ಅಭಿಮಾನ್ ಸ್ಟುಡಿಯೋ ಮತ್ತು ವಿಷ್ಣುವರ್ಧನ್ ಅಭಿಮಾನಿಗಳು

ಕನ್ನಡ ಚಿತ್ರರಂಗವನ್ನು ಮದ್ರಾಸಿನಿಂದ ಬೆಂಗಳೂರಿಗೆ ತರುವ ಮಹದಾಸೆಯಿಂದ ಕರ್ನಾಟಕ ಸರ್ಕಾರ ಮತ್ತು ಕನ್ನಡ ಚಿತ್ರಾಭಿಮಾನಿಗಳ ಸಹಾಯದಿಂದ ಹಿರಿಯ ನಟರಾಗಿದ್ದಂತಹ ಬಾಲಕೃಷ್ಣ ಅವರು ನಿರ್ಮಿಸಿದ್ದ ಅಭಿಮಾನ್ ಸ್ಟುಡಿಯೋ, ಭೂಗಳ್ಳರ ಕುಮ್ಮಕ್ಕು ಮತ್ತು ಬಾಲಣ್ಣನವರ ಕುಟುಂಬದ ದುರಾಸೆಯಿಂದಾಗಿ ಮಾನವೀಯತೆಯನ್ನೂ ಮರೆತು ನಿರ್ನಾಮವಾದ ಕಥೆ-ವ್ಯಥೆ ಇದೋ ನಿಮಗಾಗಿ… Read More ಅಭಿಮಾನ್ ಸ್ಟುಡಿಯೋ ಮತ್ತು ವಿಷ್ಣುವರ್ಧನ್ ಅಭಿಮಾನಿಗಳು

ಅಭಿನಯ ಸರಸ್ವತಿ ಶ್ರೀಮತಿ ಬಿ. ಸರೋಜದೇವಿ

ಕನ್ನಡ ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಅನಭಿಶಕ್ತ ರಾಣಿಯಾಗಿ ಮೆರೆದಿದ್ದ, ಕಿತ್ತೂರು ರಾಣಿ ಚೆನ್ನಮ್ಮ ಎಂದ ತಕ್ಷಣ ನೆನಪಾಗುವ ಅಭಿನಯ ಸರಸ್ವತಿ ಎಂದೇ ಪ್ರಖ್ಯಾತರಾಗಿದ್ದ ಶ್ರೀಮತಿ ಬಿ.ಸರೋಜಾದೇವಿಯವರು ಇಂದು ನಿಧನರಾಗಿರುವ ಸಂಧರ್ಭದಲ್ಲಿ ಅವರ ಕುರಿತಾದ ಅನುರೂಪ ಮತ್ತು ಅಪರೂಪ ಮಾಹಿತಿಗಳು ಇದೋ ನಿಮಗಾಗಿ… Read More ಅಭಿನಯ ಸರಸ್ವತಿ ಶ್ರೀಮತಿ ಬಿ. ಸರೋಜದೇವಿ

ದೊರೈ-ಭಗವಾನ್ ಜೋಡಿಯ, ಛಾಯಾಗ್ರಾಹಕ ದೊರೈ

ಛಾಯಾಗ್ರಾಹಕರಾಗಿ ಚಿತ್ರರಂಗವನ್ನು ಪ್ರವೇಶಿಸಿ, ಭಗವಾನ್ ಅವರೊಂದಿಗೆ ಜೋಡಿಯಾಗಿ ಕನ್ನಡದ ಬಹುತೇಕ ಲೇಖಕರ ಒಳ್ಳೊಳ್ಳೆಯ ಕಾದಂಬರಿಗಳನ್ನು ಚಿತ್ರವನ್ನಾಗಿಸಿ, ಕನ್ನಡಿಗರ ಮನಸ್ಸಿನ ಶಾಶ್ಗತವಾಗಿ ಮನೆ ಮಾಡಿರುವ ಬಿ ದೊರೈರಾಜ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಜೊತೆಗೆ ಸಾವಿನಲ್ಲೂ ಜೋಡಿಯಾಗಿಯೇ ಮೆರೆದ ಕುತೂಹಲಕಾರಿ ಸಂಗತಿಯನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ದೊರೈ-ಭಗವಾನ್ ಜೋಡಿಯ, ಛಾಯಾಗ್ರಾಹಕ ದೊರೈ

ತಂಗಲಾನ್ ಎಂಬ ಹಸೀ ಸುಳ್ಳಿನ ಸಿನೆಮಾ

ಭಾರತ ವಿರೋಧಿ ಮನಸ್ಥಿತಿ, ತಮ್ಮ ಸೈದ್ಧಾಂತಿಕ ನಿಲುವು ಮತ್ತು ದುಡ್ಡು ಮತ್ತು ಪ್ರಶಸ್ತಿಯ ತೆವಲಿಗಾಗಿ ಇಲ್ಲ ಸಲ್ಲದ ಸುಳ್ಳು ಇತಿಹಾಸವನ್ನೇ ವೈಭವೀಕರಿಸಿ ಮುಂದಿನ‌‌ ಪೀಳಿಗೆಗೆ ಹಸೀ ಸುಳ್ಳು ಇತಿಹಾಸವನ್ನೇ ತಮ್ಮ ಚಿತ್ರಗಳ ಮೂಲಕ ತೋರಿಸುವವರಿಗೆ ಧಿಕ್ಕಾರವಿರಲಿ. … Read More ತಂಗಲಾನ್ ಎಂಬ ಹಸೀ ಸುಳ್ಳಿನ ಸಿನೆಮಾ

ಕಾಟೇರ ಸಿನಿಮಾ ಮತ್ತು ವಾಸ್ತವತೆ

70ರ ದಶಕದಲ್ಲಿ ಕರ್ನಾಟಕ ರಾಜ್ಯದಲ್ಲಿನ ಭೂಸುಧಾರಣೆ ಕಾಯ್ದೆಯ ಅನ್ವಯ ಜಾರಿಗೆಯಾದ ಉಳುವವನೇ ಭೂಮಿಯ ಒಡೆಯ ಕಾನೂನಿನ ಹಿನ್ನಲೆಯ ಆಧಾರಿತವಾದ ಚಿತ್ರವಾದ ಎಂದು ಬಿಂಬಿತವಾದ ಕಾಟೇರ ಸಿನಿಮಾಕ್ಕೂ ಆ ಸಮಯದಲ್ಲಿ ಆದ ಘಟನೆಗಳಿಗೂ ಅಜಗಜಾಂತರವಿದ್ದು, ಆ ಕುರಿತಂತೆ ಒಂದು ವಸ್ತು ನಿಷ್ಠ ಚಿತ್ರಣ ಇದೋ ನಿಮಗಾಗಿ,… Read More ಕಾಟೇರ ಸಿನಿಮಾ ಮತ್ತು ವಾಸ್ತವತೆ

ಕನ್ನಡದ ಮೇರು ನಟಿ ಲೀಲಾವತಿ

ಕನ್ನಡದ, ತೆಲುಗು, ತಮಿಳು, ಮಲಯಾಳಂ ಭಾಷೆಗಳೂ ಸೇರಿದಂತೆ 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸುವ ಮೂಲಕ ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿದ್ದ ಶ್ರೀಮತಿ ಲೀಲಾವತಿಯವ ವ್ಯಕ್ತಿ, ವಕ್ತಿತ್ವ ಮತ್ತು ಸಾಧನೆಗಳ ಜೊತೆ ಕೆಲವು ಕುತೂಹಲಕಾರಿ ಸಂಗತಿಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ … Read More ಕನ್ನಡದ ಮೇರು ನಟಿ ಲೀಲಾವತಿ

ಡೇರ್ ಡೆವಿಲ್ ಮುಸ್ತಾಫಾ ಚಿತ್ರ ವಿಮರ್ಶೆ

ಕನ್ನಡ ಸಿನಿಮಾಗಳು ಸಿನಿಮಾ ಮಂದಿರದಲ್ಲಿ ಓಡುವುದೇ ಇಲ್ಲಾ ಎನ್ನುವ ಅಪವಾದಕ್ಕೆ ವಿರುದ್ಧವಾಗಿ ಮೂರನೇ ವಾರವೂ ಡೇರ್ ಡೆವಿಲ್ ಮುಸ್ತಫಾ ಚಿತ್ರ ಅದ್ಭುತವಾಗಿ ಪ್ರದರ್ಶನವಾಗುತ್ತಿದೆ ಎಂದರೆ ಅದರಲ್ಲಿ ನಿಜಕ್ಕೂ ಏನೋ ಸ್ತತ್ವ ಇದೆ ಅಲ್ವೇ?

ಬಹುತೇಕ ಹೊಸಬರನ್ನೇ ಸೇರಿಸಿಕೊಂಡು ಚಂದದ ಚಿತ್ರವನ್ನು ಕನ್ನಡಿಗರಿಗೆ ಅರ್ಪಿಸಿರುವ ನಿರ್ದೇಶಕ ಶಶಾಂಕ್ ಸೋಗಾಲ ಅವರ ಪ್ರಯತ್ನ ನನಗೆ ಹೇಗನ್ನಿಸಿತು ಎಂಬುದು ಇದೋ ನಿಮಗಾಗಿ… Read More ಡೇರ್ ಡೆವಿಲ್ ಮುಸ್ತಾಫಾ ಚಿತ್ರ ವಿಮರ್ಶೆ

ದಿ ಕೇರಳ ಸ್ಟೋರಿ ಕುರಿತಂತೆ ಮನದಾಳದ ಮಾತು

https://enantheeri.com/2023/05/05/kerala_story/

ಕೇರಳ ಸ್ಟೋರಿ, ಚಿತ್ರದಲ್ಲಿ ತೋರಿಸಿರುವ ಶಾಲಿನಿ ಉನ್ನಿಕೃಷ್ಣನ್ ಮತ್ತು ದೀಪಾಂಜಲಿಯರ ಕಥೆಯಷ್ಟೇ ಆಗಿರದೇ, ಕೇರಳ, ಕರ್ನಾಟಕ ಮತ್ತು ತಮಿಳುನಾಡಿನ ಕರಾವಳಿ ಪ್ರಾಂತ್ಯದ ಸಾವಿರಾರು ಅಮಾಯಕ ಯುವಕ ಯುವತಿಯರ ಕರಾಳ ಕಥನವಾಗಿದ್ದು, ಪ್ರತಿಯೊಬ್ಬ ಭಾರತೀಯರೂ ನೋಡಿ ಎಚ್ಚೆತ್ತು ಕೊಳ್ಳಲೇ ಬೇಕಾದ ಚಿತ್ರವಾಗಿದೆ. ಈ ಚಿತ್ರದ ಕುರಿತಂತೆ ಒಬ್ಬ ಚಿತ್ರಪ್ರೇಕ್ಷಕನಾಗಿ ಮತ್ತು ಹೆಣ್ಣುಮಗಳೊಂದರ ತಂದೆಯಾಗಿ ಮನದಾಳದ ಮಾತು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.

ಧರ್ಮ ಉಳಿದರೆ ದೇಶ ಉಳಿದೀತು. ದೇಶ ಉಳಿದರೆ ನಾವು ಉಳಿದೇವು. ಧರ್ಮೋ ರಕ್ಷತಿ ರಕ್ಷಿತಃ… Read More ದಿ ಕೇರಳ ಸ್ಟೋರಿ ಕುರಿತಂತೆ ಮನದಾಳದ ಮಾತು

ನಿರ್ದೇಶಕ ದೊರೈ-ಭಗವಾನ್

ಸದಭಿರುಚಿಯ ಚಿತ್ರಗಳು ಅದರಲ್ಲೂ 24 ಕಾದಂಬರಿ ಚಿತ್ರ ಆಧಾರಿತ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿ, ರಾಜಕುಮಾರ್ ಅವರನ್ನು ಜೇಮ್ಸ್ ಬಾಂಡ್ ರೂಪದಲ್ಲಿ ಕನ್ನಡದಲ್ಲಿ ತೋರಿಸಿದ್ದ, ೮೦ರ ದಶಕದಲ್ಲಿ ಅನಂತ್ ನಾಗ್ ಮತ್ತು ಲಕ್ಷ್ಮೀ ಯಶಸ್ವಿ ಜೋಡಿಯನ್ನಾಗಿಸಿದ್ದ ಎಸ್. ಕೆ. ಭಗವಾನ್ ಎಂಟಾಣೆಯ ಮೂಲಕ ದೊರೈ-ಭಗವಾನ್ ಎಂಬ ಯಶಸ್ವಿ ಜೋಡಿಯಾದ ರೋಚಕದ ಕಥೆಯ ಜೊತೆ ಭಗವಾನ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಕುರಿತಾದ ನುಡಿ ನಮಗಳು ಇದೋ ನಿಮಗಾಗಿ… Read More ನಿರ್ದೇಶಕ ದೊರೈ-ಭಗವಾನ್