ಪ್ರಾರ್ಥನೆ

ಪ್ರಾರ್ಥನೆ ಎಂದರೆ ಏನು? ಎಂದು ಪ್ರಂಪಚದ ಯಾವುದೇ ಮೂಲೆಗೆ ಹೋಗಿ ಯಾವುದೇ ಧರ್ಮದ ಸಣ್ಣ ಮಗುವನ್ನೂ ಕೇಳಿದರೂ ಥಟ್ ಅಂತಾ ಹೇಳುವುದೇ, ಭಕ್ತಿಯಿಂದ ಎರಡೂ ಕಣ್ಗಳನ್ನು ಮುಚ್ಚಿಕೊಂಡು ಎರಡೂ ಕೈಗಳನ್ನು ನಮಸ್ಕಾರ ಸ್ಥಿತಿಯಲ್ಲಿಯೋ ಇಲ್ಲವೇ ಬೇಡುವ ಸ್ಥಿತಿಯಲ್ಲಿಯೋ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆ ಭಗವಂತನಲ್ಲಿ ಕೇಳಿಕೊಳ್ಳುವುದು ಎನ್ನುತ್ತಾರೆ. ಹೌದು ನಿಜ. ಆ ಮಕ್ಕಳು ಹೇಳಿದ್ದರಲ್ಲಿ ಸತ್ಯವಿದೆಯಾದರು ಅದೇ ಸಂಪೂರ್ಣ ಸತ್ಯವಲ್ಲ. ಪ್ರಾರ್ಥನೆ ಎನ್ನುವುದು ಕೇವಲ ಸ್ವಹಿತಾಸಕ್ತಿಗಾಗಿಯೋ ಇಲ್ಲವೇ ಮತ್ತೊಬ್ಬರ ಹಿತಾಸ್ತಕ್ತಿಗಾಗಿಯೋ ಭಗವಂತನಲ್ಲಿ ಬೇಡಿಕೊಳ್ಳುವುದರ ಹೊರತಾಗಿಯೂ ಇದೆ. ಹಾಗಾಗಿ… Read More ಪ್ರಾರ್ಥನೆ

ಕೈ ಮುಗಿದು ನಮಸ್ಕರಿಸುವ ಅಗತ್ಯತೆ

ನಮ್ಮ ಧರ್ಮ ಶಾಸ್ತ್ರದ ಪ್ರಕಾರ ಪ್ರತಿಯೊಂದು ಜೀವರಾಶಿಗಳಲ್ಲಿಯೂ ದೇವರಿರುತ್ತಾನೆ ಹಾಗಾಗಿ ಪ್ರತಿಯೊಬ್ಬರಿಗೂ ನಮ್ಮ ಎರಡೂ ಕರಗಳನ್ನು  ಜೋಡಿಸಿ ಅದನ್ನು ನಮ್ಮ ಸೂರ್ಯಚಕ್ರಕ್ಕೆ  (ಎದೆಯ ಗೂಡು) ತಾಗಿಸಿಗೊಂಡು ಭಕ್ತಿಯಿಂದ ತಲೆಬಾಗಿಸಿ ವಂದಿಸುವುದು ಆಚರಣೆಯಲ್ಲಿದೆ.  ಅದಕ್ಕೆ ಪ್ರತಿಯಾಗಿ ಎದುರಿಗಿರುವ ವ್ಯಕ್ತಿಯೂ ಅದೇ ರೀತಿಯಲ್ಲಿಯೇ ಭಕ್ತಿ ಪೂರ್ವಕವಾಗಿ ವಂದಿಸುತ್ತಾರೆ. ಈ ಪ್ರಕ್ರಿಯೆಯಲ್ಲಿ ಇಬ್ಬರೂ ವ್ಯಕ್ತಿಗಳ  ನಡುವೆ ಕನಿಷ್ಠ ಪಕ್ಷ 3 ಅಡಿ ಅಂತರವನ್ನು ಕಾಯ್ದುಕೊಳ್ಳುತ್ತೇವೆ ಮತ್ತು ಎಂದಿಗೂ ಅವರನ್ನು ಮುಟ್ಟುವುದಿಲ್ಲ.  ಈ ಕ್ರಿಯೆಯನ್ನು ಆಚರ, ಮಡಿ ಅಥವಾ ಅನುಷ್ಠಾನ ಎಂದು ಕರೆಯಲಾಗುತ್ತದೆ. … Read More ಕೈ ಮುಗಿದು ನಮಸ್ಕರಿಸುವ ಅಗತ್ಯತೆ