮೊದಲೂ ಅಲ್ಲ, ಕೊನೆಯೂ ಅಲ್ಲ. ನಮಗೆ ಅಲ್ಲಾ ಬಿಟ್ಟರೆ ಬೇರೆ ದೇವರೇ ಇಲ್ಲ. ನಮ್ಮಲ್ಲಿ ವ್ಯಕ್ತಿಪೂಜೆಯೇ ಇಲ್ಲ ಎನ್ನುವ ಇದೇ ರಜಾಕ್, ಇತ್ತೀಚೆಗೆ ದಸರಾ ಸಂದರ್ಭದಲ್ಲಿ ಮೈಸೂರಿನ ದರ್ಗಾವೊಂದಕ್ಕೆ ಕೇವಲ ಮೂರು ಆನೆಗಳನ್ನು ಕಳುಹಿಸಿರುವುದನ್ನು ಪ್ರಶ್ನಿಸಿ ಭಾರಿ ದಾಂಧಲೆ ನಡೆಸಿದ್ದನ್ನೂ ಇಲ್ಲಿ ನೆನಪಿಸಿಕೊಳ್ಳಬೇಕಿದೆ. ಪ್ರತಿಬಾರಿ 16 ಆನೆಗಳನ್ನು ಕಳುಹಿಸುತ್ತಿದ್ದವರು ಈ ಬಾರಿ ಕೇವಲ ಮೂರು ಆನೆಗಳನ್ನು ಕಳುಹಿಸಿದ್ದಾರೆ. ಮುಂದಿನ ಬಾರಿಯೂ ಇದೇ ರೀತಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದಿರುವುದು ಕಿಡಿಗೇಡಿತನವಾಗಿದೆ.
ಹಾಗೆ ನೋಡಿದರೆ, ಆ ದರ್ಗಾದ ಆಚರಣೆಗೆ ಯಾವುದೇ ಧಾರ್ಮಿಕ ಹಿನ್ನೆಲೆಯೂ ಇಲ್ಲ. ಅಲ್ಲಿಗೆ ಆನೆಗಳನ್ನು ಕಳುಹಿಸಬೇಕು ಎನ್ನುವ ದಸರೆಯ ಪೌರಾಣಿಕ ಹಿನ್ನೆಲೆ, ಹಿಂದಿನ ರಾಜಮಹಾರಾಜರ ಆಜ್ಞೆ ಅಥವಾ ಪ್ರಸ್ತುತ ಸರ್ಕಾರದ ಕಾನೂನು ಯಾವುದೂ ಇಲ್ಲ. ಆದರೂ ಹಿಂದೆ ಯಾರೋ ಮಾಡಿದ್ದನ್ನು ವಾಡಿಕೆಯಂತೆ ಮುಂದುವರಿಸಿಕೊಂಡು ಹೋಗುತ್ತಿದ್ದುದನ್ನೇ ನೆಪ ಮಾಡಿಕೊಂಡು, ದಸರಾವನ್ನೇ ನಿಲ್ಲಿಸುವ ಮಟ್ಟಿಗೆ ರಜಾಕ್ ಧಮ್ಕಿ ಹಾಕುತ್ತಾರೆ ಎಂದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿಗಳು (ನಮ್ಮ ಬ್ರದರ್ಸ್ ಖ್ಯಾತಿ) ಮತ್ತು ಗೃಹಮಂತ್ರಿಗಳು ಅಬ್ದುಲ್ ರಜಾಕ್ ಮತ್ತು ಅವರ ಧರ್ಮದವರಿಗೆ ಯಾವ ರೀತಿಯಲ್ಲಿ ರಕ್ಷಣೆ ನೀಡುತ್ತಿದೆ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಕಾಂಗ್ರೇಸ್ ಪಕ್ಷದಿಂದ ರಾಜ್ಯಸಭೆಗೆ ನಾಸೀರ್ ಹುಸೇನ್ ಅವರು ಆಯ್ಕೆಯಾದಂತಹ ಸಂಧರ್ಭದಲ್ಲಿ ಅವರ ಸಮರ್ಥಕರು ವಿಧಾನ ಸೌಧದ ಬ್ವಾಂಕೆಟ್ ಹಾಲಿನಲ್ಲೇ ಎಲ್ಲಾ ಮಾಧ್ಯಮಗಳ ಎದುರಿನಲ್ಲೇ ನಮ್ಮ ಶತ್ರು ದೇಶ ಪಾಕೀಸ್ಥಾನ್ ಜಿಂದಾಬಾದ್ ಎಂದು ಸಾರಿ ಸಾರಿ ಕೂಗಿದ್ದಾಗ ಬಾಯಲ್ಲಿ ಬೆಣ್ಣೆಯಿಟ್ಟುಕೊಂಡು ಸದ್ದಿಲ್ಲದೇ ಇದ್ದ ಅಬ್ದುಲ್ ರಜಾಕ್ ಈಗ ಸಣ್ಣ ವಿಚಾರವನ್ಣೇ ದೊದ್ಡದಾಗಿ ಮಾಡುತ್ತಿರುವುದರ ಇಂದಿರುವ ಹುನ್ನಾರವನ್ನು ಪೋಲೀಸ್ ಇಲಾಖೆ ಮತ್ತು ಸರ್ಕಾರ ತನಿಖೆ ಮಾಡಿಸಿ ಸೂಕ್ತವಾಗಿ ಶಿಕ್ಷಿಸದೇ ಹೋದಲ್ಲಿ ಮುಂದೆ ಭಾರೀ ಬೆಲೆಯನ್ನು ತೆರಬಾಕಾದ ಪರಿಸ್ಥಿತಿ ಬಂದರೂ ಅಚ್ಚರಿ ಇಲ್ಲವಾಗಿದೆ.
ಸಾರ್ವಜನಿಕ ಸಾರಿಗೆ ಎಂದರೆ ಎಲ್ಲರಿಗೂ ಸಮಾನ ಸೇವೆ
ಕೆಎಸ್ಆರ್ಟಿಸಿ ಕೇವಲ ಒಂದು ಸಾರಿಗೆ ಸಂಸ್ಥೆಯಲ್ಲ; ಕರ್ನಾಟಕದ ನಗರ, ಪಟ್ಟಣ ಮತ್ತು ಹಳ್ಳಿಗಳನ್ನು ಸಂಪರ್ಕಿಸುವ ಜನಜೀವನದ ಪ್ರಮುಖ ಕೊಂಡಿ. ಪ್ರತಿದಿನ ಲಕ್ಷಾಂತರ ಜನರು ಸರ್ಕಾರಿ ಬಸ್ಗಳನ್ನು ಅವಲಂಬಿಸುತ್ತಾರೆ. ಇಂತಹ ವ್ಯವಸ್ಥೆಯಲ್ಲಿ ಪ್ರಯಾಣಿಕರಿಗೆ ಸುರಕ್ಷಿತ ಪ್ರಯಾಣದ ಜೊತೆಗೆ ಗೌರವಯುತ ಸೇವೆಯೂ ದೊರೆಯಬೇಕು.
ಪ್ರಯಾಣಿಕರು ಬಸ್ನ ಗಮ್ಯಸ್ಥಾನದ ಫಲಕವನ್ನು ಗಮನಿಸಿ ಹತ್ತಬೇಕು. ನಿರ್ವಾಹಕರು ಸರಿಯಾದ ಮಾಹಿತಿ ನೀಡಬೇಕು. ತಪ್ಪು ನಡೆದರೆ ಅದನ್ನು ಶಾಂತವಾಗಿ ಸರಿಪಡಿಸಬೇಕು. ಯಾರೊಬ್ಬರ ಧರ್ಮ, ಭಾಷೆ ಅಥವಾ ವೇಷಭೂಷಣವನ್ನು ಅವಮಾನಿಸುವ ಸಾಧನವಾಗಿ ಬಳಸಬಾರದು.
ಈ ಘಟನೆಯಲ್ಲಿ ಪ್ರಯಾಣಿಕರು ತಪ್ಪು ಬಸ್ ಹತ್ತಿರುವುದು ಅವರಿಂದಾದ ತಪ್ಪಾಗಿರಬಹುದು. ಅದನ್ನು ನಿರ್ವಾಹಕರು ಪ್ರಶ್ನಿಸುವುದರಲ್ಲಿ ತಪ್ಪಿಲ್ಲ. ಆದರೆ ಆ ತಪ್ಪನ್ನು ಸರಿಪಡಿಸುವ ವಿಧಾನದಲ್ಲಿ ಸಂಯಮ ಮತ್ತು ವೃತ್ತಿಪರತೆ ಇರಬೇಕು. ಅದೇ ರೀತಿ ನಿರ್ವಾಹಕರ ಮೇಲಿನ ಆರೋಪಗಳನ್ನೂ ಪೂರ್ಣ ತನಿಖೆಯ ಮೂಲಕ ಪರಿಶೀಲಿಸಬೇಕು.
ಕೋಮು ದ್ವೇಷ ಬಿತ್ತುವವರೇ ನಿಜವಾದ ದೇಶದ್ರೋಹಿಗಳು. ಸಮಾಜದಲ್ಲಿ ಧರ್ಮ ಮತ್ತು ಜಾತಿಗಳ ನಡುವೆ ದ್ವೇಷದ ವಿಷಬೀಜ ಬಿತ್ತುವವರೇ ನಿಜವಾದ ದೇಶದ್ರೋಹಿಗಳು. ಸಂವಿಧಾನವೇ ಸ್ವತಂತ್ರ ಭಾರತದ ಶ್ರೇಷ್ಠ ಶಕ್ತಿ. ಇದರಲ್ಲಿ ಯಾರಿಗೂ ಜಗ್ಗುವುದಿಲ್ಲ, ಬಗ್ಗುವುದೂ ಇಲ್ಲ. ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ನನ್ನ ಹೋರಾಟ ನಿರಂತರವಾಗಿರಲಿದೆ” ಎಂದು ಇತ್ತೀಚೆಗಷ್ಟೇ ಗೃಹ, ಐಟಿಬಿಟಿ, ಇ-ಆಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿರುವುದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಈ ಪ್ರಕರಣದಲ್ಲೂ ಅದೇ ರೀತಿ ತೀರಾ ಕ್ಷುಲ್ಲಕ ಎನಿಸುವಂತಹ ಹೇಳಿಕೆಯನ್ನೇ ಕಾರಣವಾಗಿಸಿ ಕೋಮು ಸೌಹಾರ್ದತೆಗೆ ಧಕ್ಕೆ ತಂದಿರುವ ಮೌಲಾನಾ ದಂಪತಿಗಳಿಗೆ ಮತ್ತು ಮತಾಂಧ ಅಬ್ದುಲ್ ರಜಾಕ್ ಅವರಂತಹ ಕಿಡಿಗೇಡಿಗಳಿಗೆ ಶಿಕ್ಷೆ ಕೊಡಿಸುತ್ತಾರೆ ಎಂದು ಆಶಿಸೋಣ, ಅಲ್ಲವೇ?
ಏನಂತೀರೀ?
ನಿಮ್ಮವನೇ ಶ್ರೀಮಂತ
ಈ ಗಾದೆಗೆ ಸರಿಯಾದ ಉದಾಹರಣೆಯಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬಸ್ನಲ್ಲಿ ನಡೆದಿರುವ ಘಟನೆಯೊಂದು ಈಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಕೆ.ಆರ್. ಪೇಟೆಗೆ ತೆರಳಬೇಕಿದ್ದ ಮುಸ್ಲಿಂ ದಂಪತಿ ತಪ್ಪಾಗಿ ಶಿವಮೊಗ್ಗ ಮಾರ್ಗದ ಬಸ್ ಹತ್ತಿದಾಗ, ನಿರ್ವಾಹಕ ಅವರೊಂದಿಗೆ ವಾಗ್ವಾದ ನಡೆಸಿ, ಇದು ಅಫ್ಘಾನಿಸ್ತಾನನಾ? ಪಾಕಿಸ್ತಾನನಾ? ಎಂಬ ಧಾರ್ಮಿಕ ಗುರುತನ್ನು ಗುರಿಯಾಗಿಸಿಕೊಂಡ ಹೇಳಿಕೆಈ ಮಾತು ಪ್ರಯಾಣಿಕರ ಧಾರ್ಮಿಕ ಗುರುತನ್ನು ಗುರಿಯಾಗಿಸಿಕೊಂಡ ಅವಹೇಳನಕಾರಿ ಹೇಳಿಕೆಯೆಂದು ಎಂದು ಸಕಲ ಮುಸಲ್ಮಾನರ ಸ್ವಘೋಷಿತ ರಕ್ಷಕ ಅಬ್ದುಲ್ ರಜಾಕ್ ಬೆಂಗಳೂರಿನಿಂದ ಚನ್ನರಾಯಪಟ್ಟಣಕ್ಕೆ ಬಂದು ಕಾಂಗ್ರೇಸ್ ಸರ್ಕಾರದೊಂದಿಗಿರುವ ತನ್ನ ಧರ್ಮದ ದರ್ಪನ್ನು ಪ್ರಯೋಗಿಸಿ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಲ್ಲದೇ, ಆ ಪ್ರತಿಯನ್ನು ಕಂಡಕ್ಟರ್ ಅವರ ಡಿಪೋ ಮ್ಯಾನೇಜರ್ ಅವರಿಗೂ ಸಹಾ ನೀಡಿ ಅವರನ್ನು ಅಮಾನತು ಮಾಡಿಸಿ ತಾನೊಬ್ಬ ಜ್ಯಾತಾತೀತವಾದಿ ಎಂದು ಹಾರಾಡುತಿರುವುದು ನಿಜಕ್ಕೂ ಅಚ್ಚರಿಯ ವಿಷಯವಾಗಿದೆ.
ಏನಿದು ಘಟನೆ?
ವರದಿಗಳ ಪ್ರಕಾರ, KA-42-F-2253 ನೋಂದಣಿ ಸಂಖ್ಯೆಯ ಕೆಎಸ್ಆರ್ಟಿಸಿ ಬಸ್ ಶಿವಮೊಗ್ಗದ ಕಡೆಗೆ ಪ್ರಯಾಣಿಸುತ್ತಿತ್ತು. ಮೌಲಾನಾ ಸಾಹೇಬ್ ಮತ್ತು ಅವರ ಪತ್ನಿ ಕೆ.ಆರ್. ಪೇಟೆಗೆ ತೆರಳಬೇಕಾಗಿದ್ದು, ತಿಳಿದೋ ಅಥವಾ ತಿಳಿಯದೋ ಶಿವಮೊಗ್ಗ ಕಡೆ ಪ್ರಯಾಣಿಸುತ್ತಿದ್ದ ಬಸ್ ಹತ್ತಿ ಮಧ್ಯಭಾಗದ ಆಸನದಲ್ಲಿ ಕುಳಿತ್ತಿದ್ದಾರೆ. ಅದಾಗಲೇ ತಡವಾಗಿದ್ದ ಕಾರಣ ಚಾಲಕರೂ ತುಸು ವೇಗವಾಗಿ ಬಸ್ಸನ್ನು ಚಲಾಯಿಸುತ್ತಿದ್ದು, ನಿರ್ವಾಹಕರು ಟಿಕೆಟ್ ಕೊಡುವ ಸಮಯಲ್ಲಿ ಮೌಲಾನ ಅವರಿಗೆ ತಮ್ಮ ತಪ್ಪು ಅರಿವಾಗಿ ಕೂಡಲೇ ಬಸ್ ನಿಲ್ಲಿಸುವಂತೆ ಮನವಿ ಮಾಡಿದಾಗ, ವಿಪರೀತ ಜನಸಂದಣಿಯ ಮಧ್ಯದಲ್ಲೂ ಚಾಲಕರು ಮತ್ತು ನಿರ್ವಾಹಕರು ಬಸ್ ನಿಲ್ಲಿಸಿ ಗಂಡ ಮತ್ತು ಹೆಂಡತಿಯ್ಗೆ ಬಸ್ ಇಳಿಯಲು ಅನುಮಾಡಿಕೊಟ್ಟಿದ್ದಾರೆ.
ಈ ಮಧ್ಯ ಅವರು ಇಳಿಯುವುದು ಸ್ವಲ್ಪ ತಡ ಮಾಡಿದಾಗ ತುಸು ಬೇಸರಗೊಂಡ ನಿರ್ವಾಹಕರೂ ಕೇಳದೇ ಮಾಡದೇ ಬಸ್ ಹತ್ತಿ ಬಿಡುತ್ತಾರೆ ಮತ್ತು ಇಳಿಯುವಾಗ ನಿಧಾನ ಮಾಡುತ್ತಾರೆ. ಈಗಾಗಲೇ ತಡವಾಗಿದ್ದು ಮತ್ತೂ ತಡ ಮಾಡಿದರೆ ಅಲ್ಲಿ ಡಿಪೋ ಮ್ಯಾನೇಜರ್ ನಮ್ಮನ್ನು ಬೈಯ್ಯುತ್ತಾರೆ ಎಂದು ಅಸಮಧಾನ ತೋರಿಸಿದ್ದಾರೆ. ಆದರೆ ತಮ್ಮದೇ ತಪ್ಪಿದ್ದರೂ ಅಷ್ಟಕ್ಕೇ ಸುಮ್ಮಾನಾಗದ ಮೌಲಾನ ದಂಪತಿಗಳು, ಬಸ್ಸಿನಿಂದ ಇಳಿಯುವ ಸಂಧರ್ಭದಲ್ಲಿ ಕೆ.ಆರ್ ಪೇಟೆಗೆ ಬಾ ನೋಡಿಕೊಳ್ಳುತ್ತೇವೆ ಎಂದು ಕರ್ತವ್ಯ ನಿರತನಾಗಿದ್ದ ಸರ್ಕಾರೀ ನೌಕರ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ ಇದಕ್ಕೆ ಪ್ರತಿಯಾಗಿ ಆ ಬಸ್ ನಿರ್ವಾಕರೂ ಬಸ್ನ ಗಮ್ಯಸ್ಥಾನದ ಫಲಕವನ್ನು ನೋಡದೆ ಏಕೆ ಹತ್ತಿದ್ದೀರಿ ಎಂದು ಪ್ರಶ್ನಿಸಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ನಂತರ ಕೋಪದಲ್ಲಿ ಕೆ.ಆರ್ ಪೇಟೆ ಇರೋದೋ ಅಘ್ವಾನಿಸ್ಥಾನದಲ್ಲಾ ಇಲ್ಲಾ ಪಾಕೀಸ್ಥಾನದಲ್ಲಾ ಎಂದು ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ನವೆಂಬರ್ 9ರ ಸೋಮವಾರ ಸಂಜೆ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿತು. ನವೆಂಬರ್ 10ರಂದು ವಿವಿಧ ಮಾಧ್ಯಮಗಳಲ್ಲಿ ವರದಿಯಾಯಿತು. ಪ್ರಯಾಣಿಕರು ಮತ್ತು ನಿರ್ವಾಹಕರ ಮಧ್ಯೆ ಈ ರೀತಿಯ ವಾದ ಪ್ರತಿವಾದಗಳು, ಘರ್ಷಣೆ, ಮಾತಿನ ಚಕಮಕಿಗಳೂ ಸಹಜ ಪ್ರಕ್ರಿಯೆಆಗಿದ್ದು ಅದನ್ನು ಯಾರೂ ಸಹಾ ಹೆಚ್ಚಿನ ಗಮನ ತೆಗೆದುಕೊಳ್ಳುವುದಿಲ್ಲಾ. ದುರಾದೃಷ್ಟವಷಾತ್ ಕೆಲವು ಕಿಡಿಗೇಡಿಗಳು ಬಸ್ಸಿನೊಳಗೆ ಮೌಲಾನ ದಂಪತಿಗಳು ಎರಡು ಮೂರು ಬಾರಿ ಅವಾಜ್ ಹಾಕಿದ್ದನ್ನು ವೀಡಿಯೂ ಮಾಡದೇ ಕೇವಲ ಬಸ್ಸಿನ ಹೊರಗಿನಿಂದ ನಿರ್ವಾಹಕರು ಆಡಿದ ಮಾತನ್ನು ಮಾತ್ರವೇ ವಿಡಿಯೋ ಮಾಡಿ ಅದಕ್ಕೆ ಧರ್ಮದ ಸೋಗನ್ನು ಹಾಕಿ ಇಷ್ಟು ರಾದ್ದಾಂತ ಮಾಡಿದ್ದಾರೆ. ಇದೇ ಕಾರಣದಿಂದಲೇ ಬೆರಳಲ್ಲಿ ಆಗುವ ಕೆಲಸಕ್ಕೆ ಕೊಡಲಿ ತೆಗೆದುಕೊಂಡರು ಎಂದೇ ಲೇಖನವನ್ನು ಆರಂಭಿಸಿದ್ದು.
ಈ ರೀತಿಯ ಸಣ್ಣ ಘಟನೆಗಾಗಿಯೇ ಬಕ ಪಕ್ಷಿಯಂತೆ ಕಾಯುವ ಮತ್ತು ಪದೇ ಪದೇ ಕೋಮು ಸೌಹಾರ್ಧತೆಗೆ ಧಕ್ಕೆ ಬರುವಂತೆ ಹೇಳಿಕೆಗಳನ್ನು ನೀಡುವ ಟಿವೀ ಸ್ಟಾರ್ ಅಬ್ದುಲ್ ಅಜಾಕ್ ಇಡೀ ಪ್ರಕರಣಕ್ಕೆ ಮತ್ತೊಂದು ಮಟ್ಟದ ಧರ್ಮದ ಬಣ್ಣ ಹಚ್ಚಿದ್ದು ಅಕ್ಷಮ್ಯ ಆಪರಾಧವಾಗಿದೆ. ಅಬ್ದುಲ್ ರಜಾಕ್ ಗೆ ನಿಜವಾಗಿಯೂ ಪ್ರಕರಣವನ್ನು ಇತ್ಯರ್ಥ ಪಡಿಸಬೇಕು ಎಂದಿದ್ದರೇ, ಮೌಲಾನಾ ಮತ್ತು ನಿರ್ವಾಕರು ಇಬ್ಬರನ್ನೂ ಒಂದು ಕಡೆ ಕರೆಸಿ ಪರಸ್ಪರ ಮಾತನಾಡಿಸಿ ತಪ್ಪೊಪ್ಪಿಗೆಯ ಹೇಳಿಕೆಗಳನ್ನು ಇಬ್ಬರಿಂದಲೂ ನೀಡಿಸಿ ಪ್ರಕರಣಕ್ಕೆ ಸುಖಾಂತ್ಯ ಹಾಡಬಹುದಾಗಿತ್ತು.
ಪ್ರಯಾಣಿಕರು ತಪ್ಪು ಬಸ್ ಹತ್ತಿದರೆ ಯಾರ ಜವಾಬ್ದಾರಿ?
ಈ ಘಟನೆಯಲ್ಲಿ ಒಂದು ಅಂಶವನ್ನು ನಿರ್ಲಕ್ಷಿಸುವಂತಿಲ್ಲ. ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕನಿಗೂ ತಾನು ಹತ್ತುವ ಬಸ್ ಯಾವ ಊರಿಗೆ ಹೋಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಇದೆ. ಬಸ್ನ ಮುಂಭಾಗ ಮತ್ತು ಬದಿಗಳಲ್ಲಿ ಪ್ರದರ್ಶಿಸುವ ಗಮ್ಯಸ್ಥಾನದ ಫಲಕವನ್ನು ಗಮನಿಸುವುದು, ಅಗತ್ಯವಿದ್ದರೆ ಬಸ್ ನಿಲ್ದಾಣದಲ್ಲಿರುವ ಸಿಬ್ಬಂದಿ ಅಥವಾ ನಿರ್ವಾಹಕರನ್ನು ವಿಚಾರಿಸುವುದು ಪ್ರಯಾಣಿಕರ ಕರ್ತವ್ಯ.
ಹಿರಿಯ ನಾಗರಿಕರು, ಓದಲು ಕಷ್ಟಪಡುವವರು, ಮೊದಲ ಬಾರಿಗೆ ಪ್ರಯಾಣಿಸುವವರು ಮತ್ತು ಸ್ಥಳೀಯ ಭಾಷೆ ತಿಳಿಯದವರು ಇಂತಹ ಗೊಂದಲಕ್ಕೆ ಹೆಚ್ಚು ಒಳಗಾಗಬಹುದು. ಆದ್ದರಿಂದ ಪ್ರಯಾಣಿಕರು ಎಚ್ಚರಿಕೆ ವಹಿಸುವುದು ಎಷ್ಟು ಮುಖ್ಯವೋ, ಸಾರಿಗೆ ಸಿಬ್ಬಂದಿ ಅವರಿಗೆ ಸರಿಯಾದ ಮಾಹಿತಿ ನೀಡುವುದೂ ಅಷ್ಟೇ ಮುಖ್ಯ. ಪ್ರಯಾಣಿಕರು ತಪ್ಪು ಬಸ್ ಹತ್ತಿದರೆ ಅದನ್ನು ತಕ್ಷಣ ಗುರುತಿಸಿ, ಅವರಿಗೆ ಯಾವ ಬಸ್ ಹತ್ತಬೇಕು, ಎಲ್ಲಿ ಇಳಿಯಬೇಕು ಮತ್ತು ಮುಂದಿನ ಪ್ರಯಾಣವನ್ನು ಹೇಗೆ ಮುಂದುವರಿಸಬೇಕು ಎಂಬುದನ್ನು ತಿಳಿಸುವುದು ನಿರ್ವಾಹಕರಿಂದ ನಿರೀಕ್ಷಿಸಲಾಗುವ ವೃತ್ತಿಪರ ವರ್ತನೆ.
ನಿರ್ವಾಹಕರ ದೃಷ್ಟಿಕೋನದಿಂದ ನೋಡಿದರೆ…
ಈ ಘಟನೆಯನ್ನು ವಿಶ್ಲೇಷಿಸುವಾಗ ಬಸ್ ನಿರ್ವಾಹಕರ ಕೆಲಸದ ಸ್ವರೂಪವನ್ನೂ ಅರ್ಥಮಾಡಿಕೊಳ್ಳಬೇಕು. ಸಾರ್ವಜನಿಕರು ಸಾಮಾನ್ಯವಾಗಿ ನಿರ್ವಾಹಕನನ್ನು ಟಿಕೆಟ್ ನೀಡುವ ವ್ಯಕ್ತಿ ಎಂದು ಮಾತ್ರ ಪರಿಗಣಿಸುತ್ತಾರೆ. ಆದರೆ ಅವರ ಜವಾಬ್ದಾರಿ ಅದಕ್ಕಿಂತ ಹೆಚ್ಚು ವ್ಯಾಪಕವಾಗಿದೆ. ಪ್ರತಿದಿನ ನಿಗದಿತ ವೇಳಾಪಟ್ಟಿಯಂತೆ ಬಸ್ ಸಂಚಾರ ನಡೆಸುವುದು, ಪ್ರಯಾಣಿಕರಿಗೆ ಸರಿಯಾದ ಟಿಕೆಟ್ ನೀಡುವುದು, ಪ್ರಯಾಣದ ದರ ಸಂಗ್ರಹಿಸುವುದು, ಪ್ರಯಾಣಿಕರು ಇಳಿಯಬೇಕಾದ ನಿಲ್ದಾಣಗಳ ಬಗ್ಗೆ ಮಾಹಿತಿ ನೀಡುವುದು, ಬಸ್ನಲ್ಲಿನ ಶಿಸ್ತು ಕಾಪಾಡುವುದು ಮತ್ತು ಚಾಲಕರೊಂದಿಗೆ ಸಮನ್ವಯ ಸಾಧಿಸುವುದು ನಿರ್ವಾಹಕರ ದೈನಂದಿನ ಕೆಲಸದ ಭಾಗವಾಗಿದೆ.
ಕೆಲವು ಸಂದರ್ಭಗಳಲ್ಲಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿರುತ್ತದೆ. ಬಸ್ ಸಮಯಕ್ಕೆ ಹೊರಡಬೇಕಾಗಿರುತ್ತದೆ. ಟಿಕೆಟ್ ವಿತರಣೆ, ಹಣದ ಲೆಕ್ಕ, ಪ್ರಯಾಣಿಕರ ಪ್ರಶ್ನೆಗಳು, ಹಿರಿಯರು ಮತ್ತು ಮಹಿಳೆಯರಿಗೆ ನೆರವು, ಮಾರ್ಗದ ಮಧ್ಯೆ ಉಂಟಾಗುವ ಸಮಸ್ಯೆಗಳು ಹೀಗೆ ಹಲವು ಜವಾಬ್ದಾರಿಗಳನ್ನು ಒಂದೇ ಸಮಯದಲ್ಲಿ ನಿರ್ವಹಿಸಬೇಕಾಗುತ್ತದೆ.
ಬಸ್ ಎಲ್ಲೆಂದರಲ್ಲಿ ನಿಲ್ಲಿಸಲು ಸಾಧ್ಯವಿಲ್ಲ. ಸುರಕ್ಷಿತವಾದ ನಿಲ್ದಾಣ ಅಥವಾ ಸೂಕ್ತ ಸ್ಥಳದಲ್ಲಿ ಪ್ರಯಾಣಿಕರನ್ನು ಇಳಿಸುವುದು ಅಗತ್ಯ. ಪ್ರಯಾಣಿಕರ ಸುರಕ್ಷತೆ ಮತ್ತು ಬಸ್ ಸಂಚಾರದ ವೇಳಾಪಟ್ಟಿಯ ನಡುವೆಯೂ ಸಮತೋಲನ ಕಾಯ್ದುಕೊಳ್ಳಬೇಕಾಗುತ್ತದೆ. ಹೀಗಾಗಿ ನಿರ್ವಾಹಕರ ಕೆಲಸದಲ್ಲಿ ಒತ್ತಡವಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು.
‘ಪಾಕಿಸ್ತಾನ, ಅಫ್ಘಾನಿಸ್ತಾನ’ ಎಂಬ ಹೋಲಿಕೆಯ ಅಗತ್ಯವೇನಿತ್ತು?
ಈ ಘಟನೆಯ ಅತ್ಯಂತ ವಿವಾದಾತ್ಮಕ ಭಾಗವೆಂದರೆ ನಿರ್ವಾಹಕರು ಬಳಸಿದ್ದಾರೆ ಎನ್ನಲಾದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಉಲ್ಲೇಖ ತಪ್ಪಾದರೂ, ತಮ್ಮದೇ ತಪ್ಪಿದ್ದರೂ ಅದಕ್ಕೆ ಪ್ರತಿಯಾಗಿ ಚಾಲಕರು ಬಸ್ ನಿಲ್ಲಿಸಿ ಇಳಿಯಲು ಅನುವು ಮಾಡಿಕೊಟ್ಟಾಗಲೂ ಕರ್ತವ ನಿರತ ಸರ್ಕಾರಿ ನೌಕರನ್ನು ಅವಹೇಳನ ಮಾಡಿರುವುದು ಸಹಾ ಮೌಲಾನಾ ದಂಪತಿಗಳ ತಪ್ಪು ಎಂದು ಯಾರೂ ಸಹಾ ಹೇಳದೇ ಇರುವುದು ನಿಜಕ್ಕೂ ಅಚ್ಚರಿಯಾಗುತ್ತಿದೆ.
ನಿರ್ವಾಹಕರು ಧರ್ಮದ ಹೆಸರನ್ನು ಹೇಳದೇ ನಮ್ಮ ನೆರ ರಾಷ್ಟ್ರಗಳ ಹೆಸರನ್ನೆ ಹೇಳಿರುವುದಕ್ಕೇ ಧರ್ಮಧಾರಿತ ಅವಹೇಳನ ಎಂದು ವಾದಿಸುವ ಇದೇ ಅಬ್ದುಲ್ ರಜಾಕ್ ಮಾತಿನ ಭರದಲ್ಲಿ ಸುವ್ವರ್ ಕೇ ಬಚ್ಚೇ, ಸರ್ಕಾರೀ ಗುಲಾಮ ಎಂದು ಹೇಳುರುವ ಕೆಲವು ವೀಡಿಯೋಗಳೂ ಸಹಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಕರ್ತವ್ಯದ ಮೇಲಿರುವ ಸರ್ಕಾರಿ ನೌಕರ ನಿರ್ವಾಹಕರನ್ನು ಈ ರೀತಿಯಾಗಿ ಅವಾಚ್ಯ ಶಬ್ಧಗಳಿಂದ ನಿಂದಿರುವ ಹಕ್ಕನ್ನು ಅಬ್ದುಲ್ ರಜಾಕರಿಗೆ ಯಾವ ಸಂವಿಧಾನ ನೀದಿದೇ? ಅಷ್ಟೇ ಅಲ್ಲದೇ ತನ್ನ ವಯಕ್ತಿಕ ಶಿಫಾರಸನ್ನು ಬಳಸಿರುವ ಅವಿವೇಕಿ ಅಬ್ದುಲ್ ರಜಾಕ್ ನಿರ್ವಾಕಹರನ್ನು ಕೆಲದಿಂದ ಅಮಾನತ್ ಮಾಡಿಸಿರುವ ಕೃತ್ಯಕ್ಕೆ ತೀಕ್ಷ್ಣವಾದ ಶಿಕ್ಷೆಯಾಗಲೇ ಬೇಕಿದೆ ಎಂದು ಹಿಂದೂ ಪರ ಸಂಘಟನೆಗಳು ಕೇಳುತ್ತಿರುವುದರಲ್ಲಿ ಸರಿ ಎಂದು ಕಾಣಿಸುತ್ತಿದೆ.
ಅಬ್ದುಲ್ ರಜಾಕ್ ಅಪಸವ್ಯಗಳು ಇದೋ ಮೊದಲು ಮತ್ತು ಕೊನೆಯದ್ದಾಗಿರದೇ ನಮಗೆ ಅಲ್ಲಾ ಬಿಟ್ಟರೇ ಬೇರೇ ದೇವರೇ ಇಲ್ಲಾ. ನಮ್ಮಲ್ಲಿ ವ್ಯಕ್ತಿ ಪೂಜೆಯೇ ಇಲ್ಲಾ ಎನ್ನುವ ಇದೇ ರಜಾಕ್ ಇತ್ತೀಚೆಗೆ ದಸರಾ ಸಂಧರ್ಭದಲ್ಲಿ ಮೈಸೂರಿನ ದರ್ಗಾವೊಂದಕ್ಕೆ ಕೇವಲ ೩ ಆನೆಗಳನ್ನು ಕಳುಹಿರುವುದನ್ನು ಪ್ರಶ್ನಿಸಿ ಭಾರೀ ದಾಂದಲೆ ನಡೆಸಿದ್ದನ್ನೂ ಇಲ್ಲಿ ನೆನಪಿಸಿಕೊಳ್ಳಬೇಕಿದೆ. ಪ್ರತೀ ಬಾರಿ ೧೬ ಆನೆಗಳನ್ನು ಕಳುಹಿಸುತ್ತಿದ್ದವರು ಈ ಬಾರಿ ಕೇವಲ ೩ ಆನೆಗಳನ್ನು ಕಳುಹಿಸಿದ್ದಾರೆ. ಮುಂದಿನ ಬಾರಿಯೂ ಇದೇ ರೀತಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದಿರುವುದು ಕಿಡಿಗೇಡಿತನವಾಗಿದೆ. ಹಾಗೆ ನೋಡಿದರೆ ಆ ದರ್ಗಾದ ಆಚರಣೆಗೆ ಯಾವುದೇ ಧಾರ್ಮಿಕ ಹಿನ್ನಲೇ ಇರದೇ ಅಲ್ಲಿಗೆ ಆನೆಗಳನ್ನು ಕಳುಹಿಸಬೇಕು ಎನ್ನುವ ದಸರಾದ ಪೌರಾಣಿಕ ಹಿನ್ನಲೆ, ಅಥವಾ ಹಿಂದಿನ ರಾಜ ಮಹಾರಾಜರ ಆಜ್ಞೆ ಅಥವಾ ಪ್ರಸ್ತುತ ಸರ್ಕಾರದ ಕಾನೂನು ಇಲ್ಲವಾದರೂ, ಹಿಂದೆ ಯಾರೋ ಮಾಡಿದ್ದನ್ನು ವಾಡಿಕೆಯಿಂದ ಮುಂದುವರೆಸಿಕೊಂಡು ಹೋಗುತ್ತಿದ್ದದ್ದನ್ನೇ ನೆಪ ಮಾಡಿಕೊಂಡು ದಸರವಾನ್ನೇ ನಿಲ್ಲಿಸುವ ಮಟ್ಟಿಗೆ ರಜಾಕ್ ಧಮ್ಕಿ ಹಾಕುತ್ತಾರೆ ಎಂದರೆ ಪ್ರಸ್ತುತ ಕಾಂಗ್ರೇಸ್ ಸರ್ಕಾರ ಮತ್ತು ಗೃಹಮಂತ್ರಿಗಳು ಯಾವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಅರಿವಾಗುತ್ತದೆ.
ಸಾರ್ವಜನಿಕ ಸಾರಿಗೆ ಎಂದರೆ ಎಲ್ಲರಿಗೂ ಸಮಾನ ಸೇವೆ
ಕೆಎಸ್ಆರ್ಟಿಸಿ ಕೇವಲ ಒಂದು ಸಾರಿಗೆ ಸಂಸ್ಥೆಯಲ್ಲ ಕರ್ನಾಟಕದ ನಗರ, ಪಟ್ಟಣ ಮತ್ತು ಹಳ್ಳಿಗಳನ್ನು ಸಂಪರ್ಕಿಸುವ ಜನಜೀವನದ ಪ್ರಮುಖ ಕೊಂಡಿ. ಪ್ರತಿದಿನ ಲಕ್ಷಾಂತರ ಜನರು ಸರ್ಕಾರಿ ಬಸ್ಗಳನ್ನು ಅವಲಂಬಿಸುತ್ತಾರೆ. ಇಂತಹ ವ್ಯವಸ್ಥೆಯಲ್ಲಿ ಪ್ರಯಾಣಿಕರಿಗೆ ಸುರಕ್ಷಿತ ಪ್ರಯಾಣದ ಜೊತೆಗೆ ಗೌರವಯುತ ಸೇವೆಯೂ ದೊರೆಯಬೇಕು.
ಪ್ರಯಾಣಿಕರು ಬಸ್ನ ಗಮ್ಯಸ್ಥಾನದ ಫಲಕವನ್ನು ಗಮನಿಸಿ ಹತ್ತಬೇಕು. ನಿರ್ವಾಹಕರು ಸರಿಯಾದ ಮಾಹಿತಿ ನೀಡಬೇಕು. ತಪ್ಪು ನಡೆದರೆ ಅದನ್ನು ಶಾಂತವಾಗಿ ಸರಿಪಡಿಸಬೇಕು. ಯಾರೊಬ್ಬರ ಧರ್ಮ, ಭಾಷೆ ಅಥವಾ ವೇಷಭೂಷಣವನ್ನು ಅವಮಾನಿಸುವ ಸಾಧನವಾಗಿ ಬಳಸಬಾರದು.
ಈ ಘಟನೆಯಲ್ಲಿ ಪ್ರಯಾಣಿಕರು ತಪ್ಪು ಬಸ್ ಹತ್ತಿರುವುದು ಅವರಿಂದಾದ ತಪ್ಪಾಗಿರಬಹುದು. ಅದನ್ನು ನಿರ್ವಾಹಕರು ಪ್ರಶ್ನಿಸುವುದರಲ್ಲಿ ತಪ್ಪಿಲ್ಲ. ಆದರೆ ಆ ತಪ್ಪನ್ನು ಸರಿಪಡಿಸುವ ವಿಧಾನದಲ್ಲಿ ಸಂಯಮ ಮತ್ತು ವೃತ್ತಿಪರತೆ ಇರಬೇಕು. ಅದೇ ರೀತಿ ನಿರ್ವಾಹಕರ ಮೇಲಿನ ಆರೋಪಗಳನ್ನೂ ಪೂರ್ಣ ತನಿಖೆಯ ಮೂಲಕ ಪರಿಶೀಲಿಸಬೇಕು.
ಕೋಮು ದ್ವೇಷ ಬಿತ್ತುವವರೇ ನಿಜವಾದ ದೇಶದ್ರೋಹಿಗಳು ಸಮಾಜದಲ್ಲಿ ಧರ್ಮ ಮತ್ತು ಜಾತಿಗಳ ನಡುವೆ ದ್ವೇಷದ ವಿಷಬೀಜ ಬಿತ್ತುವವರೇ ನಿಜವಾದ ದೇಶದ್ರೋಹಿಗಳು. ಸಂವಿಧಾನವೇ ಸ್ವತಂತ್ರ ಭಾರತದ ಶ್ರೇಷ್ಠ ಶಕ್ತಿ. ಇದರಲ್ಲಿ ಯಾರಿಗೂ ಜಗ್ಗುವುದಿಲ್ಲ, ಬಗ್ಗುವುದೂ ಇಲ್ಲ. ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ನನ್ನ ಹೋರಾಟ ನಿರಂತರವಾಗಿರಲಿದೆ ಎಂದು ಗೃಹ, ಐಟಿಬಿಟಿ, ಇ-ಆಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಇತ್ತೀಚೆಗಷ್ಟೇ ಹೇಳಿರುವುದು ಮಾಧ್ಯಮಗಳಲ್ಲಿ ಪ್ರಕಟಣೆ ಆಗಿರುವಾಗ ಈ ಪ್ರಕರಣದಲ್ಲೂ ಅದೇ ರೀತಿ ಕೋಮು ಸೌಹಾರ್ಧತೆಗೆ ಧಕ್ಕೆ ತಂದಿರುವ ಮೌಲಾನ ದಂಪತಿಗಳಿಗೆ ಮತ್ತು ಮತಾಂಧ ಅಬ್ದುಲ್ ರಜಾಕ್ ಅಂತಹ ಕಿಡಿಗೇಡಿಗಳಿಗೆ ಶಿಕ್ಷೆ ಕೊಡಿಸುತ್ತಾರೆ ಎಂದು ಆಶಿಸೋಣ ಅಲ್ವೇ?
ಏನಂತೀರೀ?
ನಿಮ್ಮವನೇ ಶ್ರೀಮಂತ