ಆಭರಣ ಅಂಗಡಿಯ ಅವಾಂತರ
ಅದೊಮ್ಮೆ ಗಂಡ ತನ್ನ ಹೆಂಡತಿಗೆ ತಮ್ಮ ವಿವಾಹ ವಾರ್ಷಿಕೋತ್ಸವ ನೆನಪಿನ ಕಾಣಿಕೆಯಾಗಿ ವಿಶೇಷ ಉಡುಗೊರೆಯನ್ನು ನೀಡಲು ಹತ್ತಿರದ ಚಿನ್ನದ ಅಂಗಡಿಗೆ ಕರೆದುಕೊಂಡು ಹೋದರು. ಸೀರೆ, ಚಿನ್ನದ ಅಂಗಡಿಗಳಿಗೆ ಹೆಂಗಸರೊಂದಿಗೆ ಹೋದರೆ ಆಗಬಹುದಾದ ಸಮಯವೇ ಅಂದೂ ಕೂಡಾ ಆಗಿತ್ತು. ಇದು ತೋರಿಸಿ, ಅದು ತೋರಿಸಿ. ಇಷ್ಟೇ ದುಡ್ದಿನಲ್ಲಿ ಮತ್ತೊಂದು ಡಿಝೈನ್ ತೋರಿಸಿ. ಇದು ಸ್ವಲ್ಪ ದೊಡ್ಡದಾಯ್ತು. ಸ್ವಲ್ಪ ಚಿಕ್ಕದಿದ್ದರೆ ನೋಡಿ. ಇಲ್ಲಾ ಇಲ್ಲ ಇದು ತುಂಬಾನೇ ಚಿಕ್ಕದಾಯ್ತು ನನಗೆ ಸರಿ ಹೊಂದದು ಎಂದು ಹೀಗೇ ಹಾಗೆ ತರತರಹದ ಆಭರಣಗಳನ್ನು… Read More ಆಭರಣ ಅಂಗಡಿಯ ಅವಾಂತರ







