ಅತ್ತೆ ಮನೆ ಕೆನೆ ಮೊಸರು
ನಮ್ಮ ಸಂಸ್ಕಾರ ಮತ್ತು ಸಂಪ್ರದಾಯಗಳೇ ಒಂದು ರೀತಿಯ ಆಪ್ಯಾಯಮಾನವಾದದ್ದು. ಅದರ ಬಗ್ಗೆ ಅದೆಷ್ಟು ಹೊಗಳಿದರೂ ಮನಸ್ಸಿಗೆ ತೃಪ್ತಿನೇ ಅಗೋದಿಲ್ಲ. ಮೊನ್ನೆ ವಾರಾಂತ್ಯದಲ್ಲಿ ಸಂಕ್ರಾಂತಿ ಎಳ್ಳು ಬೀರಲು ನಮ್ಮ ಅತ್ತೆ ಅರ್ಥಾತ್ ಸೋದರತ್ತೆ ಮನೆಗೆ ಹೋಗಿದ್ದೆವು. ಒಂದೇ ಊರಿನಲ್ಲಿ ಕೆಲವೇ ಕಿಮೀ ದೂರದಲ್ಲಿಯೇ ಇದ್ದರೂ ಪದೇ ಪದೇ ಅತ್ತೆ ಮನೆಗೆ ಹೋಗಲು ಸಾಧ್ಯವಾಗದಿದ್ದರೂ, ವರ್ಷಕ್ಕೆರಡು ಬಾರಿ ತಪ್ಪದೇ ಅತ್ತೇ ಮನೆಗೆ ಹೋಗಿ ಅವರ ಅದರಾತಿಧ್ಯವನ್ನು ಸವಿದು ಬಂದೇ ಬಿಡುತ್ತೇವೆ. ಒಂದು ಸಂಕ್ರಾಂತಿಗೆ ಎಳ್ಳು ಬೀರುವುದಕ್ಕಾದರೆ, ಎರಡನೆಯದು ಗೌರಿ ಹಬ್ಬಕ್ಕೆ… Read More ಅತ್ತೆ ಮನೆ ಕೆನೆ ಮೊಸರು
