ಬಂದದ್ದೆಲ್ಲಾ ಬರಲಿ ಗೋವಿಂದನ ದಯೆ ಇರಲಿ

ಸಾಮ್ಯಾನ್ಯವಾಗಿ ನಮ್ಮ ಹಿಂದಿನ ಕಾಲದವರು ಈಗಿನಷ್ಟು ಆರ್ಥಿಕವಾಗಿ ಸಧೃಡರಿಲ್ಲದಿದ್ದರೂ, ಸರಿಯಾಗಿ ಎರಡು ಹೊತ್ತು ಊಟ ಮಾಡಲು ಇರುತ್ತಿರದಿದ್ದರೂ, ಯಾವುದೇ ರೋಗ ರುಜಿನಗಳಿಲ್ಲದೇ ಆರಾಮವಾಗಿ 80-90 ವರ್ಷಗಳು ಜೀವಿಸುತ್ತಿದ್ದರು. ಅದೆಷ್ಟೋ ಜನ ಶತಾಯುಷಿಗಳಾಗಿಯೂ ಜೀವಿಸಿದ್ದರು. ಅವರ ನೆನಪಿನ ಶಕ್ತಿಯಂತೂ ಕೇಳುವುದೇ ಬೇಡ. ಹಾಗಾಗಿಯೇ ಸುಲಭವಾಗಿ ಐದಾರು ತಲೆಮಾರುಗಳನ್ನು ಸುಲಭವಾಗಿ ನೋಡಬಹುದಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅವೆಲ್ಲವೂ ಮಾಯವಾಗಿದೆ. 20-30 ವರ್ಷಕ್ಕೇ ಕೂದಲೆಲ್ಲಾ ಬೆಳ್ಳಾಗಾಗಿ ಅದೆಷ್ಟೋ ಮಂದಿಗಳಿಗೆ ಕೂದಲೆಲ್ಲ ಉದುರಿ ಹೋಗಿ, ಹತ್ತಾರು ರೀತಿಯ ಖಾಯಿಲೆಗಳಿಗೆ ತುತ್ತಾಗಿ ಊಟಕ್ಕಿಂತಲೂ ಹೆಚ್ಚಾಗಿ… Read More ಬಂದದ್ದೆಲ್ಲಾ ಬರಲಿ ಗೋವಿಂದನ ದಯೆ ಇರಲಿ

ನೆಮ್ಮದಿ

ಶಂಕರಪ್ಪ ನಗರದ ಮಾರುಕಟ್ಟೆಯ ಬಳಿ ಸಣ್ಣದಾದ ಕಾಫಿ ಅಂಗಡಿಯನ್ನು ನಡೆಸಿಕೊಂಡು ಹೋಗುತ್ತಿರುತ್ತಾರೆ. ಪ್ರತೀ ದಿನ ನೂರಾರು ಜನರು ಅವರ ಅಂಗಡಿಗೆ ಬಂದು ಕಾಫೀ, ಟೀ ಕುಡಿದು ತಮ್ಮ ಮನಸ್ಸಿನ ದುಗುಡವನ್ನು ಕಳೆದುಕೊಂಡು ಉಲ್ಲಾಸಿತರಾಗಿ ಹೋಗುತ್ತಿರುತ್ತಾರೆ. ಅದೋಂದು ಸಂಜೆ‌ ಶಂಕರಪ್ಪನವರಿಗೆ ವಿಪರೀತ ತಲೆ ನೋವು ಕಾಡತೊಡಗಿ, ತಲೆ ಸಿಡಿದು ಹೋಗುವಷ್ಟು ನೋವು ಬಾಧಿಸ ತೊಡಗುತ್ತದೆ. ಅದಾಗಲೇ ಮಬ್ಬುಗತ್ತಲು ಸಮೀಪಿಸುತ್ತಿದ್ದ ಕಾರಣ, ಅಂಗಡಿಯಲ್ಲಿಯೂ ಗ್ರಾಹಕರು ಕಡಿಮೆ ಇದ್ದದನ್ಬು ಕಂಡು, ತಮ್ಮ ಹುಡುಗನಿಗೆ ಅಂಗಡಿಯ ಉಸ್ತುವಾರಿ ವಹಿಸಿ ಹತ್ತಿರದ ಮೆಡಿಕಲ್ ಸ್ಟೋರಿಗೆ… Read More ನೆಮ್ಮದಿ