ಶ್ರೀ ರಾಮಾನುಜಾಚಾರ್ಯರು

ಎಂಟನೇ ಶತಮಾನದ ಅಂತ್ಯ ಮತ್ತು ಒಂಬತ್ತನೇ ಶತಮಾನದಲ್ಲಿ ವಿವಿಧ ಧರ್ಮಗಳ ಸೆಳೆತಕ್ಕೆ ಸಿಕ್ಕಿ ಸನಾತನ ಧರ್ಮ ಆವಸಾನದ ಅಂಚಿನಲ್ಲಿದ್ದಾಗ ಹಿಂದೂ ಧರ್ಮದ ಪುನರುತ್ಥಾನದ ಆಶಾಕಿರಣವಾಗಿ ಶ್ರೀ ಶಂಕರಾಚಾರ್ಯರ ಆಗಮನವಾಗಿ ಅನ್ಯಧರ್ಮೀಯರನ್ನು ಸಮರ್ಥವಾಗಿ ವಾದದಲ್ಲಿ ಸೋಲಿಸಿ ತಮ್ಮ ಅಹಂ ಬ್ರಹ್ಮಾಸ್ಮಿ ಎನ್ನುವ ಅದ್ವೈತ ತತ್ವದ ಮೂಲಕ ಸನಾತನ ಧರ್ಮವನ್ನು ಎತ್ತಿಹಿಡಿದ ಪರಂಪರೆಯನ್ನು 10 ಮತ್ತು 11ನೇ ಶತಮಾನದಲ್ಲಿ ಮುಂದುವರಿಸಿದ ಕೀರ್ತಿ ಶ್ರೀ ರಾಮಾನುಜಾಚಾರ್ಯರಿಗೆ ಸಲ್ಲುತ್ತದೆ. ಈ ಇಬ್ಬರು ಮಹಾನ್ ಆಚಾರ್ಯರ ನಡುವೆ ಹಲವಾರು ಸಾಮ್ಯಗಳಿದ್ದು ಮೊದಲನೆಯದಾಗಿ ಈ ಇಬ್ಬರೂ… Read More ಶ್ರೀ ರಾಮಾನುಜಾಚಾರ್ಯರು

ಆದಿ ಗುರು‌ ಶ್ರೀ ಶಂಕರಾಚಾರ್ಯರು

ಅದು ಕ್ರಿ.ಶ, ಏಳನೇ ಶತಮಾನ. ಭಾರತದ ಸನಾತನ ಧರ್ಮಕ್ಕೆ ಅತ್ಯಂತ ಕ್ಲಿಷ್ಟಕರವಾದ ಸಂದಿಗ್ಧ ಪರಿಸ್ಥಿತಿಯಿದ್ದ ಕಾಲವದು. ಒಂದು ಕಡೆ ಅಹಿಂಸಾ ಪರಮೋಧರ್ಮಃ ಎಂದು ಹೇಳುತ್ತಲೇ ಬೌದ್ಧ ಧರ್ಮ ಭಾರತದಲ್ಲೆಲ್ಲಾ ಅತ್ಯಂತ ವೇಗವಾಗಿ ಹರಡಿದ್ದಲ್ಲದೇ ವಿದೇಶಗಳಿಗೂ ತನ್ನ ಅನುಯಾಯಿಗಳನ್ನು ಕಳುಹಿಸಿಯಾಗಿತ್ತು. ಸನಾತನ ಧರ್ಮದ ಕಟ್ಟುಪಾಡು ಮತ್ತು ಅತೀಯಾದ ಆಚಾರ ಮಡಿ ಹುಡಿಗಳಿಂದ ಬೇಸತ್ತವರು ಬೌದ್ಧ ದರ್ಮದ ಕಡೆ ಆಕರ್ಷಿತರಾತೊಡಗಿದ್ದರೆ ಮತ್ತೊಂದೆಡೆ, ದೇವರು ಎಂಬುವುದೇ ಇಲ್ಲ ಅದೆಲ್ಲಾ ಕಟ್ಟು ಕಥೆ ಎನ್ನುವಂತಹ ಚಾರ್ವಾಕರ ಹಾವಳಿ. ನಮ್ಮ ಸನಾತನ ಧರ್ಮಕ್ಕೆ ವೇದವೇ… Read More ಆದಿ ಗುರು‌ ಶ್ರೀ ಶಂಕರಾಚಾರ್ಯರು

ಕೂರೋನ ಇನ್ನೆಷ್ಟೂ ಅಂತಾ ಮನೆಯೊಳಗೇ ಕೂರೋಣಾ?

ಚೀನಾದ ದೇಶದ ವುಹಾನ್ ಪಟ್ಟಣದಲ್ಲಿ ಬಾವಲಿಗಳಿಂದ ಮೊದಲು ಕಾಣಿಸಿಕೊಂಡ ಕೂರೋನ ಎಂಬ ಮಹಾಮಾರಿ ಸೋಂಕು ನೋಡ ನೋಡುತ್ತಿದ್ದಂತೆಯೇ ಕೆಲವೇ ಕೆಲವು ದಿನಗಳಲ್ಲಿ ಪ್ರಪಂಚಾದ್ಯಂತ ತನ್ನ ಕಬಂಧ ಬಾಹುಗಳನ್ನು ಚಾಚಿ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಈ ಸೋಂಕು ನಮ್ಮ ದೇಶದಲ್ಲಿ ಹರಡಬಾರದೆಂಬ ಮುಂಜಾಗೃತಾ ಕ್ರಮವಾಗಿ ಆರಂಭದಲ್ಲಿ ಏಪ್ರಿಲ್ 14 ರವಗೆ ದೇಶಾದ್ಯಂತ ಲಾಕ್ ಡೌನ್ ಮಾಡಲಾಗಿ, ಪರಿಸ್ಥಿತಿ ಸುಧಾರಿಸದ ಕಾರಣ ಅದನ್ನು ಎರಡನೆಯ ಬಾರಿಗೆ ಮೇ 3 ರವರೆಗೆ ವಿಸ್ತರಿಸಲಾಗಿದೆ. ಈಗ ಬಲ್ಲ… Read More ಕೂರೋನ ಇನ್ನೆಷ್ಟೂ ಅಂತಾ ಮನೆಯೊಳಗೇ ಕೂರೋಣಾ?

ಸಿಹಿ ಮತ್ತು ಖಾರ ಹುಗ್ಗಿ (ಪೊಂಗಲ್)

ದಕ್ಷಿಣ ಭಾರತೀಯರಿಗೆ ಅದರಲ್ಲೂ ಕರ್ನಾಟಕ, ತಮಿಳು ನಾಡು ಮತ್ತು  ಅವಿಭಜಿತ  ಆಂಧ್ರ ಪ್ರದೇಶದವರ ಬಹುತೇಕ ಸಭೆ ಸಮಾರಂಭಗಳಿರಲಿ ಅಥವಾ ದೇವಸ್ಥಾನಗಳಲ್ಲಿ ಪ್ರಸಾದ ರೂಪದಲ್ಲಿ ಹುಗ್ಗಿಯನ್ನು ಬಳೆಸಲಾಗುತ್ತದೆ.  ಧನುರ್ಮಾಸದಲ್ಲಂತೂ ಇಡೀ ಒಂದು ತಿಂಗಳು ಪೂರ್ತಿ ಬಹುತೇಕ ಎಲ್ಲಾ ದೇವಸ್ಥಾನಗಳಲ್ಲಿಯೂ ಸಿಹಿ ಇಲ್ಲವೇ ಖಾರ  ಹುಗ್ಗಿ (ಪೊಂಗಲ್)ಯದೇ ಭರಾಟೆ. ಇಂತಹ ಸಿಹಿ ಮತ್ತು  ಖಾರ  ಹುಗ್ಗಿ (ಪೊಂಗಲ್)ಯನ್ನು  ಸಾಂಪ್ರದಾಯಕವಾಗಿ ಮನೆಯಲ್ಲಿ ಹೇಗೆ ತಯಾರಿಸಬಹುದು ಎಂಬುದನ್ನು ತೋರಿಸಿಕೊಡುತ್ತಿದ್ದೇವೆ. ಸುಮಾರು ಐದಾರು ಜನರಿಗೆ ಸಾಕಾಗುವಷ್ಟು ತಯಾರಿಸಲು ಬೇಕಾಗುವ ಸಾಮಗ್ರಿಗಳು ಖಾರ  ಹುಗ್ಗಿ ತಯಾರಿಸಲು… Read More ಸಿಹಿ ಮತ್ತು ಖಾರ ಹುಗ್ಗಿ (ಪೊಂಗಲ್)

ಭಜರಂಗಿ ಮಹೇಂದ್ರ ಕುಮಾರ್

ಅದು ತೊಂಭತ್ತರ ಕಡೆಯ ದಿನಗಳು ಮತ್ತು ಎರಡು ಸಾವಿರ ಇಸ್ವಿಯ ಆರಂಭದ ದಿನಗಳು. ರಾಜ್ಯದಲ್ಲಿ ಭಜರಂಗ ದಳ ಉಚ್ಛ್ರಾಯ ಸ್ಥಿತಿಯಲ್ಲಿದ್ದ ದಿನಗಳು. ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಲಕ್ಷಾಂತರ ಯುವಕರು ಭಜರಂಗ ದಳಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು. ಅಂತಹ ಯುವಕರಲ್ಲಿ ಚಿಕ್ಕಮಗಳೂರಿನ ಮೂಲದ ಮಹೇಂದ್ರ ಕುಮಾರು ಅತ್ಯಂತ ವೇಗವಾಗಿ ಪ್ರವರ್ಧಮಾನಕ್ಕೆ ಬಂದಂತಹ ಯುವಕ. ತನ್ನ ನಡೆ ನುಡಿ, ವಾಗ್ಪಟುತ್ವತೆ, ಪ್ರಖರ ಹಿಂದುತ್ವ ಮತ್ತು ಉಗ್ರ ಹೋರಾಟದ ಫಲವಾಗಿ ಮಹೇಂದ್ರ ಕುಮಾರ್ ನೋಡ ನೋಡುತ್ತಿದ್ದಂತೆಯೇ ಬಜರಂಗದ ರಾಜ್ಯ ಸಂಚಾಲಕರಾಗಿ ಹೋದರು.… Read More ಭಜರಂಗಿ ಮಹೇಂದ್ರ ಕುಮಾರ್

ಪಡ್ಡು / ಗುಳಿಯಪ್ಪ/ ಗುಂತ ಪೊಂಗಣಾಲು

ಬೆಳಿಗ್ಗೆ ತಿಂಡಿಗೆ ದೋಸೆ ಮಾಡಿರ್ತೀರೀ. ದೋಸೆ ಹಿಟ್ಟು ಇನ್ನೂ ಹಾಗೆಯೇ ಉಳಿದಿರುತ್ತದೆ. ಸಂಜೆನೂ  ಅದೇ ಹಿಟ್ಟಿನಲ್ಲಿ ದೋಸೇ ಮಾಡಿದ್ರೇ ಮನೆಯವರೆಲ್ಲರೂ  ಬೆಳಿಗ್ಗೆನೂ ದೋಸೇ ಈಗಲೂ ದೋಸೇನಾ ಅಂತಾ ತಿನ್ನಲು ಮೂಗು ಮುರಿತಾರೆ.  ಹಾಗಂತ ಈಗಿನ ಪರಿಸ್ಥಿತಿಯಲ್ಲಿ  ಅ ದೋಸೆ ಹಿಟ್ಟನ್ನು ಬಿಸಾಡಲೂ ಮನಸ್ಸು ಬರುವುದಿಲ್ಲ.  ಅದಕ್ಕೇ ಅಂತಾನೇ, ಅದೇ ದೋಸೆ ಹಿಟ್ಟಿನಲ್ಲಿ ರುಚಿಯಾದ ಮತ್ತು ಆಕರ್ಷಣೀಯವಾದ ಪಡ್ಡು/ ಗುಳಿಯಪ್ಪ/  ಗುಂತ ಪೊಂಗಣಾಲು ಮಾಡುವ ವಿಧಾನವನ್ನು ತಿಳಿಸಿಕೊಡುತ್ತಿದ್ದೇವೆ. ಸುಮಾರು ಐದಾರು ಜನರಿಗೆ ಸಾಕಾಗುವಷ್ಟು  ಪಡ್ಡು/ ಗುಳಿಯಪ್ಪ/  ಗುಂತ ಪೊಂಗಣಾಲು… Read More ಪಡ್ಡು / ಗುಳಿಯಪ್ಪ/ ಗುಂತ ಪೊಂಗಣಾಲು

ವೆಜ್ ಮಂಚೂರಿಯನ್

ವೆಜ್ ಮಂಚೂರಿಯನ್. ಇದು ಈಶಾನ್ಯ ಭಾರತ ಮತ್ತು ಚೀನಿಯರ ಸಾಂಪ್ರದಾಯಿಕ ಅಡುಗೆಯಾಗಿದೆ.   ಸರಳ ತರಕಾರಿಗಳನ್ನು ಬಳೆಸಿಕೊಂಡು ಅತ್ಯಂತ ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ತಿನಿಸಾಗಿದೆ.   ಈಗಂತೂ ಭಾರತದ್ಯಂತ ಸಂಜೆ ಹೊತ್ತಿನಲ್ಲಿ ತರ ತರಹದ ಮಂಚೂರಿಯನ್ ಗಳು ಜನಪ್ರಿಯವಾದ ರಸ್ತೆ ಬದಿಯ ಆಹಾರವಾಗಿ ಎಲ್ಲರ ನಾಲಿಗೆ ಬರವನ್ನು ತಣಿಸುತ್ತಿದೆ. ವೆಜ್ ಮಂಚೂರಿಯನ್ ತಯಾರಿಸಲು ಬೇಕಾಗುವ ಸಾಮಗ್ರಿಗಳು ಸಣ್ಣಗೆ ಕತ್ತರಿಸಿದ ಎಲೇ ಕೋಸು – 3 ಕಪ್ ಸಣ್ಣಗೆ ಕತ್ತರಿಸಿದ ಕ್ಯಾರೆಟ್ – 2 ಕಪ್ ಸಣ್ಣಗೆ ಕತ್ತರಿಸಿದ… Read More ವೆಜ್ ಮಂಚೂರಿಯನ್

ಕೈಂಕರ್ಯ

ಸೇವೆ ಎಂದರೆ ಕೇವಲ ಹಣದಿಂದ ಮಾತ್ರವೇ ಮಾಡಬೇಕು ಎಂದೇನಿಲ್ಲ ಮತ್ತು ಮಾಡಿದ ಸೇವೆಯನ್ನು ಜಗಜ್ಜಾಹೀರಾತು ಮಾಡುವ ಅವಶ್ಯಕತೆಯೂ ಇಲ್ಲ. ಇಲ್ಲಿ ಯಾರು? ಏನೇನು? ಎಷ್ಟೆಷ್ಟು? ಹೇಗೆ ಸೇವೆ ಮಾಡಿದರು ಅನ್ನೋದರ ಕುರಿತು ಚರ್ಚಿಸಿದರೆ, ಅವರು ಮಾಡಿದ ಸೇವೆಗೆ ಅಪಮಾನ ಮಾಡಿತಂತೆ. ಅವರವರು ಮಾಡಿದ ಸೇವೆ ಅವರಿಗೇ ಮತ್ತು ಭಗವಂತನಿಗೆ ಗೊತ್ತಾದರೆ ಸಾಕು. ಬಲಗೈಯಲ್ಲಿ ಕೊಟ್ಟದ್ದು ಎಡಗೈಗೂ ತಿಳಿಯದ ಹಾಗೆ ಮಾಡಿದರೇನೇ ಕೈಂಕರ್ಯ/ಸೇವೆ ಅನ್ನೋದು.… Read More ಕೈಂಕರ್ಯ

ಇತ್ತೀಚಿನ ದಿನಗಳಲ್ಲಿ ಭಾರತೀಯರು ಮೋದಿಯವರನ್ನು ಮತ್ತು ಬಿಜೆಪಿಯನ್ನು ಇಷ್ಟ ಪಡುತ್ತಿಲ್ಲವೇ?

ಇತ್ತೀಚಿನ ದಿನಗಳಲ್ಲಿ ಬಹುಪಾಲು ಭಾರತೀಯರು ಶ್ರೀ ನರೇಂದ್ರ ಮೋದಿಯನ್ನು ಇಷ್ಟಪಡುತ್ತಿಲ್ಲ ಎಂದು ಖಡಾ ಖಂಡಿತವಾಗಿ ಹೇಳಲಾಗುವುದಿಲ್ಲವಾದರೂ, ಭಾರತೀಯರು ಬಿಜೆಪಿಯಿಂದ ಸ್ವಲ್ಪ ಅಂತರವನ್ನು ಕಾಪಾಡಿಕೊಳ್ಳಲು ಬಯಸುತ್ತಿದ್ದಾರೆ ಎಂದು ಮಾತ್ರ ಹೇಳಬಲ್ಲೆ. ಅದಕ್ಕೆ ಉತ್ತರವನ್ನು ಹುಡುಕುವುದು ತುಂಬಾ ಸುಲಭ. ಪ್ರಧಾನಿಗಳಾಗಿ ಮೋದಿಯವರ ಕಾರ್ಯತತ್ಪರತೆಯನ್ನು ದೇಶ ವಿದೇಶಗಳಲ್ಲಿ ಇರುವ ಕೋಟ್ಯಾಂತರ ಭಾರತೀಯರು ಬಹಳವಾಗಿ ಇಷ್ಟು ಪಡುತ್ತಾರೆ. ದಿನದ ಹದಿನೆಂಟು ಗಂಟೆಗಳ ಕಾಲ ದೇಶಕ್ಕಾಗಿಯೇ ನಿಸ್ವಾರ್ಥವಾಗಿ ದುಡಿಯುತ್ತಿರುವುದನ್ನು ಜನರು ಗೌರವಿಸುತ್ತಾರೆ. ನಿಜವಾಗಿಯೂ ಮೋದಿಯವರು ಪ್ರಧಾನಿಗಳಾದ ಮೇಲೆ ನಮ್ಮ ವಿದೇಶೀ ಬಾಂಧವ್ಯ ಬಹಳಷ್ಟು ಸುಧಾರಣೆಯಾಗಿದೆ.… Read More ಇತ್ತೀಚಿನ ದಿನಗಳಲ್ಲಿ ಭಾರತೀಯರು ಮೋದಿಯವರನ್ನು ಮತ್ತು ಬಿಜೆಪಿಯನ್ನು ಇಷ್ಟ ಪಡುತ್ತಿಲ್ಲವೇ?