ನೀರು ಓಕೆ. ಕೃತಕ‌ ಪಾನೀಯ ಏಕೆ?

ಪೋರ್ಚುಗಲ್ ನಲ್ಲಿ ನಡೆಯುತ್ತಿರುವ ಯೂರೋ 2020 ಟೂರ್ನಿಯಲ್ಲಿ ಪೋರ್ಚುಗಲ್ ತನ್ನ ಮೊದಲ ಪಂದ್ಯವನ್ನು ಆಡುತ್ತಲಿತ್ತು. ಸಹಜವಾಗಿ ಪಂದ್ಯ ಆಡುವ ಮುನ್ನ ತಂಡದ ಮ್ಯಾನೇಜರ್ ಮತ್ತು ತಂಡದ ನಾಯಕರ ಪ್ರೆಸ್ ಕಾನ್ಫರೆನ್ಸ್ ಮಾಡುವುದು ಸಹಜ ಪ್ರಕ್ರಿಯೆಯಾಗಿದೆ. ಈ ಸಂವಾದ ಪ್ರಪಂಚಾದ್ಯಂತ ಪ್ರಸಾರವಾಗುವ ಕಾರಣ, ಟೂರ್ನಿಯ ಪ್ರಾಯೋಜಕರಾದ ಕೋಕೋಕೋಲ ಇದರ ಪ್ರಯೋಜನವನ್ನು ಪಡೆಯುವ ಸಲುವಾಗಿ ಸಂವಾದ ನಡೆಸುವವರ ಟೇಬಲ್ ಮುಂದೆ ಸಣ್ಣದಾದ ಎರಡು ಕೋಕ್ ಬಾಟಲ್ ಗಳನ್ನು ಇಟ್ಟಿದ್ದರು. ಮೊದಲು ಈ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿದ ಪೋರ್ಚುಗಲ್ ತಂಡದ ಮ್ಯಾನೇಜರ್… Read More ನೀರು ಓಕೆ. ಕೃತಕ‌ ಪಾನೀಯ ಏಕೆ?

2020-21 ಭಾರತ ಕ್ರಿಕೆಟ್ ತಂಡದ ಆಸ್ಟ್ರೇಲಿಯಾ ಪ್ರವಾಸ ಪಕ್ಷಿನೋಟ

ಭಾರತ ತಂಡದ ಆಟಗಾರರು ಸುಮಾರು ಆರೆಂಟು ತಿಂಗಳುಗಳ ಕಾಲ ಕರೋನಾ ಪ್ರಭಾವದಿಂದಾಗಿ ಯಾವುದೇ ಕ್ರಿಕೆಟ್ ಆಟವಾಡದೇ, ಎಲ್ಲರೂ ನೇರವಾಗಿ ದುಬೈನಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯಲ್ಲಿ ಆಡುವ ಮೂಲಕ ಮೈ ಕೈ ಸಡಿಲಗೊಳಿಸಿದರು. ಅಲ್ಲಿಂದ ನೇರವಾಗಿ ಆಸ್ಟ್ರೇಲಿಯಾಕ್ಕೆ ಏಕದಿನ, ಟಿ20 ಮತ್ತು ಟೆಸ್ಟ್ ಸರಣಿಯನ್ನು ಆಡಲು ಪ್ರಯಾಣಿಸಿ, ೧೪ ದಿನಗಳ ಕಾಲ ಕ್ವಾರಂಟೈನ್ ಮುಗಿಸಿ ಸಿಡ್ನಿಯಲ್ಲಿ ಮೊದಲ ಏಕದಿನ ಪಂದ್ಯದಲ್ಲಿ 66 ರನ್ ಗಳ ಹೀನಾಯ ಸೋಲನ್ನು ಕಂಡಾಗ, ಭಾರತದ ಕ್ರಿಕೆಟ್ ಪ್ರೇಮಿಗಳೆಲ್ಲರೂ ಇನ್ನೂ ಎರಡು ಪಂಡ್ಯಗಳು ಇದೆಯಲ್ಲಾ!… Read More 2020-21 ಭಾರತ ಕ್ರಿಕೆಟ್ ತಂಡದ ಆಸ್ಟ್ರೇಲಿಯಾ ಪ್ರವಾಸ ಪಕ್ಷಿನೋಟ