ಇಂದೋರಿನ ಪಿತೃಪರ್ವತದ ವಿರಾಟ್ ವೀರಾಂಜನೇಯ

ಮಧ್ಯಪ್ರದೇಶದ ಇಂದೋರಿನ ಪಿತೃಪರ್ವತದಲ್ಲಿ ನಿರ್ಮಾಣವಾಗುತ್ತಿರುವ ವಿರಾಟ್ ವೀರಾಂಜನೇಯನ ವಿಗ್ರಹದ ಮುಂದೆ ನಿಂತಿದ್ದೇವೆ. ಸರಿ ಸುಮಾರು 62 ಅಡಿ ಅಗಲ, 66 ಅಡಿ ಎತ್ತರದ, 90 ಟನ್ ತೂಕದ ಸುಮಾರು 10 ಕೋಟಿ ವೆಚ್ಚದಲ್ಲಿ ಸಾರ್ವಜನಿಕರ ಸಹಕಾರದಿಂದ ನಿರ್ಮಿಸಲಾಗುತ್ತಿರುವ ಈ ಅಷ್ಟಧಾತು ಲೋಹದಿಂದ ತಯಾರಿಸಿರುವ ಧ್ಯಾನ ಭಂಗಿಯಲ್ಲಿ ಕುಳಿತಿರುವ ಪ್ರಪಂಚದ ಅತಿ ದೊಡ್ದ ಹನುಮಂತನ ಪ್ರತಿಮೆಯ ನಿರ್ಮಾಣ ಭರದಿಂದ ಸಾಗಿದೆ. ಈ ಪ್ರತಿಮೆಯನ್ನು ಹವಾಮಾನದಿಂದ ರಕ್ಷಿಸಲು ವಿಶೇಷವಾಗಿ ಹೊಳಪು ನೀಡಲಾಗಿದೆ. ರಾಜಸ್ಥಾನದ ಜೈಪುರದಲ್ಲಿ ಈ ವಿಗ್ರಹದ ಬಿಡಿ ಭಾಗಗಳನ್ನು… Read More ಇಂದೋರಿನ ಪಿತೃಪರ್ವತದ ವಿರಾಟ್ ವೀರಾಂಜನೇಯ

ಬಲಮುರಿ ಪ್ರವಾಸ ಭಾಗ-1

ಕಳೆದ ಒಂದೂವರೆ ತಿಂಗಳಿಂದ ಕೂರೋನಾ ಮಹಾಮಾರಿಯಿ ಸೋಂಕಿನಿಂದಾಗಿ ಎಲ್ಲರೂ ಮನೆಯಲ್ಲಿಯೇ ಕುಳಿತುಕೊಂಡು ಬೇಜಾರಾಗಿ ಹೋಗಿದೆ. ಎಲ್ಲಾ ಸರಿ ಇದ್ದಿದ್ರೇ ಈ ಬೇಸಿಗೆ ರಜೆಯಲ್ಲಿ ಸಂಸಾರ ಸಮೇತ ಯಾವುದಾದರೂ ಪ್ರವಾಸೀ ತಾಣಗಳಿಗೆ ಹೋಗಿ ಒಂದಷ್ಟು ದಿನ ಆರಾಮಾಗಿ ಇದ್ದು ಬರ್ತಾ ಇದ್ವಿ ಅನ್ಸತ್ತೆ . ಅದಕ್ಕೆ ಈಗ ಕುಳಿತಲ್ಲಿಂದಂದಲೇ ನಾವು ಸುಮಾರು ಮೂವತ್ತು ವರ್ಷಗಳ ಹಿಂದೆ ಕಾಲೇಜಿನಲ್ಲಿರುವಾಗ ಬಲಮುರಿಗೆ ಹೋಗಿದ್ದ ರೋಚಕ ಪ್ರವಾಸದ ಅನುಭವವನ್ನು ಹಂಚಿಕೊಳ್ತಾ ಇದ್ದೀನಿ. ಓದಿ ನೀವೂ ಕುಳಿತಲ್ಲಿಂದಲೇ ಆನಂದಿಸಿ. ಆಗ 1992ನೇ ಇಸ್ವಿ. ನಾವಾಗ… Read More ಬಲಮುರಿ ಪ್ರವಾಸ ಭಾಗ-1

ಥೈಲ್ಯಾಂಡ್ ಪ್ರವಾಸದ ಮಾರ್ಗದರ್ಶಿ/ಕೈಪಿಡಿ

ಕಳೆದ ನವೆಂಬರ್ ನಲ್ಲಿ ನಮ್ಮ 21ನೇ ವಿವಾಹವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಿಕೊಂಡಾಗ ಎಲ್ಲಿಯಾದರೂ ದೂರದ ಪ್ರದೇಶಕ್ಕೆ ಪ್ರವಾಸಕ್ಕೆ ಹೋಗೋಣ ಎಂದು ನಿರ್ಧರಿಸಿದಾಗ ಹಲವಾರು ಪ್ರದೇಶಗಳು ನಮ್ಮ ಮನಸ್ಸಿಗೆ ಬಂದು ಅಂತಿಮವಾಗಿ ಥೈಲ್ಯಾಂಡ್ ದೇಶಕ್ಕೆ ಹೋಗುವಂತೆ ನಿರ್ಧರಿಸಲಾಯಿತು. ಥೈಲ್ಯಾಂಡ್ ಪ್ರವಾಸಕ್ಕೆ ಹೋಗುವ ಬಗೆಗೆ ಒಂದಿಬ್ಬರು ಸ್ನೇಹಿತರನ್ನು ವಿಚಾರಿಸಿದರೆ, ಅವರಿಂದ ಸಕಾರಾತ್ಮಕ ಸ್ಪಂದನೆಗಿಂತ ಒಂದು ರೀತಿಯ ಕುಹಕಾತ್ಮಕ ಸ್ಪಂದನೆಯೇ ಬಂದಿತು. ಈ ವಯಸ್ಸಿನಲ್ಲಿ, ನೀವೂ ಅದೂ ಸಂಸಾರ ಸಮೇತರಾಗಿ ಥೈಲ್ಯಾಂಡಿಗೆ ಹೋಗುವುದು ಉಚಿತವಲ್ಲ. ಅದರಲ್ಲೂ ಸಸ್ಯಹಾರಿಗಳಿಗೆ ಅಲ್ಲಿ ಊಟೋಪಚಾರಗಳು ಸರಿಹೊಂದುವುದಿಲ್ಲ. ಅಲ್ಲಿಯ… Read More ಥೈಲ್ಯಾಂಡ್ ಪ್ರವಾಸದ ಮಾರ್ಗದರ್ಶಿ/ಕೈಪಿಡಿ