ಶ್ರಾಧ್ಧ

ನಮ್ಮ ಹಿಂದೂಧರ್ಮದಲ್ಲಿ ಜನಿಸಿದ ಪ್ರತಿಯೊಬ್ಬರೂ ಹುಟ್ಟಿದಾರಿಂದಲೇ ಐದು ಋಣಗಳಿಗೆ ಭಾಜನರಾಗುತ್ತಾರೆ. ತಮ್ಮ ಜೀವಿತಾವಧಿಯಲ್ಲಿ ಈ ಐದೂ ಋಣಗಳಿಂದ ಮುಕ್ತಿ ಹೊಂದಿದಲ್ಲಿ ಮಾತ್ರವೇ ಅವರಿಗೆ ಅಂತಿಮವಾಗಿ ಸದ್ಗತಿ ದೊರೆಯುತ್ತದೆ ಎಂದು ನಮ್ಮ ಪುರಾಣಗಳಲ್ಲಿ ಹೇಳಲಾಗಿದೆ. ಆ ಐದು ಋಣಗಳೆಂದರೆ, ದೇವಋಣ, ಋಷಿಋಣ, ಪಿತೃಋಣ, ಭೂತಋಣ ಮತ್ತು ಸಮಾಜಋಣ. ಈ ಐದು ಋಣಗಳಲ್ಲಿ ಪಿತೃಋಣವನ್ನು ತೀರಿಸುವ ಸಲುವಾಗಿ ಶ್ರಾಧ್ಧಕರ್ಮ ಮಾಡುವುದು ಆವಶ್ಯಕವಾಗಿದೆ. ಈ ಭೂಮಿಯಲ್ಲಿ ನಮ್ಮ ಜನನಕ್ಕೆ ಕಾರಣೀಭೂತರಾದ ನಮ್ಮ ತಂದೆ ತಾಯಿಯರು ಮತ್ತು ನಮ್ಮ ವಂಶದವರಿಗೆ ಅವರಿಂದ ಪಡೆದ… Read More ಶ್ರಾಧ್ಧ