ಖ್ಯಾತ ವಾಗ್ಗೇಯಕಾರರಾದ ಶ್ರೀ ತ್ಯಾಗರಾಜರು

ಎಂದರೋ ಮಹಾನುಭಾವುಲು ಅಂದರಿಕೀ ವಂದನಮುಲು ಎಂಬ ಸುಪ್ರಸಿದ್ಧ ಪಂಚರತ್ನ ಕೀರ್ತನೆಗಳ ಮೂಲಕ ಕರ್ನಾಟಕ ಸಂಗೀತವನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದಲ್ಲದೇ, ತಮ್ಮ ಕೃತಿಗಳ ಮೂಲಕ ಸ್ವತಃ ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಂಡಿದ್ದಲ್ಲದೇ, ಆ ಕೃತಿಗಳನ್ನು ಹಾಡುವವರಿಗೂ ಆ ದಿವ್ಯಾನುಭವವನ್ನು ನೀಡಿದ, ಖ್ಯಾತ ವಾಗ್ಗೇಯಕಾರರಾದ ಸಂಗೀತ ರತ್ನ ಶ್ರೀ ತ್ಯಾಗರಾಜರ ಆರಾಧನೆಯಿಂದ ಅವರ ಸಂಗೀತ ಸಾಧನೆಗಳ ಕಿರು ಪರಿಚಯ ಇದೋ ನಿಮಗಾಗಿ… Read More ಖ್ಯಾತ ವಾಗ್ಗೇಯಕಾರರಾದ ಶ್ರೀ ತ್ಯಾಗರಾಜರು

ಅಕ್ರಮ ಸೈಟ್ ಗೆ ಹೋದ ಮಾನ, ಸೈಟ್ ಹಿಂದಕ್ಕೆ ಕೊಟ್ರೂ ಬಾರದು.

ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ಭೂಕಬಳಿಕೆ ಮಾಡಿ, ಜನತೆ ಮತ್ತು ನ್ಯಾಯಾಂಗದಿಂದ ತಪರಾಕಿ ಹಾಕಿಸಿಕೊಂಡ ನಂತರ ಭೂಮಿಯನ್ನು ಹಿಂದಿರುಗಿಸಿ ಸತ್ಯ ಹರಿಶ್ಚಂದ್ರರಂತೆ ಮೆರೆಯುತ್ತಿರುವ ಸಿದ್ದು ಮತ್ತು ಖರ್ಗೆ ಕುಟುಂಬದಿಂದ ಪ್ರೇರಣೆ ಪಡೆದ ದೆಹಲಿಯ ಕಾರು ಕಳ್ಳನ ಕುಕೃತ್ಯದ ಕಥೆ-ವ್ಯಥೆ ಇದೋ ನಿಮಗಾಗಿ… Read More ಅಕ್ರಮ ಸೈಟ್ ಗೆ ಹೋದ ಮಾನ, ಸೈಟ್ ಹಿಂದಕ್ಕೆ ಕೊಟ್ರೂ ಬಾರದು.

ಶ್ರೀ ಕನಕದಾಸರು

15ನೇ ಶತಮಾನದಲ್ಲಿ ತಮ್ಮ ಹರಿದಾಸ ಸಾಹಿತ್ಯದ ಮೂಲಕ ಶ್ರೇಷ್ಠ ಹರಿದಾಸ ಸಂತರು ಮತ್ತು ದಾರ್ಶನಿಕರಾಗಿದ್ದ, ಕರ್ನಾಟಕ ಸಂಗೀತದ ಪ್ರಸಿದ್ಧ ಸಂಯೋಜಕರು, ಕವಿಗಳು, ಸಮಾಜ ಸುಧಾರಕರಾಗಿದ್ದಲ್ಲದೇ, ತಮ್ಮ ಕೀರ್ತನೆಗಳು ಮತ್ತು ಉಗಾಭೋಗಗಳ ಮೂಲಕ ಕನ್ನಡ ಸಾರಸ್ವತಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿರುವ ಶ್ರೀ ಕನಕದಾಸರ ಸಾಧನೆಗಳನ್ನು ಅವರ ಜಯಂತಿಯಂದು ಪ್ರತಿಯೊಬ್ಬ ಕನ್ನಡಿಗರೂ ಸ್ಮರಿಸುವುದು ಆದ್ಯ ಕರ್ತವೇ ಹೌದು… Read More ಶ್ರೀ ಕನಕದಾಸರು

ದಾಸಯ್ಯ

ಬಿಳಿ ಪಂಚೆ, ಬಿಳಿ ಜುಬ್ಬಾ ಅಥವಾ ಷರಾಯಿ ಹಾಕಿಕೊಂಡು ತಲೆಯಮೇಲೆ ಸುತ್ತಿದ ಒಂದು ಪೇಟ ಹಣೆಯಲ್ಲಿ ಒಂದು ಅಥವಾ ಮೂರು ಗೆರೆಗಳ ನಾಮ ಹಾಕಿಕೊಂಡು ಎಡಗೈಯಲ್ಲಿ ಉರಿಯುತ್ತಿರುವ ದೀಪದ ಕಂಬ, ಬಲಗೈಯ್ಯಿಗೆ ಜಾಗಟೆ ಕಟ್ಟಿಕೊಂಡು ಕೈಗಳಲ್ಲಿ ಕೆಲವೊಮ್ಮೆ ಕಹಳೆ ಮತ್ತು ಹೆಚ್ಚಿನ ಬಾರಿ ಶಂಖವನ್ನು ಇಟ್ಟುಕೊಂಡು ಎರಡೂ ತೋಳುಗಳಿಗೆ ಜೋಳಿಗೆ ಏರಿಸಿಕೊಂಡು ಎಲ್ಲರ ಮನೆಯ ಮುಂದೆ ಬಂದು ನಿಂತು ವೇಂಕಟರಮಣ ಸ್ವಾಮಿ ಪಾದಕ್ಕೆ ಗೋವಿಂದಾ! ಗೋವಿಂದಾ!! ಆಂಜನೇಯ ವರದಸ್ವಾಮಿ ಗೋವಿಂದಾ!! ಗೋವಿಂದಾ!! ಎಂದು ಜೋರಾಗಿ ಭಗವಂತನ ನಾಮ… Read More ದಾಸಯ್ಯ