ಕೇಸರಿ ವೀರ ಸಂಭಾಜಿ ಮಹಾರಾಜ

128 ಯುದ್ಧಗಳಲ್ಲಿ ಕನಿಷ್ಠ ಒಂದೂ ಯುದ್ಧವನ್ನು ಸೋಲದೇ ದೆಹಲಿ‌ಯ ಕೆಂಪು ಕೋಟೆಯ ಸಹಿತ ಜಿಹಾದಿಗಳ ಎದೆಯ ಮೇಲೆ ಕೇಸರಿ ಧ್ವಜ ನೆಟ್ಟಿದ್ದ ಕೇಸರಿ ವೀರ ಸಂಭಾಜಿ ಮಹಾರಾಜ!!

ತನ್ನ ಹದಿನಾರನೇ ವಯಸ್ಸಿನಲ್ಲೇ ಮುಸಲ್ಮಾನರಿಗೆ ಸೆಡ್ಡು ಹೊಡೆದು ಮೊದಲ ಯುದ್ಧ ಗೆದ್ದು ಹಿಂದವಿ ಸ್ವರಾಜ್ಯದ ಕನಸು ನನಸು ಮಾಡಿದ ಶಿವಾಜಿ ಮಹಾರಾಜರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆಕಸ್ಮಾತ್ ಶಿವಾಜಿ ಮಹಾರಾಜರ ಆಗಮನವಾಗದೇ ಇದ್ದರೇ ಇಡೀ ಭಾರತದ ಇಸ್ಲಾಮೀಕರಣವಾಗಿರುತ್ತಿತ್ತು. ಇಸ್ಲಾಮೀಕರಣದ ವಿರುದ್ಧ ತೊಡೆ ತಟ್ಟಿ ನಿಂತು ಧರ್ಮ ಪ್ರತಿಷ್ಠಾಪನೆಗಾಗಿ ಸದಾ ಖಡ್ಗ ಜಳಪಿಸುತ್ತಲೇ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸಿದ ಶಿವಾಜಿ ಮಹಾರಾಜರ ನಂತರ ಏನೇನಾಯ್ತು ಎಂಬುದರ ಬಗ್ಗೆ ಬಹುತೇಕರಿಗೆ ಗೊತ್ತೇ ಇಲ್ಲ. ಶಿವಾಜಿ ಮಹಾರಾಜರ ನಂತರ ಹಿಂದು ಧರ್ಮದ ಕೀರ್ತಿ ಪತಾಕೆ ಹಾರಿಸಿದ ವೀರ ಕಲಿ ಯಾರು ಗೊತ್ತೆ?

SAm4ಧರ್ಮ ಮರುಸ್ಥಾಪಕ ಶಿವಾಜಿ ಮಹಾರಾಜರ ನಂತರ ಧರ್ಮವನ್ನು ರಕ್ಷಿಸಿದ ಅವರ ಶಿವಾಜಿ ಮಹಾರಾಜರ ಮಗ ಸಾಂಭಾಜಿ ಮಹಾರಾಜ್. ಹಿಂದೂಸ್ತಾನದೆಲ್ಲೆಡೆ ಕೇಳಿಬರುವ ಘೋಷಣೆಗಳೆಂದರೆ ಧರ್ಮ ಮರುಸ್ಥಾಪಕ “ಶಿವಾಜಿ”, ಧರ್ಮ ರಕ್ಷಕ “ಸಾಂಭಾಜಿ”. ಹೌದು ಶಿವಾಜಿ ಮಹಾರಾಜರ ನಂತರ ಹಿಂದೂ ಧರ್ಮದ ಪತಾಕೆಯನ್ನು ಹಾರಿಸಿದ ವೀರ ಬೇರೆ ಯಾರೂ ಅಲ್ಲ ಶಿವಾಜಿ ಮಹಾರಾಜರ ಮಗ ಸಾಂಭಾಜಿ ಮಹಾರಾಜ್. ಧರ್ಮದ ಮರುಸ್ಥಾಪಕ ಶಿವಾಜಿ ಮಹಾರಾಜರಾದರೆ, ಧರ್ಮ ರಕ್ಷಕ ಸಾಂಭಾಜಿ ಮಹರಾಜ್. ವೀರ ಸಾಂಭಾಜಿ ಮಹಾರಾಜರು ಶಿವಾಜಿ ಮಹಾರಾಜ ಮತ್ತು ಸಾಯಿಭಾಯಿ ದಂಪತಿಯ ಮಗನಾಗಿ 14ನೇ ಮೇ 1657ರಲ್ಲಿ ಪುಣೆಯ ಪುರಂಧರಘಡನಲ್ಲಿ ಜನ್ಮತಾಳಿದರು.

ಮತಾಂಧ ಇಸ್ಲಾಮಿಕ್ ಭಯೋತ್ಪಾದಕ ಅಫ್ಜಲ್ ಖಾನನನ್ನು ಸಂಹಾರ ಮಾಡಿದ ನಂತರ ಶಿವಾಜಿ ಮಹಾರಾಜರು ಅನೇಕ ಯುದ್ಧಗಳನ್ನು ಗೆದ್ದರು. ತನ್ನ 16ನೇ ವಯಸ್ಸಿನಲ್ಲೇ ತೋರಣಗಡ ಯುದ್ಧವನ್ನು ಗೆದ್ದಿದ್ದ ಶಿವಾಜಿ ಮಹಾರಾಜರು ಒಟ್ಟು 280 ದುರ್ಗಗಳನ್ನು ಗೆದ್ದಿದ್ದರು. ಧರ್ಮ ಮರುಸ್ಥಾಪನೆಗಾಗಿ ಆಗಮಿಸಿದ ಶಿವಾಜಿ ಮಹಾರಾಜರು ತಮ್ಮ ನಂತರ ಶಿವಾಜಿ ಮಹಾರಾಜರ ಮಗ ಸಾಂಭಾಜಿ ಮಹಾರಾಜರು ಧರ್ಮ ರಕ್ಷಣೆಗಾಗಿ ತೊಡೆ ತಟ್ಟಿನಿಂತರು. ಅನೇಕ ಯುದ್ಧಗಳನ್ನು ಗೆದ್ದಿದ್ದ ಶಿವಾಜಿ ಮಹಾರಾಜರು ಔರಂಗಜೇಬನ ಸಂಹಾರ ಮಾಡಲು ದೊಡ್ಡ ಪ್ಲ್ಯಾನ್ ಮಾಡಿದ್ದರು.

ಆಗ ಅವರ ಜೊತೆ ಪುತ್ರ ಸಾಂಭಾಜಿ ಮಹಾರಾಜರು ಇದ್ದರು. ಸಾಂಭಾಜಿ ಮಹಾರಾಜ ಆಗಿನ್ನು ಬಾಲಕನಾಗಿದ್ದ. ಔರಂಗ ಜೇಬ್ ನನ್ನು ಸಂಹಾರ ಮಾಡಲು ಪ್ಲ್ಯಾನ್ ಮಾಡಿದ್ದ ಶಿವಾಜಿ ಮಹಾರಾಜರು ಆತನ ಗುಲಾಮನಾಗಿದ್ದಂತೆ ವರ್ತಿಸಿ ಅವನನ್ನು ಅವನ ಕೋಟೆಯಲ್ಲೇ ಸೀಳಬೇಕೆಂದು ಅದೊಂದು ದಿನ ಹೊರಟೇ ಬಿಟ್ಟರು. ಜೊತೆಯಲ್ಲಿ ಸಾಂಭಾಜಿ ಮಹಾರಾಜರು ಹೊರಟು ನಿಂತರು. ಆದರೆ ಈ ಪ್ಲ್ಯಾನ್ ಅಷ್ಟು ಸುಲಭದ್ದಾಗಿರಲಿಲ್ಲ. ಆಗ್ರಾದ ಔರಂಗಜೇಬನ ಕೋಟೆ ಹೊಸ ಹಿಕ್ಕ ಶಿವಾಜಿ ಮಹಾರಾಜರನ್ನು ಹಾಗೂ ಸಾಂಭಾಜಿ ಮಹಾರಾಜರನ್ನು ಔರಂಗಜೇಬ ಬಂಧಿಸಿಬಿಟ್ಟನು.

ಅಲ್ಲಿಗೆ ಹಿಂದುಗಳಿಗೆ ದೊಡ್ಡ ಚಿಂತೆ ಶುರುವಾಯತ್ತು. ಇದನ್ನು ನೋಡಿದ ಅಲ್ಲಿನ ಸೇವಕರು ಸಂಭಾಜಿಗೆ ಮಗು ಭಯವಾಗುತ್ತಿದೆಯಾ?  ಎಂದು ಕೇಳಿದ್ದಕ್ಕೆ ಶಿವಾಜಿ ಮಹಾರಾಜನ ಮಗ ನಾನು ನನಗೆ ಭಯವೇ??? ಅನ್ನೋ ಉತ್ತರ ಕೊಟ್ಟ ಧೀರ ಸಾಂಭಾಜಿ. ಬಂಧಿತರಾದ ಶಿವಾಜಿ ಹಾಗೂ ಅವರ ಪುತ್ರ ಮತ್ತೊಂದ ಪ್ಲ್ಯಾನ್ ಮಾಡಿಬಿಟ್ಟರು. ಶಿವಾಜಿ ಮಹಾರಾಜರು ಖಾಯಿಲೆ ಬಂದಂತೆ ನಟನೆ ಮಾಡಿದರು. ಶಿವಾಜಿ ಮಹಾರಾಜರಿಗೆ ಖಾಯಿಲೆ ಆಗಿದೆ ಎಂದುಕೊಂಡ ಜನ ಶಿವಾಜಿ ಮಹಾರಾಜರಿಗೆ ಬುಟ್ಟಿಯಲ್ಲಿ ಮಿಠಾಯಿಗಳನ್ನು ತಂದುಕೊಡಲು ಶುರು ಮಾಡಿದರು. ಅದೊಂದು ದಿನ ನಿತ್ಯದಂತೆ ಅಂದೂ ಮಿಠಾಯಿ ಬುಟ್ಟಿಗಳು ಒಳಕ್ಕೆ ಬಂದವು. ಖಾಯಿಲೆ ಬಂದಂತೆ ನಟನೆ ಮಾಡಿ ಮಲಗಿದ್ದ ಶಿವಾಜಿ ಚಂಗನೆ ಹಾರಿ ಒಂದು ಬುಟ್ಟಿಯಲ್ಲಿ ಕುಳಿತ. ಇನ್ನೊಂದರಲ್ಲಿ ಸಂಭಾಜಿ. ಕೂಡಲೇ ಬುಟ್ಟಿಗಳನ್ನು ಮುಚ್ಚಿ, ಬೋವಿಗಳೂ ಅವನ್ನು ಎತ್ತಿಕೊಂಡು ಹೊರಕ್ಕೆ ಹೊರಟರು.

sam2ಎಂದಿನಂತೆ ಮರುದಿನ ಬೆಳಗಾಯಿತು. ಅಂದೇ ಶಿವಾಜಿಯನ್ನು ಕೊಲ್ಲಬೇಕಾಗಿದ್ದ ದಿನ. ಔರಂಗಜೇಬನ ಆಸ್ಥಾನದ ಮತಾಂಧ ಪೋಲಾದಖಾನನಿಗರ ಸಂಶಯಬಂದು ಹೋಗಿ ನೋಡಿದಾಗ ಶಿವಾಜಿ ಮಾಹಾರಾಜರು ಹಾಗೂ ಸಾಂಭಾಜಿ ಮಹಾರಾಜರು ತಪ್ಪಿಸಿಕೊಂಡು ಬಿಟ್ಟಿದ್ದರು. ಕೂಡಲೇ ಶಿವಾಜಿಯನ್ನು ಹಿಡಿದು ತರಲು ಔರಂಗಜೇಬ ನಾಲ್ಕೂ ದಿಕ್ಕಿಗೆ ತನ್ನ ಸೈನ್ಯ ಅಟ್ಟಿದ. ಅಷ್ಟು ಹೊತ್ತಿಗಾಗಲೇ ಶಿವಾಜಿ, ಸಂಭಾಜಿ ತಮಗಾಗಿ ಊರಾಚೆ ಕಾದಿರಿಸಿದ್ದ ಕುದುರೆಗಳನ್ನೇರಿ ವಾಯುವೇಗದಲ್ಲಿ ದಕ್ಷಿಣ ದಿಕ್ಕಿನಲ್ಲಿ ಪರಾರಿಯಾಗಿದ್ದರು. ದಾರಿಯುದ್ದಕ್ಕೂ ಸಮರ್ಥ ರಾಮದಾಸರ ಮಠಗಳು ಅವರಿಗೆ ರಕ್ಷಣೆ ಕೊಟ್ಟವು. ಗೋಸಾಯಿ-ಬೈರಾಗಿಗಳ ವೇಷ ಹಾಕಿಕೊಂಡು ಕೊನೆಗೂ ಶಿವಾಜಿ ರಾಜಗಡಕ್ಕೆ ಬಂದು ತಲುಪಿದ.

ಶಿವಾಜಿ ಆಗ್ರಾದಿಂದ ತಪ್ಪಿಸಿಕೊಂಡು ಬಂದ ಸುದ್ದಿ ಕೇಳಿ ದಕ್ಷಿಣದ ಎಲ್ಲ ವೈರಿಗಳ ಜಂಘಾಬಲವೇ ಉಡುಗಿ ಹೋಯಿತು. ಅಷ್ಟೇಕೆ, ಇಡೀ ಹಿಂದುಸ್ಥಾನದಲ್ಲಿ ಶಿವಾಜಿಯ ಖ್ಯಾತಿ ಹಬ್ಬಿತ್ತು. ಔರಂಗಜೇಬನಂತಹ ಮಹಾ ಕಪಟಿಯ ಕೈಯಿಂದ, ಅವನ ಸ್ವಂತ ರಾಜಧಾನಿಯಿಂದ, ಇಪ್ಪತ್ತುನಾಲ್ಕು ಘಂಟೆಯೂ ಬಿಚ್ಚುಗತ್ತಿ ಪಹರೆಯ ನಡುವಿನಿಂದ ಔರಂಗಜೇಬನ ಮೂಗಿಗೇ ಸುಣ್ಣ ಹಚ್ಚಿ ಶಿವಾಜಿ ತಪ್ಪಿಸಿಕೊಂಡು ಬಂದಿದ್ದ. ಒಂದೂವರೆ ಸಾವಿರ ಮೈಲಿ ಉದ್ದಕ್ಕೂ ಮೊಗಲ ಸೈನಿಕರ ಕಣ್ಣಿಗೆ ಮಣ್ಣೆರಚಿ ಬಂದಿದ್ದ. ಇಡೀ ಪ್ರಪಂಚದಲ್ಲೇ ಇಂತಹ ಚಾತುರ್ಯ, ಇಂತಹ ಸಾಹಸವನ್ನು ಯಾರು ಕಂಡು ಕೇಳಿರಲಿಲ್ಲ.

ಶಿವಾಜಿ ಮಹಾರಾಜರು ಮೊಳಗಿಸಿದ ಹಿಂದವೀ ಸ್ವರಾಜ್ಯ ಮಂತ್ರ ಕೇವಲ ಮಹಾರಾಷ್ಟ್ರದ್ದು ಮಾತ್ರವಲ್ಲ, ಇಡೀ ಭಾರತದ ಹೃದಯತಂತಿಯನ್ನು ಮೀಟಲು ಸಮರ್ಥವಾಯಿತು.ಶಿವಾಜಿ ಮಹಾರಾಜರ ಜೀವ ಅನ೦ತ ಕೋಟಿ ಹಿ೦ದುಗಳ ಮನದಲ್ಲಿ 1680 ಏಪ್ರಿಲ್ 3ರ೦ದು ಲೀನವಾಯಿತು ಸಾಮಾನ್ಯರಲ್ಲಿ ಅಸಮಾನ್ಯರಾಗಿ ಬೆಳೆದ ಶಿವಾಜಿ ತನ್ನ ಆಡಳಿತದಲ್ಲಿ ಒಟ್ಟಾರೆಯಾಗಿ 280 ದುರ್ಗಗಳನ್ನು ಗೆದ್ದಿದ್ದರು. ರಜಪೂತ ಸಿಕ್ಕರ೦ತಹ ರಾಜಮನೆತನಗಳು ಅಲುಗಾಡಿಸಲಾಗದ ಮೊಘಲ ಸಾಮ್ರಾಜ್ಯವನ್ನು ಸಾಮಾನ್ಯ ಸಾಮಂತನ ಮಗ ಶಿವಾಜಿ ತನ್ನ ಪರಾಕ್ರಮ ಯುಕ್ತಿಯಿ೦ದ ಬುಡಮೇಲು ಮಾಡಿದ್ದ. ಶಿವಾಜಿ ಮಹಾರಾಜರ ನಂತರ ಇಸ್ಲಾಮಿಕ್ ಭಯೋತ್ಪಾದಕರ ಎದೆಯ ಮೇಲೆ ಕೇಸರಿ ಧ್ವಜ ನೆಡಲು ಸಿದ್ಧರಾದವರೇ ಸಾಂಭಾಜಿ ಮಹಾರಾಜರು.

ಸಾಂಭಾಜಿ ಮಹಾರಾಜರು ವಯಸ್ಕರಾದಾಗ ಅವರ ಎತ್ತರ 7.5 ಅಡಿ, ತೂಕ 170ಕೆಜಿ, ಎದೆಯ ಸುತ್ತಳತೆ 75, ಅವರು ಯದ್ದದಲ್ಲಿ ಉಪಯೋಗಿಸಿದ ಖಡ್ಗದ ಎತ್ತರ 4 ಅಡಿ, ಆ ಖಡ್ಗದ ತೂಕ ಬರೊಬ್ಬರಿ 65 ಕೆಜಿ, ಅವರ ಮಾಡುತ್ತಿದ್ದ ಊಟದ ಪದ್ಧತಿ 12, ರೊಟ್ಟಿ 2 ಲಿಟರ್ ಹಾಲು, ಇವರ ಸೈನ್ಯದಲ್ಲಿದ್ದ 500 ಜನರ ಸೈನ್ಯ ಎದುರಾಳಿಯ 10,000 ಜನರನ್ನು ಕೊಲ್ಲುವ ಶಕ್ತಿ ಹೊಂದಿತ್ತು.

ಸಾಂಭಾಜಿ ಮಹಾರಾಜರು ಹೋರಾಡಿದ 128 ಯುದ್ಧಗಳಲ್ಲಿ ಕನಿಷ್ಠ ಒಂದೂ ಯುದ್ಧವನ್ನು ಸೊಲದೇ ಅಜೇಯನಾಗಿ ತಂದೆಯ ಮತ್ತು ಹಿಂದು ಧರ್ಮದ ಕೀರ್ತಿಯನ್ನು ಉತ್ತುಂಗಕ್ಕೆ ಹಾರಿಸಿದ ರೂವಾರಿ ಧರ್ಮರಕ್ಷಕ ಸಾಂಭಾಜಿ ಮಹಾರಾಜರು.

sam5ಸಾಂಭಾಜಿ ಮಹಾರಾಜರು ಕಾಡಿನಲ್ಲಿ ಎದುರಾದ ವ್ಯಾಘ್ರ(ಸಿಂಹ)ದ ಬಾಯಿಯನ್ನು ಸೀಳಿದ ಪರಾಕ್ರಮಿ ಸೋಲನ್ನರಿಯದ ಸರದಾರ. ಮೊಗಲರ ಆಡಳಿತವಿದ್ದಾಗ ದೆಹಲಿ ಕೆಂಪುಕೋಟೆಯ ಮೇಲೆ ಮೊದಲು ಭಗವಾ ಧ್ವಜ ಹಾರಿಸಿದ ಈ ವೀರ ಕೇಸರಿ, ಧರ್ಮ ನಿಷ್ಠೆ ಗೆ ಇವರ ತಂದೆಯೆ ಭದ್ರ ಬುನಾದಿ. ಕುತಂತ್ರಕ್ಕೆ ಒಳಗಾಗಿ ಮೋಸದಿಂದ ಸಾಂಭಾಜಿ ಮಹಾರಾಜರನ್ನು ಬಂಧಿಸಿದ ನಿಜಾಮ ನಿರಂತರ ಒಂದು ತಿಂಗಳ ಘೋರವಾಗಿ ಶಿಕ್ಷಿಸಿದ ದಿನಕ್ಕೆ ಒಂದು ಬೆರಳುಗಳನ್ನು ಕಿತ್ತೆಸೆಯುತ್ತಿದ್ದ. ಬೆರಳುಗಳು ಮುಗಿದ ಮೇಲೆ ಕೈ ಆಮೆಲೆ ಕಾಲು ಹೀಗೆ ದಿನಾಲು ಹಿಂಸಿಸುತ್ತಿದ್ದ. ಜೊತೆಗೆ ಮುಸ್ಲಿಂ ಧರ್ಮಕ್ಕೆ ಮತಾಂತರವಾಗು ನಿನಗೆ ನಿನ್ನ ರಾಜ್ಯ ಬಿಟ್ಟು ಕೊಡ್ತಿನಿ ಅಂತ ಆಮಿಷ ಒಡ್ಡುತ್ತಿದ್ದ. ಆದರೆ ಇದಕ್ಕೆ ಸಾಂಭಾಜಿ ಮಹಾರಾಜರ ಉತ್ತರ ನನ್ನಲ್ಲಿ ಹರಿಯುತ್ತಿರೊದು ಶಿವಾಜಿಯ ರಕ್ತ ಅದು ಎಂದಿಗೂ ತನ್ನ ಧರ್ಮ ಬಿಟ್ಟು ಇನ್ನೂಂದಕ್ಕೆ ಶರಣಾಗಲ್ಲ.

ನಿನ್ನ ರಾಜ್ಯ ಬಿಟ್ಟು ಕೊಟ್ಟರು ನಾನು ನಿನ್ನ ಧರ್ಮಕ್ಕೆ ಬರಲ್ಲ. ಹೀಗೆ ಹೇಳುತ್ತಾ ಒಂದು ತಿಂಗಳವರೆಗೂ ಜೀವ ಸವೆಸಿದ ಹೊರತು ಧರ್ಮ ಬಿಡಲಿಲ್ಲ. 22 ದಿನಗಳವರೆಗೆ ಅವರನ್ನು ವಿವಿಧ ರೀತಿಯಲ್ಲಿ ಹಿಂಸಿಸಲಾಯಿತು. ಕೊನೆಗೆ ಆ ಪಾಪೀ ಔರಂಗಜೇಬ ಅವರ ಕಣ್ಣು ಕುಕ್ಕಿಸಿದನು, ನಾಲಿಗೆ ಕತ್ತರಿಸಿದನು ಆದರೂ ಮೃತ್ಯುವು ರಾಜನನ್ನು ಸ್ಪರ್ಷಿಸಲಿಲ್ಲ. ದುಷ್ಟ ಮೊಘಲ ಸರದಾರರು ಅವರಿಗೆ ಪ್ರಚಂಡ ಯಾತನೆ ನೀಡಿದರು. ಅವರ ದಿವ್ಯ ಧರ್ಮಾಭಿಮಾನದಿಂದಾಗಿ ಅವರಿಗೆ ಈ ಎಲ್ಲ ಕಷ್ಟಗಳನ್ನು ಅನುಭವಿಸಲೇಬೇಕಾಯಿತು.

ಕೊನೆಗೆ ಅರೆಜೀವವಿರುವ ಸ್ಥಿತಿಯಲ್ಲಿ ಅವರ ದೇಹವನ್ನು ವಡೂ ಎಂಬ ಹಳ್ಳಿಯ ಕಾಡಿಗೆ ತರಲಾಯಿತು. ಅಲ್ಲಿ ಸಂಭಾಜಿ ಮಹಾರಾಜರನ್ನು ಕೊಡಲಿಯಿಂದ ಕಾಲಿನಿಂದ ಹಿಡಿದು ಎಲ್ಲ ಅಂಗಗಳನ್ನು ತುಂಡರಿಸಲಾಯಿತು. ಹಿಂದೂಗಳ ಹಬ್ಬದಂದು ಅವರನ್ನು ಅಪಮಾನಗೊಳಿಸಲು ಮಾರ್ಚ 11 ಫಾಲ್ಗುಣ ಅಮಾವಾಸ್ಯೆಯಂದು ಸಂಭಾಜಿರಾಜರ ಕೊಲೆ ಮಾಡಲಾಯಿತು. ಅವರ ಮಸ್ತಕವನ್ನು ಬರ್ಚಿಗೆ ಚುಚ್ಚಿ ಮೊಘಲರು ಅವರನ್ನು ಅಪಮಾನಗೊಳಿಸಿ ಮೆರವಣಿಗೆ ಮಾಡಿದರು. ಈ ರೀತಿ ಫೆಬ್ರುವರಿ 1 ರಿಂದ ಮಾರ್ಚ 11 ರವರೆಗೆ ಹೀಗೆ 39 ದಿನಗಳ ಯಮಯಾತನೆಯನ್ನು ಸಹಿಸಿ ಸಂಭಾಜಿರಾಜರು ಹಿಂದುತ್ವದ ತೇಜವನ್ನು ಬೆಳೆಸಿದರು. ಧರ್ಮಕ್ಕಾಗಿ ಬಲಿದಾನ ಮಾಡಿದ ಈ ರಾಜನು ಇತಿಹಾಸದಲ್ಲಿ ಅಮರನಾದರು. ಆಗಿನ್ನು ಸಾಂಭಾಜಿ ಮಹಾರಾಜರ ವಯಸ್ಸು ಬರೀ 31 ವರ್ಷ.

ಅವರ ಕಠಿಣ ದಿನಗಳನ್ನು ಮಹಾರಾಷ್ಟ್ರದ ಜನತೆ ಇನ್ನೂ ಮರೆಯದೆ ಆ ಒಂದು ತಿಂಗಳ ಮಟ್ಟಿಗೆ ಆಹಾರ ಮುಟ್ಟದೆ, ಕಾಲಿಗೆ ಚಪ್ಪಲಿ ಧರಿಸದೇ, ಕಠಿಣ ವೃತಗೈಯುತ್ತಾರೆ. ಸಂಭಾಜಿ ಮಹಾರಾಜರ ಬಲಿದಾನದಿಂದ ಮರಾಠರ ಸ್ವಾಭಿಮಾನವು ಪುನಃ ಜಾಗೃತವಾಯಿತು. ಇದು ಮುನ್ನೂರು ವರ್ಷಗಳ ಹಿಂದಿನ ರಾಷ್ಟ್ರ ಜೀವನದಲ್ಲಿನ ಅತ್ಯಂತ ಮಹತ್ತ್ವದ ಅಂಗವಾಗಿತ್ತು. ಇದರಿಂದ ಇತಿಹಾಸದಲ್ಲಿ ತಿರುವು ಮೂಡಿತು. ಜನರ ಬೆಂಬಲದಿಂದ ಮರಾಠರ ಸೈನ್ಯ ಬೆಳೆಯುತ್ತ ಹೋಯಿತು ಹಾಗೂ ಸೈನ್ಯದ ಸಂಖ್ಯೆಯು ಎರಡು ಲಕ್ಷದವರೆಗೆ ತಲುಪಿತು. ಅಲ್ಲಲ್ಲಿ ಮೊಘಲರಿಗೆ ಪ್ರಖರವಾದ ವಿರೋಧ ಪ್ರಾರಂಭವಾಯಿತು ಹಾಗೂ ಕೊನೆಗೆ ಮಹಾರಾಷ್ಟ್ರದಲ್ಲಿಯೇ 27 ವರ್ಷಗಳ ನಿಷ್ಫಲ ಯುದ್ಧದ ನಂತರ ಔರಂಗಜೇಬನ ಅಂತ್ಯವಾಯಿತು. ಮೊಘಲರ ಅಧಿಕಾರ ಕ್ಷೀಣಸಿ ಹಿಂದೂಗಳ ಶಕ್ತಿಶಾಲಿ ಸಾಮ್ರಾಜ್ಯವು ಉದಯಗೊಂಡಿತು.

27 ವರ್ಷ ಔರಂಗಜೇಬನ ಪಾಶವಿ ಆಕ್ರಮಣದ ವಿರುದ್ಧ ಮರಾಠರು ಮಾಡಿದ ಹೋರಾಟದಲ್ಲಿ ಹಂಬೀರರಾವ, ಸಂತಾಜಿ, ಧನಾಜಿಯಂತಹ ಅನೇಕ ಯೋಧರಿದ್ದರು; ಆದರೆ ಈ ಹೋರಾಟಕ್ಕೆ ತಿರುವು ಮೂಡಿದ್ದು ಸಂಭಾಜಿ ರಾಜರ ಬಲಿದಾನದಿಂದ ಆಗಿರುವ ಜಾಗೃತಿಯಿಂದಲೇ ಎಂಬುದನ್ನು ಮರೆಯುವಂತಿಲ್ಲ. ಇಂತಹ ಅಪ್ರತಿಮ ನಾಯಕ ವೀರ ಕೇಸರಿ ಸಂಭಾಜಿ ಮಹಾರಾಜರಿಗೆ ನನ್ನ ಅನಂತ ಕೋಟಿ ನಮನ.

ಸೂಚನೆ : ಅನಾಮಿಕ ಲೇಖಕರ ಈ ಲೇಖನ ಮನಸ್ಸಿಗೆ ತುಂಬಾ ಹಿಡಿಸಿದ್ದರಿಂದ ಯಥಾವತ್ತಾಗಿ ಪ್ರಕಟಿಸಿದ್ದೇನೆ.

ಇಂತಹ ಉತ್ಕೃಷ್ಠ ಲೇಖನ ಬರೆದ ಆ ಅನಾಮಿಕ ಲೇಖಕರಿಗೆ ನನ್ನ ಹೃದಯ ಪೂರ್ವಕ ವಂದನೆಗಳು

One thought on “ಕೇಸರಿ ವೀರ ಸಂಭಾಜಿ ಮಹಾರಾಜ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s