ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ

ಏಳು ಕೋಟಿ ಕನ್ನಡಿಗರು ಇರುವ ಈ ಕರ್ನಾಟಕದ ಕನ್ನಡ ಪರ ಹೋರಾಟಗಾರರು ಪರಸ್ಪರ ನಂಬಿಕೆ, ವಿಶ್ವಾಸ ಮತ್ತು ಹೊಂದಾಣಿಕೆಗಳೇ ಇಲ್ಲದೇ, ತಮ್ಮ ತಮ್ಮ ಅಹಂ ಮತ್ತು ಅಸ್ತಿತ್ವಕ್ಕಾಗಿ ಪದೇ ಪದೇ ಕರ್ನಾಟಕ ಬಂದ್ ಕರೆ ನೀಡುವುದು ಎಷ್ಟು ಸರಿ? ಈ ರೀತಿಯ ಬಂದ್ ನಿಂದ ಸಾಧಿಸುವುದಾದರೂ ಏನು?… Read More ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ

ಸುಗ್ಗಿಯ ಸಮಯದಲ್ಲಿ ಶ್ರೀನಿವಾಸನ ಸ್ಮರಣೆ -3

ಕಳೆದ ಎರಡು ಸಂಚಿಕೆಗಳಲ್ಲಿ ನಮ್ಮ ಪಿಂಟು ಅರ್ಥಾತ್ ಶ್ರೀನಿವಾಸನ ಬಾಲ್ಯ, ಕುಟುಂಬ ಮತ್ತು ಅವನ ಯೌವನದ ಆಟಪಾಠಗಳ ಬಗ್ಗೆ ತಿಳಿದುಕೊಂಡಿದ್ದೆವು ಈ ಸಂಚಿಕೆಯಲ್ಲಿ ಅವನ ವಿದ್ಯಾಭ್ಯಾಸದ ನಂತರದ ಅವನ ಜೀವನದ ಪ್ರಮುಖ ಘಟ್ಟದ ಬಗ್ಗೆ ತಿಳಿಯೋಣ. ಈ ಮೊದಲೇ ತಿಳಿಸಿದಂತೆ ನಮ್ಮ ಪಿಂಟೂವಿನ ಅಪ್ಪಾ ಮತ್ತು ಅಮ್ಮಾ ಇಬ್ಬರೂ ಕೇಂದ್ರಸರ್ಕಾರಿ ಕೆಲಸದಲ್ಲಿ ಇದ್ದದ್ದರಿಂದ ಆರ್ಥಿಕವಾಗಿ ತಕ್ಕ ಮಟ್ಟಿಗೆ ಇದ್ದರೂ ಸಹಾ, ಉದ್ಯೋಗಂ ಪುರುಷ ಲಕ್ಷಣಂ ಎನ್ನುವಂತೆ ನಮ್ಮ ಪಿಂಟು ಸಹಾ ತನ್ನ ಡಿಪ್ಲಮೋ ಕೋರ್ಸ್ ಮುಗಿಸಿದ ಮೇಲೆ… Read More ಸುಗ್ಗಿಯ ಸಮಯದಲ್ಲಿ ಶ್ರೀನಿವಾಸನ ಸ್ಮರಣೆ -3

ಅನಿಲ್ ಕುಂಬ್ಲೆ – 10/10

1998-99 ರಲ್ಲಿ ಭಾರತಕ್ಕೆ ಸಾಂಪ್ರದಾಯಿಕ ಎದುರಾಳಿ ಪಾಕೀಸ್ಥಾನದ ಕ್ರಿಕೆಟ್ ತಂಡ ಟೆಸ್ಟ್ ಪಂದ್ಯಾವಳಿಯನ್ನು ಆಡಲು ಬಂದಿತ್ತು ಚೆನ್ನೈನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಚೆನ್ನೈನಲ್ಲಿ ಸಚಿನ್ ‌ತೆಂಡೂಲ್ಕರ್ ಅವರ ಕೆಚ್ಚೆದೆಯ ಹೋರಾಟದ ಹೊರತಾಗಿಯೂ 12 ರನ್‌ಗಳಿಂದ ಪಂದ್ಯವನ್ನು ಸೋತು ಸರಣಿಯಲ್ಲಿ 1-0 ಯ ಹಿನ್ನಡೆಯಲ್ಲಿದ ಕಾರಣ ದೆಹಲಿಯ ಎರಡನೆಯ ಟೆಸ್ಟ್ ಪಂದ್ಯವನ್ನು ಗೆದ್ದು ಸರಣಿಯನ್ನು ಸಮ ಸಮ ಮಾಡಿಕೊಳ್ಳಲೇ ಬೇಕು ಎಂಬ ಧೃಢ ನಿರ್ಧಾರದಿಂದ ಕಣಕ್ಕೆ ಇಳಿದಿತ್ತು.. ಹಾಗಾಗಿ ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಈ… Read More ಅನಿಲ್ ಕುಂಬ್ಲೆ – 10/10

ಬೇಡುವ ಕೈಗಳ ಹಿಂದಿನ ಕಹಿ ಸತ್ಯ

ಶಂಕರ ಮೊನ್ನೆ ವಾರಾಂತ್ಯದಲ್ಲಿ ಮಡದಿಯೊಂದಿಗೆ ಮಲ್ಲೇಶ್ವರಂಗೆ ಹೋಗಿದ್ದ. ಸಂಜೆಗತ್ತಲು ವಾಹನ ನಿಲ್ಲಿಸಲು ಸ್ಥಳ ಸಿಗದೇ ಪರದಾಡುತ್ತಿದ್ದಾಗ ಯಾರೋ ಒಬ್ಬರು ವಾಹನ ತೆಗೆಯುತ್ತಿದ್ದದ್ದನ್ನು ನೋಡಿ ಮರುಭೂಮಿಯಲ್ಲಿ ನೀರುವ ಸಿಗುವ ಓಯಸಿಸ್ ನಂತೆ ಕಂಡು ಕೂಡಲೇ ಆಲ್ಲಿಗೆ ಹೋಗಿ ವಾಹನ ನಿಲ್ಲಿಸುತ್ತಿದ್ದಾಗ ಹಿಂದುಗಡೆಯಿಂದ ಯಾರೋ ಕೈ ಚಾಚಿದಂತಾಯಿತು. ಬೆನ್ನ ಹಿಂದ್ದಿದ್ದರಿಂದ ಆ ವ್ಯಕ್ತಿ ಯಾರು ಎಂದು ಸ್ಪಷ್ಟವಾಗಿ ತಿಳಿಯದಿದ್ದರೂ ಕೈಗಳಲ್ಲಿದ್ದ ಚಿಲ್ಲರೇ ಕಾಸು ಮತ್ತು ನಡುಗುತ್ತಿದ್ದ ಕೈಗಳಿಂದಾಗಿ ಯಾರೋ ವಯೋವೃದ್ಧರು ಹೊಟ್ಟೆಯ ಪಾಡಿಗೆ ಭಿಕ್ಷೇ ಬೇಡುತ್ತಿದ್ದಾರೆ ಎಂದು ತಿಳಿದ ಶಂಕರ,… Read More ಬೇಡುವ ಕೈಗಳ ಹಿಂದಿನ ಕಹಿ ಸತ್ಯ

ದೆಹಲಿ ಚುನಾವಣಾ ಪೂರ್ವ ಸಮೀಕ್ಷೆ

ಈ ಬಾರಿಯ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಯಾರು ಗೆಲ್ಲಬಹುದು ಎಂದು ಎರಡು ಮೂರು ವಾರಗಳ ಹಿಂದೆ ಕೇಳಿದ್ದರೆ, ಕೇಜ್ರಿವಾಲ್ ನಾಯಕತ್ವದ ಎಎಪಿ ಅತ್ಯಂತ ಸುಲಭವಾಗಿ ಮತ್ತೊಮ್ಮೆ ವಿಜಯಶಾಲಿಯಾಗುತ್ತದೆ ಎಂದು ಹೇಳಬಹುತಾಗಿತ್ತು. ಕಳೆದ ಬಾರಿಯಂತೆ ಅಭೂತಪೂರ್ವ ಯಶಸ್ಸಲ್ಲದಿದ್ದರೂ 70ಸೀಟಿನಲ್ಲಿ 45-55 ಮಂದಿ ಶಾಸಕರು ಗೆದ್ದು ಬಹಳ ಸುಲಭವಾಗಿ ಅಧಿಕಾರಕ್ಕೆ ಮತ್ತೊಮ್ಮೆ ಬರುತ್ತಾರೆ ಎಂದು ಹೇಳಬಹುದಾಗಿತ್ತು. ಆದರೆ ಕಳೆದ ಒಂದು ವಾರದಲ್ಲಿ ಈ ಚಿತ್ರ ಸಂಪೂರ್ಣವಾಗಿ ಬದಲಾಗಿ ಹೋಗಿ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಮತ್ತು ಎಎಪಿ ನಡುವೆ 50:50 ಆಗಿದೆ… Read More ದೆಹಲಿ ಚುನಾವಣಾ ಪೂರ್ವ ಸಮೀಕ್ಷೆ

ಗಢ ಆಲಾ ಪಣ ಸಿಂಹ ಗೇಲಾ ಸಿಂಹಗಡ ಕದನ

ಪ್ರಪಂಚಾದ್ಯಂತ ಇರುವ ಎಲ್ಲಾ ದೇಶಗಳ ಸೈನ್ಯಗಳಿಗೆ ಹೋಲಿಸಿದಲ್ಲಿ ಭಾರತದ ಮಿಲಿಟರಿ ಶಕ್ತಿ ಅತ್ಯಂತ ಶಕ್ತಿಶಾಲಿ ಮತ್ತು ಪ್ರಭಾವಶಾಲಿ ಎಂದೇ ಹೆಸರುವಾಸಿಯಾಗಿದೆ. ಇತ್ತೀಚಿನ ಸರ್ಜಿಕಲ್ ಸ್ಟ್ರೈಕ್ ಮಾಡಿದ ಮೇಲಂತೂ ಆ ನಂಬಿಕೆ ಇನ್ನೂ ಹೆಚ್ಚಾಗಿದೆ. ಆದರೆ ಇಂದಿಗೆ 350 ವರ್ಷಗಳ ಹಿಂದೆ ಯಾವುದೇ ರೀತಿಯ ಆಧುನಿಕ ಶಸ್ತ್ರಾಸ್ತ್ರಗಳಿಲ್ಲದೇ ಕೇವಲ ಕಾಡು ಜನರನ್ನು ಕಟ್ಟಿಕೊಂಡು ಅತೀ ಕಡಿದಾದ ಪ್ರದೇಶದ ಎತ್ತರದಲ್ಲಿದ್ದ ಒಂದು ದೊಡ್ಡ ಕೋಟೆಯಾದ ಸಿಂಹಗಡವನ್ನು ವಶಪಡಿಸಿಕೊಂಡ ಇತಿಹಾಸದ ಮುಂದೇ ಈ ಎಲ್ಲಾ ಮಿಲಿಟರಿ ಕಾರ್ಯಾಚರಣೆಗಳೂ ನಗಣ್ಯವಾಗುತ್ತದೆ ಎಂದರೆ ಅತಿಶಯೋಕ್ತಿಯೇನಲ್ಲ.… Read More ಗಢ ಆಲಾ ಪಣ ಸಿಂಹ ಗೇಲಾ ಸಿಂಹಗಡ ಕದನ

ಥೈಲ್ಯಾಂಡ್ ಪ್ರವಾಸದ ಮಾರ್ಗದರ್ಶಿ/ಕೈಪಿಡಿ

ಕಳೆದ ನವೆಂಬರ್ ನಲ್ಲಿ ನಮ್ಮ 21ನೇ ವಿವಾಹವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಿಕೊಂಡಾಗ ಎಲ್ಲಿಯಾದರೂ ದೂರದ ಪ್ರದೇಶಕ್ಕೆ ಪ್ರವಾಸಕ್ಕೆ ಹೋಗೋಣ ಎಂದು ನಿರ್ಧರಿಸಿದಾಗ ಹಲವಾರು ಪ್ರದೇಶಗಳು ನಮ್ಮ ಮನಸ್ಸಿಗೆ ಬಂದು ಅಂತಿಮವಾಗಿ ಥೈಲ್ಯಾಂಡ್ ದೇಶಕ್ಕೆ ಹೋಗುವಂತೆ ನಿರ್ಧರಿಸಲಾಯಿತು. ಥೈಲ್ಯಾಂಡ್ ಪ್ರವಾಸಕ್ಕೆ ಹೋಗುವ ಬಗೆಗೆ ಒಂದಿಬ್ಬರು ಸ್ನೇಹಿತರನ್ನು ವಿಚಾರಿಸಿದರೆ, ಅವರಿಂದ ಸಕಾರಾತ್ಮಕ ಸ್ಪಂದನೆಗಿಂತ ಒಂದು ರೀತಿಯ ಕುಹಕಾತ್ಮಕ ಸ್ಪಂದನೆಯೇ ಬಂದಿತು. ಈ ವಯಸ್ಸಿನಲ್ಲಿ, ನೀವೂ ಅದೂ ಸಂಸಾರ ಸಮೇತರಾಗಿ ಥೈಲ್ಯಾಂಡಿಗೆ ಹೋಗುವುದು ಉಚಿತವಲ್ಲ. ಅದರಲ್ಲೂ ಸಸ್ಯಹಾರಿಗಳಿಗೆ ಅಲ್ಲಿ ಊಟೋಪಚಾರಗಳು ಸರಿಹೊಂದುವುದಿಲ್ಲ. ಅಲ್ಲಿಯ… Read More ಥೈಲ್ಯಾಂಡ್ ಪ್ರವಾಸದ ಮಾರ್ಗದರ್ಶಿ/ಕೈಪಿಡಿ

ರಥಸಪ್ತಮಿಯ ಅಂಗವಾಗಿ 108 ಸೂರ್ಯನಮಸ್ಕಾರ ಯಜ್ಞ

ಆರೋಗ್ಯಭಾರತಿ ಯಲಹಂಕ ಭಾಗ ಮತ್ತು ಪಂತಜಲಿ ಯೋಗ ಶಾಖೆ ಸಹಯೋಗದಲ್ಲಿ ರಥಸಪ್ತಮಿಯ ಪ್ರಯುಕ್ತವಾಗಿ 108 ಸೂರ್ಯನಮಸ್ಕಾರಗಳ ಯಜ್ಞವನ್ನು ಪ್ರತ್ಯಕ್ಷ ದೇವರಾದ ಸೂರ್ಯನಾರಾಯಣನಿಗೆ ಸಮರ್ಪಿಸುವ ಕಾರ್ಯಕ್ರಮ ಇಂದು ಅತ್ಯಂತ ಯಶಸ್ವಿಯಾಗಿ ನಡೆಯಿತು. ನಿಗಧಿತ ಸಮಯಕ್ಕೆ ಸರಿಯಾಗಿ ದೊಡ್ಡಬೊಮ್ಮಸಂದ್ರದ ಕೆರೆಯಂಗಳದಲ್ಲಿರುವ ಕಲ್ಯಾಣಿಯ ಪ್ರಾಂಗಣಕ್ಕೆ ಬಂದಲ್ಲಿ , ಚುಮು ಚುಮ್ ಚಳಿಯ ವಾತಾವರಣ. ಸುತ್ತಮುತ್ತಲೂ ಮುಂಜಾನೆಯ ಮಬ್ಬುಗತ್ತಲು. ಆರಂಭದಲ್ಲಿ ಕೆಲವೇ ಕೆಲವು ಬೆರಳೆಣಿಕೆಯ ಮಂದಿ ಕೈಕಾಲು ಸಡಿಲಗೊಳಿಸುವ ವ್ಯಾಯಾಮಗಳನ್ನು ಮಾಡಿ, ಧನ್ವಂತ್ರಿ ಮುನಿಗಳಿಗೆ ದೀಪವನ್ನು ಬೆಳಗಿ, ಹೂವಿನ ಮಾಲಾರ್ಪಣೆ ಮಾಡಿ, ಸೂರ್ಯದೇವನ… Read More ರಥಸಪ್ತಮಿಯ ಅಂಗವಾಗಿ 108 ಸೂರ್ಯನಮಸ್ಕಾರ ಯಜ್ಞ

ಸೂರ್ಯದೇವರ ಹುಟ್ಟಿದ ಹಬ್ಬ, ರಥಸಪ್ತಮಿ

ಮಾಘ ಶುಕ್ಲ ಸಪ್ತಮಿಯಂದು ದೇಶಾದ್ಯಂತ ಆಚರಿಸುವ ರಥಸಪ್ತಮಿ ಹಬ್ಬದ ಹಿನ್ನಲೆ, ವೈಶಿಷ್ಟ್ಯ ಮತ್ತು ಅಂದು ಎಕ್ಕದ ಎಲೆಯನ್ನು ಮೈಮೇಲೆ ಇಟ್ಟುಕೊಂಡು ಸ್ನಾನ ಮಾಡುವ ಹಿಂದಿರುವ ವೈಜ್ಞಾನಿಕ ಕಾರಣಗಳ ಸವಿವರಗಳು ಇದೋ ನಿಮಗಾಗಿ… Read More ಸೂರ್ಯದೇವರ ಹುಟ್ಟಿದ ಹಬ್ಬ, ರಥಸಪ್ತಮಿ