ರಾಜು ಅನಂತಸ್ವಾಮಿ

7 ವಯಸ್ಸಿನಲ್ಲಿಯೇ ತಬಲಾ ವಾದನದ ಅಭ್ಯಾಸ ನಡೆಸಿ, 9ನೇ ವಯಸ್ಸಿನಲ್ಲಿಯೇ ತಂದೆಯ ಜೊತೆ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾ, 21 ವಯಸ್ಸಾಗುವಷ್ಟರಲ್ಲಿ ನಾಡಿನ ಹೆಸರಾಂತ ಸುಗಮ ಸಂಗೀತ ಗಾಯಕ, ಸಂಗೀತ ನಿರ್ದೇಶಕನಾಗಿ ನಟನೆಯಲ್ಲೂ ಸೈ ಎನಿಸಿಕೊಂಡು ತನ್ನ 35ನೇ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದ ರಾಜು ಅನಂತಸ್ವಾಮಿಯವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ನಮ್ಮ ಕನ್ನಡ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ರಾಜು ಅನಂತಸ್ವಾಮಿ

ಸ್ವರಾಂಜಲಿ

ರಘೋತ್ತಮ ಧನ್ವಂತ್ರಿ ಎಲ್ಲರ ಪ್ರೀತಿಯ ರಘು, ಬೆಂಗಳೂರಿನ ಪ್ರತಿಷ್ಟಿತ ಶೇಷಾದ್ರಿಪುರದಲ್ಲಿ ಹುಟ್ಟಿ ಬೆಳೆದ ಹುಡುಗ. ಬಾಲ್ಯದಿಂದಲೂ ಬಹಳ ಬುದ್ದಿವಂತ ಮತ್ತು ಚುರುಕಿನ ಹುಡುಗನಾಗಿದ್ದ. ಬಾಲ್ಯದಲ್ಲಿರುವಾಗಲೇ ಮನೆಯ ಪಕ್ಕದಲ್ಲಿಯೇ ನಡೆಯುತ್ತಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಡೆಗೆ ಆಕರ್ಷಿತನಾಗಿ, ಅಣ್ಣನ ಜೊತೆ ನಿತ್ಯ ಶಾಖೆಗೆ ಹೋಗುತ್ತಿದ್ದ. ಅನೇಕರಿಗೆ ಈಗಾಗಲೇ ತಿಳಿದಿರುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗಳಿಗೆ ಬರುವ ಹುಡುಗರಿಗೆ ಆಟಗಳು ಮತ್ತು ಅನುಶಾಸನಗಳ ಮುಖಾಂತರ ಶಾರೀರಿಕ ಮತ್ತು ದೈಹಿಕ ಬೆಳವಣಿಗೆಯಲ್ಲದೇ, ಆ ಹುಡುಗರಿಗೇ ಗೊತ್ತಿಲ್ಲದಂತೆಯೇ ಹಾಡು, ಶ್ಲೋಕ, ಅಮೃತವಚನ ಮತ್ತು… Read More ಸ್ವರಾಂಜಲಿ