ಕಬ್ಬನ್ ಪಾರ್ಕ್‌ನಲ್ಲಿ ಬ್ಲೈಂಡ್ ಡೇಟಿಂಗ್ ಶೋ

ಬೆಂಗಳೂರಿನ ಹೃದಯಭಾಗದಲ್ಲಿರುವ ಕಬ್ಬನ್ ಪಾರ್ಕ್ ಕೇವಲ ಉದ್ಯಾನವಾಗಿರದೇ, ಬೆಂಗಳೂರಿನ ಅಸ್ತಿತ್ವ ಮತ್ತು ಅಸ್ಮಿತೆಯ ಸಂಕೇತ ಆಗಿದ್ದು ಅದರ ಬ್ರಾಂಡ್ ಮೌಲ್ಯಕ್ಕೆ ಮಸಿ ಬಳೆಯುವಂತೆ ಬುಕ್ ಮೈ ಷೋ ಮೂಲಕ ಬ್ಲೈಂಡ್ ಡೇಟಿಂಗ್ ಶೋ ಆಯೋಜಿಸಲು ಮುಂದಾಗಿದ್ದ ಆಘಾತಕಾರಿ ಮತ್ತು ಅಷ್ಟೇ ವಿಕೃತ ವಿಛಿದ್ರಕಾರಿ ಕಥೆ-ವ್ಯಥೆ ಇದೋ ನಿಮಗಾಗಿ… Read More ಕಬ್ಬನ್ ಪಾರ್ಕ್‌ನಲ್ಲಿ ಬ್ಲೈಂಡ್ ಡೇಟಿಂಗ್ ಶೋ

ಕಹಳೆ ಬಂಡೆ (ಬ್ಯೂಗಲ್ ರಾಕ್)

ಬೆಂಗಳೂರಿನ ಅತ್ಯಂತ ಪುರಾತನ ಬಡಾವಣೆಯಾದ ಬಸವನಗುಡಿಯಲ್ಲಿರುವ ಕಹಳೆ ಬಂಡೆಯ ಐತಿಹ್ಯವೇನು? ಆ ಬಂಡೆಗೆ ಆ ಹೆಸರು ಬರಲು ಕಾರಣವೇನು? ಅಲ್ಲಿರುವ ಉದ್ಯಾನನದ ವಿಶೇಷತೆಗಳೇನು? ಆ ಜಾಗದಲ್ಲಿ ಉಗಮವಾಗುವ ನದಿ ಯಾವುದು? ಎಂಬೆಲ್ಲಾ ಕುರಿತಾದ ಕುತೂಹಲಕಾರಿ ವಿವರಗಳನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆ ಯಲ್ಲಿ ಇದೋ ನಿಮಗಾಗಿ… Read More ಕಹಳೆ ಬಂಡೆ (ಬ್ಯೂಗಲ್ ರಾಕ್)

ಬ್ರಿಗೇಡ್ ರಸ್ತೆಯ ಸಪ್ಪರ್ಸ್ ಯುದ್ಧ ಸ್ಮಾರಕ

ಅನೇಕ ಊರುಗಳಲ್ಲಿ ತಮ್ಮ ಊರನ್ನು ಶತ್ರುಗಳ ಆಕ್ರಮಣದಿಂದ ತಡೆದ ವೀರ ಮತ್ತು ಶೂರರ ಕುರಿತಾದ ವೀರಗಲ್ಲುಗಳು ಇರುವಂತೆ, ಮೊದಲ ವಿಶ್ವ ಯುದ್ಧದಲ್ಲಿ ಬ್ರಿಟೀಷ್ ಸೈನ್ಯದ ಬಾಗವಾಗಿ ಶತ್ರುಗಳ ವಿರುದ್ದ ಹೋರಾಟ ನಡೆಸಿ ಹುತಾತ್ಮರಾದ ಮದ್ರಾಸ್ ಸಪ್ಪರ್ಸ್ ಮತ್ತು ಮೈನರ್ಸ್ (MEG) ಸೈನಿಕರ ನೆನಪಿನಲ್ಲಿ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ನಿರ್ಮಿಸಿಸಲಾಗಿರುವ ಸುಮಾರು 100ವರ್ಷ ಹಳೆಯದಾದ ಸಪ್ಪರ್ಸ್ ವಾರ್ ಮೆಮೋರಿಯಲ್ ಬಗ್ಗೆ ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. … Read More ಬ್ರಿಗೇಡ್ ರಸ್ತೆಯ ಸಪ್ಪರ್ಸ್ ಯುದ್ಧ ಸ್ಮಾರಕ

ಕಳೆದು ಹೋದ ಉಂಗುರ

ಅದು ಎಂಭತ್ತರ ದಶಕ. ಗಮಕ ಕಲೆ ನಮ್ಮ ತಂದೆಯವರಿಗೆ ನಮ್ಮ ತಾತ ಗಮಕಿ ನಂಜುಂಡಯ್ಯನವರಿಂದಲೇ ಬಂದಿತ್ತಾದರೂ, ಶೈಕ್ಷಣಿಕವಾಗಿ ಅಧಿಕೃತವಾದ ಪದವಿಯೊಂದು ಇರಲಿ ಎಂದು ಮಲ್ಲೇಶ್ವರದ ಗಾಂಧೀ ಸಾಹಿತ್ಯ ಸಂಘದಲ್ಲಿ ಗುರುಗಳಾದ ಶ್ರೀ ನಾರಾಯಣ್ ಅವರು ನಡೆಯುತ್ತಿದ್ದ ಗಮಕ ಪಾಠ ಶಾಲೆ ಮೂಲಕ ಗಮಕ ವಿದ್ವತ್ ಪರೀಕ್ಷೆಯನ್ನು ಕಟ್ಟಿದ್ದರು. ಪರೀಕ್ಷೆ ಎಲ್ಲವೂ ಸುಲಲಿತವಾಗಿ ಮುಗಿದು ಎಲ್ಲರೂ ಅತ್ಯುತ್ತಮವಾದ ಫಲಿತಾಂಶ ಪಡೆದಿದ್ದ ಕಾರಣ ಅದರ ಸಂಭ್ರಮಾಚರಣೆಗೆಂದು ಕುಟುಂಬ ಸಮೇತವಾಗಿ ಎಲ್ಲಾದರೂ ಪ್ರವಾಸಕ್ಕೆ ಹೋಗಬೇಕೆಂದು ನಿರ್ಧರಿಸಿ, ಅದೊಂದು ಭಾನುವಾರ ಬೆಳಿಗ್ಗೆ 9.00ಘಂಟೆಯ… Read More ಕಳೆದು ಹೋದ ಉಂಗುರ