ಚಾಮರಾಜನಗರದ ಶ್ರೀ ಚಾಮರಾಜೇಶ್ವರ ರಥೋತ್ಸವ

ಆಷಾಢ ಮಾಸದಲ್ಲಿ ಎಲ್ಲಾ ಧಾರ್ಮಿಕ ಚಟುವಟಿಕೆಗಳಿಗೂ ನಿಷಿದ್ಧವಾಗಿದ್ದು ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳು ಖಡ್ಡಾಯವಾಗಿ ತವರು ಮನೆಗೆ ಬರುವ ಸಂಪ್ರದಾಯವಿದ್ದರೆ, ಚಾಮರಾಜ ನಗರದಲ್ಲಿ ಮಾತ್ರಾ, ಆಷಾಢ ಹುಣ್ಣಿಮೆಯಂದೇ ಬ್ರಹ್ಮರಥೋತ್ಸವನ್ನು ನೂರಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಲಿದ್ದು, ಈ ರಥೋತ್ಸವದಲ್ಲಿ ನವದಂಪತಿಗಳೇ ಪ್ರಮುಖ ಆಕರ್ಷಣೆಯಾಗಿದ್ದು ನವದಂಪತಿಗಳ ಜಾತ್ರೇ ಎಂದು ಕರೆಸಿಕೊಳ್ಳುವ ಈ ರಥೋತ್ಸವದ ಕುತೂಹಲಕಾರಿ ಮಾಹಿತಿಗಳು ಇದೋ ನಿಮಗಾಗಿ… Read More ಚಾಮರಾಜನಗರದ ಶ್ರೀ ಚಾಮರಾಜೇಶ್ವರ ರಥೋತ್ಸವ

ಬೆಂಗಳೂರಿನಲ್ಲೊಂದು ಹಾಲ್ ಟಿಕೆಟ್ ಹಯಗ್ರೀವ

ಬೆಂಗಳೂರಿನ ಹೃದಯಭಾಗವಾದ ಮೆಜೆಸ್ಟಿಕ್ ಜನಜಂಗುಳಿಯ ಮಧ್ಯದಲ್ಲಿ ಎಲೆಮರೆಕಾಯಿಯಂತಿರುವ ಬಹುತೇಕ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಪರೀಕ್ಷಾ ದೇವರು ಅಥವಾ ಹಾಲ್ ಟಿಕೆಟ್ ಹಯಗ್ರೀವ ಎಂದೇ ಪ್ರಖ್ಯಾತವಾಗಿರುವ ಶ್ರೀ ಲಕ್ಷ್ಮೀ ಹಯಗ್ರೀವ ಸ್ವಾಮಿ ದೇವಸ್ಥಾನದ ಹಯಗ್ರೀವ ದೇವರ ಮಹಿಮೆಯನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಬೆಂಗಳೂರಿನಲ್ಲೊಂದು ಹಾಲ್ ಟಿಕೆಟ್ ಹಯಗ್ರೀವ

ಬೆಂಗಳೂರಿನಲ್ಲೊಂದು ಟೆಕ್ಕಿ ಗಣೇಶ

ಭಾರತದ ಸಿಲಿಕಾನ್ ವ್ಯಾಲಿಯಾದ ಬೆಂಗಳೂರಿನ ಕೋರಮಂಗಲದಲ್ಲಿ ಸಾಫ್ಟ್ ವೇರ್ ಕಂಪನಿಗಳ ಟೆಕ್ಕಿಗಳ ಮನೋಭಿಲಾಷೆಯನ್ನು ಈಡೇರಿಸುವ ಅತ್ಯಂತ ಶಕ್ತಿಶಾಲಿ ಮತ್ತು ಕುತೂಹಲಕಾರಿ ಶ್ರೀ ಟೆಕ್ಕಿ ಗಣೇಶನ ಕುರಿತಾಗಿ ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಬೆಂಗಳೂರಿನಲ್ಲೊಂದು ಟೆಕ್ಕಿ ಗಣೇಶ

ಶ್ರೀ ಕೇದಾರನಾಥ

ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಮತ್ತು ಚಾರ್ ಧಾಮ್ ನಲ್ಲಿ ಒಂದಾದ ಶ್ರೀ ಕೇದಾರನಾಥನ 2024ರ ದರ್ಶನ ಮೇ 10ರಂದು ಆರಂಭವಾದ ಹಿನ್ನೆಲೆಯಲ್ಲಿ, ಶ್ರೀ ಕೇದಾರನಾಥ್ ದೇವಾಲಯದ ಐತಿಹ್ಯ, ವಾಸ್ತುಶಿಲ್ಪ ಮತ್ತು ಸ್ಥಳ ಪುರಾಣದ ಜೊತೆ ಕೇದಾರನಾಥ ಮತ್ತು ಕರ್ನಾಟಕದ ನಡುವೆ ಇರುವ ಅವಿನಾಭಾವ ಸಂಬಂಧದ ಕುರಿತಾದ ಅಪೂರ್ವ ಮಾಹಿತಿಗಳು ಇದೋ ನಿಮಗಾಗಿ… Read More ಶ್ರೀ ಕೇದಾರನಾಥ

ರಾಮೇಶ್ವರದಲ್ಲೊಂದು ವಿಭೀಷಣನ ದೇಗುಲ

ರಾಮೇಶ್ವರ ಎಂದ ತಕ್ಷಣ ನಮ್ಮ ಮನಸ್ಸಿನಲ್ಲಿ ಮೂಡುವುದೇ ಶ್ರೀರಾಮಚಂದ್ರನಿಂದ ಮರಳಿನಿಂದ ನಿರ್ಮಿಸಲ್ಪಟ್ಟ ಶಿವನ ಲಿಂಗ ಮತ್ತು ನಳ ಮತ್ತು ನೀಲರ ಜೊತೆಯಲ್ಲಿ ತನ್ನ ಕಪಿಸೇನೆಯ ಸಹಾಯದೊಂದಿಗೆ ಧನುಷ್ಕೋಟಿಯಿಂದ ಲಂಕೆಯ ನಡುವಿನ ಸಮುದ್ರಕ್ಕೆ ಕಟ್ಟಿದ ರಾಮಸೇತು. ನಿಜ ಹೇಳಬೇಕೆಂದರೆ ಈ ಎರಡೂ ಪವಿತ್ರ ಕ್ಷೇತ್ರಗಳ ಹೊರತಾಗಿ ಇನ್ನೂ ಹತ್ತು ಹಲವಾರು ಕುತೂಹಲಕಾರಿ ಸ್ಥಳಗಳಿದ್ದು, ಅಂತಹವುಗಳಲ್ಲಿ ಒಂದಾದ ಶ್ರೀ ಕೋದಂಡರಾಮಸ್ವಾಮಿ ದೇವಾಲಯದ ಬಗ್ಗೆ ನಾವಿಂದು ತಿಳಿಯೋಣ ಬನ್ನಿ. ಶ್ರೀ ರಾಮಚಂದ್ರ ಪ್ರಭು ತನ್ನ ಚಿಕ್ಕಮ್ಮ ಕೈಕೇಯಿಗೆ ಕೊಟ್ಟ ಭಾಷೆಯಂತೆ, 14ವರ್ಷ… Read More ರಾಮೇಶ್ವರದಲ್ಲೊಂದು ವಿಭೀಷಣನ ದೇಗುಲ

ಬಾಳಗಂಚಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಕುಂಭಾಭಿಷೇಕ

ದಿನಾಂಕ 27.03.2024 ಬುಧವಾರ, ಪಾಲ್ಗುಣ ಮಾಸದ ಬಹುಳ ಬಿದಿಗೆಯಂದು ‌ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳ ಅಮೃತಹಸ್ತದಿಂದ ನಡೆದ ಬಾಳಗಂಚಿ ಗ್ರಾಮದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಪುನರ್ ಪ್ರತಿಷ್ಠಾ ಕುಂಭಾಭಿಷೇಕ ಮಹೋತ್ಸವದ ಸುಂದರ ಕ್ಷಣಗಳು ಇದೋ ನಿಮಗಾಗಿ… Read More ಬಾಳಗಂಚಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಕುಂಭಾಭಿಷೇಕ

ಯಗವ ಕೋಟೆ ಶ್ರೀ ವೀರನಾರಾಯಣ ಸ್ವಾಮಿ

ನಮ್ಮ ಕರ್ನಾಟಕದಲ್ಲಿ ಹತ್ತಾರು ವೀರನಾರಯಣ ಸ್ವಾಮಿಯ ದೇವಾಲಯಗಳು ಇದ್ದರೂ, ಶ್ರೀ ವೀರನಾರಾಯಣ ಎಂಬ ಹೆಸರನ್ನು ಕೇಳಿದ ತಕ್ಷಣವೇ ನಮ್ಮ ಮನಸ್ಸಿನಲ್ಲಿ ಥಟ್ ಅಂತ ಮೂಡುವುದೇ ಕನ್ನಡದಲ್ಲಿ ಮಹಾಭಾರತವನ್ನು ಬರೆದ ಕುಮಾರ ವ್ಯಾಸನ ಆರಾಧ್ಯ ದೈವ ಗದುಗಿನ ವೀರ ನಾರಾಯಣ ಸ್ವಾಮಿ. ನಾವಿಂದು ಗದುಗಿನ ವೀರನಾರಾಯಣ ಸ್ವಾಮಿಯಷ್ಟೇ ಮುದ್ದಾಗಿರುವ ಆದರೆ ಅದಕ್ಕಿಂತಲೂ ವಿಭಿನ್ನವಾಗಿರುವ ಮತ್ತು ಅತ್ಯಂತ ಪುರಾತನವಾದ ದೇವಾಲಯವು ರಾಜಧಾನಿ ಬೆಂಗಳೂರಿನಿಂದ ಕೇವಲ 95 ಕಿಮೀ ದೂರದಲ್ಲಿರುವ ಯಗವಕೋಟೆಯಲ್ಲಿದ್ದು ಆಲ್ಲಿನ ಸ್ಥಳ ಪುರಾಣದ ಜೊತೆಗೆ ಶ್ರೀ ವೀರನಾರಾಯಣ ಸ್ವಾಮಿಯ… Read More ಯಗವ ಕೋಟೆ ಶ್ರೀ ವೀರನಾರಾಯಣ ಸ್ವಾಮಿ

ಕಾಶ್ಮೀರದ ಶ್ರೀನಗರದ ಶ್ರೀ ಶಂಕರಾಚಾರ್ಯ ದೇವಾಲಯ

ಒಂದು ಕಾಲದಲ್ಲಿ ಕಾಶ್ಮೀರೀ ಪಂಡಿತರಿಂದಲೇ ಆವೃತವಾಗಿದ್ದ ಕಾಶ್ಮೀರದ ಕಣಿವೆಯಲ್ಲಿಿ ಇಂದು ಅವರೇ ಅಲ್ಪಸಂಖ್ಯಾತರಾಗಿರುವಂತಹ ದೌರ್ಭಾಗ್ಯವಾಗಿದ್ದರೂ, ಶ್ರೀನಗರದ ಹೃದಯಭಾಗದಲ್ಲಿರುವ ಭವ್ಯವಾದ ಶ್ರೀ ಶಂಕರಾಚಾರ್ಯ ದೇವಾಲಯ ಇಡೀ ಶ್ರೀನಗರಕ್ಕೇ ಮುಕುಟಪ್ರಾಯವಾಗಿದೆ. ಆ ದೇವಾಲಯದ ಸ್ಥಳ ಪುರಾಣ, ಶೀ ಜೇಷ್ಠೇಶ್ವರನ ದರ್ಶನದ ಜೊತೆಗೆ, ಮೈಸೂರು ಅರಸರಿಗೂ ಆ ದೇವಾಲಯಕ್ಕೂ ಇರುವ ಅವಿನಾಭಾವ ಸಂಬಂಧವನ್ನು ತಿಳಿಯೋಣ ಬನ್ನಿ… Read More ಕಾಶ್ಮೀರದ ಶ್ರೀನಗರದ ಶ್ರೀ ಶಂಕರಾಚಾರ್ಯ ದೇವಾಲಯ

ಮುಡುಕುತೊರೆ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಬ್ರಹ್ಮರಥೋತ್ಸವ

ತಲಕಾಡಿನ ಬಳಿಯ ಮುಡುಕುತೊರೆ ಯಲ್ಲಿ ಪ್ರತೀ ಮಾಘ ಮಾಸದಲ್ಲಿ ಎರಡು ವಾರಕ್ಕೂ ಅಧಿಕ ಸಮಯ ನಡೆಯುವ ಅದ್ದೂರಿಯ ವಿಶ್ವವಿಖ್ಯಾತ ಶ್ರೀ ಮಲ್ಲಿಕಾರ್ಜುನಸ್ವಾಮಿಯ ಬ್ರಹ್ಮರಥೋತ್ಸವ ಮತ್ತು ದನಗಳ ಜಾತ್ರೋತ್ಸವ ದ ಕುರಿತಾದ ಸವಿವರಗಳು ಇದೋ ನಿಮಗಾಗಿ… Read More ಮುಡುಕುತೊರೆ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಬ್ರಹ್ಮರಥೋತ್ಸವ