ಕಳೆದ ವರ್ಷ ದ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡಿ ಮತಾಂಧರು ಕಾಶ್ಮೀರಿ ಪಂಡಿತರ ಮೇಲೆ ನಡೆಸಿದ ಅಟ್ಟಹಾಸ ಮತ್ತು ದೌರ್ಜನ್ಯಗಳ ಬಗ್ಗೆ ಮಮ್ಮುಲ ಮರುಗಿದ್ದ ಮನಸ್ಸು ಇನ್ನೂ ತಣ್ಣಗಾಗುವ ಮೊದಲೇ, ಅದೇ ರೀತಿಯ ಮತ್ತೊಂದು ಸಿನಿಮಾ ದಿ ಕೇರಳ ಸ್ಟೋರಿ ಎಂಬ ಟ್ರೈಲರ್ ಇದ್ದಕ್ಕಿದ್ದಂತೆಯೇ ಕಳೆದ ಎರಡು ಮೂರು ವಾರಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಆದಾಗ ಮೇ 5 ರಂದು ಹೇಗೂ ಸಿನಿಮಾ ಬಿಡುಗಡೆಯಾದಾಗ ಖಂಡಿತವಾಗಿಯೂ ನೋಡಲೇ ಬೇಕೆಂದು ನಿರ್ಧರಿದ್ದಾಗಲೇ, ಬೆಂಗಳೂರಿನ ರಾಜಾಜೀನಗರದ ಒರಿಯಾನ್ ಮಾಲ್ ನಲ್ಲಿ ಈ ಸಿನಿಮಾದ ಪ್ರೀಮಿಯರ್ ಷೋ ನೋಡುವ ಸೌಭಾಗ್ಯ ದೊರೆತು ಆ ಸಿನಿಮಾ ನೋಡಿದಾಗ ಆದ ನೋವು ಮತ್ತು ಸಂಕಟಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ದೇವರ ಸ್ವಂತ ನಾಡು ಎಂದೇ ಕರೆಸಿಕೊಳ್ಳುವ ಕೇರಳದ ವಿವಿಧ ಭಾಗಗಳಿಂದ ನರ್ಸಿಂಗ್ ಶಿಕ್ಷಣಕ್ಕಾಗಿ ಕಾಸರಗೋಡಿನ ಪ್ರತಿಷ್ಟಿತ ಪದವಿ ಕಾಲೇಜಿಗೆ ಸೇರಿಕೊಂಡು ಅಲ್ಲಿಯ ಹಾಸ್ಟೆಲ್ಲಿನ ಒಂದು ಕೊಠಡಿಯಲ್ಲಿ ಒಂದಾಗುವ ಸ್ಥಳೀಯ ಮುಸ್ಲಿಂ ಹುಡುಗಿ, ಇಬ್ಬರು ಹಿಂದು, ಮತ್ತೊಬ್ಬಳು ಕ್ರಿಶ್ಚಿಯನ್ ಹುಡುಗಿಯರೇ ಈ ಸಿನಿಮಾದ ಕೇಂದ್ರ ಬಿಂದು. ಅವರೆಲ್ಲರೂ ಪರಸ್ಪರ ಪರಿಚಯಿಸಿಕೊಂಡು ಒಬ್ಬರೊನ್ನೊಬ್ಬರು ಕಾಲು ಎಳೆದುಕೊಂಡು ಇನ್ನು ಮೂರು ವರ್ಷಗಳ ಕಾಲ ನಾವೆಲ್ಲರೂ ಒಟ್ಟಾಗಿ ಉತ್ತಮವಾಗಿ ಓದಿ ಪದವಿಯನ್ನು ಪಡೆದು ದೇಶವಿದೇಶದ ಪ್ರತಿಷ್ಷಿತ ಆಸ್ಪತ್ರೆಗಳಲ್ಲಿ ದಾದಿಯರಾಗಿ ಸೇವೆ ಮಾಡುವ ಕನಸನ್ನು ಹಂಚಿಕೊಳ್ಳುತ್ತಾರೆ. ಆದರೆ ತಾನೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವ ಗಾದೆ ಮಾತು ಹಳೆಯದಾಗಿ, ತಾನೊಂದು ಬಗೆದರೆ, ಮತೀಯವಾದಿಗಳು ಮತ್ತೊಂದು ಬಗೆದಿರುತ್ತಾರೆ ಎನ್ನುವಂತೆ ಆ ನಾಲ್ವರ ಪೈಕಿಯ ಮುಸ್ಲಿಂ ಹುಡುಗಿಗೆ ಶಿಕ್ಷಣ ಎನ್ನುವುದು ನೆಪ ಮಾತ್ರವಾಗಿ ಆಕೆ ಅಂತರಾಷ್ಟ್ರೀಯ ಮತಾಂಧರ ಷಢ್ಯಂತ್ರದ ಭಾಗವಾಗಿ ಮುಸ್ಲಿಂ ಅಲ್ಲದ ಅಮಾಯಕ ಹುಡುಗಿಯರನ್ನು ಮುಸಲ್ಮಾನರಾಗಿ ಮತಾಂತರ ಮಾಡುವ ಕಾಯಕದ ಭಾಗವಾಗಿರುತ್ತಾಳೆ.
ಆ ಮುಸ್ಲಿಂ ಯುವತಿ ತಲೆಯ ಮೇಲೆ ಹಿಜಾಬ್ ಧರಿಸಿ, ಕಾಲಕಾಲಕ್ಕೆ ಪ್ರಾರ್ಥನೆ ಮಾಡುತ್ತಾ, ತಾನು ಸಂಪ್ರದಾಯಕ ಮುಸ್ಲಿಂ ಹುಡುಗಿ ಎಂಬುದನ್ನು ಬಿಂಬಿಸಿಕೊಳ್ಳುತ್ತಾಳೆ. ನಂತರ ಎಲ್ಲರೂ ಸೇರಿ ಒಟ್ಟಾಗಿ ಊಟ ಮಾಡುವಾಗಲೂ ಆ ಇಬ್ಬರು ಹಿಂದು ಹೆಣ್ಣು ಮಕ್ಕಳು ಗಬಕ್ಕೆಂದು ತಟ್ಟೆಗೆ ಕೈ ಹಾಕಿ ತಿನ್ನಲು ಆರಂಭಿಸಿದಾಗ ಆ ಮುಸ್ಲಿಂ ಯುವತಿ ಮತ್ತು ಮತ್ತೊಬ್ಬ ಕ್ರಿಶ್ಚಿಯನ್ ಯುವತಿ ದೇವರ ಪ್ರಾರ್ಥನೆ ಮಾಡಿ ಊಟಕ್ಕೆ ಕೈ ಹಾಕಿ, ಯಾಕೇ? ನೀವು ಊಟ ಮಾಡುವ ಮೊದಲು ಭಗವಂತನಿಗೆ ಪ್ರಾರ್ಥಿಸುವುದಿಲ್ಲವೇ? ಎಂದು ಪ್ರಶ್ನಿಸುತ್ತಾಳೆ. ಆಗ ಶಾಲಿನಿ ಉನ್ನಿಕೃಷ್ಣನ್ ಎನ್ನುವ (ಕಥೆಯಲ್ಲಿ ಪ್ರಮುಖ ನಾಯಕಿ) ಮನೆಯಲ್ಲಿ ಅಮ್ಮಾ ಮತ್ತು ಅಜ್ಜಿ ಏನೋ ಶ್ಲೋಕಗಳನ್ನು ಹೇಳಿಕೊಳ್ಳುತ್ತಾರೆ. ಆದರೆ ನನಗೆ ಅದು ಸರಿಯಾಗಿ ಗೊತ್ತಿಲ್ಲಾ ಎಂದರೆ, ಮತ್ತೊಬ್ಬ ಹುಡುಗಿ ದೀಪಾಂಜಲಿ ನಮ್ಮ ತಂದೆ ಕಮ್ಯೂನಿಸ್ಟ್ ಹಾಗಾಗಿ ನಾವು ಹಿಂದೂಗಳಾದರೂ ನಮ್ಮ ಮನೆಯಲ್ಲಿ ಯಾವುದೇ ರೀತಿಯ ಹಿಂದೂ ಪದ್ದತಿಗಳ ಆಚರಣೆ ರೂಡಿಯಲ್ಲಿ ಇಲ್ಲಾ ಎಂದಾಗ, ನಾವು ಏನೇ ಕೆಲಸ ಮಾಡಿದರೂ ಮೊದಲು ಅಲ್ಲಾನಿಗೆ ಸಮರ್ಪಿಸಲೇ ಬೇಕು ಇಲ್ಲದಿದ್ದಲ್ಲಿ ಅಲ್ಲಾನ ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎನ್ನುವುದರ ಮೂಲಕ ಮೊದಲ ಹಂತದ ಬ್ರೈನ್ ವಾಷ್ ಆರಂಭವಾಗುತ್ತದೆ
ಅರೇ, ನಾವಿಬ್ಬರೂ ಹಿಂದೂಗಳು. ನಮಗೆ ಮುಸ್ಲಿಂ ದೇವರು ಅಲ್ಲಾ ಏಕೆ ಶಿಕ್ಷೆಗೆ ಗುರಿಪಡಿಸುತ್ತಾರೆ? ಎಂದು ಅಮಾಯಕವಾಗಿ ಪ್ರಶ್ನಿಸಿದಾಗ, ಇಡೀ ಲೋಕದಲ್ಲಿ ಅಲ್ಲಾ ಒಬ್ಬನೇ ದೇವರು ಉಳಿದವರೆಲ್ಲರೂ ಕಾಫೀರರು ಎಂಬ ಮೊದಲ ಪಾಠ ಆರಂಭವಾಗಿ ನಂತರ ಇದೇ ರೀತಿಯಲ್ಲೇ ನಿಮ್ಮ ಹಿಂದೂ ದೇವರಾದ ಶಿವ ತನ್ನ ಹೆಂಡತಿ ದಾಕ್ಷಾಯಿಣಿ ಯಜ್ಞ ಕುಂಡಕ್ಕೆ ಹಾರಿ ಪ್ರಾಣ ಕಳೆದುಕೊಳ್ಳುವುದನ್ನು ತಡೆಯಲಾಗಲಿಲ್ಲ. ಇನ್ನು ನಿಮ್ಮ ಕೃಷ್ಣ 16000 ಹೆಣ್ಣುಮಕ್ಕಳೊಂದಿಗೆ ಸರಸವಾಡುವ ಲಂಪಟ ಇಂತಹವರು ಹೇಗೆ ದೇವರಾಗುತ್ತಾರೆ? ಇಂತಹವರು ನಿಮ್ಮನ್ನು ಹೇಗೆ ರಕ್ಷಿಸುತ್ತಾರೆ? ಎನ್ನುತ್ತಾ ಒಂದೊಂದಾಗಿಯೇ ಹಿಂದೂ ದೇವರುಗಳನ್ನು ಅವಹೇಳನ ಮಾಡುತ್ತಾ, ಕೆಲವೇ ದಿನಗಳಲ್ಲಿ ಆ ಹಿಂದೂ ಹೆಣ್ಣುಮಕ್ಕಳಲ್ಲಿ ಹಿಂದೂ ಧರ್ಮದ ಬಗ್ಗೆ ಕೀಳರಿಮೆ ಮೂಡಿಸುವುದಲ್ಲಿ ಸಫಲರಾಗುತ್ತಾಳೆ.
ಇಷ್ಟರ ಮಧ್ಯೆ ಆ ಸ್ಥಳೀಯ ಮುಸ್ಲಿಂ ಹುಡುಗಿ ಎಲ್ಲರನ್ನೂ ಊರು ಸುತ್ತಿಸಲು ಕರೆದುಕೊಂಡು ಹೋಗುವ ನೆಪದಲ್ಲಿ ತನ್ನ ಬಂಧುಗಳು ಎಂದು ಹುಡುಗರನ್ನು ಪರಿಚಯಿಸುತ್ತಾಳೆ. ನೋಡಲು ದಷ್ಟ ಪುಷ್ಟವಾಗಿ ಆಕರ್ಷಣಿಯವಾಗಿ ಇರುವ ಆ ಹುಡುಗರಲ್ಲಿ ಒಬ್ಬ ತಾನು ಡಾಕ್ಟರ್ ಓದುತ್ತಿರುವುದಾಗಿ ಪರಿಚಯಿಸಿಕೊಂಡು ಆರಂಭದಲ್ಲಿ ಬಹಳ ಸಭ್ಯಸ್ಥರಾಗಿ ಆ ಹೆಣ್ಣು ಮಕ್ಕಳೊಂದಿಗೆ ವರ್ತಿಸುವ ಮೂಲಕ ಆ ಹುಡುಗಿಯರನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುವುದರಲ್ಲಿ ಸಫಲರಾಗುತ್ತಾರೆ. ಅದೊಂದು ದಿನ ಆ ಮುಸ್ಲಿಂ ಹೊರತಾಗಿ ಉಳಿದ ಹೆಣ್ಣುಮಕ್ಕಳು ಶಾಪಿಂಗ್ ಎಂದು ಹೊರೆಗೆ ಹೋದಾಗ, ಮತಾಂಧರ ಷಡ್ಯಂತರದ ಭಾಗವಾಗಿ ಆ ಹೆಣ್ಣುಮಕ್ಕಳ ಮೇಲೆ ಸ್ಥಳೀಯ ಪುಂಡು ಪೋಕರಿಗಳು ಧಾಳಿ ಮಾಡಿ, ದೈಹಿಕವಾಗಿ ಹಲ್ಲೆ ನಡೆಸುವುದಲ್ಲದೇ, ಸಾರ್ವಜನಿಕವಾಗಿ ಅವರ ಬಟ್ಟೆಗಳನ್ನು ಹರಿದು ಹಾಕುವ ಮೂಲಕ ಭಯದ ವಾತಾವರಣ ಹುಟ್ಟಿಸುತ್ತಾರೆ. ಇದನ್ನೇ ಬಳಸಿಕೊಂಡ ಆ ಮುಸ್ಲಿಂ ಯುವತಿ, ನೀವು ತಲೆಯ ಮೇಲೆ ಹಿಜಾಬ್ ಹಾಕಿಕೊಂಡಿದ್ದರೆ ಈ ರೀತಿಯಾದ ಸಮಸ್ಯೆ ಆಗುತ್ತಿರಲಿಲ್ಲ, ಹಿಜಾಬ್ ಹೆಣ್ಣುಮಕ್ಕಳಿಗೆ ಸುರಕ್ಷತೆಯನ್ನು ನೀಡುತ್ತದೆ ಅದೊಂದು ರೀತಿಯಲ್ಲಿ ಸುರಕ್ಷಾ ಕವಚ ಎಂದು ಎಲ್ಲರಿಗೂ ಹಿಜಾಬ್ ತೊಡಿಸಿ ಮತ್ತೊಮ್ಮೆ ಅವರೆಲ್ಲರನ್ನೂ ಹೊರಗೆ ಕರೆದುಕೊಂಡು ಹೋದಾಗಾ, ಯಾರೂ ಸಹಾ ಅವರ ತಂಟೆಗೆ ಬಾರದೇ ಹೋದಾಗ, ಹಿಜಾಬ್ ಬಗ್ಗೆ ಅವರಿಗೆ ನಂಬಿಕೆ ಮೂಡಿಸುವದಲ್ಲಿ ಸಫಲಳಾಗುವುದಲ್ಲದೇ ನಿಧಾನವಾಗಿ ಅವರಿಗೆ ಕುರಾನ್ ಆಧ್ಯಯನಕ್ಕೆ ಹಚ್ಚುವ ಮೂಲಕ ಅವರಿಗೇ ಅರಿವಿಲ್ಲದಂತೆ ಮಾನಸಿಕವಾಗಿ ಮುಸ್ಲಲ್ಮಾನರಾಗಿ ಪರಿವರ್ತನೆ ಮಾಡಿರುತ್ತಾಳೆ. ಅಲ್ಲಿಂದ ಮುಂದೆ ಆ ಹುಡುಗರು ಆ ಅಮಾಯಕ ಹೆಣ್ಣುಮಕ್ಕಳನ್ನು ಪ್ರೀತಿ ಮಾಡುವ ಹಾಗೆ ನಟಿಸುತ್ತಾ, ಅವರೊಂದಿಗೆ ಎಲ್ಲಾ ಕಡೆಯಲ್ಲಿಯೂ ಓಡಾಡುತ್ತಾ, ಕಡೆಗೆ ದೈಹಿಕ ಸಂಪರ್ಕವನ್ನು ಬೆಳಸಿ ಅದರಲ್ಲಿ ಶಾಲಿನಿ ಎಂಬ ಹೆಣ್ಣುಮಗಳು ಗರ್ಭಿಣಿ ಆಗುವವಲ್ಲಿಗೆ ಸಿನಿಮಾದ ಮಧ್ಯಾಂತರವಾಗಿರುತ್ತದೆ.
ಅಲ್ಲಿಂದ ಮುಂದಿನ ಕಥಾ ಭಾಗವೇ ನಾವೂ ನೀವು ಪತ್ರಿಕೆಗಳಲ್ಲಿ ಓದಿ ಮತ್ತು ಟಿವಿಯಲ್ಲಿ ನೋಡಿ ತಿಳಿದಿರುವ ಐ.ಎಸ್.ಐ.ಎಸ್ ಜಾಲ ಹೇಗೆ ಭಾರತದ, ಕೇರಳದ ಸಣ್ಣ ಸಣ್ಣ ಮಸೀದಿಗಳ ಮೌಲ್ವಿಗಳ ವರೆಗೂ ಲವ್ ಜಿಹಾದ್ ಏಜೆಂಟರುಗಳಾಗಿ ಹೋಗಿದ್ದಾರೆ ಎಂಬ ಕರಾಳ ರೂಪವನ್ನು ತೋರಿಸಲಾಗಿದೆ. ತಮ್ಮ ಧರ್ಮದ ಬಗ್ಗೆ ಅರಿವಿಲ್ಲದೆ ಮತ್ತು ಮುಸ್ಲಿಂ ಧರ್ಮದವರ ಷಢ್ಯಂತ್ರಗಳ ಬಗ್ಗೆ ಗೊತ್ತಿಲ್ಲದೇ, ಔಷಧದ ರೂಪದಲ್ಲಿ ಕೊಡುವ ಮತ್ತು ಬರುವ ಗುಳಿಗೆಗಳನ್ನು ನುಂಗಿ ಅವರುಗಳು ಆ ಮುಸ್ಲಿಂ ಹುಡುಗರೊಂದಿಗೆ ದೈಹಿಕ ಸಂಪರ್ಕ ಬೆಳಸಿದ ಗರ್ಭವತಿಯಾಗಿ, ಆತ ಕೈ ಕೊಟ್ಟು ಓಡಿ ಹೋದ ಪರಿಣಾಮವಾಗಿ, ಅತ್ತ ದರಿ ಇತ್ತ ಪುಲಿ ಎನ್ನುವಂತೆ ವಿಧಿಯಿಲ್ಲದೇ ಅವರ ಕಬಂಧ ಬಾಹುಗಳಲ್ಲಿ ಸಿಲುಕಿಕೊಂಡು ಒತ್ತಾಯಪೂರ್ವಕವಾಗಿ ಮುಸ್ಲಿಂ ಆಗಿ ಪರಿವರ್ತನೆ ಮಾಡುವ ಆ ಮೌಲ್ವಿಗಳು ಆಕೆಗೆ ಜೀವನವನ್ನು ಕೊಡಿಸುತ್ತಿದ್ದೇವೆ ಎಂಬ ನಾಟಕವಾಡಿ ಆ ಅಮಾಯಕ ಹುಡುಗಿಯನ್ನು ಮತ್ತೊಬ್ಬ ಮುಸ್ಲಿಂ ಹುಡುಗನೊಂದಿಗೆ ನಿಖಾಹ್ ಮಾಡಿಸಿ ಮಧುಚಂದ್ರಕ್ಕೆ ಹೊರದೇಶಕ್ಕೆ ಕಳುಹಿಸುತ್ತಿದ್ದೇವೆ ಎಂಬ ಭಾವನೆ ಮೂಡಿಸಿದರೂ, ಅದರ ಹಿಂದೆ ಆಕೆಯನ್ನು ದೂರದ ಐ.ಎಸ್.ಐ.ಎಸ್ ಮತಾಂಧರ ಕಾಮಪೀಪಾಸೆಯನ್ನು ತೀರಿಸಲು ನಂತರ ಆಕೆಯನ್ನು ಭಯೋತ್ಪಾದಕ ಸಂಘಟನೆಯ ಸೂಸೈಡ್ ಬಾಂಬರ್ ಗಳನ್ನಾಗಿ ತಯಾರು ಮಾಡಲು ಕರೆದುಕೊಂಡು ಹೋಗುವ ಪ್ರಕ್ರಿಯೆ ನಿಜಕ್ಕೂ ಭಯಾನಕವಾಗಿದೆ. ಈ ಜಾಲ ಕೇವಲ ಭಾರತದಷ್ಟೇ ಅಲ್ಲದೇ ಶ್ರೀಲಂಕ, ಪಾಕೀಸ್ಥಾನ ಮುಂತಾದ ದೇಶಗಳಲ್ಲಿಯೂ ಹರಡಿಕೊಂಡಿದ್ದು ಅವರುಗಳ ಮೂಲಕ ಅಮಾಯಕ ಹೆಣ್ಣುಮಕ್ಕಳನ್ನು ಹಳಿತಪ್ಪಿಸುವ ಕರಾಳತನವನ್ನು ಸಿನಿಮಾ ನೋಡಿದಾಗಲೇ ತಿಳಿಯುತ್ತದೆ.
ಇನ್ನು ದೀಪಾಂಜಲಿ ಎಂಬ ಹುಡುಗಿಯ ಧರ್ಮದ ಅಮಲು ಆರಂಭದಲ್ಲಿ ಯಾವ ಮಟ್ಟಕ್ಕೆ ಇರುತ್ತದೆ ಎಂದರೆ ಮಗಳು ಇಸ್ಲಾಂ ಧರ್ಮದ ಕಡೆ ವಾಲುತ್ತಿದ್ದಾಳೆ ಎಂಬ ವಿಷಯ ತಿಳಿದ ಆಕೆಯ ಕಮ್ಯೂನಿಸ್ಠ್ ಮನಸ್ಥಿತಿಯ ತಂದೆಗೆ ಹೃದಯಾಘಾತವಾದಾಗಲೂ ನೋಡಲು ಬರಲು ಹಿಂದೇಟು ಹಾಕಿದರೂ ನಂತರ ತಂದೆಯನ್ನು ನೋಡಲು ಬಂದು ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದ ಜನ್ಮ ಕೊಟ್ಟ ತಂದೆಯನ್ನೇ ಕಾಫೀರ್ ಎಂದು ಜರಿದು ಆತನ ಮೇಲೆ ಉಗಿದು ಹೋಗುವಾಗ, ಛೇ!! ಇಂತಹ ಗತಿ ನಮ್ಮ ಶತ್ರುವಿಗೂ ಬಾರದಿರಲಿ ಎಂದೆನಿಸುತ್ತದೆ. ನಂತರದ ದಿನಗಳಲ್ಲಿ ಆಕೆಯ ಪ್ರೇಮಿ ಮತಾಂತರ ಆಗಲು ಒತ್ತಾಯ ಮಾಡಿದಾತ, ಆಕೆಗೆ ತಾನು ಲವ್ ಜಿಹಾದ್ ನ ಷಡ್ಯಂತ್ರದ ಭಾಗವಾಗಿ ಮೋಸ ಹೋಗಿರುವುದು ಅರಿವಾಗಿ ಅಕೆ ಮತಾಂತರಕ್ಕೆ ಒಪ್ಪದೇ, ತನ್ನ ತಂದೆತಾಯಿರ ಬಳಿ ಬಂದು ತಪ್ಪನ್ನು ಒಪ್ಪಿಕೊಳ್ಳುವ ದಿಟ್ಟತನವನ್ನು ತೋರಿದಾಗ, ಆಕೆಯ ಅಶ್ಲೀಲ ಫೋಟೋ ಮತ್ತು ಲೈಂಗಿಕ ವೀಡೀಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮೂಲಕ ಅಂತಹ ದಿಟ್ಟ ಹುಡುಗಿಯ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸಿ ಆತ್ಮ ಹತ್ಯೆ ಮಾಡಿಕೊಳ್ಳುವ ಪ್ರಸಂಗವನ್ನು ಒಬ್ಬ ಹೆಣ್ಣು ಮಗಳ ತಂದೆಯಾಗಿ ನೋಡುವಾಗ ನಿಜಕ್ಕೂ ಕರಳು ಚುರುಕ್ ಎಂದಿದ್ದಂತೂ ಸುಳ್ಳಲ್ಲ. ಇದಕ್ಕೂ ಮುನ್ನಾ ಆಕೆ ತನ್ನ ಕಮ್ಯೂನಿಸ್ಟ್ ಮನಸ್ಥಿತಿಯ ತಂದೆಗೆ, ಅಪ್ಪಾ ನಾನು ಸಣ್ಣವಳಿದ್ದಾಗ, ನಮ್ಮ ದೇಶದ ಸಂಸ್ಕಾರ ಸಂಪ್ರದಾಯಗಳನ್ನು ಹೇಳಿಕೊಡದೇ, ಈ ದೇಶಕ್ಕೆ ಸಂಬಂಧ ಪಡದ ಕಮ್ಯೂನಿಸ್ಟ್ ಸಿದ್ದಾಂತವನ್ನು ನಮ್ಮ ತಲೆಗೆ ತುಂಬಿದ್ದರಿಂದಲೇ ನಮಗೆ ನಮ್ಮ ಧರ್ಮದ ನಿಜವಾಗ ಬೆಲೆ ಅರಿವಾಗಲಿಲ್ಲ ಎಂದಾಗ, ಅರೇ ಹೌದಲ್ವೇ? ಕಾಲ ಕೆಟ್ಟು ಹೋಯ್ತು, ಮಕ್ಕಳು ಕೆಟ್ಟು ಹೋಗಿದ್ದಾರೆ ಎಂದು ಹಲಬುವ ನಾವು, ಕೆಟ್ಟಿರುವುದು ಕಾಲವಲ್ಲ. ಮಕ್ಕಳಂತೂ ಅಲ್ಲವೇ ಅಲ್ಲಾ. ನಾವು ನಮ್ಮ ಸಂಸ್ಕಾರ ಮತ್ತು ಸಂಪ್ರದಾಯಗಲನ್ನು ಮರೆತು ಹೋದ ಪರಿಣಾಮ ಕಾಲ ಮತ್ತು ನಮ್ಮ ಮುಂದಿನ ಪೀಳಿಗೆಯನ್ನು ಕೆಡಿಸುತ್ತಿದ್ದೇವೆ ಎಂಬುದರ ಅರಿವಾಗುತ್ತದೆ.
ತನ್ನ ಹಿಂದೂ ಗೆಳತಿಯರಿಬ್ಬರ ಕಥೆಯನ್ನು ತಿಳಿದಿರುವ ಮತ್ತು ಆಕೆಯೂ ಸಹಾ ಮತಾಂಧರ ಲೈಂಗಿಕ ತೃಷೆಗೆ ಒಳಗಾಗಿದ್ದರೂ, ಇದರ ವಿರುದ್ಧ ಹೋರಾಟ ಮಾಡುವ ಸಲುವಾಗಿ ಪೋಲಿಸರ ಬಳಿ ದೂರು ದಾಖಲು ಮಾಡಲು ಬಂದಾಗ, ಆ ಹಿರಿಯ ಅಧಿಕಾರಿಗಳು ನೀವು ಹೇಳುವುದೆಲ್ಲಾ ತಿಳಿಯುತ್ತದೆ. ಆದರೆ ಅದಕ್ಕೆ ಸಂಬಂಧ ಪಟ್ಟ ಸೂಕ್ತವಾದ ದಾಖಲೆಗಳನ್ನು ಕೊಟ್ಟಾಗ ಮಾತ್ರವೇ ನಾವು ಯಾವುದೇ ಕ್ರಮವನ್ನು ತೆಗೆದುಕೊಳ್ಳಲು ಸಾಧ್ಯ ಎಂದು ತನ್ನ ಅಸಹಾಯಕತೆಯನ್ನು ತೋರಿದಾಗ, ಛೇ!! ನಮ್ಮ ದೇಶದ ಕಾನೂನಿನ ದುರ್ಬಲತೆಯನ್ನು ಅರಿತೇ ಈ ಮತಾಂಧರು ಹೇಗೆ ಸಾವಿರಾರು ಅಮಾಯಕ ಹೆಣ್ಣುಮಕ್ಕಳನ್ನು ತಮ್ಮ ಮೋಸದ ಬಲೆಗೆ ಬೀಳಿಸಿಕೊಳ್ಳುತ್ತಿದ್ದಾರೆ ಎಂಬುದರ ಅರಿವಾಗುತ್ತದೆ.
ಇದು ಸಿನಿಮಾದ ಪಾತ್ರವಾಗಿರುವ ಶಾಲಿನಿ ಉನ್ನಿಕೃಷ್ಣನ್, ದೀಪಾಂಜಲಿಯರ ಕಥೆಯಷ್ಟೇ ಆಗಿರದೇ, ಈ ಕರಾಳ ಕಥನದ ಭಾಗವಾಗಿ ಅಧಿಕೃತವಾಗಿ 30,000 ಕ್ಕೂ ಹೆಚ್ಚು ಹೆಣ್ಣುಮಕ್ಕಳು ಸಿಲುಕಿಕೊಂಡಿದ್ದರೆ, ಅನಧಿಕೃತವಾಗಿ 50,000 ಕ್ಕೂ ಹೆಚ್ಚು ಹಿಂದೂ ಮತ್ತು ಕ್ರಿಶ್ಚಿಯನ್ ಹೆಣ್ಣುಮಕ್ಕಳು ಈ ಮೃತ್ಯು ಕೂಪಕ್ಕೆ ಬಿದ್ದು ಈಗ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ಎಂಬ ಲವಲೇಶವೂ ಇಲ್ಲವಾಗಿದೆ. ನಮ್ಮವರು ಸಮಾಜಕ್ಕೆ ಹೆದರುವ ಕಾರಣ ಇದುವರೆವಿಗೂ ಕೇವಲ 800+ ಕೇಸುಗಳು ದಾಖಲಾಗಿದ್ದರೂ, ಅದಕ್ಕೆ ಸೂಕ್ತವಾದ ಸಾಕ್ಷಿಯನ್ನು ಒದಗಿಸಲಾಗದೇ, ತಪ್ಪಿತಸ್ಥರಿಗೆ ಶಿಕ್ಷೆ ಆಗದೇ ಧಿಮ್ಮಾಲೇ ರಂಗ ಎಂದು ಮತ್ತಷ್ಟು ಹೆಣ್ಣುಮಕ್ಕಳನ್ನು ತಮ್ಮ ಮೋಸದ ಜಾಲಕ್ಕೆ ಬೀಳಿಸಿಕೊಳ್ಳುವ ಕಾಯಕದಲ್ಲಿ ನಿರತರಾಗಿರುವುದು ನಿಜಕ್ಕೂ ವಿಷಾಧನೀಯವಾಗಿದೆ.
ಈ ಲವ್ ಜಿಹಾದ್ ಎಂಬ ಕರಾಳ ದಂಧೆ ಕೇವಲ ಕೇರಳದಲ್ಲಿ ಅಷ್ಟೇ ಇರದೇ, ಕರ್ನಾಟಕದ ಕರಾವಳಿ ಮತ್ತು ತಮಿಳುನಾಡಿನಲ್ಲೂ ವ್ಯಾಪಕವಾಗಿ ಹರಡಿಕೊಂಡಿದ್ದು, ಸ್ಥಳೀಯ ಮೌಲ್ವಿಗಳು ಮತ್ತು ಮತಾಂಧ ಯುವಕರುಗಳು ದೇಶದ ಆಂತರಿಕೆ ಭಧ್ರತೆಯನ್ನೂ ಬದಿಗೊತ್ತಿ, ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳ ಜೊತೆ ಸಂಪರ್ಕ ಹೊಂದಿ ಇಡೀ ಜಗತ್ತನ್ನೇ ಮುಸ್ಲಿಂ ಮಯ ಮಾಡುವ ಹುನ್ನಾರದಲ್ಲಿರುವುದು ನಿಜಕ್ಕೂ ಆಘಾತಕಾರಿಯಾಗಿದೆ. ಇಂತಹ ಕಷ್ಟಕರವಾದ ಮತ್ತು ಬಹುದೀರ್ಘವಾದ ಪ್ರಕ್ರಿಯೆಯನ್ನು ಬಹಳ ವ್ಯವಸ್ಥಿತವಾಗಿ ಮತ್ತು ಅಷ್ಟೇ ನಿಶ್ಯಬ್ದವಾಗಿ ಮಾಡುವ ಜಾಲ ನಮ್ಮ ಅಕ್ಕಪಕ್ಕದಲ್ಲೇ ನಮ್ಮ ಮನೆಯ ಮಕ್ಕಳನ್ನೇ ಬಲಿ ತೆಗೆದುಕೊಳ್ಳುವ ಮುನ್ನಾ ಇದರ ಬಗ್ಗೆ ಸ್ವಲ್ಪ ಎಚ್ಚರ ವಹಿಸಲೇ ಬೇಕಾಗಿರುವುದು ಪ್ರತಿಯೊಬ್ಬ ಭಾರತೀಯರ ಆದ್ಯ ಕರ್ತವ್ಯವೇ ಆಗಿದೆ.
ಈ ಸಿನಿಮಾ ಮುಗಿದ ನಂತರ ನಮ್ಮೊಡನೆಯೇ ಇದ್ದ ಇಷ್ಟು ನಿರ್ಭಿಡೆಯಾಗಿ ಸಿನಿಮಾದ ನಿರ್ದೇಶನ ಮಾಡಿರುವ ನಿರ್ದೇಶಕ ಸುದಿಪ್ತೋ ಸೇನ್ ಅವರ ಧೈರ್ಯವನ್ನು ಮೆಚ್ಚಿ ಚಪ್ಪಾಳೆ ತಟ್ಟಿ ಆವರನ್ನು ಅಭಿನಂದಿಸಿ ಹಸ್ತಲಾಘವ ನೀಡುತ್ತಿದ್ದರೆ, ವಯಕ್ತಿಕವಾಗಿ ಸುಮಾರು ಅರ್ಥಗಂಟೆಗಳವರೆಗೆ ಹೃದಯ ಭಾರವಾಗಿ ಗಂಟಲು ಗದ್ಗತಿವಾಗಿ ಮಾತನಾಡಲು ಆಗದೇ ಮೌನವಾಗಿ ನನಗೇ ಅರಿವಿಲ್ಲದಂತೆಯೇ ಕಣ್ಣೀರು ಸುರಿಸಿದೆ.
ಅಗ್ಗದ ಅತ್ತರಿನ ಘಮಲಿಗೆ ನಮ್ಮ ನೂರಾರು ಹಿಂದೂ ಹೆಣ್ಣು ಮಕ್ಕಳು ಹೇಗೆ ಕಬೂಲ್ ಆಗುತ್ತಿದ್ದಾರೆ ಎನ್ನುವ ಹೃದಯವಿದ್ರಾವಕ ಚಿತ್ರವೇ ಕೇರಳ ಸ್ಟೋರಿ ಯಲ್ಲಿ ಚಿತ್ರತವಾಗಿದ್ದು ಇದನ್ನು ಪ್ರತಿಯೊಂದು ಹೆಣ್ಣು ಮಕ್ಕಳ ಪೋಷಕರು ತಪ್ಪದೇ ತಮ್ಮ ಹೆಣ್ಣು ಮಕ್ಕಳೊಂದಿಗೆ ನೋಡಲೇ ಬೇಕಾದ ಚಿತ್ರ. ಹಿಂದೂ ಉಳಿದರೆ ದೇಶ ಉಳಿದೀತು. ಎಂದು ಟ್ರೈಲರ್ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡಾಗ ಬಹುತೇಕ ಸೂಕ್ಷ್ಮಮತಿಗಳು ಸ್ಪಂದಿಸಿದರೆ, ಯಥಾಪ್ರಕಾರ, ಸೈದ್ಧಾಂತಿಕವಾಗಿ ಈ ದೇಶವನ್ನೂ ಮತ್ತು ಇಲ್ಲಿನ ಸಂಸ್ಕೃತಿಯನ್ನು ವಿರೋಧಿಸುವ ಮಂದಿ ಇದೊಂದು ಕಟ್ಟುಕಥೆ. ಚುನಾವಣಾ ಸಮಯದಲ್ಲಿ ಇದೊಂದು ಪ್ರಚಾರದ ತಂತ್ರ. ನಮ್ಮ ದೇಶ ಮತ್ತು ನಮ್ಮ ರಾಜ್ಯದಲ್ಲಿ ಕೋಮು ಸೌಹಾರ್ಧತೆಗೆ ಧಕ್ಕೆ ತರದಿರಿ ಎಂದು ಆಕ್ರೋಶ ಭರಿತರಾಗಿ ಮುಗಿಬಿದ್ದಾಗ, ಇವರ ಮನೆಯ ಹೆಣ್ಣುಮಕ್ಕಳಿಗೆ ಹೀಗೆ ಆಗಿದ್ದರೆ ಸುಮ್ಮನಿರುತ್ತಿದ್ದರೇ? ಎಂದು ಎನಿಸಿತಾದರೂ, ಬಳಿಕ ನಮ್ಮ ದೇಶದ ಯಾವುದೇ ಭಾಗದ ಯಾವುದೇ ಜಾತೀ, ಧರ್ಮದ ಮಕ್ಕಳೂ ಇದರ ಭಾಗವಾಗದಿರಲಿ ಎಂದಿನಿಸಿತು.
ನೆನಪಿರಲಿ, ಅಲ್ಲಾವುದ್ದೀನ್ ಖಿಲ್ಜಿಯ ಕೇವಲ ಬೆರಳಣಿಕೆಯ ಸೈನಿಕರು ನಳಂದಾ ವಿಶ್ವವಿದ್ಯಾನಿಲಯದ ಮೇಲೆ ಧಾಳಿ ನಡೆಸಿದಾಗ, ಇದು ವಯಕ್ತಿಯ ಧಾಳಿ ಎಂದು 10,000 ವಿದ್ಯಾರ್ಥಿಗಳು ಮತ್ತು 3,000 ಶಿಕ್ಷಕರು ಸುಮ್ಮನಾಗಿದ್ದ ಕಾರಣದಿಂದಲೇ ಇಡೀ ನಳಂದ ವಿಶ್ವವಿದ್ಯಾನಿಲಯಕ್ಕೆ ಬೆಂಕಿ ಹಾಕಿದ ಮತಾಂಧರು ಸುಮಾರು ಆರು ತಿಂಗಳುಗಳ ಕಾಲ ಕೋಟ್ಯಾಂತರ ಗ್ರಂಥಗಳ ನಾಶಕ್ಕೆ ಕಾರಣರಾದರು. ಹಾಗಾಗಿ ಇಂದಿನ ಮಕ್ಕಳೇ ನಾಳಿನ ಭವ್ಯ ಭಾರತದ ಪ್ರಜೆಗಳು ಎಂಬುದನ್ನು ಮನದಲ್ಲಿಟ್ಟುಕೊಂಡು ದಯವಿಟ್ಟು ನಮ್ಮ ಮಕ್ಕಳಿಗೆ ಚಿಕ್ಕಂದಿನಿಂದಲೂ ನಮ್ಮ ಧರ್ಮ, ಆಚಾರ ವಿಚಾರ, ಸಂಸ್ಕಾರ ಸಂಸ್ಕೃತಿ, ನಮ್ಮ ದೇವರುಗಳ ಬಗ್ಗೆ ಸೂಕ್ತವಾದ ಮಾಹಿತಿಯನ್ನು ನೀಡಿದಾಗಲೇ ಇಂತಹ ಲವ್ ಜಿಹಾದ್ ನನ್ನು ಮಟ್ಟಹಾಕಬಹುದಾಗಿದೆ
ಧರ್ಮ ಉಳಿದರೆ ದೇಶ ಉಳಿದೀತು. ದೇಶ ಉಳಿದರೆ ನಾವು ಉಳಿದೇವು. ಧರ್ಮೋ ರಕ್ಷತಿ ರಕ್ಷಿತಃ
ಏನಂತೀರೀ?
ಸೃಷ್ಟಿಕರ್ತ ಉಮಾಸುತ
ಚಿಕ್ಕಂದಿನಿಂದಲೂ ನಮ್ಮ ತಾಯಿ ನಿನ್ನದು ಹೆಂಗರುಳು ಪರರ ನೋವನ್ನು ನೋಡಿ ಭರಿಸುವ ಶಕ್ತಿಯಿಲ್ಲ ಎನ್ನುತ್ತಿದ್ದರು. ಕಾಲೇಜು ನಂತರದ ದಿನಗಳಲ್ಲಿ ಅಪಘಾತದಲ್ಲಿ ಗಾಯಗೊಂಡವನನ್ನು ಕಂಡಾಗ ಮತ್ತು ಅಂತ ಚಿತ್ರದ ಉಗುರು ಕೀಳುವ ದೃಶ್ಯ ನೋಡಿದಾಗ ಕಣ್ಣು ಕತ್ತಲು ಬಂದು ಬಿದ್ದಿದ್ದು ಉಂಟು. ಈ ಕಾರಣದಿಂದ ಕಾಶ್ಮೀರ್ ಫೈಲ್ ಅಥವಾ ಕೇರಳ ಸ್ಟೋರಿ ಚಿತ್ರಗಳನ್ನು ನಾನು ನೋಡುವ ಪ್ರಶ್ನೆಯೇ ಇಲ್ಲ.
ನಮ್ಮ ಹಿಂದೂ ಹೆಣ್ಣುಮಕ್ಕಳು ಪ್ರಜ್ಞಾವಂತರಾಗಿರಲಿ ಎಂದು ನನ್ನ ಹಾರೈಕೆ. ಪ್ರತಿಯೊಬ್ಬ ಹಿಂದುವೂ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಮತ್ತು ಸಂಸ್ಕಾರ ಕೊಡಬೇಕು.
LikeLiked by 1 person