ಕಾಮುಕ

ನೆನ್ನೆ ಕಳೆದ ಒಂದೂವರೆ ತಿಂಗಳು ನಡೆದ ಮಹಾಚುನಾಚಣೆಯ ಅಂತಿಮ ಫಲಿತಾಂಶದ ದಿನ. ಚುನಾವಣಾ ಸ್ಪರ್ಧಿಗಳಿಗೆ ಎಷ್ಟು ಒತ್ತಡ, ಕಾತುರ ಮತ್ತು ಕುತೂಹಲ ಇರುತ್ತದೋ ಅದಕ್ಕಿಂತಲೂ ಹೆಚ್ಚಿನ ಒತ್ತಡಕ್ಕೊಳಗಾಗಿ ರಾತ್ರಿಎಲ್ಲಾ ನಿದ್ದೆಯೇ ಬಾರದೆ, ಮುಂಜಾವ ನಾಲ್ಕುವರೆ ಘಂಟೆಗೇ ಎಚ್ಚರಗೊಂಡು ಪ್ರಾತರ್ವಿಧಿಗಳನ್ನು ಮುಗಿಸಿ, ಭಗವಂತಾ, ದೇಶಕ್ಕೆ ಸುಭದ್ರ ಮತ್ತು ಸಮರ್ಥ ನಾಯಕತ್ವ ಮತ್ತೊಮ್ಮೆ ಬರಲೀ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೆ. ಚುನಾವಣಾ ನಿರ್ಗಮನ ಫಲಿತಾಂಶ ಬಿಜೆಪಿ ಪರವಾಗಿ ಬಂದಿದ್ದರಿಂದ ಚುನಾವಣೆ ಫಲಿತಾಂಶದ ದಿನ ಮನೆಯಲ್ಲಿಯೇ ಟಿವಿ ಮುಂದೆ ಕುಳಿತು ನೇರವಾಗಿ ಫಲಿತಾಂಶ… Read More ಕಾಮುಕ

ಮತ್ತೆ ಮುದುಡಿತು ಕೈ , ಮತ್ತೊಮ್ಮೆ ಅರಳಿತು ಕಮಲ.

ಕಳೆದ ಎರಡು ತಿಂಗಳುಗಳಲ್ಲಿ , ಇಡೀ ವಿಶ್ವದ ಚಿತ್ತ ನಮ್ಮ ದೇಶದತ್ತ ಇತ್ತು. ಕಾರಣ, ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶದ ಸಾರ್ವತ್ರಿಕ ಚುನಾವಣೆ ನಡೆಯುತ್ತಲಿತ್ತು. ಬಹುಶಃ ಪ್ರಪಂಚದ ಅತ್ಯಂತ ದೀರ್ಘಕಾಲದ ಮತ್ತು ಅತ್ಯಂತ ಹೆಚ್ಚಿನ ಕ್ಷೇತ್ರಗಳು ಮತ್ತು ಮತದಾರರು ಪಾಲ್ಗೊಂಡ ಚುನಾವಣೆ ಎಂದರೆ ಇದುವೇ ಇರಬೇಕು. 2014 ರಲ್ಲಿ UPA-1 ಮತ್ತು UPA-2ರ ದುರಾಡಳಿತ ಮತ್ತು ಭ್ರಷ್ಟಾಚಾರದಿಂದ ಬೇಸತ್ತಿದ್ದ ಭಾರತೀಯರಿಗೆ ತಮ್ಮ ದೇಶವನ್ನು ಮುನ್ನಡೆಸಲು ಕಾಣಿಸಿದ ಏಕೈಕ ಆಶಾಕಿರಣವೆಂದರೆ ನರೇಂದ್ರ ದಾಮೋದರ್ ದಾಸ್ ಮೋದಿ. ಅರ್ಥಾತ್… Read More ಮತ್ತೆ ಮುದುಡಿತು ಕೈ , ಮತ್ತೊಮ್ಮೆ ಅರಳಿತು ಕಮಲ.

ನೀನು ಕಳ್ಳಾ ಮತ್ತು ನಿಮ್ಮಪ್ಪಾನೂ ಕಳ್ಳಾ

2019ರ ಲೋಕಸಭಾ ಚುನಾವಣೆ ಕಾಂಗ್ರೇಸ್ ಮತ್ತು ಇತರೇ ವಿರೋಧ ಪಕ್ಷಗಳಿಗೆ ಒಂದು ರೀತಿಯ ಮಾಡು ಇಲ್ಲವೇ ಮಡಿ ಎನ್ನುವ ಚುನಾವಣೆಯಾಗಿತ್ತು. ಹೇಗಾದರೂ ಮಾಡಿ ಮೋದಿಯವರನ್ನು ಹಣಿಯದಿದ್ದರೆ ತಮ್ಮ ಉಳಿಗಾಲವಿಲ್ಲ ಎಂಬುದನ್ನು ಎಲ್ಲರೂ ಮನಗಂಡಿದ್ದರು. ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್ ಇದನ್ನು ಬಾಯಿ ಬಿಟ್ಟೇ ಹೇಳಿಯೂ ಬಿಟ್ಟರು. ಅದಕ್ಕಾಗಿಯೇ ಎಲ್ಲರೂ ಮೋದಿ…ಮೋದಿ…ಮೋದಿ… ಈ ಒಂದೇ ಒಂದು ಹೆಸರು ದೇಶಾದ್ಯಂತ ಯಾವ ರೀತಿಯ ಒಂದು ಹವಾ ಸೃಷ್ಟಿಸಿತೆಂದರೆ, ಮೋದಿಯವರ ಬೆಂಬಲಿಗರು ಬಿಡಿ ಮೋದಿಯವರ ವಿರೋಧಿಗಳ ಬಾಯಲ್ಲೂ ಮೊದಲು ಬರುವ ಪದವೇ ಮೋದಿ… Read More ನೀನು ಕಳ್ಳಾ ಮತ್ತು ನಿಮ್ಮಪ್ಪಾನೂ ಕಳ್ಳಾ

ದಾನ- ಮತದಾನ

ನಮ್ಮ ಸನಾತನದ ಧರ್ಮದಲ್ಲಿ ದಾನಕ್ಕೆ ಹೆಚ್ಚಿನ ಪ್ರಾಮುಖ್ಯತೆಯಿದೆ. ಪ್ರತಿಯೊಂದು ಪುಣ್ಯ ಕೆಲಸ ಮಾಡುವ ಮೊದಲು ನಾವು ಏನಾದರೂ ದಾನ ಮಾಡಿಯೇ ಮುಂದಿನ ಶಾಸ್ತ್ರಗಳಲ್ಲಿ ತೊಡಗುತ್ತೇವೆ. ದಾನ ಎಂದರೆ ಅಗತ್ಯವಿದ್ದವರಿಗೆ ತಮ್ಮಲ್ಲಿರುವ ವಸ್ತುಗಳನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕೊಡುವುದು ಎಂದರ್ಥ. ಹಾಗೆ ದಾನ ಮಾಡುವವರು ಶ್ರೀಮಂತರಾಗಿಯೇ ಇರಬೇಕೆಂದಿಲ್ಲ. ಕೊಡಲು ಕೈಯಲ್ಲಿ ಏನಿಲ್ಲದಿದ್ದರೂ ಸಂಕಷ್ಟದಲ್ಲಿರುವವರನ್ನು ಸಂತೈಸುವುದು, ಸಾಂತ್ವನದ ನುಡಿಗಳನ್ನು ಆಡುವುದು, ಅಷ್ಟೇ ಏಕೆ ಒಬ್ಬ ವ್ಯಕ್ತಿಯನ್ನು ಭೇಟಿಯಾದಾಗ ಅವನನ್ನು ಕಂಡು ಮುಗುಳ್ನಗುವುದೂ ಸಹ ದಾನದ ಚೌಕಟ್ಟಿನಲ್ಲಿಯೇ ಬರುತ್ತದೆ. ಹಾಗೆ ದಾನ ಮಾಡುವುದರಿಂದ… Read More ದಾನ- ಮತದಾನ

ಉಚಿತ ಆಮಿಷಗಳು ಮತ್ತು ದೇಶದ ಆರ್ಥಿಕತೆ

ಚುನಾವಣೆಯಲ್ಲಿ ನಾವುಗಳು ಮಾಡುವುದು ಮತದಾನ. ದಾನ ಮಾಡುವ ಕೈಗಳು ಅರ್ಥಾತ್ ಕೊಡುವ ಕೈಗಳು ಎಂದಿಗೂ ಮೇಲೆ ಇರುತ್ತವೆಯೇ ಹೊರತು, ಬೇಡುವ ರೀತಿಯಲ್ಲಿ ಇರುವುವುದಿಲ್ಲ. ಹಾಗಾಗಿ ಚುನಾವಣಾ ಸಮಯದಲ್ಲಿ ರಾಜಕೀಯ ಪಕ್ಷಗಳು ನೀಡುವ ಹಣ, ಹೆಂಡ ಮತ್ತು ಗೃಹೋಪಯೋಗಿ ವಸ್ತುಗಳ ಉಚಿತ ಆಮೀಷಗಳಿಗೆ ಬಲಿಯಾಗಿ ದೇಶದ ಆರ್ಥಿಕತೆಯನ್ನು ಅಧೋಗತಿಗೆ ತಳ್ಳದೇ, ಸ್ವಾಭಿಮಾನಿಗಳಾಗಿ, ಸ್ವಾವಲಂಭಿಗಳಾಗಿ, ನಮ್ಮ ರಾಜ್ಯದ ಒಳಿತಿಗಾಗಿ ಮೇ 10ರಂದು ನಿರ್ಭೆಡೆಯಿಂದ ತಪ್ಪದೇ ಮತದಾನ ಮಾಡೋಣ ಅಲ್ವೇ?… Read More ಉಚಿತ ಆಮಿಷಗಳು ಮತ್ತು ದೇಶದ ಆರ್ಥಿಕತೆ

ಪ್ರಜ್ಞಾವಂತ ಮತದಾರರಲ್ಲಿ ಒಂದು ಸಣ್ಣ ಮನವಿ

ಏಪ್ರಿಲ್ 18 ಮತ್ತು 23 ರಂದು ಕರ್ನಾಟಕಾದ್ಯಂತ ಲೋಕಸಭಾ ಚುನಾವಣೆ ನಡೆಯಲಿದ್ದು, ಈ ಚುನಾವಣೆಯಲ್ಲಿ ಮಾಡುವುದು ಸಾಂವಿಧಾನಿಕವಾಗಿ ಕಡ್ಡಾಯವಾಗಿರುವ ಕಾರಣ, ಎಲ್ಲರೂ ಯಾವುದೇ ಕುಂಟು ನೆಪಗಳಿಲ್ಲದೆ, ಮತ ಚಲಾವಣೆ ಮಾಡಬೇಕಾಗಿ ಸವಿನಯ ಪ್ರಾರ್ಥನೆ. ಚುನಾವಣಾ ದಿನ ಬೆಳಿಗ್ಗೆ ರಜೆ ಎಂದು ತಡವಾಗಿ ಎದ್ದು ಕಾಪಿ ಗೀಪಿ ಕುಡ್ಕಂಡು… ಓ ಸೋ ಹಾಟ್ ಅಂತಾನೋ ಇಲ್ಲಾ ಅಪರೂಪಕ್ಕೆ ಬೀಳ್ತಾ ಇರೋ ಸೋನೆ ಮಳೆ ನೆಪ ಒಡ್ಡಿ …ಯಾರ್ ಹೋಗ್ತಾರೆ ವೋಟ್ ಹಾಕಕ್ಕೆ? ಯಾರ್ ಬಂದ್ರೂ ನಮಗೇನು? ಅಂತ ಕಾಲ್… Read More ಪ್ರಜ್ಞಾವಂತ ಮತದಾರರಲ್ಲಿ ಒಂದು ಸಣ್ಣ ಮನವಿ

ಒಗ್ಗಟ್ಟಿನಲ್ಲಿ ಬಲವಿದೆ

ಅದೊಂದು ಕಾಲೇಜು ಹಾಸ್ಟೆಲ್ ಕ್ಯಾಂಟೀನ್, ಅಲ್ಲಿ ಪ್ರತಿದಿನ ಉಪಾಹಾರಕ್ಕಾಗಿ ಉಪ್ಪಿಟ್ಟನ್ನು ವಿದ್ಯಾರ್ಥಿಗಳಿಗೆ ಕೊಡುತ್ತಿದ್ದರು. ಹೆಚ್ಚಿನ ವಿದ್ಯಾರ್ಥಿಗಳಿಗೆ ಉಪ್ಪಿಟ್ಟನ್ನು ತಿನ್ನಲು ಮನಸ್ಸಿರಲಿಲ್ಲ. ಅದಕ್ಕಾಗಿ ಉಪ್ಪಿಟ್ಟಿನ ಬದಲಾಗಿ ಬೇರೆಂದು ಉಪಹಾರವನ್ನು ತಯಾರಿಸಲು ತಮ್ಮ ವಾರ್ಡನ್ ಅವರಿಗೆ ದೂರು ಕೊಟ್ಟರು. ಸುಮಾರು100 ವಿದ್ಯಾರ್ಥಿಗಳಲ್ಲಿ 20 ಮಂದಿಗೆ ಉಪ್ಪಿಟ್ಟು ರುಚಿಸದೇ ಇದ್ದರೂ ದೂರು ಕೊಟ್ಟವರ ಪರವಾಗಿ ಬೆಂಬಲ ನೀಡಲು ಹೆದರಿಕೊಂಡು ತಟಸ್ಥರಾಗಿ ಇದ್ದರು. ವಿದ್ಯಾರ್ಥಿಗಳ ಮನವಿಯನ್ನು ಪುರಸ್ಕರಿಸಿದ ವಾರ್ಡನ್ ಉಪಾಹಾರಕ್ಕಾಗಿ ವಿವಿಧ ಉಪ್ಪಿಟ್ಟಿನ ಸಹಿತ ತಿಂಡಿಗಳ ಪಟ್ಟಿಯನ್ನು ನೀಡಿ ವಿದ್ಯಾರ್ಥಿಗಳಿಗೇ ಮಾಡಿಕೊಳ್ಳಲು ತಿಳಿಸಿ… Read More ಒಗ್ಗಟ್ಟಿನಲ್ಲಿ ಬಲವಿದೆ

ಭಾರತೀಯ ಮತದಾರನ ಹೃದಯಾಂತರಾಳದ ಮಾತು

ನನ್ನ ಹೆಸರು ಮನೀಷ್ ಕುಮಾರ್.  ಜನ್ಮತಃ ನಾನೊಬ್ಬ ಹಿಂದು ಮತ್ತು 2014 ರಲ್ಲಿ ನಾನು ಕಾಂಗ್ರೆಸ್ ಪಕ್ಷಕ್ಕೇ ನನ್ನ ಮತವನ್ನು ನೀಡಿದ್ದೇನೆ . ಗುಜರಾತ್ ಮಾದರಿಯ ಬಗ್ಗೆ ನಾನು ಕೇಳಿದ್ದೆ, ಮೋದಿ ಪ್ರಧಾನಿಯಾದರೆ,ದೇಶಾದ್ಯಂತ ಗೋಧ್ರಾ ಮಾದರಿಯ ಕೋಮು ದಳ್ಳುರಿಯ ಪ್ರಕರಣಗಳು ಹೆಚ್ಚಾಗಬಹುದು ಎಂದು ಎಣಿಸಿದಿದ್ದೆ. ಆದರೆ ಜನರು ಬಹುತದಿಂದ ಮೋದಿಯವರನ್ನು ಅಯ್ಕೆಮಾಡಿ ಪ್ರಧಾನಿಯನ್ನಾಗಿ ಮಾಡಿದಾಗ, ಅಯ್ಯೋ  ನನ್ನ  ಒಂದು  ಮತ ವ್ಯರ್ಥವಾಯಿತಲ್ಲಾ ಎಂದು ವಿಷಾಧಿಸಿದ್ದೆ. ನನ್ನ ಸ್ನೇಹಿತರೊಂದಿಗೆ  ವಾದಮಾಡುತ್ತಾ  ಮೋದಿ ಜನರಲ್ಲಿ ಹಗೆತನವನ್ನು ಹೆಚ್ಚಿಸುವ ಮತ್ತು ರಾಮ… Read More ಭಾರತೀಯ ಮತದಾರನ ಹೃದಯಾಂತರಾಳದ ಮಾತು

ದೇಶ ಮತ್ತು ದ್ವೇಷ

ನೆನ್ನೆ  ಸಂಜೆ ತೋಳ ಬಂತು ತೋಳ ಅನ್ನುವ ಹಾಗೆ ಈಗ ಬಿಡುಗಡೆ ಮಾಡ್ತೀವಿ, ಅಗ ಬಿಡುಗಡೆ ಮಾಡ್ತೀವಿ. ಚಿದಂಬರಂ ಮತ್ತು ಮೋಯ್ಲಿಯವರ ತಂಡ ಎಲ್ಲಾ ಸಿದ್ದ ಪಡಿಸ್ತಿದ್ದಾರೆ ಅಂತ ಹೇಳ್ತಾನೇ, ನೆನ್ನೆ ಮಧ್ಯಾಹ್ನ ಕಾಂಗ್ರೇಸ್  ಗಜಗರ್ಭದಂತೆ  ತನ್ನ ಪಕ್ಷದ ಪ್ರಣಾಳಿಕೆಯನ್ನು  ಬಿಡುಗಡೆ ಮಾಡಿತು.  ಕಾಂಗ್ರೇಸ್ ಪಕ್ಷದ ಪ್ರಣಾಳಿಕೆ ಓದುತ್ತಿದ್ದಂತೆಯೇ ಇದು ನಮ್ಮದೇಶದ ಒಂದು ರಾಷ್ಟ್ರೀಯ ಪಕ್ಷದ ಪ್ರಣಾಳಿಕೆಯೋ ಇಲ್ಲವೇ ಪಾಪೀಸ್ಥಾನದ ಉಗ್ರರ ಪ್ರಣಾಳಿಕೆಯೋ ಅನ್ನುವ ಅನುಮಾನ ಮೂಡಿದ್ದಂತೂ ಸತ್ಯ. ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಬಂದ ಮೇಲೆ ಅಂಬೇಡ್ಕರ್… Read More ದೇಶ ಮತ್ತು ದ್ವೇಷ