ವಂಶವಾಹಿ ಸಂಸ್ಕಾರ (ಜೀನ್ಸ್)

ಮನೆಯಲ್ಲಿರುವ ಚಿಕ್ಕ ಮಕ್ಕಳು ಮನೆಯಲ್ಲಿರುವ ಅಜ್ಜಿ ತಾತ, ಅಪ್ಪಾ ಅಮ್ಮಾ ಅಣ್ಣ ಅಕ್ಕಾ ಅವರನ್ನು ನೋಡಿಯೇ ಕಲಿತುಕೊಳ್ಳುತ್ತಾರೆ. ಹಾಗಾಗಿಯೇ ಚಿಕ್ಕ ಮಕ್ಕಳ ಮುಂದೆ ಸದಾ ಕಾಲವೂ ಸಾಧ್ಯವಾದಷ್ಟೂ ಒಳ್ಳೆಯ ಸಂಸ್ಕಾರವಂತರಾಗಿಯೇ ವ್ಯವಹರಿಸುವುದನ್ನು ಎಲ್ಲೆಡೆಯಲ್ಲಿಯೂ ನೋಡಬಹುದಾಗಿದೆ. ಚಿಕ್ಕ ಮಕ್ಕಳೂ ತಮಗೇ ಅರಿವಿಲ್ಲದಂತೆಯೇ ಮನೆಯಲ್ಲಿರುವ ದೊಡ್ಡವರ ಸ್ವಭಾವವನ್ನು ಯಥವತ್ತಾಗಿ ಅಳವಡಿಸಿಕೊಂಡಿರುತ್ತಾರೆ. ಅಂತಹದೇ ಒಂದು ಸುಂದರ ಅನುಭವವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಮನಸ್ಸಾಗುತ್ತಿದೆ. ಹೇಳಿ ಕೇಳಿ ನಮ್ಮದು ಸಂಪ್ರದಾಯಸ್ಥ ಕುಟುಂಬ. ಕಲೆ, ಸಂಗೀತ ಮತ್ತು ಸಾಹಿತ್ಯ ಎನ್ನುವುದು ನಮ್ಮ ಕುಟುಂಬದಲ್ಲಿ ಹಾಸು ಹೊಕ್ಕಾಗಿದೆ.… Read More ವಂಶವಾಹಿ ಸಂಸ್ಕಾರ (ಜೀನ್ಸ್)

ಅಣ್ಣಾ, ಮತ್ತೆ ಯಾವಾಗ ಸಿಗೋಣ?

ಜಗಣ್ಣಾ, ನಮಸ್ಕಾರ. ಎಲ್ಲಿದ್ದೀಯಾ? ಹೇಗಿದ್ದೀಯಾ? ಅಂತಾ ಫೋನ್ ಮಾಡಿದ್ರೆ, ಹಾಂ!! ಹೇಳಣ್ಣಾ, ಇಲ್ಲೇ ಕೆಲ್ಸದ್ ಮೇಲೆ ಇದ್ದೀನಿ. ಅಂತಾ ಶುರುವಾಗುತ್ತಿದ್ದ ನಮ್ಮ ಫೋನ್ ಸಂಭಾಷಣೆ ಕನಿಷ್ಟ ಪಕ್ಷ ಅರ್ಧ ಘಂಟೆಯವರೆಗೂ ನಡೆದು, ನಮ್ಮಿಬ್ಬರ ಕೆಲಸಕಾರ್ಯಗಳು, ನಂತರ ನಮ್ಮಿಬ್ಬರ ಮನೆಯವರೆಲ್ಲರ ಯೋಗಕ್ಷೇಮ ಅದಾದ ನಂತರ ನಮ್ಮ ಸಂಬಂಧೀಕರು, ನಮ್ಮೂರಿನ ಕುತೂಹಲಕಾರಿ ವಿಷಯಗಳನ್ನು ವಿಚಾರಿಸಿಕೊಂಡ ನಂತರ, ಒಂದೋ ನಾನು ಆಫೀಸ್ ತಲುಪಿರಬೇಕು ಇಲ್ಲವೇ ನಮ್ಮಿಬ್ಬರಿಗೆ ಬೇರಾವುದೋ ಕರೆ ಬಂದಾಗ, ಸರಿ ಅಣ್ಣಾ ಮತ್ತೇ ಸಿಗೋಣ ಎಂದು ಮಾತು ಮುಗಿಸಿ ಮತ್ತೊಂದು… Read More ಅಣ್ಣಾ, ಮತ್ತೆ ಯಾವಾಗ ಸಿಗೋಣ?