ಏನಂತೀರೀ? 2025ರ ವಾರ್ಷಿಕ ವರದಿ

2019ರ ಮಹಾ ಶಿವರಾತ್ರಿಯಂದು ಆರಂಭವಾದ ನಿಮ್ಮೀ ಏನಂತೀರೀ? ಬ್ಲಾಗ್ ನಿಮ್ಮೆಲ್ಲರ ಸಹಕಾರದಿಂದ ಇಂದಿಗೆ 7 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. 7 ವರ್ಷಗಳಲ್ಲಿ ಏನಂತೀರೀ? ಬ್ಲಾಗ್ ಮತ್ತು Enahtheeri YouTube Channel ನಡೆದು ಬಂದ ಹಾದಿ, ನಿಮ್ಮವನೇ ಉಮಾಸುತ ನಿಂದ ಸೃಷ್ಟಿಕರ್ತ ಮಂಜುಶ್ರೀ ಆದ ರೋಚಕತೆ ಇದೋ ನಿಮಗಾಗಿ… Read More ಏನಂತೀರೀ? 2025ರ ವಾರ್ಷಿಕ ವರದಿ

ಹರಿಕಥಾ ಸಾಮ್ರಾಟ ಗಮಕಿ ಬಾಳಗಂಚಿ ನಂಜುಂಡಯ್ಯನವರು

ಅದೊಂದು ಕುಗ್ರಾಮ. ಹೆಸರಿಗಷ್ಟೇ ಅಗ್ರಹಾರ ಎಂದಿದ್ದರೂ, ಇದ್ದದ್ದು ಎಂಕ, ನಾಣಿ, ಸೀನ ಅಂತಾ ಹತ್ತಾರು ಸಂಪ್ರದಾಯಸ್ಥರ ಮನೆ. ಕೃಷಿ ಪ್ರಧಾನವಾಗಿದ್ದ ಆ ಊರಿನಲ್ಲಿ ಶಾಸ್ತ್ರೀಯ ಸಂಗೀತ ಮತ್ತು ಸಾಹಿತ್ಯದ ಗಂಧವೇ ಇಲ್ಲದಿದ್ದರೂ ಜನಪದ ಸಾಹಿತ್ಯಕ್ಕೇನು ಕೊರತೆ ಇರಲಿಲ್ಲ. ಅಂತಹ ಊರಿನಲ್ಲೊಂದು ಅನರ್ಘ್ಯ ರತ್ನದಂತೆ, ತಾಯಿಯ ಕಡೆಯ ದೂರ ಸಂಬಧಿಯೊಬ್ಬರು ಮಾಡುತ್ತಿದ್ದ ಗಮಕ ವಾಚನದಿಂದ ಆಕರ್ಷಿತರಾಗಿ, ಮಹಾಭಾರತದ ಏಕಲವ್ಯನಂತೆ, ದೈವದತ್ತವಾದ ಶರೀರ ಮತ್ತು ಶಾರೀರದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಹರಿಕಥೆ, ಗಮಕ ವಾಚನ, ವ್ಯಾಖ್ಯಾನವಲ್ಲದೇ, ನಾಟಕದ ಮಟ್ಟುಗಳು ಮತ್ತು… Read More ಹರಿಕಥಾ ಸಾಮ್ರಾಟ ಗಮಕಿ ಬಾಳಗಂಚಿ ನಂಜುಂಡಯ್ಯನವರು

ಭಗವಂತ  ನಮ್ಮಿಂದ ಎಷ್ಟು ದೂರವಿದ್ದಾನೆ?

https://enantheeri.com/2019/03/10/appa/

ಸಂಕಟ ಬಂದಾಗಲೇ ವೆಂಕಟರಮಣನನ್ನು ನೆನಸಿಕೊಂಡು, ಕಣ್ಣಿಗೆ ಕಾಣದ ಆ ಭಗವಂತನನ್ನು, ಅಯ್ಯಾ ತಂದೇ ನಮ್ಮನ್ನು ಕಾಪಾಡು ಎಂದು ಕೋರಿಕೊಳ್ಳುವ ಈ ಸಮಾಜ, ಅದೇ ಕಣ್ಣಿಗೆ ಕಾಣುವ ಪ್ರತ್ಯಕ್ಷ ದೇವರುಗಳಾದ ತಂದೆ ತಾಯಿಯರನ್ನೇ ವಯಸ್ಸಾದ ನಂತರ ದೂರ ಇಡುವುದು ಎಷ್ಟು ವಿಪರ್ಯಾಸ ಅಲ್ವೇ?… Read More ಭಗವಂತ  ನಮ್ಮಿಂದ ಎಷ್ಟು ದೂರವಿದ್ದಾನೆ?