ಗುಡ್ ಫ್ರೈಡೆ

ದೇವನೊಬ್ಬ ನಾಮ ಹಲವು ಎನ್ನುವಂತೆ, ನಮ್ಮ ಹಬ್ಬಗಳ ಆಚರಣೆಯ ಹಿಂದಿನ ಮಹತ್ವಗಳು ಮತ್ತು ಕಾರಣಗಳು ಒಂದೇ ಆದರೂ ಅದರ ಆಚರಣೆಗಳು ಮಾತ್ರಾ ವಿಭಿನ್ನ. ಬಗೆ ಬಗೆಯಾದರೂ ದೇಹದ ಬಣ್ಣ ಎಲ್ಲರ ನಗೆಯೂ ಒಂದೇ ಅಣ್ಣ ಎನ್ನುವಂತೆ ನಾವೆಲ್ಲರೂ ನಗು ನಗುತ ಭಾವೈಕತ್ಯೆಯಿಂದ ಬಾಳಬೇಕು. ಬದುಕು ಜೀವನೋತ್ಸಾಹದ ಹೂರಣವಾಗಬೇಕೇ ಹೊರತು ನಿರಾಶೆಯ ಕಾರ್ಮೋಡವಾಗಬಾರದು ಅಲ್ವೇ?… Read More ಗುಡ್ ಫ್ರೈಡೆ

ಬೆಂಗಳೂರು ಕರಗ

ಬೆಂಗಳೂರಿನ ಹೃದಯ ಭಾಗವಾದ ತಿಗಳರ ಪೇಟೆಯ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಬಹಳ ಸಡಗರ ಸಂಭ್ರಮಗಳಿಂದ ಬಹಳ ಅದ್ದೂರಿಯಾಗಿ ಪ್ರತೀ ವರ್ಷದ ಚೈತ್ರ ಮಾಸದ ಹುಣ್ಣಿಮೆಯಂದು ಅಚರಿಸಲ್ಪಡುವ ಬೆಂಗಳೂರು ಹಸಿ ಕರಗದ ಆಚರಣೆ, ವೈಶಿಷ್ಟ್ಯಗಳು ಮತ್ತು ಅದರ ಹಿಂದಿರುವ ಪೌರಾಣಿಕ ಹಿನ್ನಲೆಯನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ… Read More ಬೆಂಗಳೂರು ಕರಗ

ವಸಂತ ಪಂಚಮಿ

ದೇಶಾದ್ಯಂತ ಮಾಘ ಮಾಸದ ಪಂಚಮಿಯಂದು ಆಚರಿಸಲ್ಪಡುವ ವಸಂತ ಪಂಚಮಿ ಹಬ್ಬದ ಹಿಂದಿರುವ ಪೌರಾಣಿಕ ಹಿನ್ನಲೆ ಮತ್ತು ವೈಶಿಷ್ಟ್ಯತೆಗಳೇನೂ? ಆ ಹಬ್ಬದ ಪ್ರಾಮುಖ್ಯತೆಗಳೇನು? ಆ ಹಬ್ಬವನ್ನು ಎಲ್ಲೆಲ್ಲಿ ಹೇಗೆ ಮತ್ತು ಯಾವ ರೀತಿಯಲ್ಲಿ ಆಚರಿಸುತ್ತಾರೆ? ಎಂಬೆಲ್ಲದರ ಸವಿವರಗಳು ಇದೋ ನಿಮಗಾಗಿ… Read More ವಸಂತ ಪಂಚಮಿ

ದತ್ತಾತ್ರೇಯ ಜಯಂತಿ (ದತ್ತ ಜಯಂತಿ)

ಸೃಷ್ಟಿ, ಸ್ಥಿತಿ ಮತ್ತು ಲಯಕರ್ತರಾದ ತ್ರಿಮೂರ್ತಿಗಳ ಸಂಯೋಜಿತ ರೂಪವೆಂದೇ ನಂಬಲಾಗಿರುವ, ಮಾರ್ಗಶಿರ ಮಾಸದ ಪೌರ್ಣಿಮೆಯಂದು ಜನಿಸಿರುವ ಗುರು ದತ್ತಾತ್ರೇಯರ ಜಯಂತಿಯನ್ನು ದತ್ತ ಜಯಂತಿಯೆಂದು ಬಹಳ ಶ್ರದ್ಧಾ ಭಕ್ತಿಯಿಂದ ‌ಆಚರಿಸಲಾಗುತ್ತದೆ.

ದತ್ತಾತ್ರೇಯರ ಜನ್ಮ ರಹಸ್ಯ, ದತ್ತ ಜಯಂತಿಯ ಆಚರಣಾ ಪಧ್ಧತಿ, ಮಹತ್ವ ಮತ್ತು ಫಲಶೃತಿಗಳ ಸಂಪೂರ್ಣ ವಿವರಗಳು ಇದೋ ನಿಮಗಾಗಿ… Read More ದತ್ತಾತ್ರೇಯ ಜಯಂತಿ (ದತ್ತ ಜಯಂತಿ)

ಕೊಡವರ ಕೈಲ್ ಪೋಳ್ದ್ ಹಬ್ಬ

ಕರ್ನಾಟಕದ ಕೆಚ್ಚೆದೆಯ ವೀರ ಕೊಡವರಿಗೆ ಕೈಲ್ ಪೋಳ್ದ್ ಹಬ್ಬದ ಶುಭಾಶಯಗಳನ್ನು ತಿಳಿಸುವುದರೊಂದಿಗೆ, ಕೊಡಗು, ಕೊಡವರ ಇತಿಹಾಸ, ಭಾರತೀಯ ಸೇನೆ ಮತ್ತು ಕ್ರೀಡಾರಂಗಕ್ಕೆ ಕೊಡವರ ಕಾಣಿಕೆಗಳ ಜೊತೆಯಲ್ಲಿ, ಅತ್ಯಂತ ವೈಶಿಷ್ಟ್ಯವಾಗಿ ಅಚರಿಸಲ್ಪಡುವ ಅವರ ಹಬ್ಬಗಳು ಅದರಲ್ಲೂ ವಿಶೇಶವಾಗಿ ಕೈಲ್ ಪೋಳ್ದ್ ಹಬ್ಬದ ಕುರಿತಾದ ಸಂಪೂರ್ಣ ಮಾಹಿತಿ ಇದೋ ನಿಮಗಾಗಿ… Read More ಕೊಡವರ ಕೈಲ್ ಪೋಳ್ದ್ ಹಬ್ಬ

ಬಲರಾಮ ಜಯಂತಿ

ದ್ವಾಪರ ಯುಗದ ಮಹಾಭಾರತದಲ್ಲಿ ಪಾಂಡವರು ಮತ್ತು ಕೌರವರು ಕಥೆಯಾದರೂ ಇಡೀ ಮಹಾಭಾರತದಲ್ಲಿ ಶ್ರೀಕೃಷ್ಣನು ಅತ್ಯಂತ್ಯ ಪ್ರಮುಖ ಪಾತ್ರವನ್ನು ವಹಿಸಿರುತ್ತಾನೆ. ಒಂದು ರೀತಿ ಅತನೇ ಸೂತ್ರಧಾರಿಯಾಗಿ ಉಳಿದವರೆಲ್ಲರೂ ಆತ ಆಡಿಸಿಸಂತೆ ಆಡುವ ಪಾತ್ರಧಾರಿಗಳಂತೆ ಕಾಣುತ್ತಾರೆ ಎಂದರೂ ತಪ್ಪಾಗದು. ಮಹಾವಿಷ್ಣುವಿನ ದಶಾವತಾರದಲ್ಲಿ ಕೃಷ್ಣನದ್ದು 8ನೇ ಅವತಾರವಾದರೆ, ಅವರನ ಅಣ್ಣನಾಗಿ ಸದಾಕಾಲವೂ ಬೆಂಗಾವಲಾಗಿ ಬಲರಾಮನು ಇದ್ದೇ ಇರುತ್ತಾನೆ. ದೇವಕಿಯ ಅಣ್ಣ ಮತ್ತು ದುಷ್ಟ ರಾಜನಾದ ಕಂಸನಿಗೆ ಆತನ ತಂಗಿ ದೇವಕಿಯ ಎಂಟನೇ ಸಂತಾನನಿಂದಲೇ ಅಂತ್ಯವಾಗುವನೆಂಬ ಅಶರೀರವಾಣಿಯ ಮಾತನ್ನು ಕೇಳಿದ ನಂತರ ಆತ… Read More ಬಲರಾಮ ಜಯಂತಿ

ವಟ ಸಾವಿತ್ರಿ ವ್ರತ

ನಮ್ಮ ಸನಾತನ ಧರ್ಮದ ಪ್ರತಿಯೊಂದು ಶಾಸ್ತ್ರ ಸಂಪ್ರದಾಯಗಳಲ್ಲಿ ಮುತ್ತೈದೆಯರಿಗೆ ಬಹಳ ಪ್ರಾಮುಖ್ಯತೆ ಇರುತ್ತದೆ. ಹಾಗಾಗಿ ಮದುವೆಯಾದ ಹೆಣ್ಣುಮಕ್ಕಳಿಗೆ ದೀರ್ಘಸುಮಂಗಲೀ ಭವ ಎಂದೇ ಹಿರಿಯರು ಆಶೀರ್ವದಿಸುತ್ತಾರೆ. ಹೀಗೆ ತಮ್ಮ ದೀರ್ಘಸುಮಂಗಲಿತನಕ್ಕಾಗಿ ತಮ್ಮ ಪತಿಯಂದಿರ ದೀರ್ಘಾಯುಶ್ಯ ಮತ್ತು ಆಯುರಾರೋಗ್ಯಕ್ಕಾಗಿ ಪೂಜೆ ಮಾಡುವ ವಟಸಾವಿತ್ರಿ ವ್ರತವನ್ನು ಬಹುತೇಕ ಹೆಣ್ಣುಮಕ್ಕಳು ಮಾಡುತ್ತಾರೆ. ಅಂತಹ ವಟ ಸಾವಿತ್ರಿ ವ್ರತದ ಹಿನ್ನಲೆ, ಮಹತ್ವ ಮತ್ತು ಆಚರಣೆಯ ಸವಿವರ ಇದೋ ನಿಮಗಾಗಿ. ಪತಿವ್ರತೆ ಎಂಬ ಪದವನ್ನು ಕೇಳಿದ ತಕ್ಷಣವೇ ನಮ್ಮ ತಲೆಯಲ್ಲಿ ಹೊಳೆಯುವುದೇ ಸತ್ಯವಾನ್ ಸಾವಿತ್ರಿ ಎಂದರೆ… Read More ವಟ ಸಾವಿತ್ರಿ ವ್ರತ

ಹನುಮದ್ ವ್ರತ

ರಾಮನ ಪರಮ ಭಕ್ತ ಹನುಮಂತನನ್ನು ನೆನೆದರೇ ಸಾಕು ಬುದ್ಧಿ, ಬಲ, ಯಶಸ್ಸು, ಧೈರ್ಯ, ಎಲ್ಲವೂ ಪ್ರಾಪ್ತವಾಗುತ್ತದೆ ಎಂದೇ ಎಲ್ಲಾ ಆಸ್ತಿಕರ ನಂಬಿಕೆಯಾಗಿದೆ. ಹಾಗಾಗಿ ಇಂದು ಮಾರ್ಗಶಿರ ಮಾಸದ ತ್ರಯೋದಶಿ. ಬಹುತೇಕ ಆಸ್ತಿಕರು ಭಾದ್ರಪದ ಮಾಸದ ಶುದ್ಧ ಚತುರ್ದಶಿಯಂದು ಅನಂತವ್ರತವನ್ನು ಆಚರಿಸಿದಂತೆಯೇ ಈ ಮಾರ್ಗಶಿರ ಶುಕ್ಲ ತ್ರಯೋದಶಿಯಂದು ಈ ಹನುಮದ್ ವ್ರತವನ್ನು ಆಚರಿಸುವ ಪದ್ದತಿಯನ್ನು ರೂಢಿಯಲ್ಲಿಟ್ತು ಕೊಂಡಿದ್ದಾರೆ. ಆದರೆ ಈ ದಿನವನ್ನು ಅದೇಕೋ ಏನೋ ಬಹುತೇಕರು ಈ ದಿನವನ್ನು ಹನುಮದ್ ಜಯಂತಿ ಎಂದೇ ಸಂಭೋಧಿಸುತ್ತಾರೆ. ವಾಸ್ತವವಾಗಿ ಹನುಜ್ಜಯಂತಿ ಚೈತ್ರ… Read More ಹನುಮದ್ ವ್ರತ

ಗೀತಾ ಜಯಂತಿ

ಅದು ದ್ವಾಪರಯುಗ. ದುಷ್ಟರ ಶಿಕ್ಷೆಗಾಗಿ ಮತ್ತು ಶಿಷ್ಟರ ರಕ್ಷಣೆಗಾಗಿ ಭಗವಾನ್ ವಿಷ್ಣುವು ಶ್ರೀ ಕೃಷ್ಣನ ಅವತಾರದಲ್ಲಿ ಈ ಭೂಲೋಕದಲ್ಲಿ ಅವತರಿಸುತ್ತಾನೆ. ಆತನ ಬಂಧುಗಳೇ ಆಗಿದ್ದ ಪಾಂಡವರನ್ನು ಅವರ ದೊಡ್ಡಪ್ಪನ ಮಗನೇ ಆಗಿದ್ದ ಧುರ್ಯೋಧನ ತನ್ನ ಮಾವ ಶಕುನಿಯ ಕುತ್ರಂತ್ರದಿಂದ ಪಗಡೆಯ ಆಟದಲ್ಲಿ ಸೋಲಿಸಿ ಅವರ ರಾಜ್ಯವನ್ನು ಕಿತ್ತುಕೊಂಡು  12 ವರ್ಷಗಳ ಕಾಲ ವನವಾಸ ಮತ್ತು 1 ವರ್ಷಗಳ ಕಾಲ ಅಜ್ಞಾನವಾಸವನ್ನು ಯಶಸ್ವಿಯಾಗಿ ಪೂರೈಸಿದ ನಂತರವೇ ರಾಜ್ಯವನ್ನು ಹಿಂದಿರುಗಿಸುವುದಾಗಿ ವಾಗ್ಧಾನ ಮಾಡಿರುತ್ತಾನೆ. ಒಪ್ಪಂದಂತೆ ವನವಾಸ ಮತ್ತು  ಅಜ್ಞಾತವಾಸವನ್ನು ಯಶಸ್ವಿಯಾಗಿ… Read More ಗೀತಾ ಜಯಂತಿ