ರಾಷ್ಟ್ರಸೇವೆಯೆಂಬ ಯಜ್ಞದಲ್ಲಿ ಸಮಿದೆಯಂತೆ ದುಡಿದ ಕರ್ಮಯೋಗಿ ಮನೋಹರ್ ಪರಿಕ್ಕರ್ ಅವರಿಗೆ ನುಡಿ ನಮನ

​1955 ಡಿಸೆಂಬರ್​ 13 ಗೋವಾದ ಮಾಪೂಸ ಎಂಬ ಪ್ರಾಂತ್ಯದಲ್ಲಿ ರಾಧಾಭಾಯಿ ಮತ್ತು ಗೋಪಾಲಕೃಷ್ಣ ದಂಪತಿಗಳಿಗೆ ಜನಿಸಿದ ನೋಡಲು ಮನೋಹರವಾಗಿದ್ದ ಮಗುವಿಗೆ  ಅನ್ವರ್ಥವಾಗುವಂತೆಯೇ ಮನೋಹರ ಪರಿಕ್ಕರ್ ಎಂದು ನಾಮಕರಣ ಮಾಡಿದರು. ಬಾಲ್ಯದಿಂದಲೂ ಆಟ  ಪಾಠಗಳಲ್ಲಿ ಅತ್ಯಂತ ಚುರುಕಾಗಿದ್ದ ಹುಡುಗ, ಓದಿನ ಜೊತೆಜೊತೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಂಟಿನೊಂದಿಗೆ ರಾಷ್ಟ್ರೀಯತೆಯನ್ನೂ ಬೆಳೆಸಿಕೊಂಡ.  ಮಾರ್ಗೋವಾದಲ್ಲಿನ ಲೊಯೋಲಾ ಪ್ರೌಢಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ 1978ರಲ್ಲಿ  ಮುಂಬಯಿ -ಐಐಟಿಯಲ್ಲಿ  ಮೆಟಲರ್ಜಿಕಲ್ ಇಂಜಿನಿಯರಿಂಗ್​ನಲ್ಲಿ ಪದವಿ ಪಡೆದು ಕೈತುಂಬಾ ಹಣ ಗಳಿಸಬಹುದಾಗಿದ್ದರೂ, ಸಂಘದ ಪ್ರಭಾವದಿಂದಾಗಿ  ಸಮಾಜ… Read More ರಾಷ್ಟ್ರಸೇವೆಯೆಂಬ ಯಜ್ಞದಲ್ಲಿ ಸಮಿದೆಯಂತೆ ದುಡಿದ ಕರ್ಮಯೋಗಿ ಮನೋಹರ್ ಪರಿಕ್ಕರ್ ಅವರಿಗೆ ನುಡಿ ನಮನ

ಅಭ್ಯಾಸ- ದುರಭ್ಯಾಸ

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪುಟ್ಟ ಹುಡುಗನೊಬ್ಬ ಜಾರುತ್ತಿರುವ ತನ್ನ ದೊಡ್ಡದಾದ ಚೆಡ್ಡಿಯನ್ನು ಎಡಗೈನಲ್ಲಿ ಹಿಡಿದುಕೊಂಡು ಹೋಗುತ್ತಿರುವ ಚಿತ್ರ ವೈರಲ್ ಆಗಿದೆ. ಆ ಪುಟ್ಟ ಬಾಲಕನು ಬೆರಳು ಚೀಪುವ ದುರಾಭ್ಯಾಸವನ್ನು ತಪ್ಪಿಸಲು ಅವನ ಪೋಷಕರು ಈ ರೀತಿಯ ಜಾಣ್ಮೆಗೆ ಮೊರೆ ಹೋಗಿದ್ದಾರೆ ಎಂಬ ತಲೆಬರಹ ನನ್ನನ್ನು ನನ್ನ ಬ್ಯಾಲ್ಯಾವಸ್ಥೆಗೆ ಕರೆದುಕೊಂಡು ಹೋಯಿತು. ನಾನು ಮತ್ತು ನನ್ನ ಚಿಕ್ಕ ತಂಗಿ ಇಬ್ಬರೂ ಸಹಾ ಬೆರಳು ಚೀಪುತ್ತಿದ್ದವರೇ. ನಾನು ಎಡಗೈ ಹೆಬ್ಬರಳನ್ನು ಮಲಗುವಾಗ ಮಾತ್ರ, ಒಂದು ಶುಭ್ರವಾದ ಪಂಚೆಯ ತುದಿಯೊಂದಿಗೆ ಚಿಪುತ್ತಿದ್ದರೆ,… Read More ಅಭ್ಯಾಸ- ದುರಭ್ಯಾಸ

ಉಡುದಾರದ ಪಜೀತಿ

ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಅನೇಕ ಪದ್ದತಿಗಳು ನಮ್ಮ ಜೀವನದ ಅವಿಭಾಜ್ಯವಾಗಿ ರೂಢಿಯಲ್ಲಿರುತ್ತವೆ. ಅನೇಕರಿಗೆ ಅದರ ಅವಶ್ಯಕತೆಯಾಗಲೀ ಅದರ ಅನುಕೂಲವಾಗಲೀ ವೈಜ್ಞಾನಿಕ ಕಾರಣಗಳಾಗಲೀ ಗೊತ್ತಿಲ್ಲದಿದ್ದರೂ ಹಿರಿಯರಿಂದ ಬಂದ ಸಂಪ್ರದಾಯ ಎಂದು ಅದಕ್ಕೆ ಪ್ರತಿರೋಧ ತೋರದೆ ಚಾಚೂ ತಪ್ಪದೆ ಅದನ್ನು ಆಚರಿಸಿಕೊಂಡು ಬರುತ್ತಾರೆ. ಅಂತಹ ಪದ್ದತಿಯಲ್ಲಿ ಗಂಡು ಮಕ್ಕಳ ಸೊಂಟಕ್ಕೆ ಕಟ್ಟುವ ಉಡುದಾರವೂ ಹೌದು. ಹಾಗೆ ಕಟ್ಟಿ ಕೊಂಡ ಉಡುದಾರವೇ ನಮ್ಮ ಶಂಕರನನ್ನು ಪಜೀತಿಗೆ ಸಿಕ್ಕಿಸಿದ ಮೋಜಿನ ಪ್ರಸಂಗವನ್ನೇ ಇಲ್ಲಿ ಹೇಳ ಹೊರಟಿದ್ದೇನೆ. ಉಡುದಾರ ಧರಿಸುವುದು ಹಿಂದೂ ಸಂಪ್ರದಾಯಗಳಲ್ಲಿ ಒಂದಾಗಿದ್ದು,… Read More ಉಡುದಾರದ ಪಜೀತಿ

ತಾತ ಮೊಮ್ಮಗನ ಸಂಬಂಧ- ಅನುಬಂಧ

ಶಂಕರ ಆಗಿನ್ನು ಚಿಕ್ಕ ಹುಡುಗ. ನಾಲ್ಕನೇಯದೋ ಇಲ್ಲವೇ ಐದನೆಯ ತರಗತಿಯಲ್ಲಿ ಓದುತ್ತಿದ್ದ. ಅದೊಂದು ದಿನ ಸಂಜೆ ಊರಿನಿಂದ ಅವರ ಮನೆಗೆ Father is serious. Start immediately ಎನ್ನುವ ಸಂದೇಶವಿದ್ದ ಟೆಲಿಗ್ರಾಂ ಬಂದಿತು. ಸರಿ ಆಷ್ಟು ಹೊತ್ತಿನಲಲ್ಲಿ ಮಕ್ಕಳನ್ನು ಎಲ್ಲಿಗೆ ಬಿಟ್ಟು ಹೋಗುವುದು ಎಂದು ತಿಳಿದು ಶಂಕರ, ಅವನ ತಂಗಿಯರನ್ನೂ ಕರೆದುಕೊಂಡು ಶಂಕರನ ತಂದೆ ಮತ್ತು ತಾಯಿ ಊರಿಗೆ ಹೋಗಲು ಮೆಜೆಸ್ಟಿಕ್ ಬಸ್ ಹತ್ತಿ , ಆಗಿನ್ನೂ ಟೆಲಿಫೋನ್ ಇಲ್ಲದಿದ್ದರಿಂದ ಮಲ್ಲೇಶ್ವರದಲ್ಲಿಯೇ ಶಂಕರನ ತಂದೆ ಇಳಿದು ಅವರ… Read More ತಾತ ಮೊಮ್ಮಗನ ಸಂಬಂಧ- ಅನುಬಂಧ

ಮೇಜರ್ ಸಂದೀಪ್ ಉನ್ನಿಕೃಷ್ಣನ್ ಹುಟ್ಟಿದ ಹಬ್ಬ

ದೇಶದ ಜನರ ರಕ್ಷಣೆಗೆ ಪ್ರಾಣ ಕೊಟ್ಟ ವೀರ ಸೇನಾನಿ. ತನ್ನ ಸಂಬಳವನ್ನೇ ಬಡವರಿಗಾಗಿ ಬಳಸುತ್ತಿದ್ದ ಆ ಮಹಾನ್ ಚೇತನದ ಜಯಂತಿಯನ್ನು ಇಂದು 15.03.2019 ಗುರುವಾರದಂದು ಸಂಜೆ 5 ಘಂಟೆಗೆ ಯಲಹಕಂದ ಹಾರೋಹಳ್ಳಿಯ ಬಳಿಯಲ್ಲಿರುವ ಇಸ್ರೋ ಲೇಔಟ್ನಲ್ಲಿ ಅವರ ಮನೆಯಲ್ಲಿ ರಾಷ್ಟ್ರಭಕ್ತರ ಸಮ್ಮುಖದಲ್ಲಿ ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬೆಂಗಳೂರು ದಕ್ಷಿಣ ಡಿ.ಸಿ.ಪಿ.ಯಾಗಿರುವ ಶ್ರೀ ಅಣ್ಣಾಮಲೈ ಅವರು ನಮ್ಮೊಂದಿಗೆ ಇರಲಿದ್ದಾರೆ. || ವಿಶೇಷ ಆಹ್ವಾನಿತರು || 1. ಶ್ರೀಮತಿ ಬಸವಣ್ಣೆವ್ವ ಕುಲಕರ್ಣಿ- ಕಾರ್ಗಿಲ್ ವೀರಯೋಧ ಹುತಾತ್ಮ ಶ್ರೀ… Read More ಮೇಜರ್ ಸಂದೀಪ್ ಉನ್ನಿಕೃಷ್ಣನ್ ಹುಟ್ಟಿದ ಹಬ್ಬ

ಪ್ರಜಾಪ್ರಭುತ್ವ ಅಂದರೆ ಕುಟುಂಬ ರಾಜಕಾರಣವೇ?

ಸಾವಿರಾರು ವರ್ಷಗಳ ಕಾಲ ಪ್ರಪಂಚಾದ್ಯಂತ ರಾಜ ಮಹಾರಾಜರ ಆಳ್ವಿಕೆಯೇ ಜಾರಿಗೆಯಲ್ಲಿತ್ತು. ರಾಜನ ಮರಣಾನಂತರ ಆತನ ಮಗನೋ ಇಲ್ಲವೇ ಆತನ ಸಂಬಂಧೀಕರೇ ಆ ರಾಜ್ಯಕ್ಕೆ  ಉತ್ತರಾಧಿಕಾರಿಯಾಗಿ ಆಡಳಿತ ವಂಶಪಾರಂಪರ್ಯವಾಗಿ ನಡೆಯುತ್ತಲಿತ್ತು. ಅಂದು ರಾಜ ಪ್ರತ್ಯಕ್ಶ ದೇವತಾ ಎಂದೇ ಭಾವಿಸಿದ್ದರು. ಆದರೆ ಕಾಲ ಕ್ರಮೇಣ ಕೆಲ ರಾಜರುಗಳ, ಮತ್ತವರ ಸಾಮಂತರ ದೌರ್ಜ್ಯನ್ಯಕ್ಕೆ , ದುರಾಡಳಿತಕ್ಕೆ ಮತ್ತು  ಸರ್ವಾಧಿಕಾರಿತನದಿಂದ ಬೇಸತ್ತು  ಜನ ದಂಗೆ ಎದ್ದ ಪರಿಣಾಮವಾಗಿಯೇ ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರವಾಗಿಯೇ  ಇರುವಂತಹ ಪ್ರಜಾಪ್ರಭುತ್ವಕ್ಕೆ ನಾಂದಿಯಾಯಿತು.  ಈ ಮಾದರಿಯಲ್ಲಿ  ಪ್ರಜೆಗಳೇ ನೇರವಾಗಿ ತಮ್ಮ… Read More ಪ್ರಜಾಪ್ರಭುತ್ವ ಅಂದರೆ ಕುಟುಂಬ ರಾಜಕಾರಣವೇ?

ಮಣ್ಣಿನ ಋಣ

ಮೊನ್ನೆ ಶಿವರಾತ್ರಿಯ ಹಬ್ಬದ ಪ್ರಯುಕ್ತ ಮಲ್ಲೇಶ್ವರದ ಕಾಡುಮಲ್ಲೇಶ್ವರ ಮತ್ತು ದಕ್ಷಿಣ ಮುಖ ನಂದಿ ತೀರ್ಥ ದೇವಸ್ಧಾನಕ್ಕೆ ಹೋಗಿದ್ದೆ. ಆ ದೇವಸ್ಥಾನಗಳ ಸುತ್ತ ಮುತ್ತಲಿನ ಪ್ರದೇಶಗಳನ್ನು ನೋಡುತ್ತಿದ್ದಾಗ. ನಮಗೆ ಋಣವಿದ್ದಿದ್ದಲ್ಲಿ ಇದೇ ಜಾಗದಲ್ಲಿ ನಮ್ಮ ಮನೆ ಇರಬೇಕಿತ್ತು. ನಾವುಗಳು ಐಶಾರಾಮ್ಯಾವಾಗಿ ಇರಬಹುದಿತ್ತೇನೋ ಎಂದು ಯೋಚಿಸಲು ಕಾರಣವಿಷ್ಟೆ. ನಮ್ಮ ತಾತ ದಿ. ಗಮಕಿ ನಂಜುಂಡಯ್ಯನವರು ಖ್ಯಾತ ವಾಗ್ಗೇಯಕಾರರು, ಸಾಹಿತಿಗಳು ಮತ್ತು ಅತ್ಯುತ್ತಮ ಗಮಕಿಗಳು. ಮೇಲಾಗಿ ನಮ್ಮ ಊರಾದ ಬಾಳಗಂಚಿಯ ಶಾನುಭೋಗರೂ ಹೌದು. ಆಗಿನ ಕಾಲದಲ್ಲಿ ಅಲ್ಲಿಂದ ಬೆಂಗಳೂರಿನ ಸಾಹಿತ್ಯ ಪರಿಷತ್ತು… Read More ಮಣ್ಣಿನ ಋಣ

ನಮ್ಮ ದೇಶದ ಸ್ವಾತಂತ್ಯ್ರ ಒಂದು ಪಕ್ಷದ ಭಿಕ್ಷೆಯೇ?

ಇತ್ತೀಚೆಗೆ  ಪಶ್ಚಿಮ ಬಂಗಳದ  ಕಾಂಗ್ರೇಸ್ ನಾಯಕನೊಬ್ಬ ಭಾರತ್ ಮಾತಾ ಕೀ ಜೈ ಎನ್ನುವುದು ಕಾಂಗ್ರೇಸ್ ಸ್ವತ್ತು ಇದನ್ನು ಬೇರೆಯವರಾರು ಹೇಳಬಾರದು ಎಂಬ ಉದ್ದಟತನವನ್ನು ತೋರಿದರೆ, ಅವರ ಪಕ್ಷದ ರಾಷ್ಟ್ರೀಯ ಆಧ್ಯಕ್ಷರು, ಲೋಕಸಭೆಯ ವಿರೋಧ ಪಕ್ಷದ ನಾಯಕರಿಂದ ಹಿಡಿದು,  ಮಂಡ್ಯಾದ ಪದ್ಮಾವತಿ ರಮ್ಯಾವರೆಗೂ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟಿದ್ದು ಕಾಂಗ್ರೇಸ್ ಪಕ್ಷ ಮಾತ್ರ.  ಸ್ವಾತಂತ್ಯ್ರ  ಹೋರಾಟ ಸಂದರ್ಭದಲ್ಲಿ ಇತರೇ ಪಕ್ಷದವರ ಕಾಣಿಕೆ ಇಲ್ಲ ಎಂಬ ಹಸೀ ಸುಳ್ಳನೇ  ಬಾರಿ ಬಾರಿ ಹೇಳುತ್ತಾ  ಅದನ್ನೇ ನಿಜವಾಗಿಸಲು ಹೊರಟಿರುವುದು ನಿಜಕ್ಕೂ ಆಘಾತಕಾರಿಯಾಗಿದೆ.… Read More ನಮ್ಮ ದೇಶದ ಸ್ವಾತಂತ್ಯ್ರ ಒಂದು ಪಕ್ಷದ ಭಿಕ್ಷೆಯೇ?

ಇದೇನು ಸಭ್ಯತೆ, ಇದೇನು ಸಂಸ್ಕೃತಿ

ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾ: | ಯತ್ರೈತಾಸ್ತು ನ ಪೂಜ್ಯಂತೆ ಸರ್ವಾಸ್ತತ್ರಾಫಲಾ ಕ್ರಿಯಾ | ಅಂದರೆ ಎಲ್ಲಿ ಸ್ತ್ರೀಯರನ್ನು ಗೌರವಿಸಲಾಗುತ್ತದೆಯೋ, ಅಲ್ಲಿ ದೇವತೆಗಳು ಸಂತುಷ್ಟರಾಗಿರುತ್ತಾರೆ ಎನ್ನುತ್ತದೆ ನಮ್ಮ ಶಾಸ್ತ್ರಗಳು. ಅಹಲ್ಯ, ದ್ರೌಪತಿ, ಕುಂತಿ, ತಾರ ಮಂಡೋದರಿಯರಂತಹ ಪತಿವ್ರತೆಯರು ಜನ್ಮಿಸಿದ ನಾಡು ನಮ್ಮ ನಾಡು. ಪರ ಪುರುಷರೊಂದಿಗೆ ಸಂಭಾಷಣೆ ಮಾಡುವಾಗ ಸೆರೆಗಿನಿಂದ ಇಡೀ ಮುಖವನ್ನೇ ಮುಚ್ಚಿಕೊಂಡು ತಲೆ ಬಗ್ಗಿಸಿಯೇ ಮಾತನಾಡಿಸುವ ಸಂಸ್ಕೃತಿ ನಮ್ಮದು. ಪತಿಯೇ ತನ್ನ ಮುಂದೆ ನಿಂತಿದ್ದರೂ ಪತಿಯನ್ನು ತಲೆ ಎತ್ತಿನೋಡದೆ ಮಗನ ಅಂತ್ಯಕ್ರಿಯೆಗೆ… Read More ಇದೇನು ಸಭ್ಯತೆ, ಇದೇನು ಸಂಸ್ಕೃತಿ