ರಾಷ್ಟ್ರೀಯ ಯುವದಿನ
ಇಂದು ಜನವರಿ 12ನೇ ತಾರೀಖು ಇಡೀ ವಿಶ್ವದ ಯುವ ಜನತೆಗೆ ಒಂದು ವಿಶೇಷ ದಿನ. ಏಳಿ ಎದ್ದೇಳಿ ಗುರಿ ಮುಟ್ಟದವರೆಗೂ ನಿಲ್ಲದಿರಿ ಎಂದು ವಿಶ್ವದ ಯುವಜನತೆಯನ್ನು ಬಡಿದೆಬ್ಬಿಸಿದ ಮಹಾನ್ ಚೇತನ ಸ್ವಾಮಿ ವಿವೇಕಾನಂದರ ಜಯಂತಿ. ಸುಮಾರು160 ವರ್ಷಗಳ ಹಿಂದೆ ಕಲ್ಕತ್ತಾ ನಗರದಲ್ಲಿ ಜನವರಿ 12 1863ರ ಸಂಕ್ರಾಂತಿ ದಿನದಂದು ಶ್ರೀ ವಿಶ್ವನಾಥ ದತ್ತ ಮತ್ತು ಭುವನೇಶ್ವರಿದೇವಿ ದಂಪತಿಗಳ ಗರ್ಭದಲ್ಲಿ ಜನಿಸಿದ ನರೇಂದ್ರ ಮುಂದೆ ಸ್ವಾಮಿ ರಾಮಕೃಷ್ಣ ಪರಮಹಂಸರ ಪರಮ ಶಿಷ್ಯನಾಗಿ ಸನ್ಯಾಸತ್ವದ ದೀಕ್ಷೆ ಪಡೆದು ಸ್ವಾಮಿ ವಿವೇಕಾನಂದರಾದರು.… Read More ರಾಷ್ಟ್ರೀಯ ಯುವದಿನ
