ಎಲ್ಲದರಲ್ಲೂ ಜಾತಿಯನ್ನು ಹುಡುಕು/ತುರುಕುವುದೇ ಜಾತ್ಯಾತೀತತೆಯೇ?

ಪ್ರಸ್ತುತ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ, ಜಾತ್ಯಾತೀತತೆ ಎಂದರೇ, ದೇಶದ ಎಲ್ಲಾ ಧರ್ಮೀಯರನ್ನು ಯಾವುದೇ ತಾರತಮ್ಯವಿಲ್ಲದೆ ಸಮಾನವಾಗಿ ಕಾಣುವುದೋ? ಇಲ್ಲವೇ, ತಮ್ಮ ಅಧಿಕಾರದ ಆಸೆಗಾಗಿ ಸ್ವಾರ್ಥದಿಂದ ಬಹುಸಂಖ್ಯಾತ ಹಿಂದೂಗಳನ್ನು ಜಾತಿಯ ಹೆಸರಿನಲ್ಲಿ ಒಡೆದು ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ಕಾಪಾಡುವುದೋ? ಎಂಬ ಜಿಜ್ಞಾಸೆ ಕಾಡುತ್ತಿದೆ ಅಲ್ವೇ?… Read More ಎಲ್ಲದರಲ್ಲೂ ಜಾತಿಯನ್ನು ಹುಡುಕು/ತುರುಕುವುದೇ ಜಾತ್ಯಾತೀತತೆಯೇ?

ಲಂಚದಲ್ಲೂ ಡಿಜಟಲೀಕರಣ

ಮೊನ್ನೆ ಇನ್ನೂ, ಮಂಗಳೂರು ಟ್ರಾಫಿಕ್ ಪೋಲಿಸರ ಬಗ್ಗೆ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ, ಇದಕ್ಕೆ ಪೂರಕವಾದ ಬೆಂಗಳೂರಿನ ಯಲಹಂಕದ ಬಳಿಯ ಮತ್ತೊಂದು ಪ್ರಸಂಗಕ್ಕೆ ನೆನ್ನೆ ನಾನೇ ಸಾಕ್ಷಿಯಾಗಬೇಕಾಗಿದ್ದು ನಿಜಕ್ಕೂ ಅಸಹ್ಯಕರ ಎನಿಸಿತು. ಹಾಗಾಗಿ ಮಂಗಳೂರಿನ ಪ್ರಕರಣವನ್ನು ಯಥಾವತ್ ಹಾಗೆಯೇ ಪ್ರಕಟಿಸಿ ನಂತರ ನನಗಾದ ಅನುಭವವನ್ನು ಹಂಚಿಕೊಳ್ಳುತ್ತಿದ್ದೇನೆ. ಮಂಗಳೂರಿನ ಪ್ರಕರಣ ಇಂದು ಸ್ಟೇಟ್ ಬ್ಯಾಂಕ್ ನಲ್ಲಿ ನಾವು ರಾಂಗ್ ಸೈಡಲ್ಲಿ (one way) ಕಾರು ಚಲಾಯಿಸಿದ್ದಕ್ಕೆ ಈ ಪೋಲಿಸ್ ಅಡ್ಡಗಟ್ಟಿ ಫೈನ್ ಕಟ್ಟಲು ಹೇಳಿದ್ರು, ರಶೀದಿ ಬೇಕಾ? ಬೆಡ್ವಾ?… Read More ಲಂಚದಲ್ಲೂ ಡಿಜಟಲೀಕರಣ

ದಂಡವೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೇ?

ಈ ವರ್ಷದದ ಆರಂಭದಲ್ಲಿ ಪ್ರಪಂಚಾದ್ಯಂತ ಧುತ್ತೆಂದು ಕಾಣಿಸಿಕೊಂಡ ಕರೋನ ಮಹಾಮಾರಿಯನ್ನು ತಡೆಗಟ್ಟಲು ಮೊದಲ ಮೂರ್ನಾಲ್ಕು ತಿಂಗಳುಗಳ ಕಾಲ ಲಾಕ್ಡೌನ್ ಮಾಡಿದ ನಂತರ ಪರಿಸ್ಥಿತಿ ತಹಬಂದಿಗೆ ಬಾರದ್ದದರೂ, ಆರ್ಥಿಕವಾಗಿ ಎಲ್ಲರನ್ನೂ ಹೈರಾಣು ಮಾಡಿದ ಫಲವಾಗಿ ಸರ್ಕಾರವೂ ಕೆಲವೊಂದು ಕಠಿಣ ನಿರ್ಣಯಗಳನ್ನು ತೆಗೆದುಕೊಂಡು ಜನ ಸಾಮಾನ್ಯರು ಸಾಮಾನ್ಯ ಸ್ಥಿತಿಗೆ ಬರುವಂತೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಹಾಗೆ ತೆಗೆದುಕೊಂಡ ಪ್ರಮುಖ ನಿರ್ಧಾರಗಳಲ್ಲಿ ಮಾಸ್ಕ್ ಹಾಕಿಕೊಂಡು ಓಡಾಡುವುದು,‌ನಮ್ಮ ಸುತ್ತ ಮುತ್ತಲಿನ ಸ್ವಚ್ಚತೆ ಕಾಪಾಡುವುದು ಮತ್ತು ಸಾರ್ವಜನಿಕವಾಗಿ ಒಬ್ಬರು ಗೊಬ್ಬರು ಅಂತರವನ್ನು ಕಾಪಾಡಿಕೊಳ್ಳುವುದು ಎಂದಿತ್ತು. ಸರ್ಕಾರ… Read More ದಂಡವೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೇ?

ದಿನಾ ಸಾಯುವವರಿಗೆ ಅಳುವವರು ಯಾರು?

ಬೆಂಗಳೂರು ಪ್ರಪಂಚದಲ್ಲೇ ಅತ್ಯಂತ ವೇಗವಾಗಿ ನಗರ. ಜಗತ್ತಿನ ಎಲ್ಲ ಜನರೂ ವಾಸಿಸಲು ಬಯಸುವ ಮತ್ತು ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಕಛೇರಿಗಳನ್ನು ಹೊಂದಲು ಇಚ್ಚೆಪಡುವ ನಗರ. ಭಾರತದ ಸಿಲಿಕಾನ್ ಸಿಟಿ. ಸ್ಟಾರ್ಟ್ ಅಪ್ ಹಬ್. ಅತ್ಯಂತ ಹೆಚ್ಚಿನ ದ್ವಿಚಕ್ರವಾಹನಗಳು ಇರುವ ಊರು. ಹೀಗೆ ಒಂದೇ ಎರಡೇ ಬೆಂಗಳೂರನ್ನು ಹೊಗಳಲು ಹೊರಟರೇ ಪದಗಳೇ ಸಾಲದು. ಒಂದು ಕಾಲದಲ್ಲಿ ಅತ್ಯಂತ ಹೆಚ್ಚಿನ ಕೆರೆ ಕಟ್ಟೆಗಳಿಂದ ಕೂಡಿ ಇಡೀ ಊರಿಗೆ ಊರೇ ಹಸಿರುಮಯವಾಗಿದ್ದ ಕಾಲವೊಂದಿತ್ತು. ಯಾವುದೇ ರೋಗಿಗಳು ಬೆಂಗಳೂರಿಗೆ ಬಂದರೆಂದರೆ ಅವರ ಎಲ್ಲಾ… Read More ದಿನಾ ಸಾಯುವವರಿಗೆ ಅಳುವವರು ಯಾರು?